ಒಂದು ಲೀ. ಹಾಲಿಗೆ 100 ರೂ.

ಒಂದು ಲೀ. ಹಾಲು ರೂ.100 ಆದರೆ…

ಒಬ್ಬ ಮಿತ್ರರು ಹೇಳುತ್ತಾರೆ, ನಾನು ಹಸು ಸಾಕಾಣೆ ಮಾಡಬೇಕಾದರೆ ಹಾಲು ಲೀಟರೊಂದರ ರೂ. 100 ರೂ. ಸಿಗಬೇಕು. ಅಷ್ಟು  ಖರ್ಚು ಹಸು ಸಾಕುವುದಕ್ಕೆ ಇದೆ. ಹಾಗಾಗಿ ನಷ್ಟವಾಗುವ ಕಸುಬನ್ನು ನಾನು ಯಾಕೆ ಮಾಡಬೇಕು? ಇದು ನನ್ನ ಮಿತ್ರರೊಬ್ಬರ ಕಥೆ ಮಾತ್ರ ಅಲ್ಲ ಬಹುತೇಕ ಹೈನುಗಾರಿಕೆ ಅಥವಾ ಹಸು ಸಾಕಣೆ ಮಾಡುತ್ತಿದ್ದ ರೈತರು ಅದನ್ನು ಈಗ ಬಿಟ್ಟಿದ್ದರೆ ಅದಕ್ಕೆ ಕಾರಣ ಲಾಭ ನಷ್ಟದ ಲೆಕ್ಕಾಚಾರ. ಲಾಭವಾಗುವುದಾರರೆ ಹಸು ಸಾಕಣೆ ಬೇಕು. ಲಾಭ ಇಲ್ಲವಾದರೆ ಬೇಡ. ಹಸು ಸಾಕಾಣಿಕೆ ಲಾಭವಲ್ಲ…

Read more
ಹೈನುಗಾರಿಕೆಯ ಸೂಕ್ಷ್ಮಗಳನ್ನು ವಿವರಿಸುತ್ತಿರುವ ಶ್ರೀ ಪ್ರಭಾಕರ ಹೆಗ್ಡೆಯವರು

ಹೈನುಗಾರಿಕೆ ಮಾಡಬೇಕೆನ್ನುವವರು ಒಮ್ಮೆ ಇವರ ಅನುಭವವನ್ನು ಕೇಳಿ.

ಹೈನುಗಾರಿಕೆ ಎಂಬುದು ನಿತ್ಯ ಆದಾಯ ಕೊಡುವ ಕಸುಬು ಎಂದು ಕೆಲವು ಉತ್ಸಾಹಿಗಳು ಈ ಕ್ಷೇತ್ರಕ್ಕೆ ಇಳಿಯುತ್ತಾರೆ. ಹೈನುಗಾರಿಕೆ ರಂಗಕ್ಕೆ  ಪ್ರವೇಶ ಸುಲಭ. ನಿರ್ಗಮನ ಮಾತ್ರ ಬಹಳ ಕಷ್ಟ. ಹೈನುಗಾರಿಕೆಗೆ ಹೇಗೆ ಇಳಿಯಬೇಕು, ಹೇಗೆ ನಷ್ಟ ಇಲ್ಲದೆ ಇದನ್ನು ಮುಂದುವರಿಸಿಕೊಂಡು ಹೋಗಬಹುದು ಎಂಬ ಬಗ್ಗೆ ರೈತರೊಬ್ಬರ ಅನುಭವದ ಸಲಹೆಗಳು ಇವು. ನಾವೆಲ್ಲಾ ಕೆಲವು ಪತ್ರಿಕೆಗಳಲ್ಲಿ ಓದುತ್ತೇವೆ.ಸಾಪ್ಟ್ವೇರ್ ಉದ್ಯೋಗ ತ್ಯಜಿಸಿ ಹೈಟೆಕ್ ಡೈರಿ ಮಾಡಿದ ಕಥೆ.  ಹಾಗೆಯೇ ಹೈನುಗಾರಿಕೆಯ ತಜ್ಞರ ಪಟ್ಟಕ್ಕೆ ಏರಿಸಿದ ಸುದ್ದಿಯನ್ನೂ ಓದುತ್ತೇವೆ.  ಇದು ಅವರು ಹೈನುಗಾರಿಕೆಗೆ…

Read more
ಹಸುಗಳು ಹುಲ್ಲು ಆಹಾರ ತಿನ್ನುವುದು

ಹಸುಗಳಿಗೂ ಬರಲಿದೆ ಚಾಕಲೇಟುಗಳು.

