ಕರಿಮೆಣಸಿಗೆ ರೋಗ ಕಡಿಮೆಯಾಗಲು ಈ ಸರಳ ಕ್ರಮ ಅನುಸರಿಸಿ.

by | Nov 15, 2020 | Spice Crop (ಸಾಂಬಾರ ಬೆಳೆ), Pepper (ಕರಿಮೆಣಸು) | 0 comments

ನಿಮ್ಮ ಹೊಲದಲ್ಲಿ ಇರುವ ಕರಿಮೆಣಸಿನ ಬಳ್ಳಿಯನ್ನು ಒಮ್ಮೆ ಪರಾಂಬರಿಸಿ ನೋಡಿ. ತೆಂಗು, ಅಡಿಕೆ  ಮರಗಳಿಗೆ ಮೆಣಸು  ಬಳ್ಳಿ ಬಿಟ್ಟಿದ್ದು, ಆ ಮರ ಯಾವುದೇ ಕಾರಣಕ್ಕೆ ಸತ್ತು ಹೋದರೆ ಅದರಲ್ಲಿ ಇರುವ ಮೆಣಸಿನ ಬಳ್ಳಿ ಸಾಯಬೇಕು ಎಂದರೂ ಸಾಯಲಾರದು. ಮರ ಶಿಥಿಲವಾಗಿ ನೆಲಕ್ಕೆ ಬಿದ್ದ ನಂತರವೂ ಬಳ್ಳಿ ಜೀವಂತವಾಗಿರುತ್ತದೆ. ಇದು ಕರಿಮೆಣಸಿನ ಬಳ್ಳಿಯಲ್ಲಿ ನಾವು ಕಲಿಯಲಿಕ್ಕಿರುವ ಬೇಸಾಯ ಕ್ರಮ. ಮೆಣಸಿನ ಬಳ್ಳಿಗೆ ಅದರ ಶರೀರ ಪ್ರಕೃತಿಗೆ ಅನುಗುಣವಾಗಿ ನಾವು ಪೋಷಕಾಂಶ ನೀಡದ  ಕಾರಣದಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಬಳ್ಳಿಗೆ  ರೋಗ ಬರುತ್ತದೆ. ಇದಕ್ಕೆ ಅಪವಾದ ಇದೆಯಾದರೂ ಈ ವಿಷಯ ಬಹುತೇಕ ಸತ್ಯ.

High growth requires high manure

ಕರಿಮೆಣಸಿಗೆ ಗೊಬ್ಬರ  ಎಷ್ಟು ಬೇಕು:

