ಗೇರು ಒಂದು ವಿದೇಶಿ ವಿನಿಮಯ ಗಳಿಸುವ ವಾಣಿಜ್ಯ ಬೆಳೆ. ನಮ್ಮ ದೇಶದಲ್ಲಿ ಇದನ್ನು ಕೇರಳ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಒರಿಸ್ಸಾ ಈಶಾನ್ಯ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳದಲ್ಲೆಲ್ಲಾ ಬೆಳೆಯಲಾಗುತ್ತಿದೆ. ಹೆಚ್ಚು ಪ್ರೊಟೀನ್ ಹಾಗೂ ಕಡಿಮೆ ಪ್ರಮಾಣದ ಶರ್ಕರ ಹೊಂದಿರುವ ಗೇರುಬೀಜಕ್ಕೆ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.
- ಇದು ನಮ್ಮ ರಾಜ್ಯದ ಕರಾವಳಿ, ಮಲೆನಾಡು ಅರೆ ಮಲೆನಾಡು ಪ್ರದೇಶಗಳಿಗೆ ಚೆನ್ನಾಗಿ ಹೊಂದಿಕೆಯಾಗುವ ಬೆಳೆಯಾಗಿದೆ.
- ಕಡಿಮೆ ನೀರಿನಲ್ಲಿ ಬೆಳೆದು ಆದಾಯ ಕೊಡಬಲ್ಲ ಬೆಳೆ ಎಂದು ಹೆಚ್ಚಿನವರು ಗೇರು ಬೆಳೆ ಬೆಳೆಸಲಾರಂಭಿಸಿದ್ದಾರೆ.
ತಳಿಗಳು :
- ಈ ವರೆಗೆ ಗೇರಿನಲ್ಲಿ 43 ಸುಧಾರಿತ ಗೇರು ತಳಿಗಳನ್ನು ಆಯ್ಕೆ ಮಾಡಿ ಬಿಡುಗಡೆ ಮಾಡಲಾಗಿದೆ.
- ಅದರಲ್ಲಿ ಪ್ರಾದೇಶಿಕತೆಗೆ ಅನುಗುಣವಾಗಿ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
- ಕರ್ನಾಟಕ ಮತ್ತು ಕೇರಳ ರಾಜ್ಯಕ್ಕೆ ಶಿಫಾರಸ್ಸನ್ನು ಮಾಡಲಾಗಿರುವ ಕೆಲವು ತಳಿಗಳು ಇವು.
ಸುಧಾರಿತ ಗೇರು ತಳಿಗಳು
- ಭಾರತದ ವಿವಿಧ ಪ್ರದೇಶಗಳಿಗೆ ಸೂಕ್ತವಾಗುವ 42 ತಳಿಗಳನ್ನು ಈವರಗೆ ಬಿಡುಗಡೆ ಮಾಡಲಾಗಿದೆ.
ಎನ್.ಸಿ.ಆರ್. ಸೆಲೆಕ್ಷನ್ – 2:
- ಗೇರು ಸಂಶೋಧನಾ ನಿರ್ಧೇಶನಾಲಯ ಪುತ್ತೂರಿನಿಂದ ಬಿಡುಗಡೆಯಾದ ತಳಿ.
- ಅತೀ ಬೇಗನೆ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಹೂಬಿಟ್ಟು ಸುಮಾರು 20ರಿಂದ 2.5 ತಿಂಗಳು ಹೂ ಬಿಡುತ್ತಿರುತ್ತದೆ.
- ಒಂದು ಗೊಂಚಲಿನಲ್ಲಿ ಸರಾಸರಿ ಮೂರು ಹಣ್ಣುಗಳಿರುತ್ತವೆ.
- ಇದರ ಇಳುವರಿ 9 ಕೆ.ಜಿ. ಬೀಜದ ತೂಕ 9.2 ಗ್ರಾಂ. ಹಣ್ಣಿನ ಬಣ್ಣ ಕಂಡು, ಕರಾವಳಿ ಪ್ರದೇಶಕ್ಕೆ ಸೂಕ್ತ. ಇದು ಸಾಂದ್ರ ಪದ್ಧತಿಗೆ ಹೊಂದುತ್ತದೆ.
ಭಾಸ್ಕರ :
- ಪಶ್ಚಿಮ ಕರಾವಳಿಗೆ ಸಕ್ತ. ಹೂ ಬಿಡುವ ಅವಧಿ ಡಿಸೆಂಬರ್ ನಿಂದ ಮಾರ್ಚ್.
