ವಾಂದಾ ತಂದೀತೇ ಅಡಿಕೆ ಬೆಲೆಗೆ ಕುತ್ತು?.

ಅಡಿಕೆಯ ವ್ಯವಹಾರದಲ್ಲಿ 90% ಕ್ಕೂ ಹೆಚ್ಚು ಮುಂಗಡ ಹಣ ಪಡೆಯದೇ  ನಡೆಯುತ್ತದೆ. ಅಡಿಕೆ ಹೋಗುತ್ತದೆ, ದುಡ್ಡು ಬರುವು  ದು  ನಂತರ. ಮಾರುಕಟ್ಟೆ ಸರಿಯಿಲ್ಲ.  ಸೇಟು ಊರಿಗೆ ಹೋದ ಕಾರಣ ಹಣದ ಅಡಚಣೆ. ಮುಂತಾದ ಮಾತುಗಳನ್ನು ಕೇಳಿದ್ದೀರಲ್ಲಾ. ಅದೇ ಮಾಲು ಕಳುಹಿಸಿ ಅವರಿಂದ ಹಣ ಪಡೆಯುವಾಗ ನಡೆಯುವ ವಾಂದಾ ವ್ಯವಹಾರ.

  • ವಾಂದಾ ಎಂದರೆ ತಕರಾರು. ಮಾಲು ಹೋದ ನಂತರ ತಕರಾರು ಮಾಡುವವರಿಗೆ ಸಾಕಷ್ಟು ಅವಕಾಶಗಳಿರುತ್ತವೆ.
  • ಈ ತಕರಾರು ಮಾರುಕಟ್ಟೆಯನ್ನು ಬಹಳ ಅಲ್ಲಾಡಿಸುತ್ತದೆ.
  • ಅದು ಮುಂದೆ ಅಡಿಕೆ ಮಾರುಕಟ್ಟೆ ತೆರೆಯುವ ಸಂದರ್ಭದಲ್ಲಿ ಆಗುವ ಸಾಧ್ಯತೆ ಇದೆ.

ಬಹುತೇಕ ಕ್ರೆಡಿಟ್ ವ್ಯವಹಾರ:

  • ಅಡಿಕೆ ವ್ಯವಹಾರ ಎಂದರೆ ಅದು ಪೆಟ್ಲಂಡೆ ವ್ಯವಹಾರದ ತರಹವೇ.
  • ಹಿಂದಿನ ಕಾಯಿ ದೂಡಿದಾಗ ಮುಂದಿನ ಕಾಯಿ ಹೊರ ಬರುವುದು.
  • ಸುಮಾರು 10-15  ವರ್ಷಗಳ ಹಿಂದೆ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಚಾಲಿ ಇದ್ದಾಗ  ಮುಂಗಡ ಹಣ ಪಾವತಿಸಿ ಖರೀದಿ ನಡೆಯುತ್ತಿತ್ತು.
  • ಹುಂಡಿಯನ್ನು ಡಿಸ್ಕಂಟ್ ಮಾಡಿಯಾದರೂ ಮಾಲು ತಲುಪುವ ಮುಂಚೆ ಹಣ ನಗದೀಕರಣ ನಡೆಯುತ್ತಿತ್ತು.

  •   ಕ್ರಮೇಣ ಅಲ್ಲಿಯೂ ವಾಂದಾ ಪ್ರಾರಂಭವಾಯಿತು.
  • ಚೆಕ್ ಡಿಸ್ಕೌಂಟ್ ಮಾಡಿ, ಪಾರ್ಟಿಯ  ಖಾತೆಯಿಂದ ಕ್ರೆಡಿಟ್ ಆಗುವ ಸಮಯದಲ್ಲಿ ಅಲ್ಲಿ ಹಣವಿಲ್ಲದೆ ಡಿಸ್ಕೌಂಟ್ ಮಾಡಿದವನು ದಂಡ ಸಮೇತ ಪಾವತಿ ಮಾಡಬೇಕಾದ ಸ್ಥಿತಿ ಬರುತ್ತಿತ್ತು.

