ಹೀಗೆ ಮಾಡಿದರೆ ನೀರು ತುಂಬಾ ಕಡಿಮೆ ಸಾಕು.

ಕೆಲವು ಮಣ್ಣಿನಲ್ಲಿ  ಮಳೆ ಬಂದರೆ  ನೀರು ವಾರಗಟ್ಟಲೆ  ಆರುವುದೇ ಇಲ್ಲ. ಬಿಸಿಲು ಬಂದರೆ  ನೆಲ ಟಾರು ರಸ್ತೆ  ತರಹ. ಇಂತಲ್ಲಿ   ಇಬ್ಬನಿ ರೂಪದಲ್ಲಿ ಬಿದ್ದ ನೀರೂ ಸಹ ಪೋಲಾಗದೆ ಬೆಳೆಗೆ ದೊರೆಯುವಂತಾಗಲು ರೈತರು ಕಂಡುಕೊಂಡ ವಿಧಾನ ಉಸುಕು ಹಾಕುವಿಕೆ.   ಕಪ್ಪು ಹತ್ತಿ ಮಣ್ಣು  ಒಂದು ಮಳೆ ಬಂದರೆ ಅಂಟು ಅಂಟಾಗುತ್ತದೆ. ಇದಕ್ಕೆ ಮಳೆ ಹನಿ ಬಿದ್ದಾಗ ಮಣ್ಣು ಕರಗಿ ಹೋಗುತ್ತದೆ. ನೀರು ಕಡಿಮೆಯಾದಾಗ ಮಣ್ಣು ಒಡೆದು ಹೂಗುತ್ತದೆ. ರಾಜ್ಯದಲ್ಲಿ  ಬಿಜಾಪುರ, ಗದಗ, ನರಗುಂದ ಧಾರವಾಡದ ಕೆಲ…

Read more

ತೆಂಗಿನ ಗಿಡ ಯಾಕೆ ಫಲಕೊಡುವುದಿಲ್ಲ.

ತೆಂಗಿನ ಸಸಿಗಳಲ್ಲಿ ಗಿಡ್ದ, ಎತ್ತರದ ತಳಿಗಳು ಎಂಬ ಎರಡು ಬಗೆ. ಗಿಡ್ಡ ತಳಿಗಳು ನಾಟಿ ಮಾಡಿ ಮೂರು ವರ್ಷಕ್ಕೆ ಹೂ ಗೊಂಚಲು ಬಿಟ್ಟರೆ ಎತ್ತರದ ತಳಿ ನಾಟಿ ಮಾಡಿ 5  ವರ್ಷಕ್ಕೆ ಹೂಗೊಂಚಲು ಬಿಡುವುದು ವಾಡಿಕೆ. ಕೆಲವೊಮ್ಮೆ ಇದು ತಡವಾಗಬಹುದು, ಬೇಗವೂ ಆಗಬಹುದು. ಆದರೆ ಕೆಲವು ಮರಗಳು ತಮ್ಮ ಜೀವನ ಪರ್ಯಂತ ಇಳುವರಿ ಕೊಡುವುದೇ ಇಲ್ಲ. ಕಾರಣ ಅದರ ವಂಶ ಗುಣ. ತೆಂಗಿನ ಸಸಿ ಇಳುವರಿ ಪ್ರಾರಂಭಿಸುವುದಕ್ಕೆ ತಳಿ ಗುಣದ ಜೊತೆಗೆ ಆರೈಕೆಯೂ ಅಗತ್ಯ. ಪ್ರಾರಂಭಿಕ ಆರೈಕೆ…

Read more

ಭೂ ತಾಯಿ ಮುನಿದಿದ್ದಾಳೆ- ನಾವೆಲ್ಲಾ ಒಟ್ಟಾಗಿ ಪ್ರಾರ್ಥಿಸೋಣ.

ಪ್ರತೀ ವರ್ಷ ಎಪ್ರೀಲ್ 22 ದಿನವನ್ನು ಜಾಗತಿಕ ಭೂಮಿಯ ದಿನ ಎಂದು ಆಚರಿಸಲಾಗುತ್ತದೆ. ಪ್ರತೀ ವರ್ಷ ಒಂದೊಂದು ಧ್ಯೇಯಗಳನ್ನು ಇಟ್ಟುಕೊಂಡು ಈ ದಿನವನ್ನು ವಿಶೇಷ ಪ್ರಾತಿನಿಧ್ಯ ಕೊಟ್ಟು ಆಚರಿಸಲಾಗುತ್ತದೆ. ಈ ವರ್ಷ ಹವಾಮಾನ ಬದಲಾವಣೆಯಂತಃ ಗಂಭೀರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಅದನ್ನು ಆಚರಿಸಲಾಗುತ್ತದೆ. ಬಹುಷಃ ಈ ವರ್ಷದ  ಆಚರಣೆಗೆ ಪ್ರಕೃತಿಯ ಅಸಮಾಧಾನ ಏನೋ ಇದ್ದಂತಿದೆ. ಕೊರೋನಾ ಎಂಬ ಮಹಾ ಮಾರಿ ರೂಪದಲ್ಲಿ ಮನುಕೂಲದ ಮೇಲೆ ಭೂ ತಾಯಿ ಮುನಿದಂತಿದೆ. ಜಗತ್ತೇ ಮನುಕುಲ ಕಾಣದ ಅನಾಹುತದ ಸುಳಿಯಲ್ಲಿ ಸಿಕ್ಕಿಕೊಂಡಿದೆ. ಇದು…

