ಕಿಸಾನ್ ಕ್ರೆಡಿಟ್ ಕಾರ್ಡ್ ಸರಕಾರದ ಕೊಡುಗೆಯೇ ?

by | May 21, 2020 | Current Affairs (ಪ್ರಚಲಿತ ವಿಧ್ಯಮಾನಗಳು) | 0 comments

ಕೇಂದ್ರ ಸರಕಾರ  ಮೇ. 14-2020 , ರಂದು ವಿಶೇಷ ಪ್ಯಾಕೇಜ್  ಅಡಿಯಲ್ಲಿ 2.5 ಕೋಟಿ ಹೊಸ ಕೃಷಿಕರಿಗೆ  ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸುವ ಯೋಜನೆ ಹಾಕಿಕೊಂಡಿದೆ. ಬಹಳಷ್ಟು ಜನ ಈ ಕಿಸಾನ್ ಕ್ರೆಡಿಟ್ ಕಾರ್ಡ್ ಅಂದರೆ ಸರಕಾರ  ಸರಕಾರ  ಕೊಡುವ ಸವಲತ್ತು ಎಂದು ಭಾವಿಸಿದೆ. ಇದು ಹಾಗಲ್ಲ.

  • ರೈತರು ಬ್ಯಾಂಕ್ ವ್ಯವಹಾರ ಮಾಡುವಾಗ ಹಣ  ತೆಗೆಯಲು ಆನುಕೂಲವಾಗುವಂತೆ ಕೊಡುವ ಕ್ರೆಡಿಟ್  ಕಾರ್ಡ್ ಇದು.
  • ಇದರಲ್ಲಿ ನಿಮ್ಮ ಖಾತೆಯಲ್ಲಿ ಜಮಾ ಇದ್ದರೆ ಅದು ಮುಗಿಯುವ  ತನಕ  ಹಣ ತೆಗೆಯಬಹುದು.

ಏನಿದು  ಕಿಸಾನ್ ಕ್ರೆಡಿಟ್ ಕಾರ್ಡ್:

  • ರೈತರು  ತಮ್ಮ ಕೃಷಿ ಕೆಲಸಕ್ಕೆ  ಬೇಕಾಗುವ ಬಂಡವಾಳಕ್ಕೆ  ಬ್ಯಾಂಕುಗಳು ಮತ್ತು ಸಹಕಾರೀ ಸಂಘಗಳನ್ನು ಅವಲಂಭಿಸಬಹುದು.
  • ಅವರ ಭೂಮಿಯ ಬೆಳೆಗಳ ವಾರ್ಷಿಕ ಉತ್ಪತ್ತಿಯ ಮೇಲೆ ಅವರಿಗೆ  ಬೆಳೆಸಾಲ ಮಂಜೂರು ಮಾಡಲಾಗುತ್ತದೆ.
  • ಅದಕ್ಕೆ ಅವರ ಆಸ್ತಿಯ ದಾಖಲೆ ಆದಾರ.  1 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಸಾಲಕ್ಕೆ ನೋಂದಣಿ ಇಲಾಖೆಯ ಮೂಲಕ ಪಹಣಿಯಲ್ಲಿ ಅಡಮಾನ ನಮೂದಿಸಿಯೇ ಸಾಲ ಮಂಜೂರು ಮಾಡಲಾಗುತ್ತದೆ.
  • 1 ಲಕ್ಷಕ್ಕಿಂತ ಕಡಿಮೆ ಸಾಲಕ್ಕೆ ಸರಳ ಅಡಮಾನ ಎಂಬ ವ್ಯವಸ್ಥೆ ಇದ್ದು, ಆ ಮೂಲಕ ಬ್ಯಾಂಕ್ ನಲ್ಲೇ ಸ್ಟಾಂಪ್ ಪೇಪರ್ ಮೂಲಕ ಆಡಮಾನ ನೋಂದಣಿ ಮಾಡಿಕೊಳ್ಳಲಾಗುತ್ತದೆ.
  •   ಹೀಗೆ ಬ್ಯಾಂಕಿನಲ್ಲಿ ಸಾಲ ಮಾಡುವಾಗ ಎಷ್ಟು ಸಾಲ ಮಾಡಿರುತ್ತಿರೋ ಅದಕ್ಕೆ ಒಂದು ಸಾಲದ ಖಾತೆ ತೆರೆಯಲ್ಪಡುತ್ತದೆ.
  • ಅದರಲ್ಲಿ ನೀವು ಬೆಳೆ ಸಾಲವಾಗಿ ಪಡೆದ ಮೊತ್ತವೆಲ್ಲಾ ( ಕೆಲವು ಖರ್ಚು ಕಳೆದು) ಜಮಾ ಆಗಿರುತ್ತದೆ.
  • ಅದನ್ನು ನೀವು ಒಂದೇ ಬಾರಿ ನಗದೀಕರಣ ಮಾಡಬೇಕಾಗಿಲ್ಲ.  ಬೇಕಾದಾಗ ಬೇಕಾದಷ್ಟೇ  ಹಣವನ್ನು  ಬ್ಯಾಂಕಿಗೆ ಹೋಗದೆ, ಯಾವುದೇ ATM  ಕೌಂಟರ್ ಗಳಲ್ಲಿ  ಪಡೆಯಲು ಅನುಕೂಲ.
  • ಇದನ್ನು ರುಪೇ ಕಾರ್ಡ್ ( RuPay ಒಂದು ಕ್ರೆಡಿಟ್  ಕಾರ್ಡ್ ತಯಾರಿಕಾ ಸಂಸ್ಥೆಯಿಂದ  ತಯಾರಾದದ್ದು) ಎನ್ನುತ್ತಾರೆ.
  • ನೀವು ATM ಕೌಂಟರ್ ನಲ್ಲಿ ಹಾಕಿ ಅಲ್ಲಿ ಡೆಬಿಟ್ ಕಾರ್ಡ್ ಬದಲಿಗೆ  ಕ್ರೆಡಿಟ್ ಕಾಡ್ ಎಂದು ಟಚ್ ಮಾಡಿದರೆ ಅದು ವ್ಯವಹಾರವನ್ನು ಮುಂದುವರಿಸುತ್ತದೆ.
  • ಸಾಮಾನ್ಯವಾಗಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಕೊಡಮಾಡಲ್ಪಟ್ಟ  ಕಾರ್ಡುಗಳು ಎಲ್ಲಾ ATM  ಕೌಂಟರ್ ನಲ್ಲಿ ಬಳಸಬಹುದಾಗಿದೆ.
  • ದೇಶದ ಎಲ್ಲಾ ಭಾಗಗಳಲ್ಲೂ ಬಳಸಬಹುದು.
  • ಪ್ರಾಥಮಿಕ ಕೃಷಿ  ಪತ್ತಿನ ಸಹಕಾರಿ ಸಂಘಗಳಿಂದ  ಮತ್ತು ಜಿಲ್ಲಾ ಕೇಂದ್ರ ಸಹಕಾರೀ ಬ್ಯಾಂಕುಗಳಿಂದ ಕೊಡಮಾಡಲ್ಪಟ್ಟ ಕಾರ್ಡುಗಳು  ಆ ಬ್ಯಾಂಕುಗಳ ATM ಗಳಲ್ಲಿ ಮಾತ್ರ ನಗದೀಕರಣ ಮಾಡುವಂತಿರುತ್ತದೆ,
  • ಅದನ್ನು ಕೆಲವರು ಬೇರೆ ATM ನಲ್ಲೂ ನಗದೀಕರಣ ಮಾಡುವಂತೆ  ಮಾಡಿರುತ್ತಾರೆ.

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬೇರೆಯೇ:

  • ಸಾಮಾನ್ಯವಾಗಿ ATM  ಕಾರ್ಡ್ ಎಂದರೆ ಅದು ನಿಮ್ಮ ಜಮಾ ಖಾತೆಯ ಹಣವನ್ನು ನಗದೀಕರಣಕ್ಕೆ ಇರುವಂತದ್ದು.
  • ಇದನ್ನು ಡೆಬಿಟ್ ಕಾರ್ಡ್ ಎನ್ನುತ್ತಾರೆ. ಇದು ಸಾಲದ ಹಣವನ್ನು ನಗದೀಕರಿಸಲಿಕ್ಕಾಗಿ ಇರುವುದು.
  • ಅದಕ್ಕಾಗಿ ಕ್ರೆಡಿಟ್ ಕಾರ್ಡ್ ಎಂದು ಹೆಸರು. ಒಂದು ವೇಳೆ ನೀವು ಪಡೆದ ಎಲ್ಲಾ ಸಾಲದ ಹಣವನ್ನು ತೆಗೆದು ನಿಮ್ಮ ಉಳಿತಾಯ ಖಾತೆಗೆ ಹಾಕಿದರೆ ಅದರ ATM  ಕಾರ್ಡ್ ನಲ್ಲೇ ಹಣವನ್ನು ತೆಗೆಯಬಹುದು.
  • ಸಾಲದ ಖಾತೆಯಿಂದ  ಹಣ  ತೆಗೆಯುವುದಾದರೆ ಅದು ಕ್ರೆಡಿಟ್ ಕಾರ್ಡ್ ಆಗುತ್ತದೆ.
  • ಉಳಿತಾಯ ಖಾತೆಯ ಹಣದಿಂದ ತೆಗೆಯುವುದಾದರೆ ಅದು ಡೆಬಿಟ್ ಕಾರ್ಡ್ ಆಗುತ್ತದೆ.