  • ಆಗ ಅವರೊಳಗೆ ಮಾತುಕತೆ ನಡೆದು ಮತ್ತೆ ಕಡಿಮೆ ಬೆಲೆಗೆ ಸೆಟಲ್ಮೆಂಟ್ ಆಗಿ ವ್ಯವಹಾರ ಮುಗಿಯುತ್ತಿತ್ತು.
  • ಹಾಗೇ ದರ ಏರು ಪೇರು ಆಗುತ್ತಲೇ ಇರುತ್ತಿತ್ತು.
  • ಕ್ರಮೇಣ ಚಾಲಿಯೂ ಅಧಿಕ ಪ್ರಮಾಣಕ್ಕೆ ಬಂದ ನಂತರ ಅದೂ ಕ್ರೆಡಿಟ್ ವ್ಯವಹಾರವೇ ಆಗಿಬಿಟ್ಟಿತು.
  • ಕೆಂಪಡಿಕೆಯಂತೂ ಹಿಂದಿನಿಂದಲೂ ಕ್ರೆಡಿಟ್ ವ್ಯವಹಾರವೇ.
  • ಮೇಲೆ ಎಂಡ್ ಪಾಯಿಂಟ್ ಗೆ  ಹಾಕಿದ ಅಡಿಕೆಗೆ ಹಣ ಬಂದರೆ ಇಲ್ಲಿ ಮಾರುಕಟ್ಟೆ ತೇಜೀ ಆಗುತ್ತದೆ.
  • ಬರಲಿಲ್ಲ. ತಕರಾರು ಉಂಟಾಗಿ ಕಡಿಮೆಯಾದರೆ ಇಲ್ಲಿ ಬೆಲೆ ಇಳಿಯುತ್ತದೆ.

ಮುಂದೆ ಇದೆ ಆತಂಕ:

  •  ಆತಂಕ ಯಾಕೆಂದರೆ ಯಾವ ಬೆಲೆಗೆ ಮಾರುಕಟ್ಟೆ ತೆರೆಯುತ್ತದೆ ಎಂಬುದು.
  •   ಅಂದು ಮಾರುಕಟ್ಟೆ ಕೊನೆ ಗೊಳ್ಳುವ ಸಮಯದಲ್ಲಿ ಚಾಲಿಗೆ 26,000 ರೂ. ಬೆಲೆ ಇತ್ತು.
  • ಕೆಂಪು ರಾಶಿಗೆ 42,000 ರೂ ಬೆಲೆ ಇತ್ತು. ಅದಕ್ಕಿಂತ ಹೆಚ್ಚಿನ ಬೆಲೆಗೆ ಬಿಡ್ ಮಾಡಲು ಹಿಂದಿನ ಹಣವೇ ಬಾರದ ಕಾರಣ ಯಾರಲ್ಲಿಯೂ ಹಣ ಇರುವುದಿಲ್ಲ.
  • ಎಲ್ಲಾ ವ್ಯಾಪಾರಸ್ತರೂ ತಮ್ಮ ಲಾಭ ನೋಡುವವರೇ ಆದ ಕಾರಣ ಕಡಿಮೆ ಬೆಲೆಗೇ ಬಿಡ್ಡಿಂಗ್ ಮಾಡುತ್ತಾರೆ.
  • ಒಂದು ವೇಳೆ ಯಾರಾದರೂ ಹೆಚ್ಚಿನ ಬೆಲೆಗೆ ಬಿಡ್ಡಿಂಗ್ ಮಾಡಿದರೆ ಅವನು  ಇಷ್ಟು ಸಮಯ ಮಾರುಕಟ್ಟೆ ಸ್ಥಗಿತಗೊಂಡ ಅವಧಿಯ ಸಾವಿರಾರು ಮೂಟೆ ಅಡಿಕೆ ಖರೀದಿ ಮಾಡಬೇಕಾದೀತು.
  • ಅಷ್ಟು ಹಣ ಬೇಕು. ಅದನ್ನು ಮಾರಾಟ ಮಾಡುವುದಾದರೂ ಹೇಗೆ.
  • ಈ ಸಮಯವನ್ನೇ ಅವಕಾಶ ಮಾಡಿಕೊಂಡು ಯಾರಾದರೂ ಒಬ್ಬ ವ್ಯಾಪಾರಿಯನ್ನು ಈ ಬಿಡ್ಡಿಂಗ್ ಗೆ ಉತ್ತರ ಭಾರತದ ಖರೀದಿದಾರರೇ ನಿಯೋಜಿಸಿ ಅವರಿಂದ ಕಡಿಮೆ ಬೆಲೆಗೆ ಬಿಡ್ಡಿಂಗ್ ಮಾಡಿಸುತ್ತಾರೆ.
  • ಆಗ ತಕರಾರು ಹುಟ್ಟಿಕೊಳ್ಳುತ್ತದೆ. ಅಡಿಕೆ ಬೇಡ ಸ್ಟಾಕು ಇದೆ.
  • ಗುಟ್ಕಾ ತಯಾರಿಗೆ ಸ್ಥಗಿತವಾಗಿದೆ. ಕ್ಲೀಯರೆನ್ಸ್ ಇಲ್ಲ.
  • ಹಿಂದೆ ನೀವು ಕಳುಹಿಸಿದ  ಅಡಿಕೆಗೆ ನನ್ನದು ಈ ದರ .
  • ಅದಕ್ಕಿಂತ ಹೆಚ್ಚಿಗೆಯಾದರೆ ಅದನ್ನು ವಾಪಾಸು ಒಯ್ಯಬಹುದು ಎಂದು.
  • ಇದು ಮುಂದೆ ಆಗುವ ಸಾಧ್ಯತೆ ಇಲ್ಲದಿಲ್ಲ.

