ಸರಕಾರೀ ವ್ಯವಸ್ಥೆಗಳಲ್ಲೂ ಇಷ್ಟು ವ್ಯಾಪಾರ ಬೇಕೇ?

ಮೊನ್ನೆ ಸುಬ್ರಮಣ್ಯ ಸಮೀಪದ ನೆಟ್ಟಣದ ಕೇಂದ್ರೀಯ ತೋಟದ ಬೆಳೆಗಳ ಸಂಶೊಧಾನ ಸಂಸ್ಥೆಯ  ಬೀಜ ಕೇಂದ್ರಕ್ಕೆ ತೆಂಗಿನ ಸಸಿ ತರಲು ಹೋಗಿದ್ದೆ. ಇಲ್ಲಿ ಆದ ಅನುಭವ ಯಾಕೋ ರೈತರ ಜೊತೆ ಹಂಚಿಕೊಳ್ಳಬೇಕೆನಿಸುತ್ತಿದೆ.  ಸರಕಾರೀ ವ್ಯವಸ್ಥೆಗಳಲ್ಲಿ ಇಷ್ಟೊಂದು ವ್ಯಾಪಾರ ಬೇಕಾ?. ಬೀಜ- ಸಸಿ ಎಂಬ ರೈತರ ಭವಿಷ್ಯದ ಇನ್ವೆಸ್ಟ್ಮೆಂಟ್ ನಲ್ಲಿ ಯಾರೂ ಮಕ್ಕಳಾಟಿಕೆ ಮಾಡಬಾರದು.  ಒಂದು ಕುಬ್ಜ ತಳಿಯ ಬೀಜದ ತೆಂಗಿನ ಕಾಯಿ. ಬೆಲೆ ಎಷ್ಟು ಗೊತ್ತೇ? ಬರೋಬ್ಬರಿ 120 ರೂ. ಒಂದು ಸಸಿಯ ಬೆಲೆ ಎಷ್ಟು ಗೊತ್ತೇ 210…

Read more
ತೆಂಗಿನ ನೈಸರ್ಗಿಕ ಹೈಬ್ರೀಡ್ ತಳಿ

ತೆಂಗು ಬೆಳೆಸುವವರೆಲ್ಲರೂ ತಿಳಿದಿರಬೇಕಾದ ಪ್ರಮುಖ ವಿಚಾರ.

ಜಗತ್ತಿನ ಸುಮಾರು 80 ಕ್ಕೂ ಹೆಚ್ಚಿನ ದೇಶಗಳಲ್ಲಿ  ಬೆಳೆಸಲ್ಪಡುತ್ತಿರುವ  ತೆಂಗಿಗೆ ಬೆಳೆಯಲ್ಲದೆ ದೈವಿಕ ಸ್ಥಾನವನ್ನೂ ನೀಡಲಾಗಿದೆ. ನಮ್ಮ ಪೂರ್ವಜರಿಂದ ಲಾಗಾಯ್ತು ಈಗಿನವರೆಗೂ ಜನ ತೆಂಗನ್ನು ನಂಬಿದ್ದಾರೆ. ನಂಬಿಕೆಗೆ ಯಾವಾಗಲೂ ಕುಂದು ತಾರದ ಬೆಳೆ ಎಂದರೆ ತೆಂಗು ಎನ್ನಬಹುದು. ತೆಂಗಿನ ಮೂಲ  ಯಾವುದು: ಕೆಲವು ಪ್ರಕೃತಿಯ ನಿಘೂಢಗಳಲ್ಲಿ ತೆಂಗೂ ಒಂದು. ಇದು ಮೂಲತಹ ಎಲ್ಲಿ ಬೆಳೆಯುತ್ತಿತ್ತು, ಹೇಗೆ ಇದು ಬೆಳೆಯ ಸ್ಥಾನವನ್ನು ಪಡೆಯಿತು ಎಂಬ ಬಗ್ಗೆ ನಿಖರ ಉಲ್ಲೇಖ ಇಂದಿನ ತನಕವೂ ಇಲ್ಲ. ಭಾರತ ದೇಶದಲ್ಲಿ ವೇದಗಳ ಕಾಲದಿಂದಲೂ…

Read more
ಹೈಬ್ರೀಡ್ ಮರದ ಕಾಯಿ ಗೊಂಚಲು

ತೆಂಗಿನ ಹೈಬ್ರೀಡ್ ತಳಿಗಳು – ನಿಮಗೆ ಇದು ತಿಳಿದಿರಲಿ.

