ಅಡಿಕೆ- ಸೋಮವಾರ ಮಾರುಕಟ್ಟೆಗೆ ಚೇತರಿಕೆ ಬಂದಿದೆ.

by | Jun 10, 2021 | Market (ಮಾರುಕಟ್ಟೆ) | 2 comments

ಕಳೆದ ಎರಡು ತಿಂಗಳಿಂದ ಅಡಿಕೆ ಮಾರುಕಟ್ಟೆಯಲ್ಲಿ ಮೌಢ್ಯದ ವಾತಾವರಣ ಇತ್ತು. ಆದರೆ ಈಗ ಮತ್ತೆ ಚೇತರಿಕೆಯ ಹುರುಪು ಕಾಣಲಾರಂಭಿಸಿದೆ.

ಕೊರೋನಾ ಲಾಕ್ ಡೌನ್ ಮುನ್ಸೂಚನೆ ಇದ್ದ ಕಾರಣ ಮುಂಚೆಯೇ ಅಡಿಕೆ ಮಾರುಕಟ್ಟೆಯಲ್ಲಿ ಸ್ವಲ್ಪ ತಲ್ಲಣ ಉಂಟಾಗಿತ್ತು. ನಂತರ  ಕೊರೋನಾ ಲಾಕ್ ಡೌನ್, ಜನ ಒಡಾಟಕ್ಕೆ ಸಮಯ ಮಿತಿ ಮುಂತಾದವುಗಳು ಪ್ರಾರಂಭವಾದ ನಂತರ ಸ್ವಲ್ಪ ಹಿನ್ನಡೆ ಉಂಟಾಯಿತು. ಸಾಂಸ್ಥಿಕ ಖರೀದಿದಾರರು ಖರೀದಿಗೆ ಮಿತಿ ನಿರ್ಧರಿಸಿದರು. ದರ ಸ್ಥಿರತೆಯನ್ನು ಕಾಯ್ದುಕೊಂಡರು. ಖಾಸಗಿಯವರು ಸಮಯಮಿತಿಯೊಳಗೆ ಸ್ವಲ್ಪ ಕಡಿಮೆ ದರದಲ್ಲಿ ಖರೀದಿ ನಡೆಸುತ್ತಿದ್ದರಾದರೂ ಲಾಕ್ ಡೌನ್ ಇನ್ನು ಹೆಚ್ಚು ಮುಂದುವರಿಯುದಿಲ್ಲ ಎಂಬ ಸೂಚನೆ ದೊರೆತ ತಕ್ಷಣ ಸ್ವಲ್ಪ ಸ್ವಲ್ಪವೇ ದರ ಏರಿಸಲು ಮುಂದಾದರು. ಇನ್ನೇನು ಸೋಮವಾರಕ್ಕೆ  ಲಾಕ್ ಡೌನ್ ಸ್ವಲ್ಪ ಸಡಿಲಿಕೆಯಾಗಿ ವ್ಯವಹಾರಕ್ಕೆ  ವ್ಯವಹಾರಕ್ಕೆ ಸ್ವಲ್ಪ ಸಡಿಲಿಕೆ ದೊರೆಯಲಿದೆ. ಈ ಸೂಚನೆಯಿಂದಾಗಿ ದರ ಏರಲು ಪ್ರಾರಂಭವಾಗಿದೆ.

ಅಡಿಕೆ ಬೆಳೆ ಸ್ಥಿತಿಗತಿ ಹೀಗಿದೆ:

