ಇದು ಉತ್ತಮ ಹಸುವಿನ ಲಕ್ಷಣ

good cow structure

ಹೈನುಗಾರಿಕೆಯ ಯಶಸ್ಸು ಹಸುವಿನ ಆಯ್ಕೆಯಿಂದ ಮೊದಲ್ಗೊಳ್ಳುತ್ತದೆ. ಪ್ರತೀಯೊಂದು ಸಸ್ಯ, ಪ್ರಾಣಿ, ಮನುಷ್ಯರಿಗೆ  ವಂಶಗುಣದಲ್ಲೇ ಕೆಲವು ವಿಶೇಷತೆಗಳು ಇರುತ್ತವೆ. ಆದರ ಮೇಲೆ  ಅವುಗಳ ಉತ್ಪಾದಕತೆಯು ನಿಂತಿರುತ್ತದೆ. ಕೃಷಿಕರಲ್ಲಿ ಬಹುತೇಕ ಮಂದಿ ಹೈನುಗಾರಿಕೆ ಅವಲಂಬಿತರು. ಹಸು ಕೊಳ್ಳುವುದು, ಕೊಡುವುದು ಇದ್ದೇ ಇರುತ್ತದೆ. ಹೀಗಿರುತ್ತಾ ಕೊಳ್ಳುವ ಹಸು ಹೇಗಿರಬೇಕು ಎಂಬ ಬಗ್ಗೆ  ಪ್ರತೀಯೊಬ್ಬರಿಗೂ ಗೊತ್ತಿರಲೇ ಬೇಕು.

Healthy cow

ಹಸು ಕೊಳ್ಳುವುದು ಒಂದು ಪರೀಕ್ಷೆ:

  • ಯಶಸ್ವೀ  ಹೈನುಗಾರಿಕೆಯ ಆಧಾರಸ್ಥಂಬವಾದ ಹಸು- ಕರುವನ್ನು ರೈತರು ತಮ್ಮ ಮನೆಯಲ್ಲೇ ತಳಿ ಸುಧಾರಣೆಯ ಮೂಲಕ ಪಡೆಯುವುದು ಎಲ್ಲದಕ್ಕಿಂತ ಉತ್ತಮ.
  • ಆದರೆ ಇದು ಎಲ್ಲಾ ಸಂದರ್ಭಗಳಲ್ಲಿ ಸಾಧ್ಯವಾಗುವುದಿಲ್ಲ.
  • ಹೊಸತಾಗಿ ಹೈನುಗಾರಿಕೆ ಪ್ರಾರಂಭಿಸುವಾಗ, ವಿಸ್ತರಣೆ ಮಾಡುವಾಗ, ತಳಿ ಬದಲಾವಣೆ ಮಾಡುವಾಗ ಹೊರಗಡೆಯಿಂದ ಕೊಳ್ಳಬೇಕಾದ ಸಂದರ್ಭಗಳು ಒದಗುತ್ತವೆ.
  • ಈ ಸಮಯದಲ್ಲೇ  ಎಲ್ಲಾ ಸತ್ವಪರೀಕ್ಷೆಗಳೂ ನಮಗೆ ಎದುರಾಗುವುದು. ಕೊಡುವವರು ತಮಗೆ  ಬೇಡದ್ದನ್ನು ಕೊಡುತ್ತಾರೆ.
  • ಕೊಳ್ಳುವವರು ಉತ್ತಮವಾದುದನ್ನು  ಬಯಸುತ್ತಾರೆ.
  • ಇಲ್ಲಿ ಅನಿವಾರ್ಯವಾಗಿ ಒಬ್ಬರು ಸೋಲಬೇಕಾಗುತ್ತದೆ.
  • ಈ ಸಮಯದಲ್ಲಿ ಹಸು  ಆಯ್ಕೆ ಮಾಡುವಾಗ ನಮ್ಮೊಂದಿಗೆ ಪಶುವೈದ್ಯರೇ ಇರಲಿ ಅಥವಾ ಹೈನುಗಾರಿಕೆಯಲ್ಲಿ ಪಳಗಿದವರೇ ಇರಲಿ ನಮ್ಮಲ್ಲಿ ಅನುಭವದ ಕೊರತೆ ಇರಬಾರದು.
  • ನಮ್ಮ ಅವಶ್ಯಕತೆಗೆ ಬೇಕಾಗುವ ಪಶುವು ಹೇಗೆ ಇರಬೇಕು ಎಂಬುದರ ಅರಿವು ಒಬ್ಬ ಹೈನುಗಾರನಿಗೆ ಇದ್ದರೆ ನಷ್ಟ  ಕಡಿಮೆ ಮಾಡಬಹುದು.

