ತೆಂಗು – ಹೈಬ್ರೀಡ್ ತಳಿ ಮಾತ್ರ ಬೆಳೆಸಿ.

ಹೈಬ್ರೀಡ್ ತಳಿಗಳು ಎಂದರೆ ಎರಡು ಉತ್ತಮ ತಳಿಗಳ ಮಧ್ಯೆ ಕ್ರಾಸಿಂಗ್ ಮಾಡಿ ಪಡೆಯಲಾದ ಹೊಸ ತಳಿ.   ಹೈಬ್ರೀಡ್  ಎಂದರೆ ಖಾತ್ರಿಯಾಗಿ ಅಧಿಕ ಇಳುವರಿ ನೀಡಬಲ್ಲ ತಳಿಗಳು. ಹೈಬ್ರೀಡ್ ಬೆಳೆದರೆ ಬೇಗ ಇಳುವರಿ ಪ್ರಾರಂಭವಾಗಿ, ಕೊಯಿಲು ಸುಲಭವಾಗುತ್ತದೆ.

 •  ನಮ್ಮ ಸುತ್ತಮುತ್ತ ಇರುವ ಬಹುತೇಕ ತಳಿಗಳು ಎತ್ತರದ ತಳಿಗಳು.
 • ಇದರಲ್ಲಿ ಫಸಲು ಪ್ರಾರಂಭವಾಗಲು 5-7 ವರ್ಷ ಬೇಕು.
 • ಹಾಗೆಯೇ ನಮ್ಮಲ್ಲಿ ಕೆಲವು ಹತ್ತಿರದ ಗಂಟಿನ ಗಿಡ್ಡ ತಳಿಗಳಾದ ಗೆಂದಾಳಿ(COD, CYD) ಹಸಿರು (CGD Gangabondam) ತಳಿಗಳು ಇವೆ.
 • ಗಿಡ್ಡ ತಳಿಯ ಗುಣವನ್ನು ಎತ್ತರದ ತಳಿಯೊಂದಿಗೆ ಪರಾಗಸ್ಪರ್ಶದ ಮೂಲಕ  ಕ್ರಾಸಿಂಗ್ ಮಾಡಿದರೆ  ಅದು ಹೊಸ ಗುಣದ ತಳಿಯಾಗುತ್ತದೆ.
 • ಹೀಗೆ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯು ಈ ತಾಂತ್ರಿಕತೆಯನ್ನು  ಬಳಸಿ ಗಿಡ್ಡ ಮತ್ತು ಎತ್ತರ, ಎತ್ತರ ಮತ್ತು ಗಿಡ್ಡ  ತಳಿಗಳ ಕ್ರಾಸಿಂಗ್ ಮಾಡಿ ಬೇರೆ ಬೇರೆ ಹೈಬ್ರೀಡ್ ತಳಿಗಳನ್ನು  ಪರಿಚಯಿಸಿದೆ.
 • ಕ್ರಾಸಿಂಗ್ ಮಾಡುವಾಗ ಬೇರೆ ಬೇರೆ ಮೂಲದ ಗಂಡು ತಳಿ ಮತ್ತು ಹೆಣ್ಣು ತಳಿಯನ್ನು ಬಳಸಿದ ಕಾರಣ ಅದಕ್ಕೆ ಬೇರೆ ಬೇರೆ ಹೆಸರು ಕೊಡಲಾಗಿದೆ. ಅವುಗಳು.
ಚಂದ್ರ ಲಕ್ಷ

ಚಂದ್ರ ಸಂಕರ:

 • ಇದು ಗಿಡ್ದ ತಳಿ (ಚೌಘಾಟ್ ಆರೆಂಜ್  ದ್ವಾರ್ಫ್ ) ಮತ್ತು ಎತ್ತರದ ತಳಿ  ಪಶ್ಚಿಮ ಕರಾವಳಿ ಸ್ಥಳೀಯಗಳ ಮಧ್ಯೆ(DXT) ಸಂಕರಣ ಮಾಡಿ  ಪಡೆಯಲಾದ ತಳಿ.
 • ಇದು ಎಳನೀರಿನ ಉದ್ದೇಶಕ್ಕೆ ಮತ್ತು ಕೊಬ್ಬರಿ ಉದ್ದೇಶಕ್ಕೂ ಬಳಸಬಹುದಾದ ತಳಿಯಾಗಿದೆ.
 • ಮರವೊಂದರ ಸರಾಸರಿ 110 ಕಾಯಿಗಳ ಇಳುವರಿ ನೀಡಬಲ್ಲುದು.
 • ನೀರಿನ ಒತ್ತಾಯವನ್ನು ಸ್ವಲ್ಪ ಮಟ್ಟಿಗೆ ಸಹಿಸಿಕೊಳ್ಳುತ್ತದೆ.
 • ಹಳದಿ ಮಿಶ್ರ ಹಸುರು ಬಣ್ಣದ ತಳಿ.
 • ಕೇರಳ ಕರ್ನಾಟಕ ಮತ್ತು ತಮಿಳುನಾಡಿಗೆ ಹೊಂದಿಕೆಯಾಗುವಂತದ್ದು.
 • ಉತ್ತಮ ಕೊಬ್ಬರಿ ಇಳುವರಿಯನ್ನು (160-230 ಗ್ರಾಂ ಕಾಯಿಗೆ) ನೀಡಬಲ್ಲ ತಳಿ.
 • 4 ವರ್ಷಕ್ಕೆ ಇಳುವರಿಗೆ ಪ್ರಾರಂಭ.