 • ಕರಿಮೆಣಸು ಬೆಳೆಗೆ ಹೀಗೇ ಬೆಳೆಯಬೇಕು ಎಂಬ ಬೇಸಾಯ ಕ್ರಮ ಇದೆ. ಆ ಪ್ರಕಾರ ಬೆಳೆ ಬೆಳೆಯ ಬೇಕು.
 • ಕರಿಮೆಣಸಿನ ಗಿಡದಲ್ಲಿ ಇರುವ ಎಲೆಗಳು, ಅದರಲ್ಲಿ ಇರುವ ಫಸಲು ಇದಕ್ಕೆ ವ್ಯಯವಾಗುವ ಪೋಷಕಾಂಶ ಇದಕ್ಕನುಗುಣವಾಗಿ ಪೋಷಕಾಂಶಗಳನ್ನು  ಕೊಡಬೇಕಾಗುತ್ತದೆ.
 • ಇದು ರಾಸಾಯನಿಕ ಗೊಬ್ಬರ ಮತ್ತು ಸಾವಯವ ಗೊಬ್ಬರ ಎರಡೂ ಮೂಲದಲ್ಲೂ ಇರಬೇಕು.
 • ಮಣ್ಣಿನಲ್ಲಿ ರೋಗ ನಿರೋಧಕ ಶಕ್ತಿ ಕೊಡಬಲ್ಲ ಜೀವಾಣುಗಳು ಬದುಕಿರಲು ಅಗತ್ಯವಾಗಿ  ಕಾಂಪೋಸ್ಟು  ಆದ  ಗೊಬ್ಬರ ಕೊಡುವುದು ಮುಖ್ಯ.
 • ಆಮ್ಲ ಮಣ್ಣಿರುವ ಪ್ರದೇಶದಲ್ಲಿ ಸುಣ್ಣ ಅಥವಾ ಡೋಲೋಮೈಟ್ ಅನ್ನು ಪ್ರತಿ ಬಳ್ಳಿಗೆ 500 ಗ್ರಾಂ ನಂತೆ ಪರ್ಯಾಯ ವರ್ಷಗಳಲ್ಲಿ ಏಪ್ರಿಲ್ಮೇ ತಿಂಗಳಲ್ಲಿ ಹಾಕಬೇಕು.
 • ಸಾವಯವ ಗೊಬ್ಬರಗಳಾದ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಅನ್ನು ಪ್ರತಿ ಬಳ್ಳಿಗೆ  ಕನಿಷ್ಟ 10 ಕೆ.ಜಿ ಹಾಗೂ ಬೇವಿನ ಹಿಂಡಿ ಅಥವಾ ಹರಳು ಹಿಂಡಿಯನ್ನು  ಪ್ರತಿ ಬಳ್ಳಿಗೆ 1 ಕೆ.ಜಿ ಯಂತೆ ಹಾಕಿದರೆ ಮಣ್ಣು ಜನ್ಯ ಜಂತು ಹುಳದ ಬಾಧೆ ಕಡಿಮೆಯಾಗುತ್ತದೆ.
 • ಎರಡನೇ ವರ್ಷದ ನಂತರ ಕರಿಮೆಣಸು ಬಳ್ಳಿಗಳಿಗೆ ರಾಸಾಯನಿಕ ಗೊಬ್ಬರವಾಗಿ ಸಾರಜನಕ: ರಂಜಕ: ಪೊಟ್ಯಾಷ್ 50: 50: 150 ಗ್ರಾಂ. ನಂತೆ ಪ್ರತೀ ಬಳ್ಳಿಗೆ ಕೊಡಬೇಕು. 
 • ಅಂದರೆ ಬಳ್ಳಿ/ವರ್ಷ(ಸಾಮಾನ್ಯ ನಿರ್ವಹಣೆ), ಉತ್ತಮ ಇಳುವರಿ ಪಡೆಯಲು 140:50:250 ಗ್ರಾಂ/ಬಳ್ಳಿ/ವರ್ಷ ಗೊಬ್ಬರ ಹಾಕಬೇಕು.   
 • 125 ಗ್ರಾಂ ಯೂರಿಯಾ,  300 ಗ್ರಾಂ ರಾಕ್ ಫೋಸ್ಫೇಟ್ ಮತ್ತು  250 ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ಕೊಡಬಹುದು.

ಇಲ್ಲವಾದರೆ,300 ಗ್ರಾಂ 20:20:0:13  ಮತ್ತು 250 ಗ್ರಾಂ ಮ್ಯುರೆಟ್  ಆಫ್ ಪೊಟ್ಯಾಶ್ ಕೊಡಬೇಕು. ಇವೆರಡನ್ನು ವಿಭಾಗ ಮಾಡಿ ಮುಂಗಾರು ಪೂರ್ವದಲ್ಲಿ ಮತ್ತು ಮಳೆ ನಿಲ್ಲುವ ಸಮಯದಲ್ಲಿ ಬೇರಿಗೆ ಗಾಯವಾಗದಂತೆ ನಾಲ್ಕೂ ದಿಕ್ಕಿನಲ್ಲಿ ತೂತು ಮಾಡಿ ಕೊಡಬೇಕು.

this type of plant growth needs heavy manure requirements

ಇಂತಹ ಬೆಳೆವಣಿಗೆ ಹೊಂದಿದ ಬಳ್ಳಿಗೆ ಅಡಿಕೆ ಮರಕ್ಕಿಂತ ದುಪ್ಪಟ್ಟು ಪೋಷಕ ಬೇಕು.

 • ಪ್ರಮಾಣದ ಗೊಬ್ಬರದಲ್ಲಿ 1/2 ಭಾಗವನ್ನು ಮೊದಲನೇ ವರ್ಷ ನೀಡಬೇಕು,
 • ಬಳ್ಳಿಯ ಬೆಳವಣಿಗೆ ಉತ್ತಮವಾಗಿದ್ದು, 20 ಅಡಿ ಗಿಂತ ಹೆಚ್ಚು ಎತ್ತರಕ್ಕೆ ಹಬ್ಬಿದ್ದು, ಉತ್ತಮ ಫಸಲು ಮತ್ತು  ಹೆಚ್ಚು  ಎಲೆಗಳು ಇದ್ದರೆ
 • ಮೂರನೇ ವರ್ಷದ ನಂತರ ಈ ಪ್ರಮಾಣವನ್ನು ಒಮ್ಮೆ ಮಳೆಗಾಲ ಮೊದಲೂ ಅಷ್ಟೇ ಮಳೆಗಾಲ ಮುಗಿಯುವ ಸಮಯ ಅಲ್ಪಸ್ವಲ್ಪ ಮಳೆ ಇರುವಾಗ ಕೊಡಬೇಕು.
 • ಸರಿಯಾಗಿ ಆಹಾರ ಕೊಡುವುದರಿಂದ ರೋಗ ಸಾಧ್ಯತೆ ಕಡಿಮೆ.