  • ಕಳೆದ ಮೂರು ವರ್ಷಗಳಿಂದಲೂ ಒಟ್ಟಾರೆಯಾಗಿ ಅಡಿಕೆಯ ಇಳುವರಿ ಕಡಿಮೆಯೇ.
  • ಹವಾಮಾನ ವೈಪರೀತ್ಯ ಅಡಿಕೆಯ ಇಳುವರಿ ಮೇಲೆ ಭಾರೀ ಹೊಡೆತವನ್ನು ನೀಡಿದೆ.
  • ಈ ವರ್ಷ  ಮಳೆ ಮಾರ್ಚ್ ನಿಂದಲೇ ಪ್ರಾರಂಭವಾಗಿ, ಅಡಿಕೆ ಬೆಳೆಯ ಮೇಲೆ ಸ್ವಲ್ಪ ಮಟ್ಟಿಗೆ ತೊಂದರೆಯನ್ನು ಮಾಡಿದೆ.
  • ಮಳೆ ಬಿಸಿಲಿನ ವಾತಾವರಣ ಅಡಿಕೆ ಬೆಳೆಗೆ ಅನುಕೂಲವಾಗಲಿಲ್ಲ.
  • ಅಡಿಕೆ ತೋಟಕ್ಕೆ ಯಾವುದೋ ಒಂದು ಅಜ್ಞಾತ ಕೀಟವೋ ರೋಗವೋ ಬಾಧಿಸಲಾರಂಭಿಸಿದೆ.
  • ಎಲೆಗಳಲ್ಲಿ ಹಾಗೂ ಮಿಡಿ ಕಾಯಿ ಉದುರುವಿಕೆಯಲ್ಲಿ ಈ ಚಿನ್ಹೆ ಗೋಚರವಾಗುತ್ತಿದೆ.
  • ಆ ಕಾರಣದಿಂದ ಈ ವರ್ಷವೂ ಮಳೆಗಾಲಕ್ಕೆ ಮುಂಚೆಯೇ ಹೆಚ್ಚಿನವರು 25% ಕ್ಕೂ ಹೆಚ್ಚಿನ ಅಡಿಕೆಯನ್ನು ಕಳೆದುಕೊಂಡಿದ್ದಾರೆ. 
  • ಇದೆಲ್ಲವೂ ದರ ಏರಿಕೆಗೆ ಒಂದು ಕಾರಣವಾಗಲಿದೆ.
ಅಡಿಕೆ ಚಾಲಿ -White supari

ರಾಜ್ಯದ  ಹೆಚ್ಚಿನ ಕಡೆ ಬಿಗು ಲಾಕ್ ಡೌನ್ ಸಡಿಲಿಕೆ ಆಗಿದೆ. ಆದರೆ ಅಡಿಕೆ ಬೆಳೆ ಪ್ರದೇಶಗಳಲ್ಲಿ ಇನ್ನು ಒಂದು ವಾರ ಕಾಲ ಲಾಕ್ ಡೌನ್ ಮುಂದುವರಿಕೆಯಾಗಿದೆ.  ಬಹುಷಃ ಇಲ್ಲಿ ಲಾಕ್ ಡೌನ್ ಮುಗಿಯುವ ಸುಮಾರಿಗೆ ದರ ಕಿಲೊಗೆ ಇನ್ನೂ 10-15 ರೂ. ಹೆಚ್ಚಳ ಆಗಬಹುದು ಎಂಬ ವದಂತಿ ಇದೆ. ಆ ತನಕ ಕಾದು ಮಾರಾಟ ಮಾಡುವುದು ಉತ್ತಮ ಎನ್ನಿಸುತ್ತದೆ.

ಇಂದಿನ ಅಡಿಕೆ ಧಾರಣೆ:

  • ಹೊಸ ಚಾಲಿ ಕ್ವಿಂಟಾಲು ರೂ. 40,500  41,200
  • ಹಳೆ ಚಾಲಿ  ಕ್ವಿಂಟಾಲು  ರೂ. 50,500 -51,000
  • ಪಟೋರ್ ಕ್ವಿಂಟಾಲು ರೂ.     37,500
  • ಉಳ್ಳಿ ಗಡ್ಡೆ  ಕ್ವಿಂಟಾಲು ರೂ.25,000
  • ಕರಿಗೋಟು ರೂ.25,500  ತನಕ ಇದೆ. ಖಾಸಗಿಯವರ ದರ ಸಹಕಾರಿ ದರಕ್ಕಿಂತ ಹೆಚ್ಚು ಇದೆ.
  • ಕೆಂಪಡಿಕೆ ಮಾರುಕಟ್ಟೆ ಓಪನ್ ಆಗಲಿಲ್ಲ  ಖಾಸಗಿಯವರು
  • ರಾಶಿ ಕ್ವಿಂಟಾಲಿಗೆ ರೂ.42,000-42,500  ತನಕ ಖರೀದಿ ಮಾಡುತ್ತಿದ್ದಾರೆ.

