ಬಾಳೆಗೆ 50% ಗೊಬ್ಬರ ಕಡಿಮೆ ಮಾಡಬಹುದಾದ ವಿಧಾನ.

by | Apr 25, 2020 | Banana (ಬಾಳೆ), Horticulture Crops (ತೋಟದ ಬೆಳೆಗಳು) | 0 comments

ಬಾಳೆ ಬೆಳೆಗೆ ಅತ್ಯಧಿಕ ಪೋಷಕಾಂಶಗಳು ಬೇಕು. ಇದು ಕಡಿಮೆ  ಸಮಯದಲ್ಲಿ ದಷ್ಟ ಪುಷ್ಟವಾಗಿ ಬೆಳೆಯುವ ಸಸ್ಯವಾದ ಕಾರಣ ಅಷ್ಟೇ ಪೋಷಕಗಳು ಬೇಕಾಗುತ್ತವೆ. ನಾವು ಕೊಡುವ ಎಲ್ಲಾ ಪೋಷಕಗಳೂ  ಮೊದಲ ಬೆಳೆಗೇ ಬಳಕೆಯಾಗದೆ ಸ್ವಲ್ಪ ಬಾಳೆಯ ಅಂಗಾಂಶಗಳಲ್ಲಿ ಉಳಿದುಕೊಂಡಿರುತ್ತದೆ. ಅದನ್ನು ಸದುಪಯೋಗಮಾಡಿಕೊಂಡರೆ  ಮುಂದಿನ ಕೂಳೆ ಬೆಳೆ ಉತ್ತಮವಾಗಿರುತ್ತದೆ. ಕಂದುಗಳೂ ಆರೋಗ್ಯವಾಗಿರುತ್ತವೆ.

 

  • ಎಲ್ಲಾ ಬೆಳೆಗಳೂ ತಮ್ಮ ಬೆಳೆವಣಿಗೆಗೆ ಬಳಕೆ ಮಾಡಿದ ಪೋಷಕಗಳನ್ನು  ಪೂರ್ಣವಾಗಿ  ಉಪಯೋಗಿಸಿಕೊಂಡಿರುವುದಿಲ್ಲ.
  • ಸ್ವಲ್ಪ ಪ್ರಮಾಣದಲ್ಲಿ ಅದು ಎಲೆಗಳಲ್ಲಿ ಉಳಿದಿರುತ್ತದೆ.
  • ಅದು ಉದುರಿ ಬಿದ್ದಾಗ ಅದರ ಜೊತೆಗೆ ಪೋಷಕವೂ ಇರುತ್ತದೆ.
  • ಆದ ಕಾರಣ ಬೆಳೆ ಉಳಿಕೆಗಳನ್ನು ಮತ್ತೆ ಬಳಕೆ ಮಾಡಿದಾಗ ಅದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
  • ಬಾಳೆಯ ಬೆಳೆಯಲ್ಲಿ  ಬೆಳವಣಿಗೆ ಆಗುವಾಗ ಬಲಿತು ವಯೋ ಸಹಜವಾಗಿ ಒಣಗುವ ಎಲೆಗಳಲ್ಲಿ ಪೋಷಕಗಳು ಅಡಗಿರುತ್ತವೆ.

ಬಾಳೆ ಬೆಳೆಯುವವರು ಹೀಗೆ ಮಾಡಿ:

ಬಾಳೆ ಉಳಿಸಿ ಕೂಳೆಯಿಂದ ಪಡೆದ ಬೆಳೆ.