ಹೈನುಗಾರಿಕೆ ಮಾಡುವರು ಎದುರಿಸುವ ಕಡಿಮೆ ಹಾಲಿನ ಇಳುವರಿ ಹಾಗೂ ಪೌಷ್ಟಿಕ ಆಹಾರದ ಕೊರೆತೆ ನೀಗಿಸಲು ಈಗ ವಿಜ್ಞಾನಿಗಳು ಚಾಕಲೇಟನ್ನು ಒಂದರ ಸಂಯೋಜನೆಯನ್ನು  ಪರಿಚಯಿಸಿದ್ದಾರೆ. ಇದು ಪ್ರೋಟೀನು , ಶಕ್ತಿ ಎಲ್ಲವನ್ನೂ ಒಳಗೊಂಡಿರುತ್ತದೆ. ಮನುಷ್ಯರು ಚಾಕಲೇಟ್ ತಿಂದರೆ ಶಕ್ತಿ ಹೆಚ್ಚುತ್ತದೆ. ಚಾಕಲೇಟಿನಲ್ಲಿರುವ ಸಕ್ಕರೆ  ಹಾಗೂ ಇನ್ನಿತರ ಶಕ್ತಿ ವರ್ಧಕ  ವಸ್ತುಗಳಿಂದಾಗಿ  ಗಾತ್ರ ಸಣ್ಣದಾದರೂ ಅದರಿಂದ ಲಭ್ಯವಾಗುವ ಶಕ್ತಿ ಹೆಚ್ಚು.  ಅದೇ ತತ್ವದಲ್ಲಿ  ಪಶುಗಳಿಗೂ ಚಾಕಲೇಟು ತಯಾರಿಸಬಹುದಂತೆ. ಈ ಚಾಕಲೇಟುಗಳನ್ನು  ಪಶುಗಳಿಗೆ ತಿನ್ನಿಸಿದರೆ ಅವುಗಳು ಹೆಚ್ಚು ಹಾಲು ಕೊಡಬಲ್ಲವು. ಶಾರೀರಿಕವಾಗಿ…

Read more
cows in open field grazing

ಹಸುಗಳ ಆರೋಗ್ಯ ಮತ್ತು ನಾವು ಕೊಡುವ ಆಹಾರ.

ಈಗಲೇ ಕೆಲವು ವೈದ್ಯರು ಹಾಲು ಬಿಡಿ. ಆರೋಗ್ಯವಾಗಿರುತ್ತೀರಿ ಎನ್ನುತ್ತಿದ್ದಾರೆ. ಮುಂದೆ ಎಲ್ಲರೂ ಹೀಗೇ ಹೇಳುತ್ತಾ ಬಂದರೆ  ಜೀವನೋಪಾಯಕ್ಕಾಗಿ ಹಸು ಸಾಕುವವರಿಗೆ ಭಾರೀ ನಷ್ಟವಾದೀತು. ಹಸುಗಳನ್ನು ಸಾಕುವಾಗ ಅದನ್ನು ಸಾಕಿದ ಖರ್ಚು ನಮಗೆ ಬರಬೇಕು. ಲಾಭ ಆಗಬೇಕು. ಈ ಉದ್ದೇಶದಲ್ಲಿ ನಾವು ಹಸುವೊಂದರ ಜೀವದೊಂದಿಗೆ ಆಟ ಆಡುತ್ತಿದ್ದೇವೆ ಎಂದರೆ ತಪ್ಪಾಗಲಾರದು. ಹಸುಗಳಿಗೆ ಬೇಕೋ ಬೇಡವೋ ನಮಗೂ ಗೊತ್ತಿಲ್ಲ. ಶಿಫಾರಸು ಮಾಡುವವರಿಗೂ ಗೊತ್ತಿಲ್ಲ. ಹೆಚ್ಚು ಹೆಚ್ಚು ಪಶು ಆಹಾರ, ಖನಿಜ ಮಿಶ್ರಣ  ಹಾಗೆಯೇ ವಿಟಮಿನ್ ಮುಂತಾದವುಗಳನ್ನು ಕೊಟ್ಟು ಹಸುವಿನ ಆರೋಗ್ಯವನ್ನು…

