ಫಸಲು ಕೊಡುವ ಅಡಿಕೆ ಮರ

ಫಸಲು ಕೊಡುವ ಅಡಿಕೆ ಮರಗಳಿಗೆ ಗೊಬ್ಬರ – ಯಾವುದು ಹೇಗೆ ಕೊಡಬೇಕು?

ಫಸಲು ಕೊಡುವ ಅಡಿಕೆ ಮರಲ್ಲಿ ವರ್ಷ ಪೂರ್ತಿ ಬೆಳೆವಣಿಗೆ ಇರುತ್ತದೆ. ಮಳೆಗಾಲದಲ್ಲಿ ಬೆಳೆಯುವ ಮಿಡಿಗಳು, ಚಳಿಗಾಲದಲ್ಲಿ ಬಲಿಯುತ್ತಿರುವ ಕಾಯಿಗಳು ಮತ್ತು ಮೂಡುತ್ತಿರುವ ಹೂ ಗೊಂಚಲು ಹಾಗೂ ಬೇಸಿಗೆಯಲ್ಲಿ ಅರಳುತ್ತಿರುವ ಹೂ ಗೊಂಚಲುಗಳು. ಈ ಮೂರೂ ಋತುಮಾನದಲ್ಲೂ ಅಗತ್ಯ ಪೋಷಕಗಳು ಬೇಕು. ಮಳೆಗಾಲ ಪ್ರಾರಂಭದಲ್ಲಿ ಪೋಷಕಗಳ ಕೊಟ್ಟರೆ ಅದು ಗರಿಷ್ಟ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಈಗ ಸಾರಜನಕ ಗೊಬ್ಬರವನ್ನು ಕಡಿಮೆ ಪ್ರಮಾಣದಲ್ಲೂ, ರಂಜಕ ಮತ್ತು ಪೊಟ್ಯಾಶ್ ಗೊಬ್ಬರಗಳನ್ನು  ನಿಗದಿತ ಪ್ರಮಾಣದಲ್ಲೂ ಕೊಡಬೇಕು. ಕಾರಣ ಮಳೆ ಸಿಡಿಲು ಮಿಂಚುಗಳಿಂದ ಸಾಕಷ್ಟು ಸಾರಜನಕ…

Read more
ಮ್ಯುರೇಟ್ ಆಫ್ ಪೊಟ್ಯಾಶ್ - ಉತ್ತಮ ಗೊಬ್ಬರ

ಬೆಳೆಗಳಿಗೆ ಶಕ್ತಿ ಕೊಡುವ ಗೊಬ್ಬರ – ಪೊಟ್ಯಾಶಿಯಂ

ನಿಮ್ಮ ಬೆಳೆಗಳು ಹಚ್ಚ ಹಸುರಾಗಿ ಬೆಳೆದಿರುತ್ತವೆ. ಆದರೆ ಇಳುವರಿ ಮಾತ್ರ ತೀರಾ ಕಡಿಮೆ ಇರುತ್ತದೆ.ಬರುವ ಇಳುವರಿಯ ಗುಣಮಟ್ಟವೂ ಚೆನ್ನಾಗಿರುವುದಿಲ್ಲ. ಇದಕ್ಕೆಲ್ಲಾ ಕಾರಣ ಪೊಟ್ಯಾಶಿಯಂ ಎಂಬ ಪೋಷಕದ ಕೊರತೆ. ಪೊಟ್ಯಾಶಿಯಂ ಲಭ್ಯವಾದರೆ ಮಾತ್ರ  ಕೈಗೆ ಬಂದ ತುತ್ತು ಬಾಯಿಗೆ ಬರಲು ಸಾಧ್ಯ. ಇದು ಬೆಳೆಗಳಿಗೆ ಶಕ್ತಿ ಕೊಡುವ ಗೊಬ್ಬರ.  ನಮ್ಮ ದೇಶದ ಬಹಳ ಜನಕ್ಕೆ ಸಮತೊಲನದ ಗೊಬ್ಬರ ಎಂದರೆ ಏನು ಎಂಬುದು ಇನ್ನೂ ತಿಳಿದಿಲ್ಲ. ಅದಕ್ಕೆ ಸರಿಯಾಗಿ ನಮ್ಮಲ್ಲಿ ಪೊಷಕಾಂಶಗಳನ್ನು ಒದಗಿಸುವವರೂ ಮಾರಾಟ ಚಾಕಚಕ್ಯತೆಯನ್ನು ತೋರುತ್ತಿವೆ. ಬರೇ ಗೊಬ್ಬರದ…

Read more
areca nut palm with full yield

ಅಡಿಕೆ – ಉತ್ತಮ ಫಲ ಕೊಡುವ ಮರದ ಲಕ್ಷಣ ಹೇಗಿರಬೇಕು.

