ಅಡಿಕೆ ಬೆಳೆಯುವವರು ತಾವು ಬೆಳೆಸಿದ ಸಸಿಗಳ ಚೊಚ್ಚಲ ಫಸಲನ್ನು ನೋಡಿ ಖುಷಿ ಪಡುತ್ತಾರೆ. ಅದರೆ ಕೆಲವೊಮ್ಮೆ ಮಳೆಗಾಲದಲ್ಲಿ ಈ ಹೊಸ ಫಸಲು ಗೊನೆ ಸಮೇತ ಕೆಳಗೆ ಬೀಳುತ್ತದೆ. ಯಾಕೆ ಹೀಗಾಯಿತು. ಯಾವ ರೋಗ ಎಂದು ಸಿಕ್ಕ ಸಿಕ್ಕವರ ಜೊತೆಯಲ್ಲಿ ಸಲಹೆ , ಔಷಧಿ ಕೇಳಬೇಡಿ. ಇದು ಮೊದಲ ಫಸಲಿನಲ್ಲಿ ಸಾಮಾನ್ಯ. ಇದಕ್ಕೆ ಯಾವ ಔಷಧಿಯೂ ಬೇಕಾಗಿಲ್ಲ. ಪೋಷಕಾಂಶಗಳ ಬಳಕೆಯಲ್ಲಿ ಸಮತೋಲನ ಕಾಯ್ದುಕೊಳ್ಳಿ.
ಯಾಕೆ ಗೊನೆ ಬೀಳುತ್ತದೆ:
- ಅಡಿಕೆ ಸಸಿಗಳಲ್ಲಿ ಫಸಲು ಪ್ರಾರಂಭವಾಗಲು ಮೂರು-ನಾಲ್ಕು- ಐದು ವರ್ಷ ಬೇಕಾಗುತ್ತದೆ ಎಂಬುದು ನಮಗೆಲ್ಲಾ ಗೊತ್ತಿರುವಂತದ್ದು.
- ಸರಿಯಾದ ಫಸಲು ಪ್ರಾರಂಭವಾಗಲು ಮತ್ತೆ ಒಂದು ಎರಡು ವರ್ಷ ಹೆಚ್ಚು ಬೇಕಾಗುತ್ತದೆ ಎಂಬುದು ಸಹ ನಮಗೆ ಗೊತ್ತಿರುವಂತದ್ದು.
- ಪ್ರಾರಂಭದ ವರ್ಷದ ಫಸಲು ಕೆಲವೊಮ್ಮೆ ಉಳಿಯುತ್ತದೆ, ಮತ್ತೆ ಕೆಲವೊಮ್ಮೆ ಗೊನೆಯೇ ಬುಡ ಸಮೇತ ಕಳಚಿ ಬೀಳುತ್ತದೆ.
- ಇದಕ್ಕೆ ಕಾರಣ ಮತ್ತೇನಲ್ಲ, ಮರದ ಕಾಂಡದ ಬೆಳೆವಣಿಗೆ.
- ಎಳೆ ಪ್ರಾಯದಲ್ಲಿ ಕಾಂಡ ಬಣ್ಣ ಹಸುರು ಇರುವಾಗ ಕಾಂಡವು ದಪ್ಪ ಬೆಳೆವಣಿಗೆ ಆಗುತ್ತಿರುತ್ತದೆ.
ಮಳೆ ಬಂದ ತರುವಾಯ ಪ್ರಕೃತಿ ಸಹಜವಾಗಿ ಸಸ್ಯಗಳಿಗೆ ಪೋಷಕಾಂಶಗಳು ಹೆಚ್ಚು ಲಭ್ಯವಾಗುತ್ತದೆ. (nutrient deposit through rain) ನಾವು ಬೇಸಿಗೆಯಲ್ಲಿ ಕೊಟ್ಟ ಪೋಷಕಾಂಶಗಳೂ ಸಹ ಮಣ್ಣು ತೇವ ಆದ ತರುವಾಯ ಹೆಚ್ಚಿನ ಪ್ರಮಾಣದಲ್ಲಿ ಲಭ್ಯ ಸ್ಥಿತಿಗೆ ಬರುತ್ತದೆ. ಆಗ ಮರದ ಬೆಳೆವಣಿಗೆ ಹೆಚ್ಚಾಗುತ್ತದೆ.
