ಮಳೆ ಬಂದಿದೆ, ಕೆರೆ ತುಂಬಿದೆ ಅಂತರ್ಜಲ ಬರಿದಾಗುತ್ತಿದೆ. ಎಚ್ಚರ!.
ಮಳೆ ಬಂದಿದೆ ಕೆರೆ ತುಂಬಿದೆ ನೀರಿಗೇನೂ ಬರವಿಲ್ಲ ಎಂದು ನಂಬಿದ್ದ ನಮ್ಮ ನಂಬಿಕೆ ಈಗ ಹುಸಿಯಾಗಲಾರಂಭಿಸಿದೆ. ಎಲ್ಲೆಲ್ಲೂ ಕೊಳವೆ ಬಾವಿಗಳು ಇಳುವರಿ ಕಡಿಮೆಯಾಗುತ್ತಿದೆ. ವಿಫಲವಾಗುತ್ತಿದೆ. ಕಿಂಡಿ ಅಣೆಕಟ್ಟುಗಳು, ಕಿರು ಜಲವಿದ್ಯುತ್ ಉತ್ಪಾದಿಸುವ ಅಣೆಕಟ್ಟುಗಳಲ್ಲೂ ನೀರಿಲ್ಲದಾಗಿದೆ. ರೈತರು ಹೊಸ ಬಾವಿ ತೋಡಲು ರಿಗ್ ನ ಹಿಂದೆ ತಿರುಗುವಂತಾಗಿದೆ. ಅಂತರ್ಜಲ ಕಳೆದ ಕೆಲವು ವರ್ಷಗಳಿಂದ ರೈತರೂ ಸೇರಿದಂತೆ ಎಲ್ಲರೂ ಕೊಳವೆ ಬಾವಿ ನೀರಿಗೇ ಅವಲಂಬಿತರಾದ ಕಾರಣ ಅಂತರ್ಜಲದ ಮೇಲೆ ಒತ್ತಡ ಹೆಚ್ಚಿದೆ. ಎಲ್ಲಿ ನೋಡಿದರಲ್ಲಿ ಕೊಳವೆ ಬಾವಿ ತೋಡುವ ಸದ್ದು…