ಹೆಚ್ಚು ಹಾಲು ಕೊಡಬಲ್ಲ ಹಸುವಿನ ಲಕ್ಷಣಗಳು:

udder of good cow
ಉತ್ತಮ ಹಸುವಿನ ಕೆಚ್ಚಲು
  • ಮೇಲು ನೊಟದಲ್ಲಿ ತಿಳಿಯಬಹುದಾದ ಕೆಲವು ಲಕ್ಷಣಗಳನ್ನು ಎಲ್ಲಾ ಹೈನುಗಾರರೂ ತಿಳಿದಿರಬೇಕು.
  • ಇದು ಸರಳ. ಸ್ವಲ್ಪ ಗಮನಕೊಟ್ಟು ನೋಡಬೇಕು ಅಷ್ಟೇ.
  • ಹಸುವು ಸಾಧು ಸ್ವಭಾವ ಹೊಂದಿರಬೇಕು. ಹೊಸಬರನ್ನು ನೋಡಿದರೂ ಗಾಬರಿ ಆಗಬಾರದು, ಹಾಯಬಾರದು, ಒದೆಯಬಾರದು. ಇದು ನೀವು ಹಸುವಿನ ಬಳಿಗೆ ಹೋಗುವಾಗ ಗೊತ್ತಾಗುತ್ತದೆ.
  • ಚರ್ಮ ಮೃದುವಾಗಿ, ತೆಳುವಾಗಿರಬೇಕು. ಎಳೆದರೆ ಸುಲಭವಾಗಿ ಹೆಚ್ಚು ಕೊಬ್ಬಿಲ್ಲದೆ ಕದಲಬೇಕು. ಹೊಕ್ಕುಗಳಿರಬಾರದು.
  • ಕೂದಲು ಗಿಡ್ಡದಾಗಿ, ತೆಳುವಾಗಿ, ನುಣ್ಣಗೆ ಹೊಳುಪಾಗಿರಬೇಕು.
  • ಕೆಚ್ಚಲಿನ ಚರ್ಮದ ಅಡಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ತುಂಬಾ ಡೊಂಕಾದ ರಕ್ತನಾಳಗಳಿರಬೇಕು. ಚರ್ಮರೋಗಗಳು ಇರಬಾರದು.
  •  ಹಸುವಿನ ಎದೆ ಮುಂಭಾಗವನ್ನು ನೋಡಿದಾಗ ಅದು ತುಂಬಾ ಅಗಲವಾಗಿ ಅಥವಾ  ತೀರಾ ಕಿರಿದಾಗಿ ಇರಬಾರದು.
  • ಆದರೆ ಮಧ್ಯಮವಾಗಿ .ಸಾಮಾನ್ಯಕ್ಕಿಂತ ವಿಷೇಶವಾಗಿ ಕಾಣಬಾರದು.
  • ಪಶು ವಿನ ಕಣ್ಣುಗಳು ಕಾಂತಿಯುತವಾಗಿರಬೇಕು. ಮೂಗು ತೇವವಾಗಿರಬೇಕು.( ಬೆವರಿಕೊಂಡಿರಬೇಕು).
  • ಸುಮಾರಾಗಿ ಕೊಬ್ಬಿರಬೇಕು  ಎದೆಗೂಡಿನ ಕೊನೆ 3 ಎಲುಬುಗಳು ಬೆಳಿಗ್ಗೆ ಕಾಣುತ್ತಿರಬೇಕು.