ಗೊಬ್ಬರ ಕೊಡುವ ಕ್ರಮ:

 •  ಗೊಬ್ಬರವನ್ನು ವರ್ಷದಲ್ಲಿ ಎರಡು ಬಾರಿ ಮೇಜೂನ್ ತಿಂಗಳಲ್ಲಿ ಹಾಗೂ ಆಗಸ್ಟ್ಸೆಪ್ಟೆಂಬರ್ ತಿಂಗಳಲ್ಲಿ ವಿಂಗಡಿಸಿ ನೀಡುವುದು ಉತ್ತಮ.
 • ಗೊಬ್ಬರ ಕೊಡುವಾಗ  ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಇರಬೇಕು.
 • ಕೊಟ್ಟಿಗೆ ಗೊಬ್ಬರ ಸರಿಯಾಗಿ ಹುಡಿಯಾಗಿ ಕಳಿತಂತದ್ದು ಆಗಿರಬೇಕು.
 • ಗೊಬ್ಬರವನ್ನು ಮೆಣಸಿನ ಬಳ್ಳಿಯ ಬುಡದಿಂದ 1-1.5 ಅಡಿ  ದೂರದಲ್ಲಿ ಹಾಕಬೇಕು.
 • ಹಾಗೂ ತೆಳುವಾಗಿ ಮಣ್ಣಿನಿಂದ ಮುಚ್ಚಬೇಕು.
 • ರಸಗೊಬ್ಬರವು ಕರಿಮೆಣ  ಸಿನ  ಬೇರುಗಳಿಗೆ ನೇರ ಸಂಪರ್ಕ ಬಾರದಂತೆ ಎಚ್ಚರ ವಹಿಸಬೇಕು.
 • ಸಾವಯವ ಗೊಬ್ಬರವಾದ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಅನ್ನು ಮಳೆ ಪ್ರಾರಂಭವಾಗುವಾಗ ಹಾಕಬೇಕು.
 • ಬೇವು, ಹರಳು ಹಿಂಡಿಯನ್ನೂ ಸಹ ಹಾಗೆಯೇ ಕೊಡಬೇಕು.
 • ಜೈವಿಕ ಗೊಬ್ಬರವಾದ ಅಜೋಸ್ಪೈರಿಲಂ 100 ಗ್ರಾಂ ಪ್ರತಿ ಬಳ್ಳಿಗೆ ಹಾಕುತಿದ್ದರೆ ಸ್ವಲ್ಪ ಸಾರಜನಕವನ್ನು ಕಡಿಮೆ ಮಾಡಬಹುದು.

ಸತು ಮತ್ತು ಮೆಗ್ನೀಷಿಯಂ ಕೊರತೆ ಇರುವ ಮಣ್ಣಿಗೆ ಶೇ. 0.25 ಸತುವಿನ ಸಲ್ಪೇಟ್ ದ್ರಾವಣವನ್ನು ವರ್ಷದಲ್ಲಿ ಎರಡು ಬಾರಿ (ಮೇಜೂನ್ ಮತ್ತು ಸೆಪ್ಟೆಂಬರ್ಅಕ್ಟೋಬರ್) ಸಿಂಪಡಿಸಿ ಮತ್ತು 200 ಗ್ರಾಂ ಪ್ರತಿ ಬಳ್ಳಿಗೆ ಮ್ಯಾಗ್ನೀಷಿಯಂ ಸಲ್ಪೇಟ್ ಅನ್ನು ಹಾಕುವುದು ಉತ್ತಮ.

 • ಭಾರತೀಯ ಸಾಂಬಾರ ಬೆಳೆಗಳ ಸಂಶೋಧಾನ ಸಂಸ್ಥೆ IISR  ಕರಿಮೆಣಸಿಗೆ ಬೇಕಾಗುವ ಲಘು ಪೋಷಕಾಂಶ ಮಿಶ್ರಣವನ್ನು ತಯಾರಿಸಿದೆ.
 • ಲಘು ಪೋಷಕಾಂಶಗಳ ಮಿಶ್ರಣವನ್ನು ಹೆಚ್ಚಿನ ಇಳುವರಿಗಾಗಿ ಹೂ ಬಿಡುವ ಪ್ರಾರಂಭದಲ್ಲಿ ಮತ್ತು ಕಾಯಿ ದಪ್ಪವಾಗುವ ತಿಂಗಳುಗಳಲ್ಲಿ 5 ಗ್ರಾಂ/ಲೀ ನಂತೆ ಎರಡು ಬಾರಿ ಎಲೆಗಳಿಗೆ ಸಿಂಪಡಿಸಬೇಕು.  
safe manuring method, Pocket manure syastem

