ಬೇಸಿಗೆ ಕಾಲದಲ್ಲಿ ನೀರೊತ್ತಾಯ ತಡೆಯಲು ಹೀಗೆ ಮಾಡಿಕೊಳ್ಳಿ.

ಬೇಸಿಗೆಯಲ್ಲಿ ಕೃಷಿಕರಿಗೆ ಹೊಲಕ್ಕೆ ನೀರುಣಿಸುವುದೇ ಕೆಲಸ. ಇಂದು ನೀರುಣಿಸಿದರೆ ನಾಳೆ ನೋಡುವಾಗ ಒಣಗಿರುತ್ತದೆ. ಅಷ್ಟೂ ನೀರನ್ನೂ ಬೆಳೆ ಸಸ್ಯಗಳು ಹೀರಿಕೊಳ್ಳುವುದಲ್ಲ. ಅದರಲ್ಲಿ ಮುಕ್ಕಾಲು ಪಾಲು ಆವಿಯಾಗಿ ವ್ಯಯವಾದರೆ ಕಾಲು ಪಾಲು ಮಾತ್ರ ಸಸ್ಯ ಬಳಕೆ ಮಾಡಿಕೊಳ್ಳುತ್ತದೆ. ಆವೀಕರಣ ತಡೆದರೆ ನೀರು ತುಂಬಾ ಕಡಿಮೆ ಸಾಕು.

rice straw mulching helps water saving
ಭತ್ತದ ಹುಲ್ಲು ಅತಿ ಅಧಿಕ ತೇವಾಂಶ ಸಂರಕ್ಷಕ
  • ಬೇಸಿಗೆ ಕಾಲ ಎಂದರೆ ಸೂರ್ಯನ ಪ್ರಖರ ಬಿಸಿಲಿಗೆ ಏನಿದ್ದರೂ ಒಣಗಿ ಹೋಗುವ ಕಾಲ.
  • ಈ ಸಮಯದಲ್ಲಿ ಸಿಮೆಂಟ್ ನೆಲಕ್ಕೆ  1 ಲೀ. ನೀರು ಚೆಲ್ಲಿದರೆ ಅದು ಆವಿಯಾಗಲು ಆಗಲು  1 ಗಂಟೆ ಸಾಕು.
  • ಇಷ್ಟು ನೀರು ಆವೀಕರಣ ಆಗುವಾಗ ನೀರು ಕೊಟ್ಟಷ್ಟೂ ಗೊತ್ತೇ ಆಗುವುದಿಲ್ಲ.
  • ಬಟ್ಟೆ ಹಿಂಡದೆ ಒಣಗಲು ಹಾಕಿದರೂ ಅರ್ಧ ಗಂಟೆಯಲ್ಲಿ ನೀರು ಆವಿಯಾಗುತ್ತದೆ ಎಂದಾದರೆ ಎಷ್ಟು ನೀರು ಹಾಳಾಗುತ್ತದೆ.
  • ಇದನ್ನು ತಡೆಯಲು ಇರುವ ಉಪಾಯವೇ ತೇವಾಂಶ ಸಂರಕ್ಷಣೆ .
Dried leaf helps water conservation
ತರೆಗೆಲೆಗಳು ತೇವಾಂಶ ಉಳಿಸಲು ಉತ್ತಮ. ಜೊತೆಗೆ ಪೊಷಕವೂ.

ತೇವಾಂಶ ಸಂರಕ್ಷಣೆ :

  • ನೆಲದಲ್ಲಿ ಸ್ವಲ್ಪ ಅಡಿಯಲ್ಲಿ  ಸಸ್ಯದ ಬೇರುಗಳು ಇರುತ್ತದೆ. ಆ ಬೇರಿನ ಭಾಗಕ್ಕೇ ನೀರು ದೊರೆಯುವಂತೆ  ಮಾಡುವುದು ಒಂದು ವಿಧಾನ.
  • ಇದನ್ನು ನೀರಾವರು ವ್ಯವಸ್ಥೆಯದ ಇನ್ ಲೈನ್ ಡ್ರಿಪ್ ಅಥವಾ ಸಬ್ ಸರ್ಫೇಸ್ ಡ್ರಿಪ್ ಮೂಲಕ ಮಾಡಬಹುದು.
  • ಎಷ್ಟು ಬೇಕೋ ಅಷ್ಟು ನೀರನ್ನು ಬೇರಿನ ಭಾಗಗಳಿಗೇ ದೊರೆಯುವಂತೆ ಮಾಡುವುದು ಎರಡನೇ ವಿಧಾನ.
Soil dressing  helps a lot in water retention
ಮಣ್ಣು ಏರಿಸುವಿಕೆ

