ಇದು ಹಲಸಿನ ಹೊಸ ತಳಿ.

ಹಲಸಿನಲ್ಲಿ ಕೆಲವು ತಳಿಗಳ ಗುಣಗಳನ್ನುಅಧ್ಯಯನ ನಡೆಸಿ ಉತ್ತಮ ತಳಿ ಎಂದು ಸಂಶೋಧನಾ ಕೇಂದ್ರಗಳು ಬಿಡುಗಡೆ ಮಾಡಿವೆ. ಕೆಲವು ರೈತರೇ ಬಿಡುಗಡೆ ಮಾಡಿದ್ದೂ ಇದೆ!!

  • ಹಲಸಿಗೆ ಘಮ ಘಮ ಸುವಾಸನೆ  ಬಂದದ್ದು  ಅದಕ್ಕೆ  ದೊರೆತ  ಪ್ರಚಾರದ ಕಾರಣದಿಂದ.
  • ಇವೆಲ್ಲಾ ಪ್ರಚಾರ ಗಳಿಗೂ ಮುಂಚೆಯೇ  ಬೆಂಗಳೂರಿನ ಕೃಷಿ ವಿಶ್ವವಿಧ್ಯಾನಿಲಯದ ತೋಟಗಾರಿಕಾ ವಿಭಾಗದಲ್ಲಿ ಸಾಕಷ್ಟು  ಹಲಸಿನ ಬೇರೆ  ಬೇರೆ ತಳಿಗಳ  ಸಂಗ್ರಹ ಇತ್ತು.
  • ಅಲ್ಲಿ ಅದರ ಅಧ್ಯಯನ ನಡೆಯುತ್ತಿತ್ತು. ಆದರೆ ಆಂಥ ಪ್ರಚಾರ ಇರಲಿಲ್ಲ.
  • ಇಲ್ಲಿ ಅಧಿಕ ಇಳುವರಿ, ಗುಣ ಮಟ್ಟದ ಇಳುವರಿ, ವರ್ಷ ಪೂರ್ತಿ ಹಣ್ಣು ಕೊಡಬಲ್ಲ ತಳಿ,  ಮತ್ತು ಗಾತ್ರವನ್ನಾಧರಿಸಿ ಸಂಶೋದನೆ ನಡೆಸಿ ನಾಲ್ಕು ಹಲಸಿನ ಸುಧಾರಿತ ತಳಿಯನ್ನು ಆಗಲೇ ಬಿಡುಗಡೆ ಮಾಡಿದ್ದಾರೆ.
  • ಈಗ  ಮಧುರ ಎಂಬ ಹೆಸರಿನ ಮತ್ತೊಂದು ಹಲಸನ್ನು ಬಿಡುಗಡೆ ಮಾಡಲಾಗಿದೆ.

 ಮಧುರಾ ಹಲಸು:

  • ಇದರ ಪೂರ್ಣ ಹೆಸರು ಲಾಲ್ ಭಾಗ್ ಮಧುರಾ.
  •  ತಾಯಿ ಮರವು ಬೆಂಗಳೂರಿನ ಲಾಲ್ ಬಾಗ್ ನಲ್ಲಿದ್ದು ಅದನ್ನು ಇಲ್ಲಿ ಅಭಿವೃದ್ದಿ  ಪಡಿಸಲಾಗಿದೆ.
  • ಇದರ ಕಸಿ ಮಾಡಿದ ಗಿಡವು ಮೂರೇ ವರ್ಷಕ್ಕೆ  ಫಲಕೊಡುವ ಕಾರಣ ನೆಟ್ಟು ಬೆಳೆಸಲು ಯೋಗ್ಯ ತಳಿ ಎಂದು ಗುರುತಿಸಲಾಗಿದೆ.
  • 2019 ರ  ಕೃಷಿ ಮೇಳದ ಸಂದರ್ಭದಲ್ಲಿ ಈ  ತಳಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

ವಿಶೇಷತೆ  ಏನಿದೆ?

  • ಇದರ ಹಣ್ಣಿನ ತೂಕ ಸರಾಸರಿ 7.5 ಕಿಲೋ ದಷ್ಟು. ಹೆಚ್ಚೆಂದರೆ 10 ಕಿಲೋ ತನಕ ತೂಗುತ್ತದೆ.
  • ತೊಳೆಯ ಗಾತ್ರ ದೊಡ್ಡದು. ಒಂದು ಕಿಲೋ ಹಣ್ಣಿನಲ್ಲಿ ಸುಮಾರು 8-9  ತೊಳೆಗಳಿರುತ್ತದೆ. ತೊಳೆಯ ತೂಕ 70  ಗ್ರಾಂ ತನಕವೂ ಇರುತ್ತದೆ.
  • ತೊಳೆಗಳು ಹಳದಿ ಬಣ್ಣ ಹೊಂದಿದ್ದು, ಉದ್ದ6-7 ಸೆಂ ಮೀ – ದಪ್ಪ .88 ಸೆಂ. ಮೀ. ಇದ್ದು ಉತ್ತಮವಾಗಿದೆ.
  • ಒಳ್ಳೆಯ ಸಿಹಿ ಅಂಶ  ಒಳಗೊಂಡಿದೆ.

