ಗುಲಾಬಿ ಬೆಳೆ – ನಿತ್ಯ ಆದಾಯ ಕೊಡಬಲ್ಲ ಬೆಳೆ.

ಕೆಂಪು ಬಣ್ಣದ ಗುಲಾಬಿ ತಳಿ

ಸಾಮಾನ್ಯವಾಗಿ ಹೂವುಗಳನ್ನು ಇಷ್ಟಪಡದ ವ್ಯಕ್ತಿಗಳೇ ಇಲ್ಲಾ ಅನ್ನಬಹುದು. ಮನುಷ್ಯರ ಮನಸ್ಸನ್ನು ಹೂವಿಗೆ ಹೋಲಿಸಲಾಗುತ್ತದೆ ಅದರಲ್ಲೂ ಗುಲಾಬಿ ಹೂವಿಗೆ ಕೊಡುವಷ್ಷು ಮಹತ್ವ ಬೇರೊಂದಕ್ಕಿಲ್ಲ. ಅದೆಷ್ಟೇ  ಹೂವುಗಳು ಒಂದೇ ಕಡೆಗೆ ಬೆಳೆದಿದ್ದರೂ ನಮ್ಮನ್ನು ಆಕರ್ಷಿಸುವುದು ಗುಲಾಬಿಯೇ. ಗುಲಾಬಿಯಲ್ಲಿ ಹಲವಾರು ಬಣ್ಣದ ಹೂವುಗಳಿವೆ ಕೆಂಪು, ಹಳದಿ, ಕೇಸರಿ, ಬಿಳಿ ಹೀಗೆ ಹಲವಾರು ಬಣ್ಣಗಳಿಂದ ಈ ಹೂವು ಕಣ್ಮನ ಸೆಳೆಯುತ್ತದೆ.

 •  ಗುಲಾಬಿ ಹೂ ಪೂಜೆ ಮತ್ತು ಅಲಂಕಾರಕ್ಕೆ ಅಷ್ಷೇ ಅಲ್ಲ ,ಈ ಹೂವನ್ನು ಪ್ರೀತಿಯ ಸಂಕೇತ ಎಂದು ಹೇಳುತ್ತಾರೆ.
 • ಹಾಗಾಗಿ ಪ್ರೇಮಿಗಳ ದಿನದಂದು ಹೆಚ್ಚಿನ ಬೇಡಿಕೆ ಇರುತ್ತದೆ. ಇದರ ಮಹತ್ವ ಅರಿತ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಹೊಸಗೊದ್ದನಕೊಪ್ಪ ಗ್ರಾಮದ ರೈತರಾದ ಯೋಗೇಶಪ್ಪ.ಬಿನ್.ಚನ್ನಬಸಪ್ಪ ಅವರು 28 ಗುಂಟೆ ಜಮೀನಿನಲ್ಲಿ ಬೆಳೆದು ಅತ್ಯುತ್ತಮ ಲಾಭ ಗಳಿಸಿದ್ದಾರೆ.
 • ಮೂಲತಃ ಹೊಸಗೊದ್ದನಕೊಪ್ಪ ಗ್ರಾಮದ ರೈತರಾದ ಯೋಗೇಶಪ್ಪ.ಬಿನ್.ಚನ್ನಬಸಪ್ಪ ಅವರು ಹಿರಿಯರ ಕಾಲದಿಂದಲೂ ಕೃಷಿಯನ್ನೆ ಮೂಲ ಕಸಬು ಎಂದು ಕೃಷಿ ಮಾಡುತ್ತಾ ಬಂದಿರುತ್ತಾರೆ.
 • ಹೀಗೆ ಒಂದು ದಿನ ಕೃಷಿ ಇಲಾಖೆಗೆ ಭೇಟಿ ನೀಡಿದಾಗ, ಇಲಾಖೆಯ ಸಿಬ್ಬಂದಿಯವರ ಸಲಹೆ ಮೇರೆಗೆ ಗುಲಾಬಿ ಕೃಷಿ ಮಾಡಲು ಮುಂದಾದರು.
 • 2019-20 ನೇ ಸಾಲಿನ ಆತ್ಮ ಯೋಜನೆಯಡಿಯಲ್ಲಿ ಸಹಾಯ ಪಡೆದು ಗುಲಾಬಿ ಕೃಷಿಯ ಪ್ರಾತ್ಯಕ್ಷಕೆಯನ್ನು ಕೈಗೊಂಡಿರುತ್ತಾರೆ.
 • ಇದರಿಂದ ಯೋಗೇಶಪ್ಪ ಅವರು ಸುತ್ತ-ಮುತ್ತ ರೈತರಿಂದ ಮೆಚ್ಚುಗೆ ಪಡೆದು ಹಲಾವಾರು ರೈತರಿಗೆ ಮಾದರಿಯಾಗಿದ್ದಾರೆ.

