ಬೆಳೆಗಳ ಮೇಲೆ ಬಿಳಿ ಬಟ್ಟೆಯ ತರಹದ ಪಾಲಿಮರ್ ಹೊದಿಕೆಯನ್ನು ಹೊದಿಸಿ ಬೆಳೆ ಬೆಳೆಸುವುದು ಆಧುನಿಕ ಸಾವಯವ ಬೇಸಾಯ ತಾಂತ್ರಿಕತೆ. ಇಲ್ಲಿ ಹೊರಗಡೆಯಿಂದ ಬರುವ ಕೀಟ – ರೋಗಗಳು ಒಳಗೆ ಸುಳಿಯಲಾರವು. ಇದರೊಳಗಿನ ವಾತಾವರಣ ಸಸ್ಯಗಳಿಗೆ ಅನುಕೂಲವಾಗಿದ್ದು, ಗುಣಮಟ್ಟದ ಇಳುವರಿ ಬರುತ್ತದೆ.
Click to WhatsApp and build your website now!
ಕ್ರಾಪ್ ಕವರ್ ಏನು?
- ಬೆಳೆ ಬೆಳೆಯುವಾಗ ಸಸ್ಯದ ಮೇಲೆ ಹೊದಿಸುವ ಒಂದು ಬಟ್ಟೆ ತರಹದ ವಸ್ತು. ನೋಡಲು ಬಟ್ಟೆ ತರಹವೇ ಇರುವ ಇದನ್ನು spun polyester. ನಿಂದ ತಯಾರಿಸುತ್ತಾರೆ.
- ನಾವು ಪ್ಲಾಸ್ಟಿಕ್ ಕೈಚೀಲದ ಬದಲಿಗೆ ಉಪಯೋಗಿಸುವ ಹೊಸ ರೀತಿಯ ಚೀಲಕ್ಕೆ ಉಪಯೋಗಿಸುವ ಸಾಮಾಗ್ರಿಯಿಂದ ಇದನ್ನು ತಯಾರಿಸುತ್ತಾರೆ.
- ಇದು ವಾತಾವರಣದಲ್ಲಿ ಬಿಸಿಲಿಗೆ ನಿಧಾನವಾಗಿ ಹುಡಿಯಾಗಿ ಕರಗುವಂತದ್ದು.
- ಇದನ್ನು ಬೆಳೆ ಬೆಳೆಯುವಾಗ ಸಸ್ಯದ ಮೇಲೆ, ಫಲದ ಮೇಲೆ ಹೊದಿಸಿದರೆ ಕೀಟ ನಿಯಂತ್ರಣ ಕಷ್ಟವಿಲ್ಲ.
- ಸನ್ ಸ್ಕೋರ್ಚ್, ಇಬ್ಬನಿಯ ಹಾನಿ ಹಾಗೆಯೇ ಇನ್ನಿತರ ಗಾಳಿ ಮೂಲಕ ಹರಡುವ ರೋಗಗಳಿಂದ ಯಾವುದೇ ಕೀಟ ನಾಶಕ , ರೋಗ ನಾಶಕಗಳಿಲ್ಲದೆ ರಕ್ಷಣೆ ಪಡೆಯಬಹುದು.
ಇದು ಅನಿವಾರ್ಯ:
- ರೈತರಿಗೆ ರಾಸಾಯನಿಕ ಕೀಟನಾಶಕ , ರೋಗ ನಾಶಕ ಬಳಸಬೇಡಿ ಎಂದು ಸರಕಾರವೂ ಸೇರಿದಂತೆ ಬುದ್ಧಿ ಜೀವಿಗಳೆಲ್ಲಾ ಉಪದೇಶ ಮಾಡುತ್ತಾರೆ.
- ಆದರೆ ಅದನ್ನು ಬಳಸದೆ ಹೇಗೆ ಬೆಳೆ ಸಂರಕ್ಷಣೆ ಮಾಡುವುದು ಎಂದು ಹೇಳಲು ಎಲ್ಲರೂ ವಿಫಲರಾಗುತ್ತಾರೆ.
- ರೈತರು ಉಪದೇಶ ಮಾಡುವವರ ಸ್ವರಕ್ಕೆ ಸುಳ್ಳು ತಾಳ ಹಾಕುತ್ತಾರೆ.
