ಕೆಂಪಡಿಕೆ- ಕರಿಮೆಣಸು ಏರಿಕೆ:ದಿನಾಂಕ:21-10-2021 ರ ಧಾರಣೆ.

ಅಡಿಕೆ ಹರಾಜು ಪ್ರದೇಶ

ಕೆಲವು ಮೂಲಗಳ ಮಾಹಿತಿಯಂತೆ ಕೆಂಪಡಿಕೆ -ಕರಿಮೆಣಸು ದರ ಸ್ವಲ್ಪ ಏರಿಕೆ ಆಗಬಹುದು ಎಂಬ ಹಿಂದಿನ ಸುದ್ದಿ ಪ್ರಕಟಣೆ ನಿಜವಾಗುತ್ತಿದೆ. ಆದರೆ ಇದು ಇನ್ನೂ ಭಾರೀ ಮೇಲೆ ಹೋಗಬಹುದು ಎಂಬ ಯಾವ ಮುನ್ಸೂಚನೆಯೂ ಇಲ್ಲ. ಸ್ವಲ್ಪ ಏರಿಕೆ ಸ್ವಲ್ಪ ಇಳಿಕೆ ಆಗುತ್ತಾ 2-3 ತಿಂಗಳ ತನಕವು ಮುಂದುವರಿಯುವ ಸಾಧ್ಯತೆ ಇದೆ.

ಕರಾವಳಿಯಲ್ಲಿ ಚಾಲಿ ಅಡಿಕೆ ಧಾರಣೆ ಏರಿಕೆಯೂ ಆಗದೆ ಇಳಿಕೆಯೂ ಅಗದೆ ಮುಂದುವರಿದಿದೆ. ಖಾಸಗಿಯವರ ಖರೀದಿ ಭರ ಸ್ವಲ್ಪ ಕುಗ್ಗಿದೆ. ಕ್ಯಾಂಪ್ಕೋ ಗೆ ಅಡಿಕೆ ಬರುವಿಕೆ ಕಡಿಮೆ ಇದೆ. ಬೆಳೆಗಾರರು ಕಾದು ನೋಡುವ ತಂತ್ರದಲ್ಲಿದ್ದಾರೆ. ಹಾಗಾಗಿ ಇಲ್ಲಿ ದರ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಕೆಂಪಡಿಕೆ ಮಾಡುವ ಪ್ರದೇಶಗಳಲ್ಲಿ ಅಕ್ಟೋಬರ್ ಮೊದಲವಾರದಲ್ಲಿ ದರ ಕುಸಿತವಾದಾಗ ಬೆಳೆಗಾರರು ಗೊಂದಲಕ್ಕೊಳಗಾದ ಕಾರಣ ಮತ್ತೂ ದರ ಇಳಿಕೆಯಾಯಿತು. ಕ್ರಮೇಣ ಜನಕ್ಕೆ ಇದು ವ್ಯಾಪಾರೀ ತಂತ್ರ ಎಂದು ಮನವರಿಕೆಯಾಗಿ ಅಡಿಕೆ ಬಿಡುವುದು ಕಡಿಮೆ ಮಾಡಿದ ಕಾರಣ ಈ ವಾರದಲ್ಲಿ ಸ್ವಲ್ಪ ಏರಿಕೆಯಾಗಿದೆ.

ಹಸಿ ಅಡಿಕೆ ಈಗ 6300-6400 ತನಕ ಖರೀದಿ ನಡೆಯುತ್ತಿದೆ. ಮಾರುಕಟ್ಟೆಗೆ ಬರುವ ಅಡಿಕೆ ಪ್ರಮಾಣವೂ ಹೆಚ್ಚಾಗಿಲ್ಲ. ಆದ ಕಾರಣ ದರ ಕುಸಿತ ಆಗದು.

ಕೆಲವು ಮೂಲಗಳ ಪ್ರಕಾರ ಇನ್ನೂ ಎರಡು  ಮೂರು ವಾರಗಳ ತನಕ ದರ ಸ್ವಲ್ಪ ಏರಿಕೆ ಸ್ವಲ್ಪ ಇಳಿಕೆ ಆಗುತ್ತಾ ಮುಂದುವರಿಯಬಹುದು. ಚೆನ್ನಾಗಿ ಬಿಸಿಲು ಬಂದ ನಂತರ ದರ ಸ್ವಲ್ಪ ಇಳಿಕೆಯೇ ಆಗಬಹುದು ಎನ್ನಲಾಗುತ್ತಿದೆ.