Read more
good cow structure

ಇದು ಉತ್ತಮ ಹಸುವಿನ ಲಕ್ಷಣ

ಹೈನುಗಾರಿಕೆಯ ಯಶಸ್ಸು ಹಸುವಿನ ಆಯ್ಕೆಯಿಂದ ಮೊದಲ್ಗೊಳ್ಳುತ್ತದೆ. ಪ್ರತೀಯೊಂದು ಸಸ್ಯ, ಪ್ರಾಣಿ, ಮನುಷ್ಯರಿಗೆ  ವಂಶಗುಣದಲ್ಲೇ ಕೆಲವು ವಿಶೇಷತೆಗಳು ಇರುತ್ತವೆ. ಆದರ ಮೇಲೆ  ಅವುಗಳ ಉತ್ಪಾದಕತೆಯು ನಿಂತಿರುತ್ತದೆ. ಕೃಷಿಕರಲ್ಲಿ ಬಹುತೇಕ ಮಂದಿ ಹೈನುಗಾರಿಕೆ ಅವಲಂಬಿತರು. ಹಸು ಕೊಳ್ಳುವುದು, ಕೊಡುವುದು ಇದ್ದೇ ಇರುತ್ತದೆ. ಹೀಗಿರುತ್ತಾ ಕೊಳ್ಳುವ ಹಸು ಹೇಗಿರಬೇಕು ಎಂಬ ಬಗ್ಗೆ  ಪ್ರತೀಯೊಬ್ಬರಿಗೂ ಗೊತ್ತಿರಲೇ ಬೇಕು. ಹಸು ಕೊಳ್ಳುವುದು ಒಂದು ಪರೀಕ್ಷೆ: ಯಶಸ್ವೀ  ಹೈನುಗಾರಿಕೆಯ ಆಧಾರಸ್ಥಂಬವಾದ ಹಸು- ಕರುವನ್ನು ರೈತರು ತಮ್ಮ ಮನೆಯಲ್ಲೇ ತಳಿ ಸುಧಾರಣೆಯ ಮೂಲಕ ಪಡೆಯುವುದು ಎಲ್ಲದಕ್ಕಿಂತ ಉತ್ತಮ….

Read more

ಪಶು ಆಹಾರ ನೀವೇ ಮಾಡಿಕೊಳ್ಳಿ-ಲಾಭವಿದೆ.

ಹೈನುಗಾರಿಕೆ ಮಾಡುತ್ತಿದ್ದಿರಾ? ನೀವು ನಿಮ್ಮ ಹೈನು ರಾಸುಗಳಿಗೆ ಹುಲ್ಲು ಬಿಟ್ಟು ಬೇರೆ ಎಲ್ಲವನ್ನೂ ತರುವುದು ಹೊರಗಡೆಯಿಂದ. ಇದು ನಿಮ್ಮ ಆ ವೃತ್ತಿಯನ್ನು  ಹೆಚ್ಚು ಸಮಯ ಮುನ್ನಡೆಸಲು ಬಿಡುವುದಿಲ್ಲ. ಕಾರಣ ನಿಮ್ಮ ಆದಾಯದ ಬಹುಪಾಲು ಅವರ ಕೈ ಸೇರುತ್ತದೆ. ಅವರು ಬೇಗ ಮೇಲೇರುತ್ತಾರೆ. ನೀವು ಹೈನು ಗಾರಿಕೆ ಬೇಡ ಎಂದು ಹಸು ಮಾರಾಟ ಮಾಡಿ ಮತ್ತೆ ಹಿಂದಿನ ಸ್ಥಿತಿಗೇ ಬರುತ್ತೀರಿ. ಕೊಂಡು ತರುವ ಪಶು ಆಹಾರ: ಮಾರುಕಟ್ಟೆಯಲ್ಲಿ ತರಾವಳಿಯ ಪಶು ಆಹಾರಗಳಿವೆ. ಸ್ಪರ್ಧೆಗಾಗಿ  ದರ ವೆತ್ಯಾಸಗಳೂ ಇವೆ. ಹಾಲು…

Read more
ಹಾಲು ಕರೆಯುವುದು

ಕರು ಹಾಕದಿದ್ದರೂ ಹಾಲು ಕರೆಯಬಹುದು.

ಕರು ಇಲ್ಲದೆ ಹಾಲು ಪಡೆಯುವ ವಿಧಾನ ಇದೆ. ಇದನ್ನು ಬಳಸಿ, ಅದರಿಂದ ಹಾಲು ಕರೆಯಬಹುದು,  ಮತ್ತೆ ಆ ಹಸು ಕರು ಹಾಕುವಂತೆ  ಮಾಡಲೂ ಇದು ಸಹಕಾರಿ. ಹಲವು ಕಾರಣಗಳಿಂದ ರಾಸುಗಳು ಬೆದೆಗೆ ಬಾರದೇ ಇರುವುದು, ಬೆದೆಗೆ ಬಂದರೂ ಗರ್ಭ ಕಟ್ಟದೇ ಇರುವುದು, ಗರ್ಭ ಕಟ್ಟಿದರೂ ಪದೇ ಪದೇ ಗರ್ಭಪಾತವಾಗುವುದು ಇತ್ಯಾದಿ ಕಾರಣಗಳಿಂದ ರಾಸುಗಳು ಕರು ಹಾಕಲು ಸಾಧ್ಯವಾಗದೇ ಬರಡು ಜಾನುವಾರುಗಳೆಂದು ಕರೆಯಿಸಿಕೊಳ್ಳುತ್ತವೆ.. ಅದಕ್ಕೆ ತಜ್ಞ ವೈದ್ಯರಿಂದ ಆಧುನಿಕ ಚಿಕಿತ್ಸೆಗಳ ಮೂಲಕ ಎಲ್ಲಾ ಪ್ರಯತ್ನಗಳೂ ವಿಫಲವಾದಾಗ ರೈತರು ಹತಾಶೆಯಿಂದ…

Read more
error: Content is protected !!