ಹಸುವನ್ನು ಒಮ್ಮೆ ಹೊರಗೆ ನಡೆಸಲು ಹೇಳಬೇಕು:

face cut

  • ಕೊಳ್ಳುವ ಹಸು ನಡೆಯುವಾಗ ಅದಕ್ಕೊಂದು ಮರ್ಜಿ ಇರಬೇಕು.
  • ದಿಡ್ಡಿಕಾಲುಗಳು ಇರಬಾರದು. ಗೊರಸುಗಳು ವಕ್ರವಾಗಿರಬಾರದು.
  • ರಾಸನ್ನು ಪಕ್ಕದಿಂದ ನೋಡಿದರೆ, ಕಾಲುಗಳು ಧೃಡವಾಗಿದ್ದು ರಾಸಿನ ತೂಕವನ್ನು ಹೊತ್ತಿದ್ದೆನ್ನುವ ಭಾವನೆ ಕೊಡಬೇಕು.
  • ಕಾಲುಗಳು ಕಡುಗೋಲಿನ ಆಕಾರದಲ್ಲಿ ಇರಬಾರದು.
  • ಗೊರಸು ಮತ್ತು ಮಣಿಗಂಟಿನ ಮಧ್ಯದ ಎತ್ತರ ಭಾಗಕ್ಕೆ ಸಮನಾಗಿ ಇರುವ, ಸ್ವಲ್ಪ ಬಾಗಿರುವ  ರಾಸು ಅತ್ಯುತ್ತಮ .
  • ಇನ್ನೂ ಸ್ವಲ್ಪ ಹಿಮ್ಮುಖವಾಗಿದ್ದರೆ ಆ ರಾಸು ಉತ್ತಮ. ಆ ರಾಸುಗಳು ಮಂದೆಯಲ್ಲಿ ಹೆಚ್ಚು ಕಾಲ ಬಾಳುತ್ತವೆ.
  • ಎರಡು ಗೊರಸುಗಳು ದೃಡವಾಗಿ, ಅಗಲವಾಗಿ, ದುಂಡಾಗಿ ಹತ್ತಿರವಾಗಿರಬೇಕು.
  • ಅವು ತುಂಬಾ ವಾಟವಾಗಿ ಬೆರತಿರಬಾರದು. ಕಾಲುಗಳ ತುದಿಭಾಗವು 45 ಡಿಗ್ರಿಗಳು ಇರಬೇಕು.
  • 40 ಡಿಗ್ರಿಗಳಿಗಿಂತ ಕಡಿಮೆ ಇರಬಾರದು. ಗೊರಸುಗಳು ಸುಂದರವಾಗಿ ಇರಬೇಕು. ವಕ್ರವಾಗಿ ಇರಕೂಡದು. ದಿಡ್ಡಿಕಾಲುಗಳು ಒಳ್ಳೆಯದಲ್ಲ.

ಪೃಷ್ಠ ಭಾಗ :