ಇತ್ತೀಚೆಗಿನ ಅಡಿಕೆ ತೋಟಗಳಲ್ಲಿ ಶೇ.50 ಮಾತ್ರ ಉತ್ತಮ ಫಲನೀಡಿ, ಉಳಿದವು ಅನುತ್ಪಾದಕ ಮರಗಳಂತೆ ಇರುವ ಕಾರಣ ತೋಟಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದರೂ ಉತ್ಪಾದನೆ ಆ ಮಟ್ಟಕ್ಕೆ ಏರುತ್ತಿಲ್ಲ. ಬೆಳೆಗಾರರು ಹೆಚ್ಚು ಹೆಚ್ಚು ಸಸಿ ನೆಡುವ ಬದಲು ಇರುವ ತೋಟದಲ್ಲೇ ಬಹುತೇಕ ಉತ್ಪಾದಕ ಮರಗಳಿರುವಂತೆ ತೋಟವನ್ನು ಪುನಃಶ್ಚೇತನ ಮಾಡುವುದು ಎಲ್ಲಾ ದೃಷ್ಟಿಯಿಂದ ಉತ್ತಮ. ಸ್ವಲ್ಪ ಬಿಡುವು ಮಾಡಿಕೊಂಡು ತೋಟ ಸುತ್ತುತ್ತಾ ಬನ್ನಿ. ಹಿಂದೆ ಸುತ್ತುದಾಗ ಗಮನಿಸಿದ ಮರ, ಕಳೆದ ವರ್ಷ ಸುತ್ತುವಾಗ ಗಮನಿಸಿದ ಮರ , ಅದಕ್ಕಿಂತ ಹಿಂದಿನ…

Read more
ಅಡಿಕೆ ಗರಿ ತಿನ್ನುವ ಹುಳದ ವಾಸಸ್ಥಾನ

ಅಡಿಕೆಗೆ ಹರಿತ್ತು ತಿನ್ನುವ ಹುಳುವಿನ ತೊಂದರೆ ಮತ್ತು ಪರಿಹಾರ.

ಅಡಿಕೆಯ ಮರದ ಗರಿಗಳನ್ನು ಹಾನಿಮಾಡುವ ಕೀಟಗಳಲ್ಲಿ ಮುಖ್ಯವಾಗಿ ಸುಳಿ ತಿಗಣೆ ಒಂದು ಎಂದು ನಾವು ತಿಳಿದಿದ್ದೇವೆ, ಆದರೆ ಇದನ್ನು ಸಿಂಗಾರ ತಿನ್ನುವ  ಹುಳದ ತರಹವೇ ಇರುವ ಇನ್ನೊಂದು ಎಲೆ ತಿನ್ನುವ ಹುಳ ಸಹ ಅಡಿಕೆಯ ಎಳೆಯ ಗರಿಗಳನ್ನು ತಿನ್ನುತ್ತವೆ. ಇದರಿಂದ ಬಹಳ ಹಾನಿ ಉಂಟಾಗುತ್ತಿದೆ. ದಾವಣಗೆರೆ ಸುತ್ತಮುತ್ತ ಹಲವು ರೈತರ ಹೊಲದಲ್ಲಿ ಈ ಕೀಟದ  ಹಾವಳಿ ಹೆಚ್ಚಾಗಿದ್ದು, ಹೆಚ್ಚು ಹೆಚ್ಚು ಪ್ರದೇಶಕ್ಕೆ ವ್ಯಾಪಿಸುತ್ತಿದೆ. ಅಡಿಕೆಯ ಮರದ ಗರಿಗಳಿಗೆ ಆಗುವ ಹಾನಿ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು…

Read more

ಅಡಿಕೆ- ಈ ರೀತಿಯಾಗಿ ಯಾಕೆ ಉದುರುತ್ತಿದೆ?