ವಾಸ್ತಾವವಾಗಿ ಬೆಳೆ ಬೆಳೆಸಿ ಅದರಲ್ಲೇ ಅವನು ಬದುಕು ಕಾಣಬೇಕಾದರೆ ಕೀಟ ನಾಶಕ, ರೋಗನಾಶಕ, ರಸಗೊಬ್ಬರ ಬಳಸಲೇ ಬೇಕಾಗುತ್ತದೆ. ಹೇಳುವುದಕ್ಕೂ ಮಾಡುವುದಕ್ಕೂ ಯಾವಾಗಲೂ ಭಿನ್ನತೆ ಇದ್ದೇ ಇರುತ್ತದೆ.
- ರೈತರು ಬೆಳೆ ಬೆಳೆಸುವಾಗ ಎದುರಿಸುವ ಕೀಟ ಸಮಸ್ಯೆ ಹಲವಾರು.
- ಸಣ್ಣ ಸಣ್ಣ ನೊಣಗಳಿಂದ ಹಿಡಿದು ಪತಂಗ , ಹಕ್ಕಿಗಳ ವರೆಗೂ ರೈತನು ಬೆಳೆದ ಬೆಳೆಯಲ್ಲಿ ಪಾಲು ಕೇಳುವವುಗಳು.
- ಇವುಗಳ ನಷ್ಟವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲು ಬೆಳೆ ಹೊದಿಕೆಗಳು ನೆರವಾಗುತ್ತವೆ.
ಬೆಳೆಗಳಿಗೆ ಹೊದಿಕೆ ಬಳಕೆ ಮಾಡಿದಾಗ ಅದರ ಒಳಗೆ ಯಾವುದೇ ಸಣ್ಣ – ದೊಡ್ದ ಕೀಟ ಒಳಗೆ ಹೋಗುವುದಿಲ್ಲ. ಇದು ಬಿಳಿ ಬಣ್ಣದಲ್ಲಿದ್ದು ಬೆಳೆಗಳಿಗೆ ಸೂರ್ಯ ಕಿರಣದ ಘಾಸಿಯನ್ನು ತಡೆಯುತ್ತವೆ.
- ಕೆಲವು ಗಾಳಿಯ ಮೂಲಕ ಹರಡುವ ರೋಗಗಳಿವೆ.
- ಅದನ್ನು ಸಸ್ಯಗಳಿಗೆ ಸೋಂಕದಂತೆ ಇದು ತಡೆಯುತ್ತದೆ.
- ಇಬ್ಬನಿ ಬೀಳುವುದರಿಂದ ಬೆಳೆಗಳಲ್ಲಿ ಎಲೆ ಮುರುಟುವಿಕೆ, ಕೊಳೆಯುವಿಕೆ ಮುಂತಾದ ಕೆಲವು ಸಮಸ್ಯೆಗಳು ಉಂಟಾಗುತ್ತವೆ.
- ಈ ಇಬ್ಬನಿಯನ್ನು ಸಸ್ಯದ ಮೇಲೆ ಬೀಳದಂತೆ ತಡೆಯಲು ಸಹ ಈ ಬೆಳೆ ಹೊದಿಕೆಗಳು ರಕ್ಷಣೆ ನಿಡುತ್ತವೆ.
ಈ ಹೊದಿಕೆಯನ್ನು ಹಾಕಿ ಬೆಳೆ ಬೆಳೆದರೆ ಕೀಟ ನಾಶಕ ಬಳಸಬೇಕಾಗಿಲ್ಲ. ರೋಗನಾಶಕ ಬಳಸಬೇಕಾಗಿಲ್ಲ. ನುಶಿ, ಹೇನು ಮುಂತಾದ ಕೀಟಗಳು ಫಲದ ಮೇಲೆ ಕುಳಿತಾಗ ಆಗುವ ಅಂದ ಕೆಡುವಿಕೆ ಉಂಟಾಗುವುದಿಲ್ಲ. ಆದ ಕಾರಣ ಉತ್ಪನ್ನಗಳ ಗುಣಮಟ್ಟ ಉತ್ಕೃಷ್ಟವಾಗಿರುತ್ತದೆ.
ಖರ್ಚು ಎಷ್ಟು?