ಡ್ರಿಪ್ಪರುಗಳ ಮೂಲಕ ನೀರಾವರಿ ಮಾಡುವುದು ಇದಕ್ಕೆ ಇರುವ ಉಪಾಯ. ಡ್ರಿಪ್ಪರುಗಳಲ್ಲಿ ಬಿದ್ದ ನೀರು ನಿರ್ದಿಷ್ಟ ಭಾಗಕ್ಕೇ ತೊಟ್ಟಿಕ್ಕಿ ಕೆಳಗೆ ಇಳಿಯುತ್ತದೆ. ಮೇಲ್ಪಾಗ ಒಣಗಿದ್ದರೂ  ತಳ ಭಾಗ ತೇವವಾಗಿರುತ್ತದೆ. ಆವೀಕರಣಕ್ಕೆ ಆಸ್ಪದ ಇರುವುದಿಲ್ಲ.

branches of trees mulched on surface of plantation
ಸೊಪ್ಪು ಸದೆಗಳನ್ನು ಉಪಯೋಗಿಸಿದಾಗ ಮಣ್ಣು ಉತ್ತಮವಾಗುತ್ತದೆ.
  • ಬೆಳೆಗಳ ಬುಡಕ್ಕೆ ಕೃಷಿ ತ್ಯಾಜ್ಯಗಳನ್ನು ಹಾಕುವುದು. ಇದು ನೆಲದ ಮೇಲೆ ಸೂರ್ಯನ ಬಿಸಿಲು  ನೇರವಾಗಿ ಬೀಳದಂತೆ ರಕ್ಷಣೆ  ಕೊಡುತ್ತದೆ.
  • ನೆಲದ ಮೇಲೆ  ಪಾಲಿಥೀನ್ ಶೀಟುಗಳನ್ನು  ಹೊದಿಸುವುದು. ಇದು ಆವೀಕರಣವನ್ನು ಬಹಳಶ್ಟು ತಡೆಯುತ್ತದೆ.
  • ನೆಲಕ್ಕೆ ಮಣ್ಣು ಏರಿ ಮಾಡುವುದು. ಇದು ಬೇರು ಭಾಗದ ತೇವಾಂಶವನ್ನು ಆವಿಯಾಗದಂತೆ ತಡೆಯಲು ಸಹಕಾರಿ.
  • ಉಸುಕು ಹಾಕುವುದು. ಇದು ನೆಲದ ಮೇಲೆ ಬಿಸಿಲು ಬಿದ್ದರೂ ತಳ ಭಾಗ ಒಣಗದಂತೆ ರಕ್ಷಿಸುತ್ತದೆ.
  • ಇಬ್ಬನಿ ನೀರು ಸಹ ಮಣ್ಣಿಗೆ ಇಳಿಯಲು ಇದು ಸಹಕಾರಿ.

ತೇವಾಂಶ ರಕ್ಷಕಗಳು:

b=sand mulched on the filed to conserve soil evaporation
ಉಸುಕು ಹಾಕುವಿಕೆ ಕಪ್ಪು ಹತ್ತಿ ಮಣ್ಣಿಗೆ ಉತ್ತಮ ತೇವಾಂಶ ರಕ್ಷಕ
  •  ಹೊಲದ ಬೆಳೆಗಳ ಬುಡಕ್ಕೆ ತರಗೆಲೆಯನ್ನು  ಹಾಕಿದಾಗ ಅದು ತೇವಾಂಶ ಸಂರಕ್ಷಿಸುತ್ತದೆ. ಅದು ಕಳಿತಾಗ ಗೊಬ್ಬರ ಆಗುತ್ತದೆ.
  • ಹೊಲದ ಬುಡಕ್ಕೆ ಬೆಟ್ಟ ಗುಡ್ಡಗಳ ಕರಡ ಹುಲ್ಲುಗಳನ್ನು ತಂದು ಹಾಕಬಹುದು. ಅಗ್ಗದ ಬೆಲೆಗೆ ಭತ್ತದ ಹುಲ್ಲು ಸಿಕ್ಕರೆ ಅದನ್ನೂ ಹಾಕಬಹುದು.
  • ಉದ್ದಿಮೆ ತ್ಯಾಜ್ಯಗಳಾದ ಅಕ್ಕಿ ಮಿಲ್ಲಿನ ಹುಡಿಯನ್ನೂ ಮೇಲು ಹಾಸಲಾಗಿ ಬಳಕೆ ಮಾಡಬಹುದು.  ಇದು ಸಹ ತೇವಾಂಶ ರಕ್ಷಕವಾಗಿ ಮತ್ತು ಬೆಳೆ ಪೋಷಕವಾಗಿ  ಕೆಲಸ ಮಾಡುತ್ತದೆ.
crop residues mulching helps to conserve moisture loss
ಅಡಿಕೆ ತೋಟದ ತ್ಯಾಜ್ಯಗಳನ್ನು ಅಲ್ಲೇ ಹಾಕಿದಾಗ ಸಾಕಷ್ಟು ಪ್ರಯೋಜನ ಇದೆ.
  • ಅಕ್ಕಿ ಮಿಲ್ಲಿನ ಕಪ್ಪು ಕರಿಯನ್ನೂ ಸಹ ಬಳಕೆ ಮಾಡಬಹುದು. ಇದು ಸಿಲಿಕಾ ಅಂಶ ಒಳಗೊಂಡಿದ್ದು, ಬೇರು ಬೆಳವಣಿಗೆಗೆ ಸಹಾಯಕ. ತೇವಾಂಶ ರಕ್ಷಕ ಸಹ.
  • ಪಾಲಿಥೀನ್ ಶೀಟು, ಮಲ್ಚಿಂಗ್ ಶೀಟುಗಳನ್ನು ಹೊದಿಸುವುದರಿಂದ ನೀರಿನ ಆವೀಕರಣ  ತಡೆಯಲ್ಪಡುತ್ತದೆ.