Read more
ಕ್ಯಾಲ್ಸಿಯಮ್ ಸಮೃಧ ಕಬ್ಬು ಬೆಳೆ

ಕಬ್ಬು ಬೆಳೆಗೆ ಕ್ಯಾಲ್ಸಿಯಂ ಪೋಷಕ ಅಗತ್ಯ.

ಕ್ಯಾಲ್ಸಿಯಂ ಎಲ್ಲಾ ಸಸ್ಯಗಳ ಬೆಳವಣಿಗೆ ಮುಖ್ಯವಾದ ಆಹಾರವಾಗಿದೆ. ಇದು ಮಣ್ಣು ಹಾಗು ಬೆಳೆಯಲ್ಲಿನ ಹುಳಿ ಆಂಶವನ್ನು ತಟಸ್ಥ ಮಾಡುವುದು.  ಕಬ್ಬಿನ ಬೆಳೆಗೆ ಕ್ಯಾಲ್ಸಿಯಂ ಅಥವಾ ಸುಣ್ಣವನ್ನು ಹಾಕುವುದರಿಂದ ಇಳುವರಿ ಹೆಚ್ಚುತ್ತದೆ. ಕಬ್ಬಿನ ಗುಣಮಟ್ಟ ಉತ್ತಮವಾಗುತ್ತದೆ.ಮಣ್ಣಿನ ಗುಣವೂ ಉತ್ತಮವಾಗುತ್ತದೆ. ಯಾವುದೇ ಬೆಳೆ ಇರಲಿ ಅದಕ್ಕೆ ಬರೇ ಮುಖ್ಯ ಪೋಷಕಾಂಶಗಳಾದ ಸಾರಜನಕ , ರಂಜಕ ಮತ್ತು ಪೊಟ್ಯಾಶ್ ಮಾತ್ರ ಸಾಲದು. ಈ ಮೂರು ಪೋಷಕಗಳು ಸಮರ್ಪಕವಾಗಿ ಬೆಳೆಗೆ ದೊರೆಯಲು ದ್ವಿತೀಯ ಪೋಷಕಾಂಶಗಳಾದ ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಗಂಧಕ ಅಂಶ ಬೇಕು. …

Read more

ವಾಂದಾ ತಂದೀತೇ ಅಡಿಕೆ ಬೆಲೆಗೆ ಕುತ್ತು?.

ಅಡಿಕೆಯ ವ್ಯವಹಾರದಲ್ಲಿ 90% ಕ್ಕೂ ಹೆಚ್ಚು ಮುಂಗಡ ಹಣ ಪಡೆಯದೇ  ನಡೆಯುತ್ತದೆ. ಅಡಿಕೆ ಹೋಗುತ್ತದೆ, ದುಡ್ಡು ಬರುವು  ದು  ನಂತರ. ಮಾರುಕಟ್ಟೆ ಸರಿಯಿಲ್ಲ.  ಸೇಟು ಊರಿಗೆ ಹೋದ ಕಾರಣ ಹಣದ ಅಡಚಣೆ. ಮುಂತಾದ ಮಾತುಗಳನ್ನು ಕೇಳಿದ್ದೀರಲ್ಲಾ. ಅದೇ ಮಾಲು ಕಳುಹಿಸಿ ಅವರಿಂದ ಹಣ ಪಡೆಯುವಾಗ ನಡೆಯುವ ವಾಂದಾ ವ್ಯವಹಾರ. ವಾಂದಾ ಎಂದರೆ ತಕರಾರು. ಮಾಲು ಹೋದ ನಂತರ ತಕರಾರು ಮಾಡುವವರಿಗೆ ಸಾಕಷ್ಟು ಅವಕಾಶಗಳಿರುತ್ತವೆ. ಈ ತಕರಾರು ಮಾರುಕಟ್ಟೆಯನ್ನು ಬಹಳ ಅಲ್ಲಾಡಿಸುತ್ತದೆ. ಅದು ಮುಂದೆ ಅಡಿಕೆ ಮಾರುಕಟ್ಟೆ ತೆರೆಯುವ…

Read more

ಪ್ರಪಂಚದಲ್ಲೇ ಇದು ಅಧ್ಬುತ– ಮಿಡಿ ಮಾವು.