ಉತ್ತರ ಭಾರತದಿಂದ ಬೇಡಿಕೆ ಹೆಚ್ಚಳ:

  • ಕಳೆದ ಎರಡು ತಿಂಗಳಿನಿಂದ ಉತ್ತರ ಭಾರತಕ್ಕೆ ಅಡಿಕೆಯ ರವಾನೆ ಹಿಂದಿನಂತೆ ಇರಲಿಲ್ಲ.
  • ಅರ್ಧಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ  ಸಾಗಾಟ ಆಗಿದೆ.  ಬೇಡಿಕೆ ಇದ್ದರೂ ಇಲ್ಲಿ ದಾಸ್ತಾನು ಇರಲಿಲ್ಲ.
  • ರೈತರೂ ಸಹ ಲಾಕ್ ಡೌನ್ ಮುಗಿಯುವಾಗ ದರ ಏರಿಯೇ ತೀರುತ್ತದೆ ಎಂದು ಧೈರ್ಯ ಮಾಡಿದ್ದರು.
  • ಹಾಗಾಗಿ ಮಾರುಕಟ್ಟೆಗೆ ಕಳೆದ ವರ್ಷದಂತೆ ಅಂಜಿ ಮಾರಾಟ ಮಾಡಿರಲಿಲ್ಲ.
  • ಇದು ಕೊರತೆಯನ್ನು ಸೃಷ್ಟಿಸಿದೆ. ಉತ್ತರ ಭಾರತದ ಅಡಿಕೆ ಖರೀದಿದಾರರಲ್ಲೂ ಹೆಚ್ಚಿನ ದಾಸ್ತಾನು  ಇಲ್ಲ.
  • ಈ ಕಡೆ ಸ್ಥಳೀಯ ವ್ಯಾಪಾರಿಗಳಲ್ಲೂ ( ಗಾರ್ಬಲ್ ಕೇಂದ್ರ) ಇಲ್ಲ. ಹಾಗಾಗಿ ಅಡಿಕೆ ಕಳುಹಿಸಿ ಎಂಬ ಒತ್ತಡ ಸ್ಥಳೀಯ ವ್ಯಾಪಾರಿಗಳಿಗೆ ಇದೆ.
  • ಇವರು ಹದವಾಗಿ ದರ ಏರಿಸುತ್ತಾ ಮುಂದಿನ ಸೋಮವಾರಕ್ಕೆ ಕಾಯುತ್ತಿದ್ದಾರೆ.
Advertisement 12

ಮಾರುಕಟ್ಟೆ ವ್ಯವಸ್ಥೆ ಮುಂತಾದವುಗಳಿಗೆ ಸ್ವಲ್ಪ ಸಡಿಲಿಕೆ ಮಾಡಿ, ಲಾಕ್ ಡೌನ್ ಮುಂದಿನ ಜೂನ್ 20 ರ ತನಕ ಮುಂದುವರಿಯುವ ಸಾಧ್ಯತೆ ಇದೆ.

ಬರೇ ಚಾಲಿ ಮಾತ್ರವಲ್ಲ. ಕೆಂಪಡಿಕೆಯ ಮಾರುಕಟ್ಟೆಯಲ್ಲೂ ಬೇಡಿಕೆ ಉಂಟಾಗಿದೆ. ಲಾಕ್ ಡೌನ್ ಸಮಯದಲ್ಲೂ  ದರ ಇಳಿಕೆ ಆಗಿರಲಿಲ್ಲ. ಖಾಸಗಿ ವ್ಯಾಪಾರಿಗಳು ಹೆಚ್ಚಿನ ಆಸಕ್ತಿಯಲ್ಲಿ ಖರೀದಿ ಮಾಡುತ್ತಾ ಇದ್ದರು. ಕೆಂಪಡಿಕೆಗೆ ಈ ವರ್ಷ ಬೇಡಿಕೆ ಹೆಚ್ಚಾಗಿ ದರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂಬುದಾಗಿ ಶಿವಮೊಗ್ಗದ ಅಡಿಕೆ ವ್ಯಾಪಾರಸ್ಥರು ಸೂಚನೆ ನೀಡುತ್ತಾರೆ. ಲಾಕ್ ಡೌನ್ ಮುಗಿದ ತಕ್ಷಣ ಸಾಗಾಟ ಸುಗಮವಾಗಲಿದೆ. ಅಡಿಕೆ ರವಾನೆ ಹಿಂದಿನಂತೆ  ಪ್ರಾರಂಭವಾದ ತಕ್ಷಣ ದರ ಏರಿಕೆ ಪ್ರಾರಂಭವಾಗುತ್ತದೆ.