  • ಬಾಳೆ ಬೆಳೆಯುವಾಗ ರೈತರು ಸಾಕಷ್ಟು ಸಾವಯವ ಗೊಬ್ಬರ, ರಾಸಾಯನಿಕ ಗೊಬ್ಬರಗಳನ್ನು ಕೊಡುವುದರ ಜೊತೆಗೆ ನೆಲಕ್ಕೆ ಬಾಳೆಯ ಎಲ್ಲಾ ಒಣಗಿದ ಎಲೆಯನ್ನು ಮೇಲು ಹಾಸಲಾಗಿ ಹಾಕಬೇಕು. https://kannada.krushiabhivruddi.com/low-cost-organic-banana-farming/
  • ಇದು ತೇವಾಂಶ ಲಭ್ಯವಾದಾಗ ತ್ವರಿತವಾಗಿ   ಕಳಿತು ಬಾಳೆಗೆ ಪೋಷಕವಾಗಿ ಲಭ್ಯವಾಗುತ್ತದೆ.
  • ಒಂದು ಬಾಳೆ ಬೆಳೆ ಎಷ್ಟು ಪೋಷಕಗಳನ್ನು ಬಳಸಿರುತ್ತದೆ ಎಂಬುದಕ್ಕೆ, ಸತ್ತ ಬಾಳೆ  ಕೊಳೆತು ಕರಗಿ ಆ ಸ್ಥಳದಲ್ಲಿ ಆದ ಸ್ಥಳದ ಹೊಂಡವೆ ಹೇಳುತ್ತದೆ.
  • ನಾವು ಬಾಳೆಗೆ ಯಾವ ಗೊಬ್ಬರವನ್ನು ಕೊಟ್ಟಿದ್ದೇವೆಯೋ ಅದರಲ್ಲಿ ಎಲ್ಲವೂ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಎಲೆಯಲ್ಲಿ ಉಳಿದಿರುತ್ತದೆ.
  • ಇದನ್ನು  ಹಸಿ ರೂಪದಲ್ಲಿ ಹಾಕುವ ಬದಲಿಗೆ ಒಣಗಿದ ನಂತರ ಹಾಕುವುದು  ಉತ್ತಮ.

ಬಾಳೆಯಲ್ಲಿದೆ ಅತ್ಯಧಿಕ ಪೋಷಕ:

ಗೊನೆ ಕಡಿದು ಉಳಿಸಿದ ಬಾಳೆ

  • ಬಾಳೆ ಗೊನೆಯನ್ನು ಕಠಾವು ಮಾಡಿದ ನಂತರ ಆ ಬಾಳೆಯ ಕಾಂಡದಲ್ಲಿ ಬಾಳೆಗೆ ಕೊಡಮಾಡಲ್ಪಟ್ಟ ಎಲ್ಲಾ ಪೋಷಕಗಳೂ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಬಾಳೆ ಎಲೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉಳಿದುಕೊಂಡಿರುತ್ತದೆ.
  • ಇದನ್ನು  ರೈತರು ಕಡಿದು ಎಲ್ಲೆಲ್ಲೋ ಬಿಸಾಡುವ ಬದಲು, ಅದನ್ನು ಸದುಪಯೋಗ ಮಾಡಿಕೊಂಡರೆ ಅದರ ಕಂದುಗಳಿಗೆ ಮತ್ತು ಅದರಲ್ಲೇ ಮತ್ತೊಂದು ಕೂಳೆ ಬೆಳೆ ಬೆಳೆಯುವುದಿದ್ದರೆ ಅನುಕೂಲವಾಗುತ್ತದೆ.
  • ಬಾಳೆಯ ಗೊನೆಯನ್ನು ಕಠಾವು ಮಾಡಿ ಅದರ ಎಲೆಗಳನ್ನು ಸಣ್ಣಕ್ಕೆ ಕತರಿಸಿ ಮಣ್ಣಿಗೆ ಸೇರಿಸಬೇಕು.
  • ಬಾಳೆ ಕಾಂಡವನ್ನು ಮಾತ್ರ ಕಡಿಯೆದೇ ಹಾಗೆಯೇ ಬಿಡಬೇಕು. https://kannada.krushiabhivruddi.com/more-than-2000-saplings-in-banana-one/
  • ಅದು ಕೊಳೆತು ಅಲ್ಲಿಗೇ ತನ್ನ ಎಲ್ಲಾ ಸತ್ವಾಂಶಗಳನ್ನು ಅದರ ಕಂದುಗಳಿಗೆ  ಒದಗಿಸುತ್ತದೆ.
  • ಸುಮಾರು 30-40 ದಿನದಲ್ಲಿ  ಅದು ಪೂರ್ಣವಾಗಿ ಕೊಳೆಯು ಕರಗಿ ಮಣ್ಣಿಗೆ  ಸೇರಿರುತ್ತದೆ.
  • ಹೊರ ಭಾಗದ ಸ್ವಲ್ಪ ಸಿಪ್ಪೆ ಉಳಿದುಕೊಂಡರೂ ಬಾಳೆಯ ದಂಟೂ ಸೇರಿದಂತೆ ಮಧ್ಯದ ಭಾಗವೆಲ್ಲಾ ಕರಗಿ ಮಣ್ಣಿಗೆ  ಸೇರುತ್ತದೆ.
  • ಇದು ಬಾಳೆಯ ಮರಿಗಳಿಗೆ ತಕ್ಷಣದ ಆಹಾರದಂತೆ ಲಭ್ಯವಾಗಿ ಕಂದುಗಳನ್ನು ಉತ್ತಮವಾಗಿ ಬೆಳೆಯಲು ಸಹಕರಿಸುತ್ತದೆ.