ಬೇರಿಗೆ ಗಾಯ ಆಗದಂತೆ ಹೀಗೆ ತೂತು ಮಾಡಿ ಗೊಬ್ಬರ ಕೊಡುವುದು ಉತ್ತಮ

ನೀರಾವರಿ ಮತ್ತು ಬಳ್ಳಿಯ ಶಕ್ತಿ:

 • ಖುಷ್ಕಿ ಭೂಮಿಯಲ್ಲಿ ಮತ್ತು ನೆಲಕ್ಕೆ ಮುಚ್ಚಿಗೆ ಇಲ್ಲದ ಭೂಮಿಯಲ್ಲಿ ನೆಲಕ್ಕೆ ನೇರ ಬಿಸಿಲು ಬೀಳುತ್ತಿದ್ದರೆ ಮಳೆಗಾಲ ಕಳೆದು ಚಳಿಗಾಲ ಪ್ರಾರಂಭವಾಗುವಾಗ ನೀರಾವರಿ ಮಾಡಿ ಬಳ್ಳಿಗೆ ಶಕ್ತಿ ಕೊಡಬೇಕಾಗುತ್ತದೆ.
 • ಕೊಯಿಲಿಗೆ 10ದಿನಕ್ಕೆಮುಂಚೆ ನೀರು ನಿಲ್ಲಿಸಬೇಕು.
 • ಕೊಯಿಲಿನ ನಂತರ ಮಾರ್ಚ್ 15 ರಿಂದ ಮೇ 15 ರವರೆಗೆ ನೀರಾವರಿ ಮಾಡುವುದರಿಂದ ಅಧಿಕ ಇಳುವರಿಯನ್ನು ಕಾಣಬಹುದು.
 • ರೀತಿ ಮಾಡುವುದರಿಂದ ನೀರಾವರಿ ಮಾಡಿದ ಪ್ರದೇಶದಲ್ಲಿ ಕೊತ್ತುಗಳು ಜೂನ್ ತಿಂಗಳಿನಲ್ಲಿ ಒಂದೇ ಸಮನಾಗಿ ಬೆಳೆಯುತ್ತದೆ (>90%).
 • ಮಳೆಯಾಶ್ರಿತ ಪ್ರದೇಶದಲ್ಲಿ ಶೇ. 60 ರಷ್ಟು ಕೊತ್ತುಗಳು ಜುಲೈ ತಿಂಗಳಿನಲ್ಲಿ ಕಾಣಿಸಿಕೊಳ್ಳುವುದು ಮತ್ತು ಸೆಪ್ಟೆಂಬರ್ ತಿಂಗಳ ತನಕ ಮುಂದುವರೆಯುತ್ತದೆ.
 • ನೀರಾವರಿ ಮಾಡಿದ ಬಳ್ಳಿಯ ಕೊತ್ತುಗಳು ಸಾಮಾನ್ಯವಾಗಿ ಮಳೆಯಾಶ್ರಿತ ಕೊತ್ತುಗಳಿಗಿಂತ ಉದ್ದವಾಗಿರುತ್ತವೆ.

 ಈ ಬೆಳೆ ನಿರ್ವಹಣಾ ವಿಧಾನವನ್ನು ಚಾಚೂ ತಪ್ಪದೆ ಅನುಸರಿಸಿದರೆ ರೋಗ ಸಾಧ್ಯತೆ  ಕಡಿಮೆಯಾಗುತ್ತದೆ. ರೋಗಗಳ ಮೂಲ ಸಸ್ಯದ ಶಕ್ತಿ. ಸಸ್ಯದ ಶಕ್ತಿಗೆ ಕಾರಣ ಪೋಷಕಾಂಶ. ಆದ ಕಾರಣ ಪೋಷಕಾಂಶ ಬಿಟ್ಟು ಬೆಳೆ ಇಲ್ಲ. ಈ ವಿಧಾನದಲ್ಲಿ ಗೊಬ್ಬರ ಕೊಡುವುದನ್ನು ಅಭ್ಯಾಸ ಮಾಡಿಕೊಂಡ ಹಲವಾರು ಜನ ರೈತರಿಗೆ ರೋಗದ  ಬಾಧೆ ಹೆಚ್ಚಾಗಿ ಕಂಡು ಬಂದಿಲ್ಲ.
end of the artice:—————————————————————————————
search words: peper cultivation# pepper and manure# pepper disease management# papper resoponse to manures# irrigation to pepper vine# manuring schedule for pepper#

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!