ಒಂದು ತಳಿಯ ಅಧಿಕ ಉತ್ಪಾದನೆಗೆ , ಅಥವಾ ತಳಿ ಉನ್ನತೀಕರಣಕ್ಕೆ  ಮತ್ತೊಂದು ತಳಿ ಮೂಲದಿಂದ ಕ್ರಾಸಿಂಗ್ ಮಾಡಿ ಪಡೆಯುವ ಹೊಸ ತಲೆಮಾರಿನ ತಳಿಗೆ ಹೈಬ್ರೀಡ್ ತಳಿ ಎನ್ನುತ್ತಾರೆ. ಇದು ಯಾವುದೋ ಅಧಿಕ ಇಳುವರಿ ಕೊಡುವ ಯಾರದೋ ಹಿತ್ತಲಲ್ಲಿರುವ ಮರದಿಂದ ಆಯ್ಕೆ ಮಾಡಿದ ಬೀಜ ಆಗಿರುವುದಿಲ್ಲ. ಗುರುತು ಪಡಿಸಿದ ಮರದ ಹೆಣ್ಣು ಹೂವಿಗೆ ಆಯ್ಕೆ ಮಾಡಿದ ಮರದ ಗಂಡು ಹೂವಿನ ಪರಾಗವನ್ನು ಕೈಯಿಂದ ( ಕೃತಕ) ಪರಾಗಸ್ಪರ್ಶ ಮಾಡಿ, ಅದರಲ್ಲಿ ಕಾಯಿ ಕಚ್ಚಿದ ಬೀಜವನ್ನು  ಅಭ್ಯಸಿಸಿ ಬಿಡುಗಡೆ ಮಾಡಿದ …

Read more
coconut palm genetically defected

ತೆಂಗು -ಇಂಥಹ ನ್ಯೂನತೆಗೆ ಪರಿಹಾರ ಏನು?

ಮನುಷ್ಯರಲ್ಲಿ ಒಬ್ಬರಿಗೊಬ್ಬರಿಗೆ ಸಾಮ್ಯತೆ ಇಲ್ಲ ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿ.ಅದೇ ರೀತಿಯಲ್ಲಿ ಸಸ್ಯಗಳಲ್ಲೂ ಒಂದು ಸಸ್ಯ ದಂತೆ ಮತ್ತೊಂದು ಸಸ್ಯ ಇರುವುದಿಲ್ಲ. ಪ್ರತಿಯೊಂದಕ್ಕೂ ಅದರದ್ದೇ ಆದ ವಿಭಿನ್ನ ಗುಣ ಇರುತ್ತದೆ. ಆ ಪ್ರಕಾರವೇ ಬೆಳವಣಿಗೆ  ಇರುತ್ತದೆ. ತೆಂಗಿನ ವಿಚಾರದಲ್ಲೂ ಇದು ಪ್ರಸ್ತುತ. ನಾವು ನೆಟ್ಟು ಬೆಳೆಸುವ ತೆಂಗು ನಾಟಿ ಮಾಡಿ ನಾಲ್ಕರಿಂದ ಐದು ವರ್ಷಕ್ಕೆ ಫಸಲಿಗೆ ಆರಂಭವಾಗುತ್ತದೆ. ಆ ಸಮಯದ ವರೆಗೆ ಆ ಸಸಿ ಯಾವ ರೀತಿ ಫಲ ಕೊಡಬಹುದು ಎಂಬುದನ್ನು ಕರಾರುವಕ್ಕಾಗಿ ಹೇಳಲಿಕ್ಕೆ ಬರುವುದಿಲ್ಲ. ಕೆಲವು…

Read more
ಉಳುಮೆ ರಹಿತ ತೆಂಗಿನ ತೋಟ

ತೆಂಗಿನ ಮರದ ರಸ ಸೋರುವಿಕೆಗೂ ಉಳುಮೆಗೂ ಏನು ಸಂಬಂಧ?

ತೆಂಗಿನ ಮರಕ್ಕೆ ಅತೀ ದೊಡ್ಡ ರೋಗ ಎಂದರೆ ಕಾಂಡದಲ್ಲಿ ರಸ ಸೋರುವಿಕೆ. ರಸ ಸೋರುವಿಕೆ ಪ್ರಾರಂಭವಾಗಿ ಕೆಲವು ವರ್ಷಗಳ ನಂತರ ಮರ ಕಾಯಿ ಬಿಡುವುದು ನಿಲ್ಲಿಸುತ್ತದೆ. ನಿಧಾನವಾಗಿ ಮರ ಕೃಶವಾಗುತ್ತಾ ಬರುತ್ತದೆ. ಇದಕ್ಕೆ ಮೂಲ ಕಾರಣ ಮರದ ಬೇರು ಸಮೂಹಕ್ಕೆ ತೊಂದರೆ ಮಾಡಿರುವುದೇ ಆಗಿರುತ್ತದೆ. ಮರದ ಬುಡ  ಭಾಗ ಉಳುಮೆ ಮಾಡುವಾಗ ಬೇರುಗಳಿಗೆ ಗಾಯ ಅಗಿ ಈ ತೊಂದರೆ ಉಂಟಾಗುತ್ತದೆ. ಪ್ರತೀಯೊಬ್ಬ ತೆಂಗು ಬೆಳೆಯುವವರೂ ತೆಂಗಿನ ಮರದ ಬೇರು ವ್ಯವಸ್ಥೆ ಹೇಗೆ ಇದೆ. ಯಾಕೆ ಅದಕ್ಕೆ ಗಾಯ…