ಅಡಿಕೆ ಕೆಂಪು –Red supari

ನಿರೀಕ್ಷಿಸಬಹುದಾದ ದರ:

  • ನವೆಂಬರ್ ತನಕವೂ ದರ ಇಳಿಕೆಯಾಗದೆ ಸಾಗಲಿದೆ ಎಂಬ ವದಂತಿಗಳಿವೆ.
  • ಈ ವರ್ಷದ ಚಾಲಿ ಅಡಿಕೆಯ ಗುಣಮಟ್ಟ ಉತ್ತಮವಾಗಿಲ್ಲ. ಕರಾವಳಿ, ಮಲೆನಾಡು ಹೆಚ್ಚಿನ ಕಡೆಗಳಲ್ಲಿ ಮಳೆಗೆ ಸಿಕ್ಕಿ ಹೆಚ್ಚಿನ ಕೊಯಿಲಿನ ಅಡಿಕೆ ಹಾಳಾಗಿದೆ.
  • ಬಹಳಷ್ಟು ಜನ ಮಳೆಯ ಕಾರಣಕ್ಕಾಗಿ ಒಣಗು ಮನೆಯಲ್ಲಿ ರಾಶಿ ಹಾಕಿದ ಕಾರಣ ಅಡಿಕೆ ಹೊರಗೆ ಒಣಗಿದ್ದರೂ ಒಳ ಭಾಗ ಹಾಳಾಗಿದೆ. 
  • ಕೊಯಿಲಿನ ಅಡಿಕೆ ಹೀಗೆ ಆದದ್ದು ಈ ವರ್ಷವೇ ಮೊದಲು ಇರಬೇಕು.  
  • ಬೆಳೆಗಾರರು ಇದನ್ನು ಲಾಕ್ ಡೌನ್ ಮುಗಿದು ದರ ಏರಿಕೆ ಆದ ತಕ್ಷಣವೇ ಮಾರಾಟ ಮಾಡಲಿದ್ದಾರೆ.  ಇಂಥ ಅಡಿಕೆ ಖರೀದಿ ನಡೆದು ಗುಣಮಟ್ಟದ ಕಾರಣದಿಂದ ಮತ್ತೆ ಕೆಲವು ಸಮಯ ದರ ಇಳಿಕೆಯಾಗುವ  ಸಂಭವವೂ ಇದೆ ಎನ್ನುತ್ತಾರೆ ಒಬ್ಬ ವ್ಯಾಪಾರಿಗಳು.
  • ಹಾಗಾಗಿ ಬೆಳೆಗಾರರು ಉತ್ತಮ ಗುಣಮಟ್ಟದ ಖಾತ್ರಿ ಇದ್ದರೆ ಮಾತ್ರ ದಾಸ್ತಾನು ಇಡಿ. ಇಲ್ಲವಾದರೆ ಜೂನ್ ಕೊನೆಯ ವಾರ ಜುಲೈ ಮೊದಲವಾರದಲ್ಲಿ ದರ ಏರಿಕೆಯಾದ ತಕ್ಷಣ ಮಾರಾಟ ಮಾಡುವುದು ಉತ್ತಮ. (ದರ ಏರಿಕೆಯ ಸಮಯದಲ್ಲಿ ಗುಣಮಟ್ಟದ ಬಗ್ಗೆ ಹೆಚ್ಚು ಗಮನ ಇರುವುದಿಲ್ಲ) ಒಳಗೆ ಹಾಳಾದ ಅಡಿಕೆಯನ್ನು ಯಾವುದೇ ಕಾರಣಕ್ಕೆ ದಾಸ್ತಾನು ಇಡಬೇಡಿ.
  • ಈಗಾಗಲೇ ಹೊಸ ಅಡಿಕೆಯ ದರ 400-410 ತನಕ ಏರಿಕೆಯಾಗಿದೆ.
  • ಹಳೆ ಅಡಿಕೆಗೆ 500-510 ತನಕ ಚಾಲನೆಯಲ್ಲಿದೆ. ಕೆಂಪಡಿಕೆ ರಾಶಿ ಸಾಂಸ್ಥಿಕ ಖರೀದಿ ಇಲ್ಲ. 
  • ಆದರೂ ನಿನ್ನೆ ಬೀರೂರಿನಲ್ಲಿ ರಾಶಿ 41,000-43,000 ದರದಲ್ಲಿ ಖರೀದಿ ಆಗಿದೆ. ಅಡಿಕೆ ಮಂಡಿಯವರು ಸೋಮವಾರದ ನಂತರ ಖರೀದಿಗೆ ಅನುಮತಿ ನೀಡಬೇಕು ಎಂದು ಸ್ಥಳೀಯ ಶಾಸಕರ ಜೊತೆ ಒತ್ತಾಯಿಸುತ್ತಿದ್ದಾರೆ.
  • ಈ ದಿನ (10-06-2021) ಮುಖ್ಯ ಮಂತ್ರಿಗಳು ಶಿವಮೊಗ್ಗಕ್ಕೆ ಭೇಟಿಕೊಡುವವರಿದ್ದು ಇಂದು ಖರೀದಿ ಬಗ್ಗೆ ನಿರ್ಧಾರ ಆಗಲಿದೆ.ಬಹುಶಃ ಸೋಮವಾರದ ತರುವಾಯ ಮಾರುಕಟ್ಟೆ ತೆರೆಯುವ ಸಾಧ್ಯತೆ ಇದೆ.
  • ಮಾರುಕಟ್ಟೆ ತೆರೆದಾಗ ಸಹಜವಾಗಿ ಕೆಲವು ದಿನಗಳ ತನಕ ದರ ಏರಿಕೆ ಕಾಣಬಹುದು.