ಕೇರ ಸಂಕರ:

 • ಇದು ಲಕ್ಷದ್ವೀಪ ಸ್ಥಳೀಯ ಎತ್ತರದ ತಳಿ ಮತ್ತು ಗಂಗಬೊಂಡ  ತಳಿಯ ಜೊತೆಗೆ ಸಂಕರಣ ಮಾಡಿ ಪಡೆಯಲಾದ ತಳಿ.
 • ಮರವೊಂದರ ಸರಾಸರಿ 106 ಕಾಯಿಗಳ ಇಳುವರಿ ನೀಡಬಲ್ಲುದು.
 • ಕೊಬ್ಬರಿ ಮತ್ತು ಎಣ್ಣೆ ಪ್ರಮಾಣ ಉತ್ತಮವಾಗಿಯೇ ಇದೆ. ಕೇರಳ, ಕರ್ನಾಟಕ, ಆಂದ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಸೂಕ್ತವಾದ ತಳಿ.
 • ಹಳದಿ ಮಿಶ್ರ ಹಸುರು ಬಣ್ಣದ ತಳಿ. 4 ವರ್ಷಕ್ಕೆ ಇಳುವರಿಗೆ ಪ್ರಾರಂಭ.

ಚಂದ್ರ ಲಕ್ಷ:


 

 • ಇದು ಲಕ್ಷ ದ್ವೀಪ ಎತ್ತರದ ತಳಿ ಮತ್ತು ಚೌಘಾಟ್ ಓರೆಂಜ್ ಡ್ವಾರ್ಪ್ ಜೊತೆಗೆ ಸಂಕರಣ ಮಾಡಿ ಪಡೆಯಲಾದ ತಳಿ.
 • ಮರವೊಂದರ ಸರಾಸರಿ 109 ಕಾಯಿಗಳ  ಇಳುವರಿ ನೀಡಬಲ್ಲುದು.
 • ಕೊಬ್ಬರಿ ಮತ್ತು ಎಣ್ಣೆ ಪ್ರಮಾಣ ಉತ್ತಮವಾಗಿಯೇ ಇದೆ.
 • ಕೇರಳ, ಕರ್ನಾಟಕ, ರಾಜ್ಯಗಳಿಗೆ ಸೂಕ್ತವಾದ ತಳಿ.
 • 4-5 ವರ್ಷಕ್ಕೆ ಇಳುವರಿಗೆ ಪ್ರಾರಂಭ.
 • ಹಳದಿ ಮಿಶ್ರ ಹಸುರು ಬಣ್ಣದ ತಳಿ.
 • 1 ಕಾಯಿಗೆ 150-210 ಗ್ರಾಂ ಕೊಬ್ಬರಿ ತೂಕ.

ಕಲ್ಪ ಸಂಮೃದ್ಧಿ:

 • ಇದು ಮಲಯನ್ ಹಳದಿ ಡ್ವಾರ್ಫ್ ಹಾಗೂ  ಪಶ್ಚಿಮಕರಾವಳಿಯ ಗಿಡ್ದ ಮತ್ತು ಎತ್ತರದ ತಳಿಗಳ ಮಧ್ಯೆ ಕ್ರಾಸಿಂಗ್ ಮಾಡಿ ಪಡೆಯಲಾದ ತಳಿ.
 • ಇದು ಮರವೊಂದರ ಸರಾಸರಿ 117 ಕಾಯಿಯ ಇಳುವರಿಯನ್ನು ನೀಡಬಲ್ಲುದು.
 • ಕೊಬ್ಬರಿ ಮತ್ತು ಎಣ್ಣೆ ಅಂಶ ಚೆನ್ನಾಗಿದೆ.
 • ಎಳನೀರಿಗೆ ಸೂಕ್ತವಾದ ತಳಿ.
 • ಕೇರಳ ಮತ್ತು ಅಸ್ಸಾಂಗಳಿಗೆ ಸೂಕ್ತವಾಗಿದೆ.
 • ತಿಳಿ ಹಸುರು ಬಣ್ಣದಲ್ಲಿರುತ್ತದೆ.

