ಅಡಿಕೆಯ ಕಥೆ ವ್ಯಥೆಯಾಗುವ ಮುನ್ಸೂಚನೆ

ರಾಜ್ಯ ಸರಕಾರ  ಜನತೆಗೆ ಮನೆ ಹೊರಡದಂತೆ ಕರ್ಫ್ಯೂ  ವಿಧಿಸಿದೆ. ಅಗತ್ಯ ಸಾಮಾಗ್ರಿಗಳಿಗೆ ವಿನಾಯಿತಿ ನೀಡಿದ್ದರೂ ಅಡಿಕೆ ಎಂಬುದು ಅಗತ್ಯ ಸಾಮಾಗ್ರಿಗಳ ಅಡಿಯಲ್ಲಿ ಬಾರದ ಕಾರಣ ಅಡಿಕೆ ಕೊಳ್ಳುವವರು ತಮ್ಮ ವ್ಯವಹಾರ ನಿಲ್ಲಿಸುವುದು ಗ್ಯಾರಂಟಿ.  ಇನ್ನು ವ್ಯಾಪಾರ ಏನಿದ್ದರೂ ಪರಿಸ್ಥಿತಿ ಅನುಕೂಲಕರವಾಗಿ ಬಂದರೆ ಎಪ್ರೀಲ್ 1 ತರುವಾಯ. ಅಡಿಕೆ, ಕರಿಮೆಣಸು , ಶುಂಠಿ ಮುಂತಾದ ಕೃಷಿ ಉತ್ಪನ್ನಗಳ ಮಾರುಕಟ್ಟೆ  ಎಂಬುದು ಪರಿಸ್ಥಿತಿ ಸರಿಯಾಗಿದ್ದರೆ ಎಲ್ಲವೂ ಸಲೀಸಾಗಿ ಮುಂದುವರಿಯುತ್ತದೆ. ಎಲ್ಲಾದರೂ ಸ್ವಲ್ಪ  ಪರಿಸ್ಥಿತಿ  ಬಿಗಡಾಯಿಸಿದರೆ  ಹೇಗೆ ಮಾರುಕಟ್ಟೆ ಕುಸಿಯುತ್ತದೆ ಎಂದೇ…

Read more

ಮೆಕ್ಕೇ ಜೋಳ ಬೆಳೆಗಾರರು ಕಂಗಾಲಾಗಬೇಕಾಗಿಲ್ಲ.

  ಕೈಯಲ್ಲಿ ತುತ್ತು ಹಿಡಿದುಕೊಂಡ ನಂತರ ಅದನ್ನು ಬಾಯಿಗೆ ಇಡಲೇ ಬೇಕು. ಅದನ್ನು ಸಿಟ್ಟಿನಲ್ಲಿ  ಹೊರ ಚೆಲ್ಲಿದರೆ  ಯಾರಿಗೂ ಏನೂ ಪ್ರಯೋಜನ ಇಲ್ಲ. ನಮ್ಮ ರೈತರು ದಾಸ್ತಾನು ಇಡಬಹುದಾದ ಬೆಳೆಗಳ ಬೆಲೆ ಕುಸಿತವಾದಾಗ ತೆಗೆದುಕೊಳ್ಳೂವ ಅವಸರದ ತೀರ್ಮಾನ ಅವನಿಗೇ ನಷ್ಟದ  ಬಾಬ್ತು ಆಗುತ್ತದೆ. ಮೆಕ್ಕೇ ಜೋಳದ ಬೆಲೆ ಕುಸಿತಕೆ ಕಾರಣ, ಕೋಳೀ  ಉದ್ದಿಮೆಯ ನಷ್ಟ ಎನ್ನಲಾಗುತ್ತಿದೆ. ನಮ್ಮಲ್ಲಿ  ಬೆಳೆಯುವ ಸುಮಾರು 60 % ಹೆಚ್ಚಿನ ಮೆಕ್ಕೇ ಜೋಳ ಕೋಳೀ  ಆಹಾರ ತಯಾರಿಕೆಗೇ ಬಳಸಲ್ಪಡುತ್ತದೆ. ಉಳಿದದ್ದು ಪಶು ಆಹಾರ …

Read more

ತೃಣನಾದೆಯಲೋ ಮಾನವಾ.

