ಆರ್ಕಿಡ್ ಬೆಳೆಯಲ್ಲಿದೆ ಉತ್ತಮ ಆದಾಯ.!

by | Mar 2, 2020 | Floriculture (ಫುಷ್ಪ ಬೆಳೆ), Orchids (ಆರ್ಕಿಡ್ ಗಳು) | 0 comments

ಆರ್ಕಿಡ್ ಸಸ್ಯಗಳನ್ನು ಅಪ್ಪುಗೆ ಗಿಡಗಳು ಎಂದು  ಕರೆಯಲಾಗಿದೆ. ಇದು ಬೇರೆ  ಮರದ ರೆಂಬೆ ಅಥವಾ ಇನ್ಯಾವುದಾದರೂ ಆಸರೆಯಲ್ಲಿ ತಮ್ಮ ಇಳಿಬಿಟ್ಟ ಬೇರುಮತ್ತು ಎಲೆಗಳ ಮೂಲಕ ಮಳೆ ನೀರನ್ನು ಹೀರಿಕೊಂಡು ಬದುಕುತ್ತವೆ.ಇವು ಹುಲ್ಲಿ ಜಾತಿಗೆ  ಸೇರಿದ ಸಂತತಿ.

ಮೂಲ:

 • ಭಾರತದ ಪಶ್ಚಿಮ ಘಟ್ಟ ಸಸ್ಯ, ಜೀವ ವೈವಿಧ್ಯಗಳ ಖನಿ.
 • ಇಲ್ಲಿ ಏನುಂಟು ಏನಿಲ್ಲ ಎಂಬುದಿಲ್ಲ.
 • ಅಪರೂಪದ ಸಸ್ಯಗಳು ಪುಷ್ಪಗಳು, ಹಣ್ಣು ಹಂಪಲುಗಳು, ಪಕ್ಷಿ ಪ್ರಾಣಿಗಳು, ಮಣ್ಣು ಜನ್ಯ ಜೀವಿಗಳು ಒಂದೋ ಎರಡೂ ಸಾವಿರಾರು.
 • ಇಂತದ್ದರಲ್ಲಿ ಒಂದು ಆರ್ಕಿಡ್ ಗಳು.
 • ನಮ್ಮ ಪಶ್ಚಿಮ ಘಟ್ಟದ ಪ್ರದೇಶಗಳಲ್ಲೆಲ್ಲಾ ಅರಸಿ ಸುಮಾರು 176 ವಿಧದ  51 ತಳಿಯ ಅರ್ಕಿಡ್ ಗಳನ್ನು ಪತ್ತೆ ಹಚ್ಚಲಾಗಿದೆ.

ಇದರಲ್ಲಿ 34 ವಿಧದ 20 ತಳಿಯ ಆರ್ಕಿಡ್ ಗಳು ಆಕರ್ಷಕ ಹೂವನ್ನು ಬಿಡುತ್ತವೆ. ಇವು ಬೆಳೆಸಿ ಹೂ ಪಡೆಯಲು ಸಹಕರಿಯಾದವುಗಳು. ಇದನ್ನು ಆಯ್ಕೆ  ಮಾಡಿ ಅದನ್ನು  ಸಸ್ಯಾಭಿವೃದ್ಧಿ ಮತ್ತು ಕ್ರಾಸಿಂಗ್ ಮಾಡಿ ಹಲವು ತಳಿಗಳನ್ನು ಉತ್ಪಾದಿಸಲಾಗಿದೆ.

ಬೇಸಾಯ:

 • ಆರ್ಕಿಡ್ ಎಂದರೆ  ಅದಕ್ಕೆ ಸಮನಾದ ಆಕರ್ಷಕ ಬಣ್ಣದ ಸಂಕಲನ ಬೇರೊಂದು ಇರಲಿಕ್ಕಿಲ್ಲ.
 • ನೋಟ ಬಲು ಆಕರ್ಷಕ,. ಅದೇ ರೀತಿ ಹೂವಿನ ಬಾಳ್ವಿಕೆಯೂ ಸಹ ಧೀರ್ಘ.
 • ಇದನ್ನು ಮನಗಂಡು ಪುಷ್ಪ ಬೇಸಾಯಕ್ಕೆ ಇದನ್ನು ಆಯ್ಕೆ ಮಾಡಲಾಗಿದೆ.
 • ಪ್ರಪಂಚದಾದ್ಯಂತ ಇದನ್ನು  ಬೆಳೆಸುತ್ತಾರೆ.
 • ಇದರ ಆಕರ್ಷಕ ನೋಟದಿಂದಾಗಿ ಇದಕ್ಕೆ ಬಹಳ ಬೇಡಿಕೆ  ಮತ್ತು ಬೆಲೆ ಇದೆ.

