ಮಣ್ಣಿನ pH ಎಂದರೇನು? ಕಡಿಮೆ-ಹೆಚ್ಚು ಆದಾಗ ಏನಾಗುತ್ತದೆ?

 ಮಣ್ಣಿನ pH ಎಂದರೇನು? ಕಡಿಮೆ-ಹೆಚ್ಚು ಆದಾಗ ಏನಾಗುತ್ತದೆ?    

ಮಣ್ಣಿನ ಸಮಸ್ಥಿತಿಯನ್ನು ವೈಜ್ಞಾನಿಕ ಭಾಷೆಯಲ್ಲಿ pH (Potentila hydrogen) ಎಂಬುದಾಗಿ ಕರೆಯುತ್ತಾರೆ. ಇದನ್ನು ಕನ್ನಡದಲ್ಲಿ ರಸ ಸಾರ ಎಂಬುದಾಗಿ ಕರೆಯುತ್ತಾರೆ. ಹುಳಿ ಹೆಚ್ಚಾದರೆ  ಅದು  ಆಮ್ಲ,  ಸುಡುವಿಕೆ  ಆದರೆ ಅದು ಕ್ಷಾರ. ಇವೆರಡೂ ಆಗದಿದ್ದರೆ ಅದು ಸಮಸ್ಥಿತಿ. ಇದನ್ನು  ಸಹನಾ ಸ್ಥಿತಿ ಎಂಬುದಾಗಿ  ಹೇಳಬಹುದು.ಇದು ಮಣ್ಣಿಗೆ ಮಾತ್ರವಲ್ಲ. ಪ್ರತೀಯೊಂದು ಜೀವಿಗೂ ಇರುವಂತದ್ದು. ಮನುಷ್ಯನ ಶರೀರದಲ್ಲಿ ಜೊಲ್ಲು, ರಕ್ತ ಇವುಗಳಲ್ಲೂ ಆಮ್ಲ, ಕ್ಷಾರ, ಮತ್ತು ತಟಸ್ಥ ಎಂಬುದಿದೆ. ಮಣ್ಣು ಎಂಬುದು ಸಮಸ್ಥಿತಿಯಲ್ಲಿದ್ದರೆ ( nutral) ಅಲ್ಲಿ ಬೆಳೆಯುವ ಬೆಳೆಗೆ…

Read more
ಕಾಂಪ್ಲೆಕ್ಸ್ ಗೊಬ್ಬರ - ನೇರ ಗೊಬ್ಬರ ಯಾವುದು ಒಳ್ಳೆಯದು

ಕಾಂಪ್ಲೆಕ್ಸ್ ಗೊಬ್ಬರ – ನೇರ ಗೊಬ್ಬರ  ಯಾವುದು ಒಳ್ಳೆಯದು.

ಮಾರುಕಟ್ಟೆಯಲ್ಲಿ ಲಭ್ಯವಾಗುವ ಕಾಂಪ್ಲೆಕ್ಸ್ ಗೊಬ್ಬರ ಮತ್ತು ನೇರ ಗೊಬ್ಬರ ಇವೆರಡರ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿದೆ. ಕೆಲವರಿಗೆ ಗೊತ್ತಿಲ್ಲ. ರೈತರಾದವರಿಗೆ ಇದು ಒಂದು ಎರಡನೇ ಕ್ಲಾಸಿನ ಪಾಠ. ಸಣ್ಣ ಕ್ಲಾಸಿನಲ್ಲಿ ಮಗ್ಗಿ ಹೇಗೆ ಬಾಯಿಪಾಠ ಬರಬೇಕೋ ಅದೇ ತರಹ ಕೃಷಿಕರಾದವರಿಗೆ ಬೆಳೆ ಪೋಷಕ ಗೊಬ್ಬರ ಮತ್ತು ಅದರ ಸತ್ವಗಳ ಬೆಗ್ಗೆ ಗೊತ್ತಿರಬೇಕು. ಈ ಮಟ್ಟಕೆ ರೈತ ಬೆಳೆದರೆ ತುಂಬಾ ಉಳಿತಾಯವನ್ನೂ ಮಾಡಬಹುದು. ಅಧಿಕ ಇಳುವರಿಯನ್ನೂ ಪಡೆಯಬಹುದು. ಹಿಂದೆ ನಾವು ಅಕ್ಕಿ ಉಪ್ಪಿಟ್ಟು ಮಾಡಬೇಕಿದ್ದರೆ ಅಕ್ಕಿಯನ್ನು ಕಡೆಯುವ ಕಲ್ಲಿನಲ್ಲಿ…

Read more
10:26:26 ಗೊಬ್ಬರ

10:26:26  ಗೊಬ್ಬರ ಸಿಗುತ್ತಿಲ್ಲವೇ? ಬದಲಿಗೆ ಏನು ಹಾಕಬಹುದು?