Read more
coconut in close dense

ತೆಂಗಿನ ಸಸಿ ನೆಡುವಾಗ ಎಲ್ಲಿ ಯಾವ ಅಂತರ ಸೂಕ್ತ?

ತೆಂಗನ್ನು 30 ಅಡಿ ಅಂತರದಲ್ಲೂ ಬೆಳೆಯಬಹುದು. ಹಾಗೆಯೇ 15 ಅಂತರದಲ್ಲೂ ಬೆಳೆಯಬಹುದು. ಅದು ಸ್ಥಳ ಮತ್ತು ಪರಿಸ್ಥಿತಿ ಯನ್ನು ಹೊಂದಿಕೊಂಡು. ತೆಂಗನ್ನು ಪ್ಲಾಂಟೇಶನ್ ಆಗಿ ಬೆಳೆಯಲಾಗುತ್ತದೆ. ಅದೇ ರೀತಿಯಲ್ಲಿ ಮನೆ ಹಿತ್ತಲ ಗಿಡವಾಗಿಯೂ, ರಸ್ತೆ ದಾರಿ ಮಗ್ಗುಲಿನ ಬೆಳೆಯಾಗಿಯೂ  ಬೆಳೆಯಲಾಗುತ್ತದೆ. ಇದು ಮುಖ್ಯ ಬೆಳೆಯೂ ಹೌದು. ಮಿಶ್ರ ಬೆಳೆಯೂ ಹೌದು. ತೆಂಗನ್ನು  ಬೆಳೆಸುವಾಗ ಎಲ್ಲಿ ಬೆಳೆಯುತ್ತೀರಿ ಅದರ ಮೇಲೆ ಅಂತರವನ್ನು ನಿರ್ಧರಿಸಿಕೊಳ್ಳಬೇಕು. ಪ್ಲಾಂಟೇಶನ್ ಬೆಳೆಯಾಗಿ: ತೆಂಗಿನ ತೋಟ ಮಾಡುತ್ತೀರೆಂದಾದರೆ  ಅಲ್ಲಿ ಪಾಲಿಸಬೇಕಾದ ಅಂತರ ಭಿನ್ನ. ಮರದಿಂದ ಮರಕ್ಕೆ…

Read more
ತೆಂಗಿನ ಮರ

ತೆಂಗಿನ ತೋಟದಲ್ಲಿ ಗರಿಷ್ಟ ಆದಾಯ ಕೊಡಬಲ್ಲ ಮಿಶ್ರ ಬೆಳೆ.

ಮಿಶ್ರ ಬೆಳೆ ಬೆಳೆಸಲು ಅತೀ ಸೂಕ್ತ ವಾದ ತೋಟ ಎಂದರೆ ತೆಂಗಿನ ತೋಟ. ಇದರ ಮಧ್ಯಂತರದಲ್ಲಿರುವ ಸ್ಥಳಾವಕಾಶ ಬೇರೆ ಯಾವ ಬೆಳೆಯಲ್ಲೂ ಸಿಗದು. ಆದ ಕಾರಣ  ತೆಂಗನ್ನು ಏಕ ಬೆಳೆಯಾಗಿ  ಉಳಿಸಿಕೊಳ್ಳದೆ ಸಾಧ್ಯವಾದಷ್ಟು ಮಿಶ್ರ ಬೆಳೆಗಳನ್ನು  ಬೆಳೆಸಿರಿ. ಒಂದು ತೆಂಗಿನ ತೋಟದಲ್ಲಿ ಮರವೊಂದರಲ್ಲಿ 100 ಕಾಯಿ ಸಿಕ್ಕರೂ ಸಹ  ಒಂದು ಎಕ್ರೆಯಲ್ಲಿ ಸುಮಾರು 8000  ಕಾಯಿಗಳು. ಇದರ ಮಾರಾಟದಿಂದ ಸಿಗಬಹುದಾದ ಸರಾಸರಿ ಉತ್ಪತ್ತಿ, ಸುಮಾರು 80,000 ರೂ. ಗಳು. ಒಂದು ಎಕ್ರೆಗೆ ಇಷ್ಟು ಉತ್ಪತ್ತಿ ಸಾಕೇ?  ಖಂಡಿತವಾಗಿಯೂ …

Read more
ತೆಂಗಿನ ಮರಗಳು

ತೆಂಗಿನ ಮರಕ್ಕೆ ಈಗ ಹಾಕಿದ ಗೊಬ್ಬರದಿಂದ ಇಳುವರಿ ಸಿಗುವುದು ಯಾವಾಗ?