ಸಮಸ್ತ ಆರ್ಥಿಕ ವ್ಯವಸ್ಥೆಯನ್ನೂ ಕ್ಷಣ ಮಾತ್ರದಲ್ಲಿ ನಾವು ಯಾರೂ ಕಲ್ಪಿಸದ ರೀತಿಯಲ್ಲಿ ಮಟ್ಟ ಹಾಕಿದ್ದು ಪ್ರಕೃತಿಯೇ. ಇನ್ನು ನಾವು ಪ್ರಕೃತಿಯ ಆಜ್ನೆಯಂತೆ ನಡೆಯಬೇಕು. ನಮ್ಮ ಆಟ ಏನೂ ನಡೆಯಲ್ಲ. ಬ್ಯಾಂಕುಗಳಲ್ಲಿ ಹಣ ಇಲ್ಲ. ಜನರ ತಿರುಗಾಟ ಇಲ್ಲ. ಮಾರುಕಟ್ಟೆ ಎಲ್ಲವೂ ಮಲಗಿದೆ. ಅಂಗಡಿ ಬಾಗಿಲುಗಳು ಮುಚ್ಚಿವೆ. ಸಾರಿಗೆಯ ವಾಹನಗಳಿಲ್ಲ. ಎಲ್ಲರೂ ಅವರವರ ಮನೆಯಲ್ಲಿದ್ದಾರೆ. ಇಡೀ ಅರ್ಥ ವ್ಯವಸ್ಥೆಯೇ ಸ್ಥಬ್ದವಾಗಿದೆ. ಇದು ಎಷ್ಟು ದಿನವೋ ಯಾರಿಗೂ ಗೊತ್ತಿಲ್ಲ. ಸಾಂಕ್ರಾಮಿಕ ರೋಗಗಳು ಕೋಟ್ಯಾಂತರ ರೂ.ಗಳನ್ನು ಬ್ಯಾಂಕಿನಲ್ಲಿಟ್ಟವರನ್ನೂ , ಸಾವಿರಾರು ಎಕ್ರೆ…

Read more

ಏಲಕ್ಕಿ ಬೆಳೆಗೆ ಇದು ಮಾರಕ ರೋಗ

ಏಲಕ್ಕಿ ಬೆಳೆಯಲಾಗುವ ಎಲ್ಲಾ ಕಡೆ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಕಟ್ಟೆ ಮತ್ತು ಕೊಕ್ಕೆ ಕಂದು ರೋಗ ಅಥವಾ ನಂಜಾಣು ರೋಗದ ಲಕ್ಷಣವನ್ನು ತೋರುವ ಸಸ್ಯಗಳಿವೆ. ಇದು ಸರಿಯಾಗುವ ರೋಗ ಅಲ್ಲ. ಹರಡುವ ರೋಗ. ಆದುದರಿಂದ  ಅದನ್ನು ಹಾಗೆಯೇ ಉಳಿಸಿಕೊಳ್ಳಬೇಡಿ. ಕಟ್ಟೆ ಅಥವಾ ಕೊಕ್ಕೆ ಕಂದು ರೋಗದ ಲಕ್ಷಣಕ್ಕೆ ಹೋಲಿಕೆ ಇದ್ದರೆ  ಅದನ್ನು ತೆಗೆದು ಬಿಡಿ. ರೋಗ ಅದರಲ್ಲೂ ನಂಜಾಣು ರೋಗ ಶಿಲೀಂದ್ರ ರೋಗಗಳು ಕೆಲವು ವಾಹಕಗಳ ಮೂಲಕ ಆರೋಗ್ಯವಂತ ಸಸ್ಯಕ್ಕೂ ಪ್ರಸಾರವಾಗುತ್ತದೆ. ಬಾಳೆಯಲ್ಲಿ  ನಂಜಾಣು ರೋಗ ಬಂದದ್ದನ್ನು…

Read more
Caster plant in fence

ಮನುಕುಲವನ್ನು ಕಾಪಾಡುವ ವಾತಾವರಣ ಮಹತ್ವ ಅರಿಯೋಣ.

ಪ್ರತೀ ವರ್ಷ ಮಾರ್ಚ್ 23 ರಂದು ಜಾಗತಿಕ ಹವಾಮಾನ ಸಂಸ್ಥೆಯು ವಾತಾವರಣ ವಿಜ್ಞಾನ ದಿವಸವನ್ನು World Meteorological Day ಆಚರಿಸುತ್ತದೆ. 1961 ರಿಂದಲೂ ಇದು ಆಚರಿಸಲ್ಪಡುತ್ತಿದೆ. ಕಳೆದ ವರ್ಷ ಹವಾಮಾನ ಮತ್ತು ನೀರು ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ವರ್ಷ ಭೂ ವ್ಯವಸ್ಥೆಯೊಳಗೆ ಸಾಗರ ಮತ್ತು ಹವಾಮಾನ ಎಂಬ ಧ್ಯೇಯದಲ್ಲಿ ಈ ದಿನವನ್ನು ಅಚರಿಸಲಾಗುತ್ತಿದೆ.   ಹವಾಮಾನದ ಸುಸ್ಥಿತಿ ಎಂಬುದು ಸುಖೀ ಸಂಸಾರದ ತರಹ. ಅದು ಇದ್ದರೆ ಮಾತ್ರ ಬದುಕು, ಇಲ್ಲವಾದರೆ ಅದು ನರಕ. ನಮಗೆ ನಮ್ಮ…

Read more

ಶ್ರೀಗಂಧದ ಹೊಲದಲ್ಲಿ ನಿರಂತರ ಆದಾಯ.