ಚಾಲಿಗೆ ಮತ್ತೆ ಬೇಡಿಕೆ ಕಂಡು ಬರುತ್ತಿದ್ದು, ಸ್ವಲ್ಪ ಏರಿಕೆ ಆಗಲೂ ಬಹುದು ಎಂಬುದಾಗಿ ಹೇಳುತ್ತಿದ್ದಾರೆ. ಇದಕ್ಕೆ ಪುಷ್ಟಿ ಕೊಡುವಂತೆ ಸಿಪ್ಪೆ ಗೋಟು ದರ ಸುಮಾರು 1000 ಏರಿಕೆ ಆಗಿದೆ.

ಕೆಂಪಡಿಕೆ ಮಾರುಕಟ್ಟೆ

ಎಲ್ಲಿ ಏನು ದರ:

ಊರು  ದಿನಾಂಕ ವಿಧ ಅವಕ ಕನಿಷ್ಟ ದರ  ಗರಿಷ್ಟ ದರ ಸರಾಸರಿ ದರ

ಬಂಟ್ವಾಳ: 21/10/2021, Coca, 26, 10000, 25000, 22500

BANTWALA, 21/10/2021, New Variety, 48, 25000, 50000, 46000

BANTWALA, 21/10/2021, Old Variety, 6, 46000, 51500, 49000

ಬೆಳ್ತಂಗಡಿ: 18/10/2021, New Variety, 88, 25000, 49500, 35000

BELTHANGADI, 18/10/2021, Old Variety, 274, 48800, 51500, 50000

ಬೆಂಗಳೂರು: 16/10/2021, Other, 121, 50000, 55000, 52500

ಚೆನ್ನಗಿರಿ: 21/10/2021, Rashi, 960, 46599, 47199, 46886

ಚಿತ್ರದುರ್ಗ: 21/10/2021, Api, 3, 46719, 47129, 46949

CHITRADURGA, 21/10/2021, Bette, 150, 39659, 40099, 39889

CHITRADURGA, 21/10/2021, Kempugotu, 210, 30100, 30500, 30300

CHITRADURGA, 21/10/2021, Rashi, 75, 46239, 46669, 46479

ಗುಬ್ಬಿ:       18/10/2021, Other, 17, 35000, 38000, 38000

ಹೊಳಲ್ಕೆರೆ: 18/10/2021, Rashi, 197, 44631, 51201, 47582

ಹೊನ್ನಾಳಿ:  21/10/2021, Rashi, 15, 45699, 45699, 45699

ಕಾರ್ಕಳ: 21/10/2021, New Variety, 1, 35000, 42500, 38000

KARKALA, 21/10/2021, Old Variety, 25, 46000, 50000, 48000

ಕುಮ್ಟಾ: 21/10/2021, Chippu, 6, 24109, 39699, 38949

KUMTA, 21/10/2021, Coca, 3, 18060, 34279, 33789

KUMTA, 21/10/2021, Hosa Chali, 30, 44269, 46577, 46069

KUMTA, 18/10/2021, Factory, 190, 12170, 20699, 20329

ಕುಂದಾಪುರ: 18/10/2021, Hale Chali, 47, 44000, 50000, 49200

KUNDAPUR, 18/10/2021, Hosa Chali, 1, 33000, 40000, 35500

MANGALURU, 18/10/2021, Coca, 18, 26000, 30000, 28000

ಪುತ್ತೂರು: 21/10/2021, Coca, 161, 10500, 26000, 18250

PUTTUR, 21/10/2021, New Variety, 57, 35550, 50000, 42750

ಸಾಗರ: 21/10/2021, Bilegotu, 31, 23339, 37889, 34899

SAGAR, 21/10/2021, Chali, 205, 43299, 45609, 44509

SAGAR, 21/10/2021, Coca, 9, 15500, 39109, 36499

SAGAR, 21/10/2021, Kempugotu, 3, 30899, 36699, 33099

SAGAR, 21/10/2021, Rashi, 51, 37199, 48109, 46899

SAGAR, 21/10/2021, Sippegotu, 2, 9789, 24299, 23489

ಶಿವಮೊಗ್ಗ: 21/10/2021, Bette, 20, 46300, 49670, 48100