ಹೆಚ್ಚಿನ ರೈತರು ಹೇಳುವುದುಂಟು, ಈ ವರ್ಷ ನಾವು  ತೆಂಗಿನ ಮರಕ್ಕೆ ಸಾಕಷ್ಟು ಗೊಬ್ಬರ ಕೊಟ್ಟಿದ್ದೇವೆ. ಮುಂದಿನ ವರ್ಷ  ಫಸಲು ಹೆಚ್ಚಬಹುದು ಎಂದು.  ಆದರೆ ವಾಸ್ತವಿಕತೆ ಬೇರೆಯೇ ಇದೆ. ಈ ವರ್ಷ ಹಾಕಿದ ಗೊಬ್ಬರದ ಫಲದಲ್ಲಿ ಮುಂದಿನ ವರ್ಷ ಇಳುವರಿಯಲ್ಲಿ  ದೊರೆಯುವುದಿಲ್ಲ. ಅದು ದೊರೆಯುವುದು ಮುಂದಿನ 32 ತಿಂಗಳ ನಂತರ. ತೆಂಗಿನ ಮರದ ಕಾಂಡದಲ್ಲಿ ಹುಟ್ಟುವ  ಅದರ ಹೂ ಗೊಂಚಲು ಮೊನ್ನೆ ಮೊನ್ನೆಮೂಡಿದ್ದು ಎಂದು ತಿಳಿಯದಿರಿ. ಇದರೆ ಹುಟ್ಟು,(Innitiation)  ಸುಮಾರು ಮೂರು ವರ್ಷಗಳ ಹಿಂದೆಯೇ ಆಗಿರುತ್ತದೆ. ಆಗಲೇ ಅದರಲ್ಲಿ…

Read more
ತೆಂಗಿನ ಮರ ಏರುವ ಇಲಿ ನಿಯಂತ್ರಣ ವಿಧಾನ

ತೆಂಗಿನ ಮರಕ್ಕೆ ಇಲಿ ಕಾಟವೇ- ಇದು ಪರಿಹಾರ?

ತೆಂಗಿನ ಮರದ ಮೇಲೆ ಹೋಗಿ ಇಲಿ ಪಾಶಾಣ ಇಡಲಿಕ್ಕೆ ಆಗುವುದಿಲ್ಲ. ಮರ ಏರಿ ಇಲಿ ಕೊಲ್ಲಲಿಕ್ಕೆ ಆಗುವುದಿಲ್ಲ.  ಇಲಿಗಳು ಹಾಳು ಮಾಡುವ ಎಳೆ ಕಾಯಿಗಳನ್ನು ನೋಡಿದರೆ ಮಾತ್ರ ಬೆಳೆದವರಿಗೆ  ಬಹಳ ನಷ್ಟ. ಇಲಿಗಳನ್ನು ಕಾದು ಕುಳಿತುಕೊಳ್ಳಲು ಆಗುತ್ತದೆಯೇ? ಇಲ್ಲ. ಇದನ್ನು  ಕೆಲವು ಉಪಾಯಗಳಿಂದಲೇ  ನಿಯಂತ್ರಿಸಬೇಕು. ನಮ್ಮ ರೈತರ ತಲೆಯಲ್ಲಿ ಕೆಲವು  ಸಣ್ಣ ಸಣ್ಣ ಯೋಚನೆಗಳು ಇರುತ್ತವೆ. ಇದರ ಅನುಕೂಲ ಮಾತ್ರ  ಬಹಳ ದೊಡ್ಡದು. ಇತ್ತೀಚೆಗೆ ನಮ್ಮಲ್ಲಿ ಇಂತಹ ಯುಕ್ತಿಗಳನ್ನು ತಿಳಿದವರು ತುಂಬಾ ಕಡಿಮೆಯಾಗುತ್ತಿದ್ದಾರೆ. ಇಂತಹ ಹಿರಿಯರು ನಮ್ಮೊಂಡನೆ…

Read more
error: Content is protected !!