ಅಪ್ಪೆ ಮಿಡಿ ಒಂದು ಸುಗಂಧಿತ ಮಾವು. ಇದು ಬೆಳೆಯುವುದು ಹೊಳೆ ದಂಡೆಯಲ್ಲಿ. ಅದಕ್ಕಾಗಿ ಈ ಮಾವಿಗೆ ಹೊಳೆಸಾಲು ಅಪ್ಪೆ ಎಂಬ ಹೆಸರು. ಇದು ನಮ್ಮ ರಾಜ್ಯದ ಮಲೆನಾಡಿನ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಕಂಡು ಬರುತ್ತದೆ. ಇದರ ಮಿಡಿಯ ಉಪ್ಪಿನ ಕಾಯಿ ಅಲ್ಲದೆ ಕೆಲವು ಖಾದ್ಯಗಳು ಸರ್ವಶ್ರೇಷ್ಟ. ಮಿಡಿ ಉಪ್ಪಿನ ಕಾಯಿ ಸವಿಯುವುದೇ ಅದರೆ, ಅಪ್ಪೆ ಮಿಡಿಯ ಸವಿಯನ್ನು ಒಮ್ಮೆ ನೋಡಿ. ಅದೂ ಮಲೆನಾಡಿನ ಕೆಲವು ಪಾಕಶಾಸ್ತ್ರಜ್ಞರ ಕೈಯಲ್ಲಿ ಮಾಡಿದ್ದೇ ಆಗಬೇಕು. ಮಾವಿನ ಮಿಡಿ ಒಯ್ದು ಉಪ್ಪಿನ…

Read more
ಅಡಿಕೆ ಮರದ ಸುಳಿ ಬಂದ್ ರೋಗ ನಿವಾರಣೆ

ಅಡಿಕೆ ಮರದ ಸುಳಿ ಬಂದ್ ರೋಗ ನಿವಾರಣೆ ಹೇಗೆ ?

ಅಡಿಕೆ ಸಸ್ಯದ ಸುಳಿಯ ಭಾಗದ ಎಲೆಗಳು ಮುರುಟಿ, ತುದಿ ಗಂಟು ಕಟ್ಟಿದಂತೆ ಅಗುವುದಕ್ಕೆ “ಬಂದ್ ರೋಗ” ಎನ್ನುತ್ತಾರೆ. ಇದು ರೋಗವಲ್ಲ ಬೇರು ಜಂತು ಹುಳ ಮುಖ್ಯ ಕಾರಣ. ಇದು ಬೇರನ್ನು ಬೆಳೆಯಲು ಬಿಡದೆ ಸಸ್ಯಕ್ಕೆ ಆಹಾರ ಸರಬರಾಜು ಕಡಿಮೆಯಾಗಿ ಅದರ ಬೆಳೆವಣಿಗೆಯನ್ನು ಹತ್ತಿಕ್ಕುತ್ತದೆ. ಇದನ್ನು ರಾಸಾಯನಿಕವಾಗಿಯೂ, ಜೈವಿಕವಾಗಿಯೂ ಹತೋಟಿ ಮಾಡಬಹುದು. ವರ್ಷದಿಂದ ವರ್ಷಕ್ಕೆ ಅಡಿಕೆ ಬೆಳೆಗಾರರ ತೋಟದಲ್ಲಿ ಮರಗಳ ಸುಳಿ ಭಾಗ ಕುಬ್ಜವಾಗುವುದು ಹೆಚ್ಚಾಗುತ್ತಿದೆ. ಮಲೆನಾಡಿನ ಶಿವಮೊಗ್ಗ ಭಾಗದಲ್ಲಿ  ಇದು ಸುಮಾರು 30-40  ವರ್ಷದ ಹಿಂದೆಯೇ ಇತ್ತು….

Read more

ಬಾಳೆಯ ಕಾಂಡದ ಈ ರೋಗಕ್ಕೆ ಪರಿಹಾರ ಇದು.