ಹೀಗೆಲ್ಲಾ ಇದೆ:

  • ಅಡಿಕೆ ವ್ಯವಹಾರದಲ್ಲಿ ಈಗಲೂ 60-70% ದೋ ನಂಬರ್ ವ್ಯವಹಾರವೇ ನಡೆಯುತ್ತದೆ. 
  • ಇದಕ್ಕೆ ಸಾಗಾಟಕ್ಕೆ ದುಪ್ಪಟ್ಟು ಬಾಡಿಗೆ. ಅದಕ್ಕೆಂದೇ ಒಂದೆರಡು ಟ್ರಾನ್ಸ್ ಪೋರ್ಟ್ ಗಳೂ ಇದೆ. 
  • ಒಂದು ವೇಳೆ ಗುಟ್ಕಾ ತಯಾರಕರು ಅಥವಾ ದೊಡ್ದ ಖರೀದಿದಾರ ವಾಪಾಸು ಕೊಂಡೊಯ್ಯಬಹುದು ಎಂದರೆ  ಬಾಡಿಗೆ ಮುಂತಾದ ನಷ್ಟ ತಡೆದುಕೊಳ್ಳುವ ಶಕ್ತಿ ಇದೆಯೇ.
  • ಇದೆಲ್ಲಾ ಒಂದೆರಡು  ಲಾರೀ ವ್ಯವಹಾರ ಅಲ್ಲ.
  • 50-100 ಲಾರೀ ವ್ಯವಹಾರಗಳಾಗಿದ್ದು, ಬಿಡ್ ದಾರ ಕೋಟ್ಯಾಂತರ ರೂಪಾಯಿ ನಷ್ಟಕ್ಕೆ ಬೀಳಬಹುದು.

ವಾಂದಾ ಹೇಗೆಲ್ಲಾ ನಡೆಯುತ್ತದೆ:

  • ನೀವು ಕಳುಹಿಸಿದ ಅಡಿಕೆಯ ದರ 25,000 ಎಂದಿಟ್ಟುಕೊಳ್ಳಿ. ಅದು ಕಳುಹಿಸಿ, ಅಲ್ಲಿಗೆ ಮುಟ್ಟಿ,  ಲೆಕ್ಕಾಚಾರ ಆಗಿ ನಿಮಗೆ ಹಣ ಬರಬೇಕಾದರೆ ಏನಿಲ್ಲವೆಂದರೂ 20 ದಿನವಾದರೂ ಬೇಕು.
  • ಆಗ ಇಲ್ಲಿ 23,000 ಆದರೆ ಅಲ್ಲಿ ವಾಂದಾ ಪ್ರಾರಂಭವಾಗುತ್ತದೆ.
  • ಅಡಿಕೆಯೇ ಬೇಡ. ದುಡ್ಡು ಇಲ್ಲ. ವ್ಯವಹಾರವೇ ನಿಂತಿದೆ. ಅಡಿಕೆ ವಾಪಾಸು ಕೊಡಬಹುದು ಎಂದು ವಾಂಡಾ ಪ್ರಾರಂಭವಾ  ಗುತ್ತದೆ.
  • ಬಾಡಿಗೆಯ ದುಡ್ಡು ಹೋದರೆ ಹೋಗಲಿ ಎಂದು ಸೆಟಲ್ ಮೆಂಟ್ ಪ್ರಾರಂಭವಾಗುತ್ತದೆ.
  • ಹಣ ಬರುತ್ತದೆ. ಕ್ವಿಂಟಾಲು ಮೇಲೆ 2000  ಬಾಡಿಗೆ ಹೋಗುತ್ತದೆ.
  • ಸೆಟಲ್ ಮೆಂಟ್ ಎಂಬುದು ಇಲ್ಲಿ ನಡೆಯುವ ದರಕ್ಕೆ.
  • ಆ ಎಲ್ಲಾ ದರಗಳೂ ಟೆಂಡರ್ ಓಪನ್ ಆಗುವ ಮುಂಚೆ ಅವರಿಗೇ ಗೊತ್ತಾಗಿರುತ್ತದೆ.

ಇಷ್ಟಕ್ಕೂ ಅಡಿಕೆ ವ್ಯವಹಾರ ಸಲೀಸಾಗಿ ನಡೆಯಬೇಕಿದ್ದರೆ ಅಂತರ ರಾಜ್ಯ ಸಾಗಾಣಿಕೆ ತೆರೆಯಬೇಕು. ಅದು ಆದರೂ ಅಡಿಕೆಗೆ ಬಿಡಬಹುದೇ , ಅದರಲ್ಲೀ  ದೋ ನಂಬರ್ ಅಡಿಕೆಗೆ ಬಿಡಬಹುದೇ ಎಂಬುದೂ ಸಂದೇಹ.

  •  ಹೆಚ್ಚಿನ ಸ್ಥಳೀಯ ಸಹಕಾರೀ ಸಂಸ್ಥೆಗಳೂ ಸಹ ಉತ್ತರ ಭಾರತದ ವ್ಯಾಪಾರಿಗಳಿಗೆ ವ್ಯಾಪಾರ ಮಾಡುತ್ತಿಲ್ಲ.
  • ಸ್ಥಳೀಯ ವ್ಯಾಪಾರಿಗಳಿಗೇ  ಮಾರಾಟ ಮಾಡುವುದು.
  • ಅವರಿಗೆ ಹಣ ಬಂದಿರುತ್ತದೆ. 
  • ಅದರೆ ಖರೀದಿ ಮಾಡಿದವರಿಗೆ ಬಂದಿರುವುದಿಲ್ಲ.
  • ಅವರು ಮುಂದೆ ಬಿಡ್ಡಿಂಗ್ ಮಾಡುವಾಗ  ಹಣ ಇಲ್ಲದ ಕಾರಣ ಕಡಿಮೆ ಬೆಲೆಗೆ ಬಿಡ್ಡಿಂಗ್ ಮಾಡುತ್ತಾರೆ.

ಅಡಿಕೆ ವ್ಯವಹಾರದಲ್ಲಿ 3-4  ಜನ ಅಂತಿಮ ಖರೀದಿದಾರರೂ , 3-4  ಗುಟ್ಕಾ ತಯಾರಕರೂ  ಬೆಲೆ ನಿರ್ಣಾಯಕರಾಗಿದ್ದು,  ಇವರು ವ್ಯಾಪಾರ ಸಹಜವಾಗಿ ತಮ್ಮ ಲಾಭಕ್ಕೆ ವ್ಯವಹಾರವನ್ನು ಬಳಸಿಕೊಳ್ಳುತ್ತಾರೆ. ಆದ ಕಾರಣ ಇವರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಎಲ್ಲಾ ಸಾಧ್ಯತೆಗೆಳೂ ಇಲ್ಲದಿಲ್ಲ.  

 

Leave a Reply

Your email address will not be published. Required fields are marked *

error: Content is protected !!