ಡ್ರೋನುಗಳ ಹಾರಾಟಕ್ಕೆ ಅನುಮತಿಯೇ ಇಲ್ಲ – ಗೊತ್ತೇ?

ಬಹಳ ಜನ ಅದರಲ್ಲೂ ಕೃಷಿಗೆ ಪ್ರವೇಶಿಸುವ ಹೊಸ ತಲೆಮಾರು  ಅಡಿಕೆ ಮುಂತಾದ ಬೆಳೆಗಳಿಗೆ ಸಿಂಪರಣೆ ಎಂಬ ಪರಿಶ್ರಮದ ಕೆಲಸಕ್ಕೆ ಆತೀ ಆಧುನಿಕ ವ್ಯವಸ್ಥೆಯಾದ ಡ್ರೋನುಗಳನ್ನು ಬಳಸುವ ಬಗ್ಗೆ ಮಾತಾಡುತ್ತಾರೆ.  ಕೆಲವರು ಅದನ್ನು ತಯಾರಿಸಿ ಶ್ಲಾಘ್ಹನೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಡ್ರೋನು ಬಳಸಿ ಸಿಂಪರಣೆ ಮಾಡುವಂತಿಲ್ಲ. ಡ್ರೋನು ಹಾರಾಟಕ್ಕೆ ಅನುಮತಿಯೂ ಬೇಕು. The Union Government has clarified that drone-spraying is illegal. “As per the provisions of Insecticides Act 1968, aerial application of pesticides need approval/ permission from the Central Insecticides Board (CIB).
Drone demonstration for pesticide spraying

  • ಸುಮಾರು 38 ವರ್ಷಕ್ಕೆ ಹಿಂದೆ ಕರ್ನಾಟಕ ಮತ್ತು ಕೇರಳದ ಗೇರು ತೋಟಗಳಿಗೆ  ಕೀಟನಾಶಕ ಸಿಂಪರಣೆ ಮಾಡಲು ಹೆಲಿಕಾಪ್ಟರ್ ಬಳಸಿತ್ತು.
  • ಬೆಳೆ ಇರುವಲ್ಲಿ, ಇಲ್ಲದಲ್ಲಿ ಎಲ್ಲಾ ಕಡೆ ಸಿಂಪರಣೆ ನಡೆದ ಕಾರಣ ನಂತರದ ವರ್ಷಗಳಲ್ಲಿ ಏನಾಯಿತು ಎಂಬುದು ಎಲರಿಗೂ ಗೊತ್ತಿದೆ.
  • ಹೀಗಿರುವಾಗ  ನೆಲಮಟ್ಟದ ಮೇಲಿಂದ (Ariel spray) ಕೀಟನಾಶಕ . ಶಿಲೀಂದ್ರ  ನಾಶಕ, ಸಾವಯವ ಕೀಟನಾಶಕ ಯಾವುದನ್ನೇ  ಸಿಂಪಡಿಸಿದರೆ ಮುಂದೆ ಏನು ಆವಾಂತರ ಆಗುವುದೋ ಏನೋ ಎಂಬುದು ಕೆಲವು ವರ್ಷಗಳ ನಂತರ ಗೊತ್ತಾದೀತು.

ಪ್ರಚಲಿತ ವಿಧ್ಯಮಾನಗಳು:

  • ಕೊರೋನಾ ಸೋಂಕು  ಹಬ್ಬುವುದನ್ನು ತಡೆಯಲು ಮುನಿಸಿಪಲ್ ಕಾರ್ಪೊರೇಶನ್, ಪುರಸಭೆ,  ಮಹಾನಗರ ಪಾಲಿಕೆಗಳು, ಪಂಚಾಯತುಗಳು ಬೀದಿ ಬೀದಿಗಳಿಗೆ ಸೋಂಕು ನಿವಾರಕಗಳ ಮಿಶ್ರಣಗಳನ್ನು ಸಿಂಡಿಸುತ್ತಿವೆ.
  • ಸಿಂಪರಣೆಗೆ ಜನರ ಸಿಗದ ಕಾರಣ ಅದಕ್ಕೂ ಡೋನುಗಳ ಬಳಕೆ ಮಾಡುವ ಯೋಚನೆ ಕೇಳಿ ಬರುತ್ತಿವೆ.
  • ಮುಂದಿನ ದಿನಗಳಲ್ಲಿ ನಮ್ಮ ಹಳ್ಳಿಗಳಲ್ಲೂ ಇಂತಹ ಡ್ರೋನ್ ಹಾರಾಟ ನಡೆಯಬಹುದು.
  • ಇದಕ್ಕೆ ವಿಶೇಷ ಪರವಾನಿಗೆ ಪಡೆಯಬಹುದು. ಆದರೆ ಸಾರ್ವಜನಿಜರು ಇಲ್ಲಿ ಬಳಕೆ ಮಾಡುವ ಸೋಂಕು ನಿವಾರಕ ಔಷಧಿ ಯಾವುದು ಎಂಬುದನ್ನು ಪರಿಶೀಲಿಸುವುದು ಉತ್ತಮ.
  • ಯಾರದ್ದೋ ಕಾಂಟ್ರಾಕ್ಟ್, ಯಾರದ್ದೋ ಡ್ರೋನು, ಇಲ್ಲಿ ಹಣ ಮಾಡುವ ಆತುರ, ಇವುಗಳ ಎಡೆಯಲ್ಲಿ ಜನ ಸಾಮಾನ್ಯರ ಆರೋಗ್ಯ ವಿಷಯ ಅವರವರ ಜವಾಬ್ಧಾರಿಯಾಗಿರುತ್ತದೆ.
  • ಈ ಕಾರಣದಿಂದ ಯಾರೇ ಸಿಂಪರಣೆಗೆ ಬರಲಿ, ಬಳಸುವ ಸೋಂಕು ನಿವಾರಕದಲ್ಲಿ ಯಾವ (Chemical composition ) ರಾಸಾಯನಿಕ ಒಳಗೊಂಡಿದೆ ಎಂಬುದನ್ನು ನಾವು ತಿಳಿಯುವುದು ಕ್ಷೇಮ.
  • ಯಾವ ಅಂಶ ಇದೆ ,ಅದರ ಅಡ್ಡ ಪರಿಣಾಮಗಳೇನು ಎಂಬುದನ್ನು  ಅಂತರ್ಜಾಲದಲ್ಲಿ ಹುಡುಕಿದರೆ ಎಂತವರಿಗೂ  ಸತ್ಯ ಸಂಗತಿ ತಿಳುವಳಿಕೆಗೆ ಬರುತ್ತದೆ.

ಅಡಿಕೆ ಮರಗಳು ಮತ್ತು ಡ್ರೋನು:

  • ಕೆಲವರಿಗೆ ಏನೇನೋ ಸಂಶೋಧನೆ ಮಾಡಬೇಕೆಂಬ ಅಸಕ್ತಿ. ಅದಕ್ಕೆ ಸರಿಯಾಗಿ ಇಂಜಿನಿಯರಿಂಗ್ ಕಲಿತ ವಿಧ್ಯಾರ್ಥಿಗಳ ತವಕ.
  • ಇದೆಲ್ಲಾ ಕೆಲಸವಿಲ್ಲದವರು ಮನಬಂದ ಕೆಲಸ ಮಾಡಿದಂತೆ ಈ ಡ್ರೋನುಗಳ ತಯಾರಿಕೆ ಮತ್ತು ಅದರ ಪ್ರಚಾರ.
  • ಅಡಿಕೆ ತೋಟದಲ್ಲಿ ಶಿಲೀಂದ್ರ ನಾಶಕ ಸಿಂಪರಣೆ ಎಂಬುದು ಬಹಳ ಕಷ್ಟದ ಕೆಲಸ ಎಂಬ ರೈತರ ಅಳಲಿಗೆ ಇವರ ಸ್ಪಂದನೆ ನಿಜವಾಗಿಯೂ ಮೆಚ್ಚುವಂತದ್ದು.
  • ಆದರೆ ಈ ಯುವ ಉತ್ಸಾಹಿಗಳಿಗೆ ಅಡಿಕೆ ತೋಟ ಮತ್ತು ಅದರ ವಾಸ್ತವಿಕ ಚಿತ್ರಣ ಗೊತ್ತಿದ್ದಂತಿಲ್ಲ.
  • ಅಡಿಕೆ ತೋಟಗಳಲ್ಲಿ ಡ್ರೋನುಗಳನ್ನು ಬಳಕೆ ಮಾಡುವುದು ಅಸಾಧ್ಯವಾದ ಕೆಲಸ.
  • ಸಾಧ್ಯವಾದರೂ ಡ್ರೋನನ್ನು ಸಾಕುವಷ್ಟು ನಮ್ಮ ರೈತರು ಅನುಕೂಲಸ್ಥರಲ್ಲ.
  • ಇಲ್ಲಿರುವ ಅಡಿಕೆ ಮರಗಳ ಬೆಳೆವಣಿಗೆ ಕ್ರಮ ಡ್ರೋನುಗಳ ಹಾರಾಟಕ್ಕೆ ಸೂಕ್ತವಾಗಿಲ್ಲ.
  • ಡ್ರೋನುಗಳ ಬಳಕೆಗೆ ಹೊಂದಾಣಿಕೆಯಾಗುವ ರೀತಿಯ ತೋಟಗಳೂ ಇಲ್ಲ.
  • ಒಂದು ವೇಳೆ ಅಡಿಕೆ ಮರಗಳಿಗೆ ಡ್ರೋನುಗಳನ್ನು ಬಳಕೆ ಮಾಡಿದ್ದೇ ಆದರೆ ಅದರಲ್ಲಿ ಕೀಟನಾಶಕ ಮತ್ತು ಶಿಲೀಂದ್ರ ನಾಶಕಗಳು ಅನಾವಶ್ಯಕವಾಗಿ   ಪರಿಸರಕ್ಕೆ ಸೇರಿ ಅಲ್ಲಿ ತೊಂದರೆಗಳು ಉಂಟಾಗಬಹುದು.
  • ಡ್ರೋನುಗಳ ಬಳಕೆಗೆ ಸರಕಾರದ ಅನುಮತಿಯೂ ಇಲ್ಲ. ಇದಲ್ಲದೆ ಇತರ ಉದ್ದೇಶಗಳಿಗೂ ಸಹ ಡ್ರೋನುಗಳನ್ನು ಕಾನೂನಿನ ಇತಿಮಿತಿಯಲ್ಲೇ ಬಳಕೆ ಮಾಡಬೇಕು ಎಂಬ ನಿಬಂಧನೆ ಇದೆ.
  • ಇದಕ್ಕೆ ಮುಂಚಿತ ಪರವಾನಿಗೆಯೂ ಬೇಕಾಗುತ್ತದೆ.
  • ಒಂದು ಡ್ರೋನು ಸಂಬಂಧಿಸಿದವನ ಹೊಲದಲ್ಲಿ ಸುಮಾರು 50 ಮೀಟರ್ ಎತ್ತರದ ತನಕ ಮಾತ್ರ ಹಾರಾಟ ಮಾಡಬಹುದು.
  • ಇನ್ನೊಬ್ಬನ ಹೊಲದಲ್ಲಿ ಹಾರಾಟ ಮಾಡಬಾರದು.
  • ಒಂದು ವೇಳೆ ಅದು ಬೇರೆಯವರ ಖಾಸಗಿ ಸ್ಥಳದಲ್ಲಿ ಹಾರಾಟ ಮಾಡಿ ಅವಘಡ ಸಂಭವಿಸಿದರೆ  ಅದು ಕಾನುನು ಪ್ರಕಾರ ಅಪರಾಧವೆನಿಸುತ್ತದೆ. ಹಾರಾಟ ನಡೆಸಲು ತರಬೇತಿಯೂ ಬೇಕು.