ಗುಲಾಬಿ ಬೆಳೆ

ಅನುಸರಿಸಿದ ಕ್ರಮಗಳು:

 • ಮೊದಲು ಮಣ್ಣನ್ನು ಚೆನ್ನಾಗಿ ಹದಗೊಳಿಸಿ, ಕೊಟ್ಟಿಗೆ ಗೊಬ್ಬರವನ್ನು ಸೇರಿಸಿ ಏರುಮಡಿಗಳನ್ನು ಮಾಡಿ , ಪ್ಲಾಷ್ಟಿಕ್ ಮಲ್ಚನ್ನು ಹಾಕಿ 5 ಅಡಿ ಸಾಲುಗಳ ಅಂತರ, 4.5 ಅಡಿ ಗಿಡಗಳ ಅಂತರ ಗುಲಾಬಿ ಗಿಢಗಳನ್ನು ನಾಟಿ ಮಾಡಿರುತ್ತಾರೆ.
 • ಮೆರಾಬುಲ್ ಎಂಬ ಗುಲಾಬಿ ತಳಿಯನ್ನು ಆಯ್ಕೆ ಮಾಡಿರುತ್ತಾರೆ. ಈ ತಳಿಯು ಉತ್ತಮ ಇಳುವರಿ ಹಾಗೂ ಈ ತಳಿಯನ್ನು ಪನ್ನೀರ್ ಮತ್ತು ಸುಗಂಧ ದ್ರವ್ಯ ಗಳಿಗೆ ಬಳುಸುವುದರಿಂದ ಮಾರುಕಟ್ಟೆ ಹೆಚ್ಚಿನ ಬೇಡಿಕೆ ಇದೆ.
 • ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೆಳೆದಿರುತ್ತಾರೆ.
 • ಅತ್ಯತ್ತಮವಾಗಿ ನೀರಿನ ನಿರ್ವಹಣೆಯನ್ನು ಹನಿ ನೀರಾವರಿ ಪದ್ಧತಿ ಅಳವಡಿಸಿ ಮಾಡಿರುತ್ತಾರೆ.
 • ಜಮೀನನ್ನು ಸಂಪೂರ್ಣ ಕಳೆ ಮುಕ್ತವಾಗಿಟ್ಟಿರುತ್ತಾರೆ.
 • ವಾರಕ್ಕೆ ಒಂದು ಬಾರಿ ಗಿಡಗಳಿಗೆ ಸಾವಯವ ಔಷಧಿ ಸಿಂಪಡಣೆ. 

ಇಳುವರಿ:

ಪಿಂಕ್ ಬಣ್ಣದ ಗುಲಾಬಿ ತಳಿ

 • ನಾಟಿ ಮಾಡಿ 1.5-2 ತಿಂಗಳ ನಂತರ ಹೂ ಬಿಡಲು ಪ್ರಾರಂಭಿಸುತ್ತದೆ. ತದನಂತರ 5 ವರ್ಷಗಳವರೆಗೆ ಹೂವನ್ನು ಕಟಾವು ಮಾಡಬಹುದು.
 • ಕನಿಷ್ಟ ದಿನಕ್ಕೆ 20 ಕೆ.ಜಿ ಹೂವಿನ ಇಳುವರಿ ಪಡೆಯುತ್ತಿದ್ದಾರೆ. ಅದರಲ್ಲೂ ಮದುವೆ ಸಮಾರಂಭ ದೊಡ್ಡ ದೊಡ್ಡ ಹಬ್ಬಗಳಾದ ದೀಪಾವಳಿ.
 • ಯುಗಾದಿ  ಹಾಗೂ ಪ್ರೇಮಿಗಳ ದಿನಾಚರಣೆಯ ಸಮಯದಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಹೆಚ್ಚಿನ ಲಾಭ ಬರುತ್ತದೆ.

ಆದಾಯ:

 • ಸಾಮಾನ್ಯ ದಿನಗಳಲ್ಲಿ ಕೆ.ಜಿ ಗೆ ರೂ. 80-100.
 • ಹಬ್ಬ, ಸಮಾರಂಭಗಳ ಸಮಯದಲ್ಲಿ ಕೆ.ಜಿ ಗೆ ರೂ. 200-300
 • ಒಟ್ಟಾರೆಯಾಗಿ ಹೇಳುವುದಾದರೆ ಗುಲಾಬಿ ಕೃಷಿಯು ಲಾಭದಾಯಕವಾಗಿದೆ.

 ಲೇಖಕರು: ಲತಾ ಎಸ್. ತಾಲೂಕ ತಾಂತ್ರಿಕ ವ್ಯವಸ್ಥಾಕರು (ಆತ್ಮ ಯೋಜನೆ) ಶಿಕಾರಿಪುರ, ವೀಣಾ ಭೂಶೆಟ್ಟಿ, ಪಿಎಚ್ ಡಿ ಸಂಶೋಧನಾ ವಿಧ್ಯಾರ್ಥಿ, ಕೃ.ವಿ,ಶಾ.ವಿಭಾಗ, ಕೃವಿವಿ ಬೆಂಗಳೂರು  ಮತ್ತು   ಮಾನಸ ಎಲ್.ಪಿ. ತಾಂತ್ರಿಕ ಸಹಾಯಕರು ( ನರೇಗಾ ಯೋಜನೆ) ಶಿಕಾರಿಪುರ
end of the article: ……………………………………………………………………………
search words: Rose cultivation# Rose at Shikaripura# Agriculture department Shikaripura# Atma scheme # Red rose# Poly mulch  rose#

Leave a Reply

Your email address will not be published. Required fields are marked *

error: Content is protected !!