good feeder

  • ಇದು ಉದ್ದದಲ್ಲಿ ಮತ್ತು ಅಗಲದಲ್ಲಿ ಹೆಚ್ಚಾಗಿದ್ದರೆ ಆ ಭಾಗದ ಕೆಳಗಡೆ ದೊಡ್ಡ ಕೆಚ್ಚಲು ಹಿಡಿಯಲು ಅವಕಾಶವಿರುತ್ತದೆ.
  • ಈ ಭಾಗವು ಹಿಂದಕ್ಕೆ ಎತ್ತರವಾಗಿದ್ದರೆ ಕರು ಹಾಕಲು ತೊಂದರೆ ಇರುತ್ತದೆ.
  • ಪೃಷ್ಠ ಭಾಗವು ಸ್ವಲ್ಪವಾಗಿ ಬಗ್ಗಿದ್ದರೆ ಅದು ಕರು ಸುಲಭವಾಗಿ ಹಡೆಯಬಲ್ಲದು.
  • ಅದು ತುಂಬಾ ಬಗ್ಗಿದ್ದರೆ ಅದು ಕರುವನ್ನು ತುಂಬಾ ಸುಲಭವಾಗಿ ಹಡೆಯಬಲ್ಲದಾಗಿದ್ದರೂ ಮೈ ಹಾಯಬಹುದು.
  • ಪೃಷ್ಟ ಮತ್ತು ಬೆನ್ನು ಸಮತಲವಾಗಿ ಇರುವಂತೆ ಇದ್ದ ರಾಸು ಸಹ ಸುಲಭವಾಗಿ ಕರು ಹಾಕುತ್ತದೆ.
  • ಪಿರ್ರೆಗಳ ಕೋನದ ಭಾಗವು ನೆಲಕ್ಕೆ ಸಮನಾಗಿ ಮತ್ತು ಹಿಂಭಾಗ ಎತ್ತರವಾಗಿ ಇರಕೂಡದು. 2 ಪೃಷ್ಠ ಮೂಳೆಗಳ ಮಧ್ಯ ಸ್ಥಳ ಹೆಚ್ಚಾಗಿರಬೇಕು.
  • ಇದು ಅಗಲವಾಗಿದ್ದರೆ ರಾಸು ಹೆಚ್ಚು ಹಾಲು ಕೊಡುತ್ತದೆ.
  • ಆ ರಾಸು ಮಂದೆಯಲ್ಲಿ ಹೆಚ್ಚು ಕಾಲ ಇರುತ್ತದೆ. ಇದು ಅತಿ ಅಗಲವಾಗಿದ್ದರೆ ಅದು ಅತ್ಯಧಿಕ ಹಾಲನ್ನು ಕೊಡುವುದಾದರೂ ಮಂದೆಯಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ.
  • ಈ ಸ್ಥಳ ಕಿರಿದಾದರೆ ಹಾಲಿನ ಇಳುವರಿ ಕಡಿಮೆಯೇ ಇರುತ್ತದೆ. ಆದ್ದರಿಂದ ಅಂತಹ ರಾನಸನ್ನು ಆಯ್ಕೆ ಮಾಡಬಾರದು.
  • ರಾಸುವಿನ ಹೊಟ್ಟೆಭಾಗ ಮತ್ತು ಎದೆಗೂಡಿನ ಭಾಗವನ್ನು ಅದರ ಬಲಗಡೆಯಿಂದು ನೋಡುವುದು ಸರಿಯಾದ ಪದ್ಧತಿ.
  • ಹಾಗೆ ನೋಡಿದಾಗ ಎದೆ ಭಾಗಕ್ಕಿಂತ ಹೊಟ್ಟೆಭಾಗ ಅಗಲವಾಗಿ ಎತ್ತರವಾಗಿರಬೇಕು.
  • ಅದರ ಉದ್ದ, ಎತ್ತರ ಮತ್ತು ದಪ್ಪ ಈ ಮೂರು ಯಾವ ರಾಸುವಿನಲ್ಲಿ ಹೆಚ್ಚಾಗಿರುತ್ತದೋ ಆ ರಾಸು ಹೆಚು ಗಾಳಿಯನ್ನು ಶ್ವಾಸಕೋಶಗಳ ಒಳಗೆ ತೆಗೆದುಕೊಂಡು, ರಕ್ತವನ್ನು ಚೆನ್ನಾಗಿ ಶುದ್ಧಿ ಮಾಡುವುದರಿಂದ ಹೆಚ್ಚು ಆಹಾರವನ್ನು ಜೀರ್ಣಿಸಿಕೊಳ್ಳುತ್ತದೆ.
  • ಹೆಚ್ಚು ಹಾಲು ಕೊಡಬಲ್ಲದು. ಹೊಟ್ಟೆಯ ಕೆಳಭಾಗ ಜೋತು ಬೀಳದೆ ಇರುವ ಲಕ್ಷಣವುಳ್ಳ ರಾಸು ಒಳ್ಳೆಯದು.
  • ರಾಸು ಹಾಕಿರುವ ಸಗಣಿ ಹದವಾಗಿ ಮೆತ್ತಗೆ ಇರಬೇಕು. ಸಗಣಿಯಲ್ಲಿ ನೊರೆ ಇರಬಾರದು. ಕೈಯಲ್ಲಿ ಹಿಡಿದು ಬೆರಳುಗಳಿಗಿಂತ ಬೇರ್ಪಡಿಸಿದರೆ ಹಲ್ಲುಕಡ್ಡಿಗಳಿರಬಾರದು

ಹಸು ಕೊಳ್ಳುವಾಗ ಎಲ್ಲವನ್ನೂ ಕರಾರುವಕ್ಕಾಗಿ ನೋಡಲಿಕ್ಕೆ ಆಗುವುದಿಲ. ಎಲ್ಲವೂ ಕೊಳ್ಳುವವರು ಹೇಳುವುದೂ ಇಲ್ಲ. ಅದನ್ನು ನಾವು ಗಮನಿಸಬೇಕು. ಗಮನಿಸಬೇಕಾದರೆ ಅದು ಹೇಗೆ ಎಂಬುದು ನಮಗೆ ತಿಳಿದಿರಬೇಕು.
end of the article: ——————————————————————————-
search words: Dairy farming# cow selection tips# good milking cows# cows#  Characteristics of good cows# how to select good cow#

Leave a Reply

Your email address will not be published. Required fields are marked *

error: Content is protected !!