- ಕಾಂಡ ದಪ್ಪವಾಗುತ್ತದೆ. ಕಾಂಡದ ಬೆಳವಣಿಗೆ ಆದಂತೆ ಹೂ ಗೊಂಚಲಿನ ಬೆಳೆವಣಿಗೆಯೂ ಆಗುವುದಿಲ್ಲ.
- ಕಾಂಡದ ಆಧಾರದಲ್ಲಿ ಸಂಪರ್ಕದಲ್ಲಿರುವತದ್ದು. ಹೂ ಗೊಂಚಲಿನ ಬುಡ, ಕಾಂಡ ದಪ್ಪ ಆಗುವಾಗ ಅದು ಅದರೊಂದಿಗೆ ಬೆಳೆವಣಿಗೆ ಆಗದೆ ಬೇರ್ಪಡುತ್ತದೆ.
ಪರಿಹಾರ ಏನು:
- ಇದಕ್ಕೆ ನಿರ್ದಿಷ್ಟ ಪರಿಹಾರ ಎಂಬುದು ಇಲ್ಲ. ಸಾಧ್ಯವಾದರೆ ಮೊದಲ ವರ್ಷದ ಫಸಲಿನ ಗೊನೆಯನ್ನು ಕಾಂಡಕ್ಕೆ ಕಟ್ಟಬಹುದು.
- ಇದರಿಂದ ಕೆಲವೊಮ್ಮೆ ಮಾತ್ರ ಪ್ರಯೋಜನ ಆಗುತ್ತದೆ.
- ಮಳೆಗಾಲ ಬಂದಾಕ್ಷಣ ಹೆಚ್ಚು ಪೋಷಕಗಳನ್ನು ಕೊಡಬೇಡಿ.
- ಅದರಲ್ಲೂ ಸಾರಜನಕ ಗೊಬ್ಬರವನ್ನು ಕಡಿಮೆ ಕೊಡಬೇಕು. ಹೆಚ್ಚಿನ ಬೆಳೆಗಾರರು ಪೊಟ್ಯಾಶಿಯಂ ಗೊಬ್ಬರವನ್ನು ಕಡಿಮೆ ಮಾಡುವುದುಂಟು.
- ಸಮತೋಲನ ಪ್ರಮಾಣದಲ್ಲಿ ಗೊಬ್ಬರ ಕೊಡದಿದ್ದರೆ, ಸಾರಜನಕ ಗೊಬ್ಬರವನ್ನು ಹೆಚ್ಚು ಪ್ರಮಾಣದಲ್ಲಿ ಕೊಟ್ಟರೆ( ಅದು ಕೊಟ್ಟಿಗೆ ಗೊಬ್ಬರ, ಕೋಳಿ ಗೊಬ್ಬರ, ಕುರಿ ಗೊಬ್ಬರವೂ ಇರಬಹುದು) ಹೀಗೆ ಕಾಂಡ ದಪ್ಪವಾಗುತ್ತದೆ.https://kannada.krushiabhivruddi.com/manure-schedule-to-yielding-arecanut-tree/
CLICK HERE TO CONTACT FOR SALES
- ಎಳೆಯ ಪ್ರಾಯದಿಂದಲೂ ಶಿಫಾರಸು ಮಾಡಿದ ಎನ್ ಪಿ ಕೆ ಮೂರೂ ಪೋಷಕಗಳನ್ನು ಕೊಡಬೇಕು. (Balanced nutrient)
- ಸಾವಯವ ಗೊಬ್ಬರವನ್ನೇ ಕೊಡುವುದಾದರೆ ಬೂದಿಯನ್ನು ಕೊಡಲೇ ಬೇಕು.