ಇದು ಉಚಿತವಲ್ಲ:

  •  ಕಿಸಾನ್ ಕ್ರೆಡಿಟ್ ಕಾರ್ಡ್ ಕೊಡುವುದರ ಬಾಬ್ತು  ಬ್ಯಾಂಕುಗಳು ಅಥವಾ ಸಹಕಾರೀ ಸಂಘಗಳು ನಿಗದಿತ ಶುಲ್ಕವನ್ನು ನಿಮ್ಮ ಖಾತೆಯಿಂದ ಜಮಾ ತೆಗೆದುಕೊಳ್ಳುತ್ತವೆ.
  • ಆದ ಕಾರಣ ಅದು ಉಚಿತ ಎಂದು ತಿಳಿಯಬೇಡಿ.
  • ಇದಕ್ಕೆ  ನಿಮ್ಮ  ಸಾಲದ ಖಾತೆ ಮರು ನವೀಕರಣ ಆಗುವ ತನಕ ವಾಯಿದೆ ಇರುತ್ತದೆ.
  • ಒಂದು ವೇಳೆ ಮೂರು ವರ್ಷ ಕಳೆದು ನವೀಕರಣ ಆಗುವಾಗ ಖಾತೆ ನಂಬ್ರ ಬದಲಾವಣೆ ಆದರೆ  ಕಾರ್ಡ್ ಸಹ ಬದಲಾವಣೆ ಆಗಬೇಕಾಗುತ್ತದೆ.

ಲಾಭ ಏನು:

  • ಕಿಸಾನ್ ಕ್ರೆಡಿಟ್ ಕಾರ್ಡ್ ಬರೇ ಸಾಲದ ಹಣ ಅಥವಾ ಸಾಲದ ಖಾತೆಗೇ ನೀವು ಹೆಚ್ಚುವರಿ ಹಣವನ್ನು ಜಮಾ ಮಾಡಿದರೆ, ಅದನ್ನು ಬೇಕಾದಾಗ ನಗದೀಕರಣ  ಮಾಡುವುಕ್ಕೂ ಆಗುತ್ತದೆ.
  • ಬೇರೆ ಊರಿಗೆ ಹೋದಾಗಲೂ ನಗದೀಕರಣ ಮಾಡುವುದಕ್ಕೆ ಬಳಸಬಹುದು.
  • ಯಾವುದಾದರೂ ಉತ್ಪನ್ನವನ್ನು ನಗದು ರಹಿತವಾಗಿ ಕಾರ್ಡ್ ಗೀರಿ ಪಡೆಯುವುದಕ್ಕೆ ಸಹ ಪ್ರಯೋಜನಕಾರಿ.
  • ನೀವು ಕೃಷಿಕ ಎಂಬುದಕ್ಕೆ  ಯಾವುದೇ ಅಧಿಕೃತ ದಾಖಲೆಯ ಗುರುತು ಇದಲ್ಲ. ಸಾಲಗಾರ ಎಂಬುದಕ್ಕೆ ಐಡೆಂಟಿಟಿ ಅಷ್ಟೇ.

ಕಿಸಾನ್ ಕ್ರೆಡಿಟ್ ಕಾರ್ಡ್ ಇದ್ದರೆ ಸರಕಾರದ ಸೌಲಭ್ಯಗಳು ದೊರೆಯುತ್ತವೆ. ಇದು ಒಂದು ಸರಕಾರದ ಕೊಡುಗೆ ಎಂದು ಭಾವಿಸಬೇಡಿ. ಇದು ಹಣದ ವ್ಯವಹಾರಕ್ಕೆ ಇರುವ ಸರಳ ವ್ಯವಸ್ಥೆ. ಅಷ್ಟೇ. ಇದನ್ನು ಪಡೆಯಬೇಕಾಗಿಲ್ಲ. ಸಾಲ ಮಾಡಿದವರು ನಿರಾಕರಿಸದಿದ್ದರೆ ಎಲ್ಲಾ ಬ್ಯಾಂಕುಗಳೂ ಇದನ್ನು ಕೊಟ್ಟು ಅದರ ಶುಲ್ಕವನ್ನು ನಿಮ್ಮಿಂದ ಪಡೆಯುತ್ತವೆ.

 
 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!