ಹೀಗೆ ಮಾಡಿದರೆ ನೀರು ತುಂಬಾ ಕಡಿಮೆ ಸಾಕು.

ಕೆಲವು ಮಣ್ಣಿನಲ್ಲಿ  ಮಳೆ ಬಂದರೆ  ನೀರು ವಾರಗಟ್ಟಲೆ  ಆರುವುದೇ ಇಲ್ಲ. ಬಿಸಿಲು ಬಂದರೆ  ನೆಲ ಟಾರು ರಸ್ತೆ  ತರಹ. ಇಂತಲ್ಲಿ   ಇಬ್ಬನಿ ರೂಪದಲ್ಲಿ ಬಿದ್ದ ನೀರೂ ಸಹ ಪೋಲಾಗದೆ ಬೆಳೆಗೆ ದೊರೆಯುವಂತಾಗಲು ರೈತರು ಕಂಡುಕೊಂಡ ವಿಧಾನ ಉಸುಕು ಹಾಕುವಿಕೆ.


 

 • ಕಪ್ಪು ಹತ್ತಿ ಮಣ್ಣು  ಒಂದು ಮಳೆ ಬಂದರೆ ಅಂಟು ಅಂಟಾಗುತ್ತದೆ.
 • ಇದಕ್ಕೆ ಮಳೆ ಹನಿ ಬಿದ್ದಾಗ ಮಣ್ಣು ಕರಗಿ ಹೋಗುತ್ತದೆ.
 • ನೀರು ಕಡಿಮೆಯಾದಾಗ ಮಣ್ಣು ಒಡೆದು ಹೂಗುತ್ತದೆ.
 • ರಾಜ್ಯದಲ್ಲಿ  ಬಿಜಾಪುರ, ಗದಗ, ನರಗುಂದ ಧಾರವಾಡದ ಕೆಲ ಭಾಗಗಳಲ್ಲಿ  ಇಂತಹ ಮಣ್ಣು ಇದೆ.

ಇದು ಮುಂಡರಗಿಯಲ್ಲಿ:

 • ಈ ಮಣ್ಣಿನಲ್ಲಿ  ಹತ್ತಿ ಬೆಳೆಸುತ್ತಾರೆ. ಹಿಂದೆ ಗೋಧಿ ಬೆಳೆಯುತ್ತಿದ್ದರಂತೆ.
 • ಗದಗ ಜಿಲ್ಲೆ  ಮಂಡರಗಿಯ ಸುತ್ತಮುತ್ತ ಇಂಥಹ ಮಣ್ಣು ಇದ್ದು ಇದರಲ್ಲಿ ಹಿಂದೆ ಗೋಧಿ ಬೆಳೆಯಲಾಗುತ್ತಿತ್ತಂತೆ.
 • ಇಲ್ಲಿನ ಗೋಧಿಯ ಗುಣಮಟ್ಟವನ್ನು  ಬ್ರಿಟೀಷರು ಮೆಚ್ಚಿ ಅದನ್ನು ತಮ್ಮ ದೇಶಕ್ಕೇ ಒಯ್ಯುತ್ತಿದ್ದರಂತೆ.
 • ಈಗ ಇಲ್ಲಿ ಗೋಧಿ ಬೆಳೆ ಇಲ್ಲ. ನೀರೇ ಕಷ್ಟ. ಇಲ್ಲಿ ಮಳೆಯಾಶ್ರಿತ ಬೆಳೆಯಾಗಿ ಕೆಲವರು ಹತ್ತಿ, ನೆಲಕಡ್ಲೆ ಬೆಳೆಯುತ್ತಾರೆ.

ಈ ಮಣ್ಣಿನಲ್ಲಿ ನೆಲಕಡ್ಲೆ ಬೆಳೆಯುವಾಗ ರೈತರು ಹೊಲಕ್ಕೆ ಹೊಳೆ ಉಸುಕನ್ನು ಹಾಸಿ ಬೆಳೆಯುತ್ತಾರೆ. ಅಲ್ಪ ಸ್ವಲ್ಪ ಮಳೆಯಾದರೂ ನೀರು ಈ ಉಸುಕಿನ ಅಡಿಯಲ್ಲಿ ಸಂಗ್ರಹವಾಗಿ ಅದು ನಿಧಾನವಾಗಿ ಬೆಳೆಗಳಿಗೆ ಲಭ್ಯವಾಗುತ್ತದೆಯಂತೆ.