ಶ್ರೀಗಂಧ ಒಂದು ನಮ್ಮ ಕಾಡು ಬೆಟ್ಟಗಳಲ್ಲಿ ಬೆಳೆಯುವ ಸಸ್ಯ ಸಂಕುಲದ  ತರಹದ್ದೇ ಆದ ಸಸ್ಯ. ಇದು ಬೇರೆ ಸಸ್ಯಗಳನ್ನೂ ಬೆಳೆಯಲು ಬಿಡುತ್ತದೆ. ಯಾವುದೇ ಜೀವ ವೈವಿಧ್ಯಕ್ಕೆ  ಇದರಿಂದ ತೊಂದರೆ ಇಲ್ಲ. ಬೆಳೆ ಕಠಾವಿನ ತನಕವೂ ಒಂದಷ್ಟು ಆದಾಯವನ್ನು ಈ ಹೊಲದಲ್ಲಿ ಪಡೆಯುತ್ತಲೇ ಇರಬಹುದು.  ಶ್ರೀಗಂಧ  ಎಂದರೆ ಅದು ಕಲ್ಪ ವೃಕ್ಷದ ತರಹವೇ.  ಇದರ ಪ್ರತೀಯೊಂದೂ ಭಾಗವೂ ಸಹ  ಉಪಯುಕ್ತ ಮತ್ತು ಅದರಲ್ಲಿ ಔಷಧೀಯ ಗುಣಗಳೂ ಇವೆ. ಆದ  ಕಾರಣ ಶ್ರೀಗಂಧ  ಬೆಳೆದ ಹೊಲ ಎಂದರೆ ಅದು ಸದಾ…

Read more
girl drinking water

ಜೀವಜಲ – ನೀರಿನ ಬಗ್ಗೆ ಒಂದಷ್ಟು ತಿಳಿಯೋಣ.

ಒಂದು ಕಾಲದಲ್ಲಿ ನೆಲದಿಂದ ಮೇಲಕ್ಕೆ ಹೊರ ಚಿಮ್ಮುತ್ತಿದ್ದ ಕೆಲವು ನೀರ ಚಿಲುಮೆಗಳು ಈಗ ತಮ್ಮ ಕೆಲಸವನ್ನು ನಿಲ್ಲಿಸಿವೆ. ಓವರ್ ಪ್ಲೋ ಆಗುತ್ತಿದ್ದ ಕೊಳವೆ ಬಾವಿಗಳು ಆಯಾಸವಾಗಿ ತಮ್ಮ ಕೆಲಸವನ್ನು ನಿಲ್ಲಿಸಿವೆ. ಮನೆ ಮುಂದೆ ಕುಡಿಯುವ ನೀರಿಗಾಗಿ ಇದ್ದ ಬಾವಿಗಳಲ್ಲಿ ನೀರಿಲ್ಲದೆ ಖಾಲಿಯಾಗಿವೆ.ಎಲ್ಲಿ ನೋಡಿದರಲ್ಲಿ  ಕೊಳವೆ ಬಾವಿಯ ನೀರು. ನೀರಿನ ಬಳಕೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನೀರಿನ ಬಳಕೆ – ಅಂದು: ನಾವು ಸಣ್ಣವರಿದ್ದಾಗ ಮನೆಯಲ್ಲಿ ಅಜ್ಜಿ ಯಾವಾಗಲೂ ಗದರಿಸುತ್ತಿದ್ದುದು, ನೀರಿನ ಮಿತ ಬಳಕೆಗೆ. “ಸ್ವಲ್ಪ…

Read more

ಕಾಡು- ಮನುಕುಲದ ರಕ್ಷಕ- ತಿಳಿದಿರಲಿ.