ಈ ವರ್ಷ ಅಡಿಕೆ ಬೆಳೆಗಾರರು ಬಹಳ ಸಮಸ್ಯೆಯನ್ನು  ಅನುಭವಿಸಿದ್ದಾರೆ. ಮೊದಲು ಸಿಂಗಾರ ಒಣಗುವ ಸಮಸ್ಯೆ , ನಂತರ ಮಿಡಿ ಕಾಯಿ ಉದುರುವುದು, ಈಗ ಮತ್ತೆ ಬಲಿಯುತ್ತಿರುವ (ಹಸ) ಕಾಯಿಗಳ ಉದುರುವಿಕೆ. ಬರೇ ಉದುರುವುದು ಮಾತ್ರವಲ್ಲ. ಕಾಯಿಯಲ್ಲಿ  ಸುಟ್ಟಂತಹ ಕಪ್ಪು ಕಲೆಗಳಿವೆ. ಕೊಳೆತ ಇಲ್ಲ. ಇದು ಯಾವ ಸಮಸ್ಯೆ ಎಂಬುದು ನಿಘೂಢವಾಗಿದೆ. ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ಹೇಳುತ್ತಿದ್ದಾರೆ. ಕಳೆದ 2 ವರ್ಷಗಳಲ್ಲಿ  ಅದೇನೂ ಮಹಾ ಮಳೆಯೋ, ಅಡಿಕೆಗೆ ಭಾರೀ ಕೊಳೆ ರೋಗ ಬಂತು. ಸುಮಾರು 25-30% ಬೆಳೆ ನಷ್ಟವಾಯಿತು. ಈ…

Read more
ಸುಳಿ ಮುರುಟಿದ ಅಡಿಕೆ ಗಿಡ

ಅಡಿಕೆ ಸಸ್ಯಗಳು ಮುರುಟಿಕೊಳ್ಳುವುದೇಕೆ? ಪರಿಹಾರ ಏನು?

ಅಡಿಕೆ ಸಸ್ಯಗಳ ಸುಳಿ ಮುರುಟಿಕೊಳ್ಳುವಿಕೆ ಮತ್ತು ಶಿರಭಾಗ ಬಾಗಿ ತಿರುಗುವಿಕೆ, ಗರಗಸ ಗಂಟು ಇವೆಲ್ಲಾ ಒಂದು ಶಾರೀರಿಕ ಸಮಸ್ಯೆಗಳು.ಕೆಲವು ಪ್ರಾಥಮಿಕ ಹಂತದಲ್ಲಿರುವವುಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಆದರೆ ಇದು ಸ್ವಲ್ಪ ನಿಧಾನ ಪ್ರಕ್ರಿಯೆ. ಗೊಬ್ಬರ ನಿರ್ವಹಣೆ ಮತ್ತು ಅಗತ್ಯ ಬೇಸಾಯ ಕ್ರಮದಲ್ಲೇ ಇದನ್ನು  ಸರಿಪಡಿಸಿಕೊಳ್ಳಲು ಸಾಧ್ಯ. ನೂರು ಅಡಿಕೆ ಮರಗಳಲ್ಲಿ ಕನಿಷ್ಟ 10 ಆದರೂ ಈ ತರಹ ಸುಳಿ ಮುರುಟುವುದು, ಗರಿ ಬಿಡಿಸಿಕೊಳ್ಳದೆ ಅಲ್ಲಿಗೆ ಗುಛ್ಛವಾಗುವುದು ಇರುತ್ತದೆ. ಇದಕ್ಕೆ ಪ್ರಾದೇಶಿಕ ಇತಿ ಮಿತಿ ಇಲ್ಲ. ಇದನ್ನು ಕೆಲವರು ಹಿಡಿ…

Read more
areca garden with out tilling

ಅಡಿಕೆ- ಬುಡ ಬಿಡಿಸಿ ಗೊಬ್ಬರ ಕೊಡಬೇಕಾಗಿಲ್ಲ.

ಬಹಳ ಜನ ಅಡಿಕೆ , ತೆಂಗಿನ ಮರಗಳಿಗೆ ಗೊಬ್ಬರ ಇತ್ಯಾದಿ ಹಾಕುವಾಗ ಮರದ ಬುಡ ಭಾಗವನ್ನು ಕೆರೆದು ಆ ಅವಕಾಶದ ಒಳಗೆ  ರಾಸಾಯನಿಕ ಗೊಬ್ಬರ, ಕೊಟ್ಟಿಗೆ ಗೊಬ್ಬರ ಕೊಟ್ಟು ಮತ್ತೆ ಮುಚ್ಚುತ್ತಾರೆ.  ಇದಕ್ಕೆ ತಗಲುವ ಖರ್ಚು ಗೊಬ್ಬರಕ್ಕಿಂತ ಹೆಚ್ಚು. ಅದನ್ನು ಉಳಿಸಿದರೆ ಗೊಬ್ಬರ ಜಾಸ್ತಿ ಕೊಟ್ಟು ಇಳುವರಿ ಹೆಚ್ಚು ಪಡೆಯಬಹುದು. ಇಲ್ಲಿ ತೋರಿಸಿರುವ ಚಿತ್ರ ಓರ್ವ ಅಡಿಕೆ  ಬೆಳೆಗಾರ ತನ್ನ ಅಡಿಕೆ  ತೋಟದಲ್ಲಿ ನೆಟ್ಟ ನಂತರ ಗುದ್ದಲಿ ಮುಟ್ಟಿಸಿಲ್ಲ. ಇಲ್ಲಿನ  ಇಳುವರಿ  ಮತ್ತು ಮರದ ಆರೋಗ್ಯ ಬೇರೆಲ್ಲೂ…

Read more

ಅಧಿಕ ಇಳುವರಿಗೆ ಸಹಾಯಕವಾಗುವ ಸಾವಯವ ಗೊಬ್ಬರಗಳು.