ಅನುಕೂಲಗಳು:

 • ಇದು ಉತ್ತಮ ಕ್ರಮವಾಗಿದ್ದು ತೀರಾ ಅಂಟು ಮಣ್ಣಾಗಿರುವ ಇಂಥಃ ಪ್ರದೇಶಗಳಲ್ಲಿ ತೇವಾಂಶ ಸಂರಕ್ಷಣೆಗೆ ಇದು ಸಹಕಾರಿಯಾಗುತ್ತದೆ. 
 • ಕಡಿಮೆ ಮಳೆಯಾದರೂ ಸಹ ಬೆಳೆಗಳಿಗೆ ನೀರು ದೊರೆಯುತ್ತದೆ.
 • ಉಸುಕು ಹಾಕಿದ ಮಣ್ಣಿನ ಕೆಳಭಾಗ ಗಟ್ಟಿಯಾಗುವುದಿಲ್ಲ.
 • ಆದ ಕಾರಣ  ಉಳುಮೆಯ ಅವಶ್ಯಕತೆ ಇಲ್ಲ.
 • ಕೇವಲ ಕುಂಟೆಯ ಮೂಲಕ ಸಾಲು ಮಾಡಿ ಬಿತ್ತನೆ  ಮಾಡಬಹುದು.
 • ಉಸುಕು ಹಾಕುವ ಕೆಲಸ ಮಾತ್ರ ಸ್ವಲ್ಪ ದುಬಾರಿ.
 • ಟ್ರಾಕ್ಟರ್ ಬಾಡಿಗೆ, ಹರಡುವಿಕೆ ಇರುತ್ತದೆ.
 • ಅದು ಇನ್ನಿತರ ಸಾಗುವಳಿ ಖರ್ಚು ಉಳಿಕೆಯಿಂದ ಹೊಂದಾಣಿಕೆಯಾಗುತ್ತದೆ.
 • ಉಸುಕು ಹಾಕಿದಲ್ಲಿ ಕಳೆಗಳು ಕಡಿಮೆ. ಬರುವ ಕಳೆಗಳನ್ನು ಸುಲಭವಾಗಿ ಕಿತ್ತು ತೆಗೆಯಬಹುದು.
 • ಹತ್ತು ವರ್ಷಕ್ಕೂ ಹೆಚ್ಚು ಕಾಲ ಉಳುಮೆ ಮಾಡದೆ ಬೆಳೆ ತೆಗೆಯುತ್ತಿರಬಹುದು. 
 • ದೊಡ್ದ ಕಳೆಗಳು ಬಂದಲ್ಲಿ  ಅದನ್ನು  ತೆಗೆಯುವುದು ಕಷ್ಟವಾಗುತ್ತದೆ.
 • ಅದಕ್ಕೆ  ಕಳೆ ನಾಶಕದ ಸಿಂಪರಣೆ ಮಾಡಬೇಕಾದೀತು.
 • ಅತೀ ಸಣ್ಣ ಗಾತ್ರದ ಉಸುಕು ಒಳ್ಳೆಯದಲ್ಲ.
 • ಸ್ವಲ್ಪ ದೊಡ್ದದಿದ್ದರೆ ಅದು ಮಣ್ಣಿನಲ್ಲಿ ವಿಲೀನವಾಗಲಾರದು.

ವಿಜಯಪುರದ ಒಣಬೇಸಾಯ ಸಂಶೋಧನಾ ಸಂಸ್ಥೆ ಮತ್ತು ಧಾರವಾಡದ ಕೃಷಿ ವಿಶ್ವ ವಿಧ್ಯಾನಿಲಯಗಳಲ್ಲಿ  ಈ ಬಗ್ಗೆ ಸಂಶೋಧನೆಗಳು ನಡೆದಿದ್ದು, ಇದು ಒಂದು ಉತ್ತಮ ತಂತ್ರಜ್ಞಾನವೆಂದು  ಧೃಢ ಪಡಿಸಲಾಗಿದೆ.

 • ಹೊಳೆ ಹಳ್ಳದ ಬದಿಯಲ್ಲಿ ತೋಟ ಹೊಂದಿದ  ಬೆಳೆಗಾರರು ತಮ್ಮ ಹೊಲದ ಮಣ್ಣಿಗೆ ಹೊಳೆ ಹಳ್ಳದ ಉಸುಕನ್ನು  ಹಾಸುವುದು ತೇವಾಂಶ ಸಂರಕ್ಷಣೆ ದೃಷ್ಟಿಯಿಂದ ಸಹಾಯಕ.
 • ಇದು ತೇವಾಂಶ ಸಂರಕ್ಷಣೆಯೊಂದಿಗೆ ಮಣ್ಣಿಗೆ ಬಿಸಿ ತಡಕೊಳ್ಳುವ ಶಕ್ತಿ ಕೊಡುತ್ತದೆ. ಬೇರು ಹಬ್ಬಲು ಅನುಕೂಲವಾಗುತ್ತದೆ.

ಮರಳು ಅಥವಾ ಉಸುಕು ಎಂಬುದು ಉತ್ತಮ ತೇವಾಂಶ ರಕ್ಷಕ. ಅದಕ್ಕಾಗಿಯೇ ಹೊಳೆ ಹಳ್ಳಗಳಿಂದ  ಅತಿಯಾದ ಮರಳು  ತೆಗೆಯುವುದರಿಂದ  ಜಲ ಬರಿದಾಗುತ್ತದೆ ಎನ್ನುವುದು ಅದೇ ಕಾರಣಕ್ಕೆ.

——–End of article——-
Search Keywords: water conservation , moisture ,content water level ,less irrigation Sand laying to farm Soil amendment Soil moisture conservation water conservation

error: Content is protected !!