ಕಾಡು ಮತ್ತು ಜೀವ ವೈವಿಧ್ಯ ಜೊತೆ ಜೊತೆಯಾಗಿ ಸಮತೋಲನದಲ್ಲಿದ್ದರೆ ಎಲ್ಲವೂ ಕ್ಷೇಮವಾಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ಸಮತೋಲನ ಹಳಿ ತಪ್ಪಲಾರಂಭಿಸಿದೆ. ಇದಕ್ಕೆ ಪ್ರಕೃತಿಯು ಮನುಕುಲದ ಮೇಲೆ ತನ್ನ ಪ್ರತಿರೋಧವನ್ನೂ ಒಡ್ಡುತ್ತಿದೆ. ಇದು ನಮಗೆಷ್ಟು ಅರಿವಿಗೆ ಬಂದಿದೆಯೋ ತಿಳಿಯದು. ಆದರೆ ಪ್ರಕೃತಿ ಮಾತ್ರ ತನ್ನ ಮೇಲೆ ಏನೇ ಘಾಸಿಯಾದರೂ ಅದಕ್ಕೆ ಪ್ರತಿಕ್ರಿಯೆ ತೋರಿಸುತ್ತದೆ. ಇಡೀ ಪ್ರಪಂಚದಲ್ಲಿ ಬುದ್ಧಿ ಉಳ್ಳ ಜೀವಿಗಳಾದ ಮಾನವ ಇದನ್ನು ಅರ್ಥ ಮಾಡಿಕೊಂಡು ನಮ್ಮಿಂದಾದ ತಪ್ಪನ್ನು ಸರಿಪಡಿಸಲು ಶ್ರಮಿಸಬೇಕಾಗಿದೆ. ಮಾರ್ಚ್ 21 ನೇ ದಿನಾಂಕವನ್ನು ವಿಶ್ವ…

Read more

ಸಸ್ಯ ಪೀಳಿಗೆಗೆ ಮರು ಜೀವ ಕೊಡುವ ಕಸಿ ಗುರುಗಳು.

ಉಡುಪಿಯ ಪೆರ್ಡೂರು ಸಮೀಪ ಗುರುರಾಜ ಬಾಲ್ತಿಲ್ಲಾಯ ಎಂಬ ಕಸಿ ತಜ್ಞ ಮಾಡದ ಕಸಿ ಇಲ್ಲ. ಇವರು ಸಸ್ಯಾಭಿವೃದ್ದಿಯಅಥವಾ ಕಸಿಗಾರಿಕೆಯ  ತಜ್ಞನೂ ಅಲ್ಲದೆ ಒಬ್ಬ ಸಸ್ಯ ಸಂರಕ್ಷಕನೂ ಹೌದು. ಇವರ ಕೈಯಲ್ಲಿ ಮರುಜೀವ ಪಡೆದ ಅದೆಷ್ಟೋ ಅಳಿದು ಹೋದ ತಳಿಗಳಿವೆ. ಸಸ್ಯದ ಒಂದು ಮೊಗ್ಗು ಸಿಕ್ಕರೂ ಸಾಕು ಹೇಗಾದರೂ ಅದನ್ನು ಕಸಿ ಮಾಡಿ ಮರು ಜೀವ ಕೊಡಬಹುದು ಎನ್ನುತ್ತಾರೆ. ಸುಮಾರು 25 ಕ್ಕೂ ಹೆಚ್ಚು ವಿಧಾನದಲ್ಲಿ ಕಸಿಮಾಡುವ ತಂತ್ರವನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ನಿಮ್ಮ ಹೊಲದಲ್ಲಿ ಒಂದು ವಿಶಿಷ್ಟ …

Read more
ಈ ಹಣ್ಣಿಗೆ ಬೆಳೆಗೆ ಉತ್ತಮ ಭವಿಷ್ಯ ಇದೆ.

ಉತ್ತಮ ಭವಿಷ್ಯ ಇರುವ ಹಣ್ಣಿನ ಬೆಳೆ.

ಬಹಳಷ್ಟು ಸಾರಿ  ನಾವು ವರ್ತಮಾನ ಕಾಲವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಕೃಷಿ ಮಾಡುತ್ತೇವೆ. ಆದರ ಬದಲಿಗೆ  ಭವಿಷ್ಯದಲ್ಲಿ ಯಾವುದಕ್ಕೆ ಬೇಡಿಕೆ ಬರಬಹುದು ಎಂದು ಯೋಚಿಸಿ ಅದಕ್ಕೆ ಅನುಗುಣವಾಗಿ ಕೃಷಿ ಮಾಡಿದರೆ ಆದು ಕ್ಲಿಕ್ ಆಗುತ್ತದೆ. ಪುನರ್ಪುಳಿ , ಕೋಕಂ ಎಂಬ ಈ ಹಣ್ಣಿನ ಸಸ್ಯವನ್ನು ಖಾಲಿ ಸ್ಥಳದಲ್ಲಿ ಬೆಳೆಸಿ….. ನಮ್ಮೆಲ್ಲರ ಚಿರ ಪರಿಚಿತ ಹಣ್ಣು ಪುನರ್ಪುಳಿ , ಮುರುಗನ ಹುಳಿ( Garcinia indica Choisy). ಇದು ದೇಶದ ಕರಾವಳಿಯ ಎಲ್ಲಾ ಕಡೆ  ನೈಸರ್ಗಿಕವಾಗಿ ಬೆಳೆಯುತ್ತಿರುವ ಸಸ್ಯ. ಬಹುತೇಕ ಎಲ್ಲಾ…

Read more
error: Content is protected !!