ನಮ್ಮ ಕೃಷಿಕರಿಗೆ ಅಚ್ಚುಮೆಚ್ಚಿನ ಗೊಬ್ಬರ 10:26:26 ಸಂಯೋಜನೆಯ NPK.ಯಾವುದೋ ಕಾರಣಕ್ಕೆ ಈ ಗೊಬ್ಬರದ ಕೊರತೆ ಉಂಟಾಗಿದೆ. ಮಾರುಕಟ್ಟೆಗೆ ಸರಬರಾಜು ಆಗುತ್ತಿಲ್ಲ. ಹಾಗಾಗಿ ಜನ ಕೇಳುವುದು ಈ ಗೊಬ್ಬರ ಎಲ್ಲಿ ಸಿಗುತ್ತದೆ ತಿಳಿಸಿ ಎಂದು? ಈ ಒಂದು ಸಂಯೋಜನೆಯ ಗೊಬ್ಬರ ಇಲ್ಲದಿದ್ದರೆ ಆಕಾಶ ಏನೂ ತಲೆಗೆ ಬೀಳಲಾರದು. ಇದರ ಬದಲು ಬೇರೆ ಗೊಬ್ಬರಗಳನ್ನು ಅದೇ ಪ್ರಮಾಣಕ್ಕೆ ಅಥವಾ ಶಿಫಾರಿತ ಪ್ರಮಾಣಕ್ಕೆ ಅನುಗುಣವಾಗಿ ತಯಾರಿಸಬಹುದು. ಇಷ್ಟಕ್ಕೂ ಈ ಗೊಬ್ಬರ ಅಡಿಕೆಗೆ ಸಮತೋಲನ ಗೊಬ್ಬರ ಅಲ್ಲ.  ಈ ಸಂಯೋಜನೆಯ ಗೊಬ್ಬರ ಮಾರುಕಟ್ಟೆಗೆ…

Read more
ಸರ್ಕಾರೀ ಗೊಬ್ಬರಗಳು

ಸರ್ಕಾರೀ ಗೊಬ್ಬರಗಳನ್ನು ಬಳಸಿ- 75% ದಷ್ಟು ಗೊಬ್ಬರದ ಖರ್ಚು ಉಳಿಸಿ.

 ಭಾರತ ಸರಕಾರ ರೈತರಿಗೆ ಸಹಾಯಧನದ ಮೂಲಕ ಒದಗಿಸುವ ಸರ್ಕಾರೀ ಗೊಬ್ಬರವನ್ನೇ ಬಳಸಿದರೆ ರೈತರ ಗೊಬ್ಬರದ ಖರ್ಚು 75% ಕ್ಕೂ ಹೆಚ್ಚು ಉಳಿತಾಯವಾಗುತ್ತದೆ.  ಇತ್ತೀಚೆಗೆ ಅಡಿಕೆ ತೋಟಕ್ಕೂ ಸಾಲ್ಯುಬಲ್ ಗೊಬ್ಬರಗಳನ್ನು ಕೊಟ್ಟು ಬೆಳೆಸುವ ಕ್ರೇಜಿ ಪ್ರಾರಂಭವಾಗಿದೆ.  ಇದಕ್ಕಾಗಿ ಸಾಕಷ್ಟು ಖರ್ಚುಗಳನ್ನೂ ಮಾಡಿ ದುಬಾರಿ ಬೆಲೆಯ ಸಾಲ್ಯುಬಲ್ ಗೊಬ್ಬರಗಳನ್ನು ಖರೀದಿಸಿ ತಂದು ಬಳಸಲಾರಂಭಿಸಿದ್ದಾರೆ. ಅಡಿಕೆಗೆ ಬೆಲೆ ಬಂದಿದೆ ಎಂದೋ ಕೈಯಲ್ಲಿ ದುಡ್ಡು ತುಳುಕುವ ಕಾರಣದಿಂದಲೋ ಜನ ಹೊಸ ಹೊಸತಕ್ಕೆ ಬೇಗ ಮರುಳಾಗುತ್ತಿದ್ದಾರೆ.ಧೀರ್ಘಾವಧಿ ಬೆಳೆಗಳಿಗೆ ದಿನಕ್ಕೊಮ್ಮೆ, ವಾರಕ್ಕೊಮ್ಮೆ ಗೊಬ್ಬರ ಕೊಡಬೇಕಾದ ಅಗತ್ಯ…

Read more
ಸಲ್ಫೇಟ್ ಆಫ್ ಪೊಟ್ಯಾಶ್ SOP

ನಿಮ್ಮ ಬೆಳೆಗೆ ಯಾವ ರಂಜಕ ಗೊಬ್ಬರ ಸೂಕ್ತ.

ರಂಜಕ ಎಂಬುದರ ಮೂಲ ಶಿಲೆ ಅಥವಾ ಖನಿಜ.  ಇದರ ಅಧಾರದಲ್ಲಿ ರಾಸಾಯನಿಕ ಮೂಲದಲ್ಲಿ ರಂಜಕ ಗೊಬ್ಬರವನ್ನು ತಯಾರಿಸಲಾಗುತ್ತದೆ. ರಂಜಕ ಎಂಬ ಧಾತುವನ್ನು ಸಸ್ಯಗಳು ನೇರವಾಗಿ ಬಳಕೆ ಮಾಡುವುದೇ ಇಲ್ಲ. ಇದು ಒಂದು ಸ್ವತಂತ್ರ ಪೊಷಕ ಅಲ್ಲ. ಇದನ್ನು ಮಣ್ಣಿನಲ್ಲಿರುವ ರಂಜಕ ಕರಗಿಸಿ ಕೊಡುವ ಬ್ಯಾಕ್ಟೀರಿಯಾ, ಶಿಲೀಂದ್ರಗಳು ಸಸ್ಯಗಳಿಗೆ  ಲಭ್ಯವಾಗುವಂತೆ ಮಾಡುತ್ತವೆ. ರಂಜಕ ಗೊಬ್ಬರದಲ್ಲಿ ಮೂರು  ವಿಧ. ಎರಡು ಬಗೆಯವು ನೀರಿನಲ್ಲಿ ಕರಗುವ ರೂಪದ ರಂಜಕ ಮತ್ತು ಒಂದು  ನೀರಿನಲ್ಲಿ ಕರಗದ ರೂಪದ ರಂಜಕ.  ಮಾರುಕಟ್ಟೆಯಲ್ಲಿ ಲಭ್ಯವಿರುವ  ಸಿಂಗಲ್…

Read more
error: Content is protected !!