ಕೆಂಪಡಿಕೆ ಧಾರಣೆ 49000 ಕ್ಕೆ ಏರಿದೆ- ಚಾಲಿ ಸಹ ಸಧ್ಯವೇ ಏರುತ್ತದೆ.

ಕೆಂಪಡಿಕೆ ಧಾರಣೆ 49,000 ಕ್ಕೆ ಏರಿದೆ- ಚಾಲಿ ಸಹ ಸಧ್ಯವೇ ಏರುತ್ತದೆ.

ಕೆಂಪಡಿಕೆ ಧಾರಣೆ 49000 ಸಮೀಪಕ್ಕೆ ತಲುಪಿದೆ. ಇನ್ನೂ ಏರಿಕೆಯಾಗಬಹುದು ಎಂಬ ಸುದ್ದಿಗಳಿವೆ. ಕೆಂಪಡಿಕೆ ಏರಿದರೆ ಸಹಜವಾಗಿ ಚಾಲಿಯೂ ಏರಿಕೆಯಾಗಲೇಬೇಕು. ಈಗಾಗಲೇ ಚಾಲಿ ದಾರಣೆ ತುಸು ಏರಲಾರಂಭಿಸಿದೆ. ಇನ್ನೂ ಸ್ವಲ್ಪ ಏರಿಕೆ ಸಾಧ್ಯತೆಗಳಿವೆ. ಉತ್ಪಾದನಾ ಕ್ಷೇತ್ರದಿಂದ ಬೇಡಿಕೆ ಪ್ರಾರಂಭವಾಗಿದೆ. ಧೀರ್ಘ ಕಾಲದವರೆಗೆ ದರ ಇಳಿಕೆ ಹಾದಿಯಲ್ಲಿದ್ದ ಕಾರಣ ಈ ಬಾರಿ ದರ ಏರಿಕೆ ಸ್ವಲ್ಪ ಹೆಚ್ಚು ಸಮಯದ ತನಕ ಮುಂದುವರಿಯಬಹುದು ಎಂಬ ಲೆಕ್ಕಾಚಾರ ಇದೆ. ಕೆಂಪಡಿಕೆ ಮಾರುಕಟ್ಟೆಯಲ್ಲಿ ಖರೀದಿ ಉತ್ಸಾಹ ಇದೆ. ಹಾಗಾಗಿ ದರ ಸ್ವಲ್ಪ ಸ್ವಲ್ಪವೇ ಏರಿಕೆಯಾಗುತ್ತಿದೆ….

Read more
ಸಧ್ಯವೇ ಅಡಿಕೆ ಮಾರುಕಟ್ಟೆ ಕುಸಿತ ಸಾಧ್ಯತೆ.

ಸಧ್ಯವೇ ಅಡಿಕೆ ಮಾರುಕಟ್ಟೆ ಕುಸಿತ  ಸಾಧ್ಯತೆ.

ಅಡಿಕೆ ಮಾರುಕಟ್ಟೆಯಲ್ಲಿ ದರ ಕುಸಿತದ ಸುದ್ದಿ ಹಬ್ಬುತ್ತಿದೆ. ಕೆಂಪಡಿಕೆ  ಕೊಯಿಲು ಪ್ರಾರಂಭವಾಗಿದೆ. ಚಾಲಿ ಅಡಿಕೆ ಮಾಡುವ ಪ್ರದೇಶಗಳಲ್ಲೂ  ಒಂದು ಕೊಯಿಲಿನ ಅಡಿಕೆ  ಹಣ್ಣಾಗಿ ಅಗಿದೆ. ಹೊಸತು ಹಳತಾಗಿದೆ. ಹೊಚ್ಚ ಹೊಸತು ಬರಲಾರಂಭಿಸಿದೆ. ಈ ಮಧ್ಯೆ ಅಡಿಕೆ ಧಾರಣೆ ಏರಿಕೆ ಆಗುವ ಸುಳಿವು ಇಲ್ಲ. ಹೊಸತು ಮಾರುಕಟ್ಟೆಗೆ ಬರುವ ಈ ಸಮಯಕ್ಕೆ  ಹಳೆ ಅಡಿಕೆಗೆ ದರ ಸ್ವಲ್ಪವಾದರೂ ಹೆಚ್ಚಾಗಬೇಕಿತ್ತು. ಆದರೆ  ಹಳೇ (ಡಬ್ಬಲ್) ಅಡಿಕೆಗೆ ಬೇಡಿಕೆಯೇ ಇಲ್ಲದ ಸ್ಥಿತಿ ಉಂಟಾಗಿದೆ. ಎಲ್ಲೋ ಒಂದೆಡೆ ಅಡಿಕೆ ಧಾರಣೆ ಕುಸಿಯುವ ಸುಳಿವು…

Read more
ಚಳಿ ಇಳಿಮುಖ – ರಾಶಿ - ಚಾಲಿ 50,000!