ಡ್ರೋನು  ಬದಲು ಇದನ್ನು ಮಾಡಿ:

  • ಕೃಷಿಕರನ್ನು ಕೀಟನಾಶಕ – ರೋಗ ನಾಶಕ ಬಳಕೆ ಎಂವ ವಿಷಯದಿಂದ ಮುಕ್ತರನ್ನಾಗಿಸುವ  ನಿಟ್ಟಿನಲ್ಲಿ ಈ ತಾಂತ್ರಿಕ ಶಿಕ್ಷಣ ಪಡೆದವರು ಪ್ರಯತ್ನ ಮಾಡಿದರೆ ಎಲ್ಲಾ ನಿಟ್ಟಿನಲ್ಲೂ ಒಳ್ಳೆಯದು.
  • ಕೃಷಿಕ ತನ್ನ ಇಡೀ ಶ್ರಮದ ಪ್ರತಿಫಲ ಪಡೆಯುವಲ್ಲಿ ಬಹುದೊಡ್ದ ಕಂಟಕ ಎಂದರೆ ರೋಗ ಕಾರಕಗಳು ಮತ್ತು ಕೀಟಗಳು.
  • ಇವುಗಳ ನಿಯಂತ್ರಣಕ್ಕಾಗಿ  ರೈತ ಮಾಡುವ ಖರ್ಚು ಅತ್ಯಧಿಕ.
  • ಇದರಿಂದಾಗಿ ಅವನ ಆರೋಗ್ಯಕ್ಕೂ ಹಾಳು. ಕೃಷಿಕ ಬೆಳೆದ ಉತ್ಪನ್ನವನ್ನು ತಿನ್ನುವವನಿಗೂ ಹಾಳು. ಇದರ ಬದಲಿಗೆ ಕೀಟಗಳನ್ನು ಇನ್ಯಾವುದೋ ವಿಧಾನದಲ್ಲಿ ನಿಯಂತ್ರಿಸುವ ತಂತ್ರಜ್ಞಾನವನ್ನು  ತಮ್ಮ ಜ್ಞಾನದ ಮೂಲಕ ಹುಡುಕುವುದು ಉತ್ತಮ.

ರೈತರಿಗೆ ಈ ಉಪಕಾರ ಮಾಡಬಹುದು:

ಅಡಿಕೆ ಬೆಳೆಗಾರರು ಈಗ ಸಿಂಪರಣೆ – ಕೊಯಿಲು ಮುಂತಾದ ಕೆಲಸಗಳನ್ನು ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ ನಿಜ. ಈ ತೊಂದರೆಗೆ ಪರಿಹಾರ  ಹೆಚ್ಚು ಎತ್ತರ ಬೆಳೆಯದ ಅಡಿಕೆ  ತಳಿಗಳನ್ನು ಕಂಡು ಹುಡುಕುವುದು. ಈ ನಿಟ್ಟಿನಲ್ಲಿ ತಜ್ಞತೆ ಹೊಂದಿದವರು ಪ್ರಯತ್ನ ಮಾಡುವುದು ಸೂಕ್ತ. ಎತ್ತರ ಕಡಿಮೆ ಇರುವ ಮರಗಳು, ರೋಗ,ಕೀಟ ನಿರೋಧಕ ಶಕ್ತಿ ಪಡೆದ ತಳಿಗಳು, ಮುಂತಾದವುಗಳನ್ನು ಪರಿಚಯಿಸಿದರೆ ರೈತರಿಗೂ ಉತ್ತಮ. ಗ್ರಾಹಕರಿಗೂ ಉತ್ತಮ.
end of the article:————————————————————-
search words: Crop protection # pesticide spray # fungicide spray # Drones for spraying # Drone spray# Ariel spray #
 
 
 
 
 
 
 

Leave a Reply

Your email address will not be published. Required fields are marked *

error: Content is protected !!