ಬಾಳೆಯಲ್ಲಿ ಕಾಂಡ ಎಂಬುದು ಎಲೆಯ ಕವಚಗಳು ಪರಸ್ಪರ ಒತ್ತೊತ್ತಾಗಿ ಸೇರಿದಾಗ ಉಂಟಾಗುತ್ತದೆ. ಬಾಳೆಗೆ ಕಾಂಡ ಎಂಬುದು ಇಲ್ಲ. ಇದನ್ನು ಹುಸಿ ಕಾಂಡ ಎನ್ನುತ್ತಾರೆ. ಹುಸಿ ಕಾಂಡ ಉಂಟಾಗಬೇಕಾದರೆ  ಎಲೆಯ ತೊಟ್ಟಿನ ಭಾಗ (petiole)ಗಳು ಪರಸ್ಪರ ಅಂಟಿಕೊಂಡು ಬೆಳೆಯಬೇಕು. ಅದು ಬಿಚ್ಚಿಕೊಂಡಿದ್ದರೆ ಅದು ಒಂದು ರೋಗ. ಇದು ಒಂದು ನಂಜಾಣು ರೋಗದ ಲಕ್ಷಣ.  ಬಾಳೆ ಸಸ್ಯ 2-3 ತಿಂಗಳ ಬೆಳೆವಣಿಗೆಯಲ್ಲಿ ಇದು ಜಾಸ್ತಿ.   ಪ್ರಾರಂಭದಲ್ಲಿ ಎಲೆದಂಟು ಕಾಂಡದಿಂದ ಬೇರ್ಪಟ್ಟು ಕಾಂಡ ಸಪುರವಾಗುತ್ತಾ ಹೋಗುತ್ತದೆ. ಇಂತಹ ಬಾಳೆ ಕೆಲವೊಮ್ಮೆ…

Read more
rain water

ಈ ವರ್ಷದ ಮಳೆ ಭವಿಷ್ಯ

ಮಳೆ ಭವಿಷ್ಯವನ್ನು ಹಿಂದೆ ಪಂಚಾಗಕರ್ತರು ಹೇಳುತ್ತಿದ್ದರು. ಈಗ ಅದನ್ನು ಹವಾಮಾನ ಇಲಾಖೆ ಹೇಳುತ್ತದೆ. ಅದು ಪೂರ್ವಭಾವಿಯಾಗಿಯೇ. ಭಾರತೀಯ ಹವಾಮಾನ ಕಚೇರಿ ಈ ವರ್ಷ ಸರಾಸರಿ ಮಳೆಯಾಗುವ ಸೂಚನೆಯನ್ನು ನೀಡಿದೆ. ಮೇ ಕೊನೇ ವಾರ, ಜೂನ್ ಒಂದನೇ ತಾರೀಖಿಗೆ ಕೇರಳ ಪ್ರವೇಶಿಸುವ ಮುಂಗಾರು ಮಳೆ ಸಪ್ಟೆಂಬರ್ ತನಕ ದೇಶದಾದ್ಯಂತ ಏಕ ಪ್ರಕಾರವಾಗಿ ಬೀಳಲಿದ್ದು, ಕೃಷಿಕರ ಬದುಕಿಗೆ ಇದು ನೆಮ್ಮದಿ ತರಲಿದೆ ಎಂಬುದಾಗಿ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್ ಹೇಳುತ್ತಾರೆ. ಈ ವರ್ಷದ ಮುಂಗಾರು ಮಳೆಯನ್ನು ಸರಾಸರಿ ಮಳೆ…

Read more
rose apple red

ತಿನ್ನಲು ಸಿಗದ ಈ ಹಣ್ಣುಗಳು- ಏನು ಪರಿಹಾರ?

ಒಂದು ವರ್ಷ  ಈ ಹಣ್ಣುಗಳು ತಿನ್ನಲು ಸಿಕ್ಕರೆ ಮತ್ತೆ ಇಲ್ಲವೇ ಇಲ್ಲ. ರಾಶಿ ರಾಶಿ ಹಣ್ಣುಗಳಾಗುತ್ತವೆ. ಆದರೆ ಎಲ್ಲವೂ ಬುಡದಲ್ಲಿ ಬಿದ್ದು, ಹಾಳೇ ಆಗುವುದು. ಇದು ನಮ್ಮ ಬಹುತೇಕ ರೈತರಲ್ಲಿ ಇರುವ ರೋಸ್ ಆಪಲ್ ಹಾಗೂ ವುಡ್ ಆಪಲ್ ಎಂಬ ಬಹು ಬಗೆಯ ಬೇಸಿಗೆ ಹಣ್ಣುಹಂಪಲುಗಳ  ಗತಿ. ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ವಿಧಾನ ಇಲ್ಲಿದೆ. ಇದು ಹಣ್ಣು ನೊಣದಿಂದ ಆಗುವ ತೊಂದರೆ , ಇದನ್ನು ಪ್ರಾರಂಭಿಕ ಹಂತದಲ್ಲಿ ಬಾರದಂತೆ ಮಾಡಿದರೆ ಸ್ವಲ್ಪ ಮಟ್ಟಿಗೆಯಾದರೂ ಉತ್ತಮ ಹಣ್ಣನ್ನು ಉಳಿಸಬಹುದು….

Read more
error: Content is protected !!