ಹಣ್ಣಿನ ತೊಳೆಗಳು, ತಿನ್ನಲು, ಚಿಪ್ಸ್ ಮುಂತಾದ ಮೌಲ್ಯ ವರ್ಧನೆಗೂ ಯೋಗ್ಯವಾಗಿದೆ. ಜ್ಯಾಂ, ಸ್ಕ್ವಾಶ್  ಮಾಡಲು ಉತ್ತಮವಾಗಿ ಹೊಂದುತ್ತದೆ.

  • 10-15 ವರ್ಷದ ಮರ ವಾರ್ಷಿಕ 80-100 ಕಾಯಿ ಗಳನ್ನು ಮತ್ತು  ಮರಕ್ಕೆ   600- 800 ಕಿಲೋ ಇಳುವರಿಯನ್ನು ನೀಡುತ್ತದೆ.

 ಇತರ ಹಲಸುಗಳು:

  • ಸ್ವರ್ಣ ಹಲಸು : ಇದು ಇಲ್ಲೀ ಅಭಿವೃದ್ಧಿಪಡಿಸಿದ ತಳಿ. ಹಳದಿ ಬಣ್ಣದ ತೊಳೆ.
  • ಮಧ್ಯಮ ಗಾತ್ರದ  6-7 ಕಿಲೋ ತೂಕದ ಹಣ್ಣು ಕೊಡುತ್ತದೆ. ಉತ್ತಮ ಸಿಹಿಹೊಂದಿರುವ ಹಣ್ಣು.

  • ಪಾಲೂರು:  ಇದು ತಮಿಳುನಾಡು ಕೃಷಿ ವಿಶ್ವವಿಧ್ಯಾನಿಲಯದಿಂದ ಬಿಡುಗಡೆಯಾದ  ತಳಿ.
  • ಅಧಿಕ ಇಳುವರಿ ನೀಡುತ್ತದೆ.  ಮಾರ್ಚ್- ಜೂನ್  ಮತ್ತು  ಅಕ್ಟೋಬರ್ – ಡಿಸೆಂಬರ್  ತನಕ ವರ್ಷಕ್ಕೆ ಎರಡು ಬಾರಿ ಹಣ್ಣು ಕೊಡುತ್ತದೆ.
  • ಹಣ್ಣಿನ ತೂಕ ಸರಾಸರಿ 8 ಕಿಲೋ.

  • ಪೆಚಿಪಾರಾಯ: ಇದು ಸಹ ತಮಿಳುನಾಡು ಕೃಷಿ ವಿಶ್ವವಿಧ್ಯಾನಿಲಯದ ತಳಿ.
  • ಹಲಸಿನ ಹಣ್ಣು 17 ಕಿಲೋ ದಷ್ಟು ದೊಡ್ದದು.
  • ಮರ ಒಂದು 100 -150  ಕಾಯಿ ಇಳುವರಿ ನೀಡುತ್ತದೆ.
  • ಇದೂ ಸಹ ವರ್ಷಕ್ಕೆ ಎರಡು ಸಾರಿ ಇಳುವರಿ ಕೊಡಬಲ್ಲ ತಳಿ.

  • ಕೊಂಕಣ್ ಪ್ರಾಲಿಫಿಕ್ : ಇದು ಕೊಂಕಣ ಕೃಷಿ ವಿಧ್ಯಾಪೀಠದ ದಾಪೋಲೀ  ಮಹಾರಾಷ್ಟ್ರದ ಹಣ್ಣು.
  • ಇಲ್ಲಿಂದಲೇ ಬಿಡುಗಡೆ ಆಗಿದೆ. ಮರಕ್ಕೆ  450 -550  ಕಿಲೋ ತನಕ ಇಳುವರಿ ಕೊಡುತ್ತದೆ.
  • ಹಣ್ಣಿನ ತೂಕ 5.70 ಗ್ರಾಂ ನಷ್ಟು ಇರುತ್ತದೆ.

ವಿಶ್ವ ವಿದ್ಯಾನಿಲಯದಲ್ಲಿ ಇನ್ನೂ  ಕೆಲವು ಉತ್ತಮ ತಳಿಗಳಿದ್ದು  ಅವುಗಳ ಅಧ್ಯಯನ ನಡೆಯುತ್ತಿದ್ದು, ಕೆಲವೇ  ಸಮಯದಲ್ಲಿ ಇನ್ನೂಕೆಲವು ತಳಿಗಳು ಬಿಡುಗಡೆಯಾಗಬಹುದು.

 ಬೆಂಗಳೂರಿನಂತಹ ಅರೆ ಮಲೆನಾಡು ಮತ್ತು ದಕ್ಷಿಣ ಬಯಲು ನಾಡಿನಲ್ಲಿ  ಹಲಸಿನ ಮರಗಳಲ್ಲಿ  ಉತ್ತಮ ಗುಣಮಟ್ಟದ ಇಳುವರಿ ದೊರೆಯುತ್ತದೆ. ಹಣ್ಣಿನ ಗುಣಮಟ್ಟ ಉತ್ತಮವಾಗಿರುತ್ತದೆ. ಇದು ಮಣ್ಣು ಮತ್ತು ಹವಾಗುಣದ ಕಾರಣದಿಂದ.

 

2 thoughts on “ಇದು ಹಲಸಿನ ಹೊಸ ತಳಿ.

Leave a Reply

Your email address will not be published. Required fields are marked *

error: Content is protected !!