ಕಲ್ಪ ಸಂಕರ :

 • ಇದನ್ನು  ಪಶ್ಚಿಮ ಕರಾವಳಿಯ ಎತ್ತರದ ತಳಿ ಮತ್ತು ಚೌಘಾಟ್ ಗ್ರೀನ್ ಡ್ವಾರ್ಫ್ ಜೊತೆ ಸಂಕರಣ ಮಾಡಿ ಪಡೆಯಲಾಗಿದೆ.
 • ಇದು ಸುಮಾರು 84 ಕಾಯಿಯ ಇಳುವರಿ ನಿಡಬಲ್ಲುದು.
 • ಬೇರು ಸೊರಗುರೋಗ ಇರುವ ಪ್ರದೇಶಗಳಿಗೆ ಸೂಕ್ತವಾದ ತಳಿ.
 • ತಿನ್ನುವ ಕೊಬ್ಬರಿಗೆ ಉತ್ತಮ. ಎಣ್ಣೆಯ ಇಳುವರಿ ಕಡಿಮೆ.
 • ಎಳನೀರಿಗೆ ಹೊಂದಿಕೆಯಾಗುತ್ತದೆ.
 • ಹಚ್ಚ ಹಸುರು ಬಣ್ಣದ ತಳಿ.

ಕಲ್ಪ ಶ್ರೇಷ್ಟ:

 • ಇದನ್ನು ಮಲಯನ್ ಹಳದಿ ಡ್ವಾರ್ಫ್ ಮತ್ತು  ತಿಪಟೂರು ಟಾಲ್  ತಳಿಗಳ ಮಧ್ಯೆ ಸಂಕರಣ ಮಾಡಿ ಪಡೆಯಲಾಗಿದೆ.
 • ಇದರಲ್ಲಿ ಕೊಬ್ಬರಿ ಪ್ರಮಾಣ ಮತ್ತು ಎಣ್ಣೆ ಪ್ರಮಾಣ ಅತ್ಯುತ್ತಮವಾಗಿದೆ.
 • ತಿಳಿ ಹಸುರು ಬಣ್ಣದ ತಳಿ.
 • ಹೆಚ್ಚು ನೀರು ಮತ್ತು ಸಿಹಿಯಾದ ನೀರು ಇರುವ ಕಾರಣ ಎಳನೀರಿಗೂ ಸೂಕ್ತವಾದ ತಳಿ.
ಹೈಬ್ರೀಡ್ ತಳಿಯಲ್ಲಿ ಹೂ ಗೊಂಚಲು

ಇದು ಸಿ ಪಿ ಸಿ ಆರ್ ಐ ಕೇಂದ್ರದಿಂದ ಬಿಡುಗಡೆಯಾದ ಹೈಬ್ರೀಡ್ ತಳಿಗಳು. ಇಲ್ಲಿ ಯಾವ ಯಾವ ಯಾವ ಪ್ರದೇಶಕ್ಕೆ ಯಾವ ತಳಿ ಸೂಕ್ತವೋ ಆ ತಳಿಗಳಿಗೆ ಒತ್ತು ನೀಡಲಾಗಿದೆ.  ಇದೆಲ್ಲವನ್ನೂ ಇಲ್ಲಿ  ಪ್ರಾಯೋಗಿಕವಾಗಿ ಅಭ್ಯಸಿಸಿಯೇ ಬಿಡುಗಡೆ ಮಾಡಲಾಗುತ್ತದೆ.  ಇದಲ್ಲದೆ ಖಾಸಗಿಯ ಕೆಲವು ಬೀಜೋತ್ಪಾದಕ ಕೇಂದ್ರಗಳೂ ಹೈಬ್ರೀಡ್ ಬೀಜೋತ್ಪಾದನೆ ಮಾಡುತ್ತಿದ್ದಾರೆ.

ಇನ್ನು ಮುಂದೆ ತೆಂಗು ಬೆಳೆಸುವವರು ನಿಖಾರ ಇಳುವರಿ ಕೊಡಬಲ್ಲ ಬಹು ಉದ್ದೇಶಿತ ತೆಂಗು ಹೈಬ್ರೀಡ್ ಬೆಳೆದರೆ  ಉತ್ತಮ.

 

Leave a Reply

Your email address will not be published. Required fields are marked *

error: Content is protected !!