ಅನುಕೂಲಗಳು:

ಹೀಗೆ ಉಳಿಸಿದರೆ ಬಹಳ ಲಾಭವಿದೆ.

  • ಕಂದುಗಳಲ್ಲಿ ಒಂದನೇ ಬೆಳೆಯಲು ಬಿಟ್ಟರೆಯಂತೂ ಹೀಗೆ ಮಾಡಿದಾಗ ಸುಮಾರು 3-4 ತಿಂಗಳ ತನಕವೂ ತಾಯಿ ಬಾಳೆ ಅದನ್ನು ಸಾಕುತ್ತದೆ.
  • ಬಾಳೆಯಲ್ಲಿ ಕಂದುಗಳು ಪುಷ್ಟಿಯಾಗಿ ಬೆಳೆಯುತದೆ. ನೆಡುವ ಕಂದಿನ ಆರೋಗ್ಯ ಸರಿ ಇದ್ದರೆ ಅದು ರೋಗ ಮುಕ್ತವಾಗಿ ಬೆಳೆಯಬಲ್ಲುದು.
  •  ಗೊನೆ ಹಾಕಿದ ಬಾಳೆಯಯ ದಂಟಿನಲ್ಲಿ ಸಾಕಷ್ಟು ರಂಜಕ, ಪೊಟ್ಯಾಶಿಯಂ ಸಾರಜನಕ, ಗಂಧಕ, ಮತ್ತು ಬೋರಾನ್ ಸತ್ವ ಉಳಿದುಕೊಂಡಿರುತ್ತದೆ ಎಂಬುದನ್ನು ರಾಷ್ಟ್ರೀಯ ಬಾಳೆ ಸಂಶೋಧನಾ ಸಂಸ್ಥೆಯು  ಕಂಡುಕೊಂಡಿದೆ,.
  •  ಗೊನೆ ಹಾಕಿದ ಬಾಳೆಯನ್ನು ಕಡಿಯದೇ ಒಣಗಿ ಕಳಿಯಲು ಬಿಡುವುದರಿಂದ ಆ ಬಾಳೆಯು 1-2  ವಾರ ಮುಂಚೆಯೇ ಗೊನೆ  ಹಾಕುತ್ತದೆ.  ಕೂಳೆ ಬೆಳೆಗೆ ಕೊಡಬೇಕಾದ ರಸಗೊಬ್ಬರದಲ್ಲೂ ಉಳಿತಾಯವಾಗುತ್ತದೆ.

ಪಶ್ಚಿಮ ಬಂಗಾಲದ ಬಿದಾನಚಂದ್ರ ಕೃಷಿ ವಿಶ್ವವಿಧ್ಯಾನಿಲಯದಲ್ಲಿ ಇದನ್ನು ಮಾಡಿ ನೊಡಲಾಗಿದೆ. ಕಡಿಯದೇ ಬಿಟ್ಟದ್ದು, ಕಡಿದದ್ದು, ಅರ್ಧ ಕಡಿದು ಉಳಿಸಿದ್ದ  ಇವುಗಳಲ್ಲಿ ಎಲ್ಲಾ ತಿಳಿದು ಬಂದುದು ಪೂರ್ತಿಯಾಗಿ ಕಡಿಯದೇ ಉಳಿಸಿದ ಬಾಳೆಗೆ  ಶೇ. 50 ಗೊಬ್ಬರದ ಪ್ರಮಾಣ  ಕಡಿಮೆ ಸಾಕಾಗುತ್ತದೆ. ಇದನ್ನು ನಮ್ಮ ರಾಜ್ಯದಲ್ಲಿಯೂ ಹಲವಾರು ರೈತರು ಮಾಡಿ ನೊಡಿದ್ದು, ಉತ್ತಮ ಫಲಿತಾಂಶವನ್ನು ಗುರುತಿಸಿದ್ದಾರೆ.  

end of the article: ———————————————————————-
search words: banana cultivation # banana crop magement #  less manure and good yield # banana sukker management# banana nutrient management#
best agriculture information centere , agricultre in scientific way , kannada agriculture managazine
 

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!