- ಸುಮಾರು 60 ದಿನ. ಸ್ವಲ್ಪ ಪ್ರಮಾಣದಲ್ಲಿ ಚಹಾ ಸೊಳ್ಳೆಯ ಬಾಧೆ ಇದ್ದಲ್ಲಿ ಅದರಿಂದ ತಪ್ಪಿಸಿಕೊಳ್ಳುವ ಗುಣ ಈ ತಳಿಗಿದೆ.
- ಆದರೆ ಬಾಧೆ ತುಂಬಾ ಜಾಸ್ತಿಯಾದಲ್ಲಿ ಔಷಧ ಸಿಂಪರಣೆ ಬೇಕಾಗುತ್ತದೆ.
- ಒಂದು ಗೊಂಚಲಿನಲ್ಲಿ ಸಉಮಾರು 4 ರಿಂದ 13 ಹಣ್ಣುಗಳಿರುತ್ತವೆ.
- 13ನೇ ವರ್ಷಕ್ಕೆ ಸರಾಸರಿ 10.7 ಕೆ.ಜಿ. ಇಳುವರಿ ನೀಡುವ ಈ ತಳಿಯಲ್ಲಿ ಅದೇ ವರ್ಷದಲ್ಲಿ ಅತ್ಯಧಿಕ 19 ಕೆ.ಜಿ ಇಳುವರಿ ದಾಖಲಾಗಿದೆ.
- ಇದರ ಬೀಜದ ತೂಕ 7.4 ಗ್ರಾಂ. ಬೀಜ ಸಂಸ್ಕರಣೆಯಿಂದ 30.6 ಗ್ರಾಂ. ತಿರುಳು ದೊರೆಯುತ್ತದೆ.
- ಅತ್ಯಾಕರ್ಷಕ ಕಇತ್ತಳೆ ಬಣ್ಣದ ಹಣ್ಣುಗಳಲ್ಲಿ 67.45 ನಷ್ಟು ರಸ ಇದೆ.
ಉಳ್ಳಾಲ-3 :
- ಕರಾವಳಿ ಪ್ರದೇಶಕ್ಕೆ ಸೂಕ್ತ. ಸುಮಾರು 50-60 ದಿನಗಳು ಇದರ ಕೊಯ್ಲಿನ ಅವಧಿ.
- ಒಂದು ಮರಕ್ಕೆ ಸರಾಸರಿ 14.7 ಕೆ.ಜಿ. ಇಳುವರಿ ನೀಡುತ್ತದೆ.
- ಇದರ ಬೀಜದ ಗಾತ್ರ 7 ಗ್ರಾಂ. ಕೆಂಪು ಹಣ್ಣಿನ ತಳಿ.
- ಈ ತಳಿಯು ಬಹಳ ಬೇಗವಾಗಿ ಬೆಳೆಯುವ ತಳಿಯಾಗಿದ್ದು ಗೊಬ್ಬರ ನಿರ್ವಹಣೆ ಸಮರ್ಪಕವಾಗಿದ್ದಲ್ಲಿ ಅತ್ಯುತ್ತಮ ಫಸಲನ್ನು ನೀಡಬಲ್ಲದು.
ಉಳ್ಳಾಲ-4 :
- ಸರಾಸರಿ ಇಳುವರಿ 9.5 ಕೆ.ಜಿ. ಬೀಜದ ತೂಕ 8.5 ಗ್ರಾಂ. ಇದು ಹಳದಿ ಬಣ್ಣದ ಹಣ್ಣುಗಳನ್ನು ಹೊಂದಿದ್ದು ಹಣ್ಣುಗಳು ಸುಮಾರು 75 ಗ್ರಾಂ. ತೂಕ ಹೊಂದಿರುತ್ತವೆ.
- ಕೊಯ್ಲು ಸುಮಾರು 60ರಿಂದ 70 ದಿನಗಳಲ್ಲಿ ಮುಗಿಯುತ್ತದೆ.
- ಕರಾವಳಿ ಪರದೇಶಕ್ಕೆ ಸೂಕ್ತ. ವರ್ಷದ ಪ್ರಾರಂಭ ಅಂದರೆ ಡಿಸೆಂಬರ್ ಜನವರಿಯಲ್ಲಿ ಕೊಯ್ಲಿಗೆ ಬರುವ ತಳಿ.