- ಕ್ರಾಪ್ ಕವರ್ ಗಳು ಮೀಟರಿಗೆ 5 -6- 7 ರೂ ಬೆಲೆಯಲ್ಲಿ ಲಭ್ಯವಿದೆ. ಅಳತೆ 1ಮೀಟರು, 5ಅಡಿ , 8 ಅಡಿ ಮುಂತಾದ ಅಳತೆಯಲ್ಲಿ ಲಭ್ಯವಿರುತ್ತದೆ.
- ಇದನ್ನು ಒಂದು ಎಕ್ರೆಗೆ ಹೊದಿಸಲು ಬೆಳೆ ಹೊಂದಿ ಸುಮಾರು 10-15 ಸಾವಿರ ತನಕ ಖರ್ಚು ಬೀಳುತ್ತದೆ.
- ಅಷ್ಟು ಬಂಡವಾಳವನ್ನು ಕೀಟನಾಶಕ ಮತ್ತು ಹಾನಿಯಾಗದೆ ಉಳಿಯುವ ಬೆಳೆಗಳಿಂದ ಪಡೆಯಬಹುದು ಎಂಬುದು ತಂತ್ರಜ್ಞರ ಅಭಿಪ್ರಾಯ.
- ಇದನ್ನು ಪುನರ್ ಬಳಕೆ ಮಾಡಬಹುದು ಕೂಡಾ.
- ಇದರಲ್ಲಿ ಬಿಳಿ ಬಣ್ಣ ಅಲ್ಲದೆ ನೀಲಿ ಹಾಗೂ ಹಳದಿ ಬಣ್ಣದವುಗಳೂ ಲಭ್ಯವಿದೆ.
ಯಾವ ಯಾವ ಬೆಳೆಗೆ ಹೊದಿಸಬಹುದು;
- ಬಾಳೆ ಗೊನೆಗೆ ಇದನ್ನು ಹೊದಿಸಿದರೆ ರಪ್ತು ಯೋಗ್ಯ ಕಾಯಿ ದೊರೆಯುತ್ತದೆ. ಯಾವುದೇ ಕಲೆಗಳು ಇರುವುದಿಲ್ಲ.
- ದಾಳಿಂಬೆ ಗಿಡಗಳಿಗೆ ಹೊದಿಸಿದರೆ ಪತಂಗದ ತೊಂದರೆ ಇಲ್ಲ. ಸನ್ ಸ್ಕಾರ್ಚ್ ಇಲ್ಲ, ಮೈಟ್, ಹಿಟ್ಟು ತಿಗಣೆ ಇಲ್ಲದೆ ಆಕರ್ಷಕವಾದ ಹಣ್ಣು ದೊರೆಯುತ್ತದೆ. ಗಿಡಕ್ಕೇ ಹೊದಿಸಬಹುದು. ಕ್ಕಾಅಯಿಗೂ ಕಟ್ಟಬಹುದು.
- ಮಾವು, ಅಂಜೂರ, ದ್ರಾಕ್ಷಿ ಬೆಳೆಯಲ್ಲೂ ಇದನ್ನು ಬಳಕೆ ಮಾಅಡುತ್ತರೆ.
- ತರಕಾರಿ ಬೆಳೆಗಳಲ್ಲಿ ಸ್ವ ಪರಾಗ ಸ್ಪರ್ಷದ ತಳಿಗಳನ್ನು ಬೆಳೆಸಿದರೆ ದುಪ್ಪಟ್ಟು ಇಳುವರಿ ಪಡೆಯಬಹುದು.
- ಕಲ್ಲಂಗಡಿ ಬೆಳೆಯಲ್ಲೂ ಇದನ್ನು ಬಳಸುತ್ತಾರೆ.
ಇದರ ಒಳಗೆ ಬೆಳೆದ ಉತ್ಪನ್ನ ಶುದ್ಧ ಸಾವಯವ ಉತ್ಪನ್ನವಾಗಿರುತ್ತದೆ. ನಿಜವಾಗಿಯೂ ಕೀಟ – ರೋಗ ನಾಶಕ ಬಳಕೆ ಮಾಡದೇ ಉತ್ತಮ ಇಳುವರಿ ಪಡೆಯಲು ಈ ತಂತ್ರಜ್ಞಾನ ಸಹಾಯಕ. ಮಹಾರಾಷ್ಟ್ರದಲ್ಲಿ ಹಲವಾರು ರೈತರು ಇದರನ್ನು ಬಳಸಿ ಬೆಳೆ ಬೆಳೆಯುತ್ತಿದ್ದಾರೆ.