ಉತ್ತರ ಭಾರತದ ಚಳಿ – ರಾಶಿ 50,000!- ಚಾಲಿ ಅನುಮಾನ.

ಉತ್ತರ ಭಾರತದಲ್ಲಿ ಚಳಿ ಹೆಚ್ಚಾದಾಗ ಸಂಸ್ಕರಣಾ ಉದ್ದಿಮೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ನಡೆಯದ ಕಾರಣ ರಾಶಿ ಮತ್ತು ಚಾಲಿ ಎರಡಕ್ಕೂ ಬೇಡಿಕೆ ಕಡಿಮೆಯಾಗಿತ್ತು. ಈಗ  ಚಳಿ ಕಡಿಮೆಯಾಗಲಿಲ್ಲವಾದರೂ ಕೆಂಪಡಿಕೆ ಮತ್ತೆ ಚೇತರಿಸಿಕೊಳ್ಳಲಾರಂಭಿಸಿದೆ. ಚಾಲಿ ಸ್ಟಾಕು ಹೆಚ್ಚು ಇರುವ ಕಾರಣ ತಕ್ಷಣಕ್ಕೆ ಅನುಮಾನ ಎನ್ನುತ್ತಾರೆ. ಚಳಿ ಇದ್ದರೂ ಅಡಿಕೆಗೆ ಮತ್ತೆ ಬೇಡಿಕೆ ಪ್ರಾರಂಭವಾಗಿದೆ. ಬೆಲೆ ಚೇತರಿಕೆಯ  ಹಾದಿಯಲ್ಲಿದೆ. ಗುಟ್ಕಾ ಇತ್ಯಾದಿ ಅಡಿಕೆ ಸೇರಿಸಿದ ಉತ್ಪನ್ನ ತಯಾರಿಸುವಾಗ ಅವು ತೇವಾಂಶ ಎಳೆದುಕೊಳ್ಳಬಾರದು.  ವಿಶೇಷ ಚಳಿ, ಇಬ್ಬನಿ ಇದ್ದಾಗ ಅವುಗಳ ಸಂಸ್ಕರಣೆಗೆ…

Read more

ಅಡಿಕೆ ಧಾರಣೆ ಕುಸಿಯುತ್ತಿದೆ – ಏನು ಕಾರಣ ಇರಬಹುದು? ಯಾವಾಗ ಏರಬಹುದು?

ಕಳೆದ ಒಂದು ತಿಂಗಳಿಂದ ಕೆಂಪಡಿಕೆ ಧಾರಣೆ ಶೇ.40 ರಷ್ಟು ಕಡಿಮೆಯಾಗಿದೆ. ಸಪ್ಟೆಂಬರ್ ತಿಂಗಳಲ್ಲಿ ಹಸಿ ಅಡಿಕೆ ಕ್ವಿಂಟಾಲಿಗೆ 7200 ತನಕ ಇದ್ದುದು, ಇಳಿಕೆಯಾಗುತ್ತಾ ಸಪ್ಟೆಂಬರ್ ಕೊನೆಗೆ 6600 ಕ್ಕೆ ಕುಸಿಯಿತು. ಹಾಗೆಯೇ ಕಡಿಮೆಯಾಗುತ್ತಾ  ಈಗ 5200-5000 ಕ್ಕೆ ಇಳಿದಿದೆ.ವರ್ತಮಾನ ಪರಿಸ್ಥಿತಿಯಲ್ಲಿ ಇನ್ನೂ ಇಳಿಕೆಯ ಸಾದ್ಯತೆಗಳು ಕಾಣಿಸುತ್ತಿದೆ. ಹಾಗೆಯೇ ಧಾರಣೆ 55,000 ಕ್ಕೆ ಏರಿದ್ದು, ಈಗ ಸರಾಸರಿ-40,000 ದ ಸಮೀಪಕ್ಕೆ ಬಂದಿದೆ. ಎಲ್ಲಾ ಅಡಿಕೆ ಬೆಳೆಗಾರರ ಕುತೂಹಲ ಧಾರಣೆ ಯಾವಾಗ ಏರಬಹುದು ಎಂಬುದು ಒಂದೇ. ಅಡಿಕೆ ಚೇಣಿ ವಹಿಸಿಕೊಳ್ಳುವವರು…