SHIVAMOGGA, 21/10/2021, Gorabalu, 58, 16150, 38168, 36000

SHIVAMOGGA, 21/10/2021, New Variety, 8, 46019, 46899, 46399

SHIVAMOGGA, 21/10/2021, Rashi, 36, 42899, 47899, 46599

SHIVAMOGGA, 21/10/2021, Saraku, 12, 48130, 73396, 66000

ಸಿದ್ದಾಪುರ:  21/10/2021, Bilegotu, 37, 33908, 41509, 41099

SIDDAPURA, 21/10/2021, Chali, 110, 44092, 47266, 46899

SIDDAPURA, 21/10/2021, Coca, 17, 24611, 37908, 30691

SIDDAPURA, 21/10/2021, Kempugotu, 4, 28499, 34019, 32499

SIDDAPURA, 21/10/2021, Rashi, 8, 39809, 46599, 46399

SIDDAPURA, 21/10/2021, Tattibettee, 4, 34999, 43219, 38189

SIRA, 18/10/2021, Other, 230, 9000, 50000, 45789

ಶಿರಸಿ: 20/10/2021, Bette, 3, 33099, 43789, 38795

SIRSI, 20/10/2021, Bilegotu, 10, 21669, 42899, 41014

SIRSI, 20/10/2021, Chali, 39, 39099, 47411, 46842

SIRSI, 20/10/2021, Rashi, 3, 36521, 47699, 41896

ತೀರ್ಥಹಳ್ಳಿ:17/10/2021, Bette, 28, 40166, 48312, 47199

TIRTHAHALLI, 17/10/2021, EDI, 7, 39000, 46099, 45799

TIRTHAHALLI, 17/10/2021, Gorabalu, 7, 32166, 36072, 35509

TIRTHAHALLI, 17/10/2021, Rashi, 51, 40009, 46399, 45899

TIRTHAHALLI, 17/10/2021, Saraku, 13, 44519, 74530, 68754

ತುಮಕೂರು: 21/10/2021, Rashi, 96, 43500, 45600, 44500

ಯಲ್ಲಾಪುರ: 21/10/2021, Bilegotu, 10, 34299, 40142, 38469

YELLAPURA, 21/10/2021, Chali, 70, 41299, 47399, 46299

YELLAPURA, 21/10/2021, Coca, 20, 29118, 32179, 29118

YELLAPURA, 21/10/2021, Kempugotu, 1, 29206, 35123, 32357

YELLAPURA, 21/10/2021, Rashi, 20, 44090, 49309, 47865

ಕರಿಮೆಣಸು ಏರಿಕೆ:

ಕರಿಮೆಣಸು

ಕರಿಮೆಣಸು ದರದ ಮೇಲೆ ಪರಿಣಾಮ ಬೀರುವ ವಿಯೆಟ್ನಾಂ ಮೆಣಸು ಸ್ವಲ್ಪ ಹಿಮ್ಮುಖವಾಗಿದೆ. ಅಲ್ಲಿ ನೆರೆಯ ಕಾರಣದಿಂದ ಸ್ವಲ್ಪ ಮಟ್ಟಿಗೆ ಬೆಳೆಗೆ ತೊಂದರೆ ಆಗಿದೆ ಎಂಬ ವದಂತಿಯೂ ಇದೆ. ಶ್ರೀಲಂಕಾ ಸ್ಪರ್ಧೆಗೆ ಬರುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಮುಂದೆ ನಮ್ಮ ಮೆಣಸಿಗೆ  ಬೇಡಿಕೆ ಬರಲಿದೆ ಎನ್ನಲಾಗುತ್ತದೆ.  ನಮ್ಮಲ್ಲೂ ಕಾಫೀ ತೋಟದವರ ಬಳಿ ಮೆಣಸಿನ ದಾಸ್ತಾನು ಕಡಿಮೆ ಎನ್ನುತ್ತಾರೆ. ಬಹಳ ದಾಸ್ತಾನು ಇಲ್ಲದ ಕಾರಣ ಬೇಡಿಕೆ ಉಂಟಾಗಿದೆ. ಕರಾವಳಿಯಲ್ಲಿ  ಕ್ಯಾಂಪ್ಕೋ ಲೀಟರ್ ತೂಕ, ತೇವಾಂಶ ಮುಂತಾದ ಮಾನದಂಡಗಳಲ್ಲಿ 41200 ಕ್ಕೆ ಖರೀದಿ ಮಾಡುತ್ತಿದೆ. ಖಾಸಗಿಯವರಿ ಇದು ಯಾವುದೂ ಇಲ್ಲದೆ 42500 ಕ್ಕೆ ಖರೀದಿ ಮಾಡುತ್ತಿದ್ದಾರೆ.