- ಕಾಂಡದ ಬಣ್ಣ ಹಸಿರಿನಿಂದ ಕಂದು ಬಣ್ಣಕ್ಕೆ ತಿರುಗಿದ ನಂತರ ಕಾಂಡ ದಪ್ಪಕ್ಕೆ ಬೆಳೆಯುವುದು ಕಡಿಮೆ.
- ಸಸ್ಯಕ್ಕೆ 5-6 ವರ್ಷ ಕಳೆದ ನಂತರ ಅದರ ಕಾಂಡ ಕಂದು ಬಣ್ಣಕ್ಕೆ ತಿರುಗಿದ ನಂತರ ಈ ಸಮಸ್ಯೆ ಉಂಟಾಗುವುದಿಲ್ಲ.
- ಅಪರೂಪದಲ್ಲಿ ಕೆಲವೊಮ್ಮೆ ಸಾರಜನಕ ಅತಿಯಾದರೆ ಬೆಳೆದ ಮರದ ಗೊಂಚಲೂ ಬೀಳುವುದು ಉಂಟು.
- ಸಾರಜನಕ ಹೆಚ್ಚಾದಾಗ ದೊಡ್ದ ದೊಡ್ಡ ಹೂ ಗೊಂಚಲು ಬರುತ್ತದೆ. (Excess nitrogen) ಆದರೆ ಹೆಚ್ಚಿನ ಮಿಡಿ ಉದುರಿ ತನ್ನಷ್ಟಕ್ಕೆ ಸಮತೋಲನ ತಂದುಕೊಳ್ಳುತ್ತದೆ.
- ಒಂದು ವೇಳೆ ಬೆಳೆವಣಿಗೆ ಹಂತದಲ್ಲಿ ಸಾರಜನಕ ಅಂಶ ತುಂಬಾ ಹೆಚ್ಚಾದರೆ ಬಲಿಯುತ್ತಿರುವ ಗೊನೆಯೇ ಕಳಚಿ ಬೀಳಬಹುದು.
ಈ ವ್ರರ್ಷ ಹೊಸ ಫಸಲಿನ ಗೊನೆ ಬೀಳಬಹುದು. ಮುಂದಿನ ವರ್ಷ ಹಾಗಾಗುವುದಿಲ್ಲ. ಆದ ಕಾರಣ ಸಿಕ್ಕ ಸಿಕ್ಕ ಔಷದೋಪಚಾರ ಮಾಡಬೇಕಾಗಿಲ್ಲ. ಸಮತೋಲಿತ ಪ್ರಮಾಣದ ಪೋಷಕಗಳನ್ನು ಕೊಟ್ಟು ಮರದ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡಿ.
End of the article: ———————————————
search words# excess nitrogen# thickness of stem # nut fall# arecanut# arecanut nut fall# arecanut bunch fall# excess growth of areca palm#
Farmer’s media,agriculture information, agri news , Krushi ,agriculture Media ,Agriculture is krushi abhivruddi
Please suggest some remedy for Nusi Roga for Coconut trees. I have this problem for the last 35 years
ವೆಟ್ಟೆಬಲ್ ಸಲ್ಫರ್ ಸಿಂಪಡಿಸಿ.3 ಗ್ರಾಂ ಪ್ರತೀ ಲೀ. ನೀರಿಗೆ. ಮರಕ್ಕೆ ಮೆಗ್ನೀಶಿಯಂ ಸಲ್ಫೇಟ್ ೫೦೦ ಗ್ರಾಂ ,ಮತ್ತು ಸತುವಿನ ಸಲ್ಫೇಟ್ ೧೦೦ ಗ್ರಾಂ ನಂತೆ ಹಾಕಿ. ಮಾಮೂಲು ಗೊಬ್ಬರ ಕೊಡಿ. ಸಲ್ಫರ್ ಗಂಧಕ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.