ಮಡಕ್ಕತಾರ-2 :
- ಇದು ಕೇರಳದ ಮಡಕ್ಕತಾರ ಗೇರು ಸಂಶೋಧನಾ ಕೇಂದ್ರದಿಂದ ಶಿಫಾರಸ್ಸು ಮಾಡಲ್ಪಟ್ಟ ತಳಿ.
- ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅತ್ಯುತ್ತಮ ಫಲಿತಾಂಶವನ್ನು ತೋರಿಸಿರುತ್ತದೆ.
- ಬೀಜದ ಗಾತ್ರ 7 ಗ್ರಾಂ. ಮರವೊಂದಕ್ಕೆ 10-15 ಕೆ.ಜಿ. ಇಳುವರಿ.
- ಇದು ಸಾಮಾನ್ಯವಾಗಿ ಫೆಬ್ರವರಿ, ಮಾರ್ಚ್‍ನಲ್ಲಿ ಹೂ ಬಿಟ್ಟು ಎಪ್ರಿಲ್ ಮೇ ಒಳಗೆ ಇಳುವರಿ ಕೊಡುತ್ತದೆ. ನೀರಾವರಿ ಕೊಟ್ಟರೆ ಇಳುವರಿ ಸುಧಾರಣೆಯಾಗುತ್ತದೆ.
ಪ್ರಿಯಾಂಕ :
- ಇದು ಮಡಕ್ಕತಾರ ಕೇಂದ್ರದಿಂದ ಅಭಿವೃದ್ಧಿಪಡಿಸಿದ ಸಂಕರಣ ತಳಿ.
- ಬಹಳ ಬೇಗನೆ, ಡಿಸೆಂಬರ್-ಜನವರಿಯಲ್ಲಿ ಹೂ ಬಿಡುವ ತಳೀಯಾಗಿದ್ದು ಸಾಮಾನ್ಯವಾಗಿ ಮಾರ್ಚ್-ಎಪ್ರಿಲ್ ತಿಂಗಳಲ್ಲಿ ಫಸಲು ಕೊಯ್ಲಿಗೆ ಬರುತ್ತದೆ.
- ಬೀಜದ ಗಾತ್ರವು 10 ಗ್ರಾಂ. ಶಿಫಾರಸ್ಸು ಮಾಡಲ್ಪಟ್ಟ ತಳಿಗಳಲ್ಲಿ ಅತಿ ದೊಡ್ಡ ಹಣ್ಣು ಹಾಗೂ ಬೀಜದ ಗಾತ್ರವನ್ನು ಹೊಂದಿರುತ್ತದೆ.
- ಇದು ಕೂಡಾ ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಫಸಲನ್ನು ನೀಡುತ್ತದೆ.
ಯುಎನ್-50 :
- ಉಳ್ಳಾಲ ಸಂಶೋಧನಾ ಕೇಂದ್ರದಿಂದ ಬಿಡುಗಡೆಯದ ತಳಿ. ರಫ್ತು ಯೋಗ್ಯ ಮಧ್ಯಮಾವಧಿ ತಳಿ.
- ಒಂದು ಮರಕ್ಕೆ ಸರಾಸರಿ 10.5 ಕೆ.ಜಿ. ಇಳುವರಿ ಕೊಡುತ್ತದೆ. ಬೀಜದ ತೂಕ 9 ಗ್ರಾಂ. ಕರಾವಳಿ ಪ್ರದೇಶಕ್ಕೆ ಸೂಕ್ತ.
H -130:
- ಇದು ಹೈಬ್ರೀಡ್ ತಳಿಯಾಗಿದ್ದು ಇತ್ತೀಚೆಗೆ ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರಿನಿಂದ ಬಿಡುಗಡೆಯಾದ ಉತ್ತಮ ತಳಿ.
- ಗೊಂಚಲು ಗೊಂಚಲಾಗಿ ಕಾಯಿ ಬಿಡುತ್ತದೆ. ಪ್ರೂನಿಂಗ್ ಗೂ ಹೊಂದಿಕೊಳ್ಳುತ್ತದೆ. ಸ್ವಲ್ಪ ಕುಬ್ಜವಾಗಿ ವಿಶಾಲವಾಗಿ ಬೆಳೆಯುವ ಗುಣ ಇದೆಯಂತೆ.