ಜೀವಂತ ಹೊದಿಕೆಗಳಾದ ಸಿಹಿ ಗೆಣಸು, ಅಥವಾ ದ್ವಿದಳ ಧಾನ್ಯದ ಬೆಳೆಗಲಾದ ಉದ್ದು, ಹೆಸರು , ಹುರುಳಿ ಸಸ್ಯಗಳನ್ನು ಬೆಳೆಗಳ ಬುಡದಲ್ಲಿ ಬೆಳೆಸುವುದರಿಂದಲೂ  ತೇವಾಂಶ ಸಂರಕ್ಷಣೆ ಆಗುತ್ತದೆ.

  • ನಿರುಪಯುಕ್ತ ಗೋಣಿ ಚೀಲಗಳನ್ನು ಎಲ್ಲೆಂದರಲ್ಲಿ ಬಿಸಾಡುವ ಬದಲು ನೆಲಕ್ಕೆ ಹೊದಿಕೆಯಾಗಿ ಹಾಕಿದರೆ  ತೇವಾಂಶ ಸಂರಕ್ಷಣೆಗೆ ಅನುಕೂಲವಾಗುತ್ತದೆ.

covering mulching sheets conserve water loss
ಪಾಲಿಥೀನ್ ಶೀಟುಗಳ ಹೊದಿಕೆ.

mulching of plastic sheet for individual tree
ಬುಡಗಳಿಗೆ ಪಾಲಿಥೀನ್ ಶೀಟು ಹೊದಿಕೆ.

ಪ್ರಯೋಜನಗಳು:

  • ನೆಲಕ್ಕೆ ಹೊದಿಕೆ ಹಾಕುವುದರಿಂದ ನೆಲ ಬಿಸಿಯಾಗುವುದು ತಡೆಯಲ್ಪಟ್ಟು  ಮಣ್ಣಿನ ಜೈವಿಕ ಕ್ರಿಯೆ ಉತ್ತಮವಾಗುತ್ತದೆ.
  • ಎರೆ ಹುಳುಗಳು ಮೇಲು ಸ್ಥರದಲ್ಲಿ ವಾಸ ಮಾಡಿ ಹೆಚ್ಚು ಮೆಕ್ಕಲು ಮಣ್ಣು ಉತ್ಪಾದಿಸಿಕೊಡುತ್ತವೆ.
  • ಸಾವಯವ ತ್ಯಾಜ್ಯಗಳಾದ ತರಗೆಲೆ, ಭತ್ತದ ಹುಡಿ, ಅಡಿಕೆ ಸಿಪ್ಪೆ, ತೆಂಗಿನ ಸಿಪ್ಪೆ, ಕರಡ ಹುಲ್ಲು, ಸೊಪ್ಪು ಸದೆ ಹಾಕುವುದರಿಂದ ಮೇಲು ಮಣ್ಣು ಉತ್ಪಾದನೆಯಾಗಿ  ಇಳುವರಿ ಹೆಚ್ಚುತ್ತದೆ. ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಉಂಟಾಗುತ್ತದೆ.

ಕೃಷಿಕರ ಹೊಲದಲ್ಲಿ ದೊರೆಯುವ ಯಾವುದೇ ತ್ಯಾಜ್ಯ ವಸ್ತುವನ್ನು ನೆಲದ ಮೇಲೆ ಹೊದಿಸಿ ಸೂರ್ಯನ ಬಿಸಿಲು ನೇರವಾಗಿ ಮಣ್ಣಿಗೆ  ಬೀಳದಂತೆ ತಡೆದರೆ ಸುಮಾರು 75 % ನೀರು ಉಳಿತಾಯವಾಗುತ್ತದೆ.  ಎರಡು ದಿನಕ್ಕೊಮ್ಮೆ ನೀರಾವರಿ ಮಾಡುವವರು ವಾರಕ್ಕೊಮ್ಮೆ ಮಾಡಿದರೂ ಸಾಕಾಗುತ್ತದೆ.

 
 

2 thoughts on “ಬೇಸಿಗೆ ಕಾಲದಲ್ಲಿ ನೀರೊತ್ತಾಯ ತಡೆಯಲು ಹೀಗೆ ಮಾಡಿಕೊಳ್ಳಿ.

  1. Really very good information for farmers especially non original farmers ie Rtd engineers started agriculture

    1. thank you for your valuable comments…
      please share the page and promote us!
      which will motivate us to provide more information

Leave a Reply

Your email address will not be published. Required fields are marked *

error: Content is protected !!