Read more
ಚಾಲಿ, ಕೆಂಪು ಎರಡೂ ತೇಜಿ

ಚಾಲಿ, ಕೆಂಪು ಎರಡೂ ತೇಜಿ- ಬೆಳೆಗಾರರ ಬೆಲೆ ನಿರೀಕ್ಷೆ ಇನ್ನೂ ಮುಂದೆ.

ಚಾಲಿ ಅಡಿಕೆ ಧಾರಣೆ ನಿರೀಕ್ಷೆಯಂತೆ ಈ ತಿಂಗಳಾಂತ್ಯದ ಒಳಗೆ ಕಿಲೋ.500 ತಲುಪುವುದು ಬಹುತೇಕ ಖಾತ್ರಿಯಾದಂತಾಗಿದೆ. ಜೊತೆಗೆ ಕೆಂಪಡಿಕೆಯೂ ಏರಿಕೆ ಕಂಡಿದೆ. ಅದರೆ ನಿರೀಕ್ಷೆ ಮಾತ್ರ 60,000 ದ ವರೆಗೆ ಎಂದಿತ್ತು. ಅದಕ್ಕೆ ಪೂರಕವಾಗಿ ಪರಿಸ್ಥಿತಿಯೂ ಇತ್ತು. ಆದರೆ ದರ ಆ ಮಟ್ಟಕ್ಕೆ ಏರಿಕೆಯಾಗಲಿಲ್ಲ. 49,000 ದ ಆಸುಪಾಸಿನಲ್ಲಿದ್ದುದು, 52,000 -53,000 ಕ್ಕೆ ಏರಿಕೆಯಾಯಿತಷ್ಟೇ. ಕೆಂಪಡಿಕೆಯ ಮಾರುಕಟ್ಟೆಯನ್ನು ಚಾಲಿ ನುಂಗಿದಂತಾಗಿದೆ. ಸಾಮಾನ್ಯವಾಗಿ ಹಿಂದೆ ಆಗಸ್ಟ್ ತಿಂಗಳಿನಿಂದ ಸಪ್ಟೆಂಬರ್ ತಿಂಗಳ ನವರಾತ್ರೆ ವರೆಗೆ ಅಡಿಕೆ ತೇಜಿ ಆಗುವುದು ಮಾಮೂಲು. ಹಿರಿಯ…

Read more

ಕೆಂಪಡಿಕೆ ರಾಶಿ- 40,000 ಆಗಬಹುದು ಎನ್ನುತ್ತಾರೆ.

ಉತ್ತರ ಭಾರತದ ವ್ಯಾಪಾರಿಗಳು ಅಡಿಕೆ ಬೇಕು ಎಂದು ಕೇಳಿಕೊಂಡು ಬರುತ್ತಿದ್ದಾರೆ. ಈ ಕಾರಣದಿಂದ ಸ್ಥಳೀಯ ವ್ಯಾಪಾರಿಗಳು ದರವನ್ನು ಸ್ವಲ್ಪ ಸ್ವಲ್ಪವೇ ಏರಿಕೆ ಮಾಡುತ್ತಿದ್ದಾರೆ. ಒಂದು ವಾರದಿಂದ ಚಾಲಿ ದರ ಕ್ವಿಂಟಾಲಿಗೆ 300 ರೂ. ಹೆಚ್ಚಳವಾಗಿದೆ. ಕೆಂಪು ಅಡಿಕೆಯ ಬೆಲೆ 2000 ರೂ. ಹೆಚ್ಚಾಗಿದೆ. 3-4 ವರ್ಷಗಳಿಂದ ಕೆಂಪಡಿಕೆಯಲ್ಲಿ ದರದಲ್ಲಿ ಏನೂ ದೊಡ್ಡ ಏರಿಕೆ ಆಗದ ಕಾರಣ ಈ ಬಾರಿ ಸ್ವಲ್ಪ ಏರಿಕೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲವು  ವ್ಯಾಪಾರದ ಅನುಭವಿಗಳು. ಕೆಲವು ಮೂಲಗಳ ಪ್ರಕಾರ ಈಗ…

Read more
error: Content is protected !!