ಪುಷ್ಪ ಬೇಸಾಯದಲ್ಲಿ ಆರ್ಕಿಡ್ ಗಳು:

 • ಪುಷ್ಪ ಬೇಸಾಯ ಅಥವಾ ಪ್ಲೋರೀಕಲ್ಚರ್ ನಲ್ಲಿ ಆರ್ಕಿಡ್ ಕೃಷಿಗೆ  ಬಹಳ ಮಹತ್ವ ಇದೆ.
 • ಇದರ ವಿಶಿಷ್ಟ ಬಣ್ಣ, ಆಕಾರ ಮತ್ತು ಧೀರ್ಘ ಬಾಳ್ವಿಕೆ  ಯಾರನ್ನೂ ಮನಸೆಳೆಯುವಂತದ್ದು.
 • ಪುಷ್ಪ ಕೃಷಿ ಮತ್ತು ಪುಷ್ಪ ವ್ಯವಹಾರ ಜಗತ್ತಿನ ಅತೀ ದೊಡ್ದ ವ್ಯವಹಾರವಾಗಿದ್ದು, ಇದರಲ್ಲಿ ಮೇಲು ಪಂಕ್ತಿಯಲ್ಲಿರುವುದು ಆರ್ಕಿಡ್ ಗಳು.
 • ಕಳೆದ ಒಂದು ಶತಮಾನದಿಂದ ಜಗತ್ತಿನಾದ್ಯಂತ ಲಕ್ಷಕ್ಕೂ ಹೆಚ್ಚು ಆರ್ಕಿಡ್ ಹೈಬ್ರೀಡ್ ಗಳು ವ್ಯವಹಾರದಲ್ಲಿ ನೊಂದಾಯಿಸಲ್ಪಟ್ಟಿವೆ.

ಆರ್ಕಿಡ್ ಗಳು ನೈಸರ್ಗಿಕವಾಗಿ ಹೇಗೆ  ಬೆಳೆಯುತ್ತಿತ್ತೋ ಅದೇ ವಾತಾವರಣವನ್ನು ನಾವು ಬೆಳೆಸುವಾಗ ಕಲ್ಪಿಸಿಕೊಡಲು ಗ್ರೀನ ಹೌಸ್ ತಾಂತ್ರಿಕತೆ ಬಂದು ಬೆಳೆ ಹೆಚ್ಚಳಕ್ಕೆ ನೆರವಾಯಿತು.

 • ಅಂಗಾಂಶ ಕಸಿ ತಾಂತ್ರಿಕತೆ ಅಧಿಕ ಸಸ್ಯೋತ್ಪಾದನೆಗೆ ವರವಾಯಿತು.
 • ಹಬ್ಬಗಳಾದ ಕ್ರಿಸ್ಮಸ್, ಪ್ರೇಮಿಗಳ ದಿನ, ಗೆಳೆಯರ ದಿನ, ಹಾಗೂ ಇನ್ನಿತರ ಹಬ್ಬಗಳು, ಆಚರಣೆಗಳು, ಸಭೆ  ಸಮಾರಂಭಗಳು ಪುಷ್ಪ ಕೃಷಿಕರಿಗೆ  ಅನುಕೂಲವಾಗಿ ಪರಿಣಮಿಸಿದವು.
 • ಭಾರತದಲ್ಲಿ ಪುಷ್ಪ ಕೃಷಿ ಯ  ವಾರ್ಷಿಕ ವ್ಯವಹಾರ ಸುಮಾರು 500 ಕೋಟಿಗಳಷ್ಟು ಅದರಲ್ಲಿ 25% ಆರ್ಕಿಡ್ ಗಳದ್ದು.

ಕರ್ನಾಟಕ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಲ, ಆಂದ್ರ ಪ್ರದೇಶ ,ಹರ್ಯಾಣ  ಹಿಮಾಚಲ ಪ್ರದೇಶಗಳು ಜಗತ್ತೇ ಗುರುತಿಸಿಸಲ್ಪಟ್ಟ ಪುಷ್ಪ ಕೃಷಿಯ ರಾಜ್ಯಗಳು.

ಅರ್ಕಿಡ್ ಎಂಬ ಅದ್ಭುತ ಹೂವು:

 • ಪ್ರಪಂಚದ ಕೆಲವು ದೇಶಗಳ ಮಳೆ ಕಾಡುಗಳಲ್ಲಿ  ಮಾತ್ರ ಬೆಳೆಯುವ ಸಸ್ಯ ಇದು.
 • ಒಟ್ಟಾರೆಯಾಗಿ ಜಗತ್ತಿನಾದ್ಯಂತ 5000 ಕ್ಕೂ ಹೆಚ್ಚು ಆರ್ಕಿಡ್  ಬಗೆಗಳಿವೆ.
 • ವರ್ಷ ವರ್ಷವೂ  ಇದಕ್ಕೆ  100-200 ಸಂಖ್ಯೆಯಲ್ಲಿ ಸೇರ್ಪಡೆಯಾಗುತ್ತಿವೆ.
 • ಪ್ರತೀಯೊಂದು ಬಗೆಯ ಬೆಳವಣಿಗೆಯ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.
 • ಆರ್ಕಿಡ್ ಸಸ್ಯಗಳ ಬೀಜೋತ್ಪಾದನೆ ಸಹ ಮಾಡಲಾಗುತ್ತಿದೆ.

ಸೀತೆ ಹೂವು

ನಮ್ಮ ಸುತ್ತಮುತ್ತ ಇರುವ ಸೀತೆ ಹೂವು, ಅಥವಾ  ದ್ರೌಪದಿ ಪುಷ್ಪ,  ಗೋಪಿ ದಂದೆ ಒಂದು ಅದ್ಭುತ ಆರ್ಕಿಡ್ ಆಗಿದ್ದು, ಅದು ಈಗ ವಿನಾಶದ ಅಚಿನಲ್ಲಿದೆ. ಇದನ್ನು ಕರ್ನಾಟಕ ರಾಜ್ಯದ ರಾಜ್ಯ ಪುಷ್ಪವಾಗಿ ಪರಿಗಣಿಸಲು  ಒತ್ತಾಯಗಳಿವೆ.

 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!