ರಾಸಾಯನಿಕ ಗೊಬ್ಬರಗಳು ಒಮ್ಮೆಗೆ  ಉತ್ತಮ ಫಲಿತಾಂಶ ಕೊಡಬಹುದು. ಆದರೆ ಅದು ಧೀರ್ಘ ಕಾಲದ ತನಕ ಕಷ್ಟ. ಮಣ್ಣಿನ ಫಲವತ್ತತೆಯಿಂದ ಮಾತ್ರ ಧೀರ್ಘಕಾಲಿಕ ಫಲಿತಾಂಶ ಪಡೆಯಲು ಸಾಧ್ಯ. ಧೀರ್ಘಾವಧಿ ಬೆಳೆಗಳಿಗೆ ಮಣ್ಣಿನ ಫಲವತ್ತತೆ ಪ್ರಾಮುಖ್ಯ. ಸಾವಯವ ಅಥವಾ ನೈಸರ್ಗಿಕ ಮೂಲವಸ್ತುಗಳಿಂದ ಮಾತ್ರ ಮಣ್ಣಿನ ಫಲವತ್ತತೆ ವೃದ್ದಿಯಾಗಲು ಸಾಧ್ಯ. ರಾಸಾಯನಿಕ ಗೊಬ್ಬರಗಳು ಎಲ್ಲವೂ ಆಮ್ಲೀಯ ಗುಣದವು. ಇದನ್ನು ಮಣ್ಣಿಗೆ ಹಾಕುವುದರಿಂದ ಮಣ್ಣು ಸ್ವಲ್ಪ ಮಟ್ಟಿಗೆ ಅಜೀರ್ಣಕ್ಕೊಳಗಾಗುತ್ತದೆ. ರಾಸಾಯನಿಕ ಗೊಬ್ಬರಗಳನ್ನು ಬಳಸುವುದರ ಜೊತೆಗೆ  ಸಾವಯವ ವಸ್ತುಗಳನ್ನೂ ಸೇರಿಸುತ್ತಿದ್ದರೆ ಮಣ್ಣು ಆರೋಗ್ಯವಾಗಿರುತ್ತದೆ. ಮಣ್ಣು…

Read more
ಅಡಿಕೆ ತೋಟದಲ್ಲಿ ಬಸಿಗಾಲುವೆ ಈ ರೀತಿ ಇರಬೇಕು

ಅಡಿಕೆ ಮರಗಳು ಆರೋಗ್ಯವಾಗಿರಬೇಕಾದರೆ ಬಸಿಗಾಲುವೆ ಅಗತ್ಯ.

ಬಸಿಗಾಲುವೆ  ಇಲ್ಲದ ತೋಟದಲ್ಲಿ ಯಾವಾಗಲೂ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ. ಮಣ್ಣಿನಲ್ಲಿ ನೀರು ಇರಲಿ. ಆದರೆ ಆದು ಗಿಡಗಳ ನಿಂತು ಹಳಸಲು ಆಗಬಾರದು. ಅದನ್ನು ತಡೆಯಲು ಬಸಿಗಾಲುವೆಯೇ ಪರಿಹಾರ. ಬಸಿಗಾಲುವೆ ಮಾಡದ ತೋಟ ಅದು ತೋಟವೇ ಅಲ್ಲ. ನೀರು ಬಸಿಯುವುದಕ್ಕೆ ಮಾತ್ರವಲ್ಲದೆ ಬೇರುಗಳ ಶ್ವಾಸೋಚ್ವಾಸಕ್ಕೂ ಬಸಿ ಗಾಲುವೆ ಬೇಕು. ನಿಮ್ಮ ತೋಟದಲ್ಲಿ ಅಡಿಕೆ ಮರಗಳು ಎಷ್ಟು ಪೋಷಕಾಂಶ ಕೊಟ್ಟರೂ ಸ್ಪಂದಿಸದೇ ವರ್ಷದಿಂದ ವರ್ಷ ಇಳುವರಿ ಕಡಿಮೆಯಾಗುವುದು ಉಂಟೇ? ಸಸಿ/ ಮರಗಳ ಶಿರ ಭಾಗ ಸಪುರವಾಗುತ್ತಾ ಬರುತ್ತದೆಯೇ? ಗಿಡ…

Read more
error: Content is protected !!