 • ಸಿದ್ದಾಪುರದಲ್ಲಿ ಇಂದು  ಗರಿಷ್ಟ 44539 ರೂ.  ಸರಾಸರಿ  43809 ಖರೀದಿ ನಡೆದಿದೆ.
 • ಯಲ್ಲಾಪುರದಲ್ಲಿ   ಗರಿಷ್ಟ 42699 ರೂ. ಸರಾಸರಿ 41799 ಖರೀದಿ ನಡೆದಿದೆ.
 • ಶಿರಸಿಯಲ್ಲಿ ನಿನ್ನೆ ಗರಿಷ್ಟ 43669 ರೂ.ಸರಾಸರಿ   43544 ಖರೀದಿ ನಡೆದಿದೆ.
 • ಸಕಲೇಶಪುರ ಇಂದು ಸರಾಸರಿ 42000ರೂ.ಗರಿಷ್ಟ 43800ರೂ.ಆರಿಸಿದ ಮೆಣಸಿಗೆ 45000 ಇತ್ತು.

ಕೊಬ್ಬರಿ ಧಾರಣೆ:

 • ಕೊಬ್ಬರಿಗೆ ಐತಿಹಾಸಿಕ ದರ ತಲುಪಿದೆ.
 • ತಿಪಟೂರು ಕೊಬ್ಬರಿ ಧಾರಣೆ ಗರಿಷ್ಟ 17420 ರೂ. ಸರಾಸರಿ  17000 ರೂ. ಇತ್ತು.
 • ಎಣ್ನೆ ಕೊಬ್ಬರಿಗೆ  ಇಂದು ರೂ. 10200 -11000 ತನಕ ಏರಿಕೆಯಾಗಿದೆ.

ಕಾಫೀ ಧಾರಣೆ:

 • ಕಾಫೀ ದರ ಸ್ಥಿರವಾಗಿದೆ. ಇಳಿಕೆಯೂ ಇಲ್ಲ ಏರಿಕೆಯೂ ಇಲ್ಲ/
 • ಅರೆಬಿಕಾ ಪಾರ್ಚ್ ಮೆಂಟ್: 50 kg. 13400
 • ಅರೇಬಿಕಾ ಚೆರಿ:kg 230
 • ರೋಬಸ್ಟಾ ಪಾರ್ಚ್ ಮೆಂಟ್:6000
 • ರೋಬಸ್ಟಾ ಚೆರಿ:kg.135

ಅಡಿಕೆ ಬೆಳೆಗಾರರು ಮಾರಾಟಕ್ಕೆ ಒಂದು ವಾರ ಕಾಯುವುದರಿಂದ ಸ್ವಲ್ಪ ಹೆಚ್ಚಿನ ದರ ಪಡೆಯಬಹುದು.  ಭಾರೀ ದರ ಏರಿಕೆ ನಿರೀಕ್ಷೆ ಬೇಡ. ಮೆಣಸು ಬೆಳೆಗಾರರು ನವೆಂಬರ್ ಮೊದಲವಾರ ತನಕ ಕಾದು ಮಾರಾಟ ಮಾಡುವುದು ಉತ್ತಮ. ಕೇರಳದಲ್ಲೂ ಮೆಣಸಿನ ಬೆಳೆಗೆ ಮಳೆಯಿಂದಾಗಿ ರೋಗ ಹೆಚ್ಚಾಗುವ ಸಾಧ್ಯತೆ ಇದೆ.ಕರಾವಳಿಯಲ್ಲೂ ಮಳೆಗೆ ಬೆಳೆ ಸ್ವಲ್ಪ ಹಾನಿಯಾಗಿದೆ. ಆದ ಕಾರಣ ಮುಂದಿನ ಬೆಳೆ ಕಡಿಮೆ ಇರಬಹುದು.

ಮಾಹಿತಿ ಮೂಲ: ಕೃಷಿ ಮಾರಾಟ ವಾಹಿನಿ ಕರ್ನಾಟಕ ಸರಕಾರ.

Leave a Reply

Your email address will not be published. Required fields are marked *

error: Content is protected !!