ಬೆಳೆಗಾರರು ಏನು ಮಾಡಬೇಕು:

  • ಮೊದಲೇ ಹೇಳಿದಂತೆ ಸರಿಯಾಗಿ ಒಣಗಿದ ಅಡಿಕೆಯನ್ನು ಮಾತ್ರ ದಾಸ್ತಾನು ಇಡಿ.
  • ಜೂನ್ ಕೊನೆ ಅಥವಾ ಜುಲಾಯಿ ಮೊದಲ ವಾರದಲ್ಲಿ ದರ ಒಮ್ಮೆ ಏರಿಕೆಯಾಗಿ ಹಿಂದಿನ ಸಾರ್ವಕಾಲಿಕ ದಾಖಲೆಯಾದ ಹೊಸತು 42,500 ಮತ್ತು ಹಳತು 52,500 ತನಕ ತಲುಪಬಹುದು. ಅಥವಾ ಸ್ವಲ್ಪ ಹೆಚ್ಚಳವೂ ಆಗಬಹುದು.
  • ಆಗ ಬೆಳೆಗಾರರು ಅಡಿಕೆ ಕೊಡುವುದನ್ನು ಮುಂದೂಡುತ್ತಾರೆ. ದರ ಇಳಿಸುತ್ತಾರೆ.
  • ಪುನಹ ಅವಕ ಹೆಚ್ಚಾಗಿ ಸಪ್ಟೆಂಬರ್ ಸಮಯಕ್ಕೆ  ಮತ್ತೆ ಏರಿಕೆ ಪ್ರಾರಂಭವಾಗಬಹುದು.
  • ಅ ಸಮಯಕ್ಕೆ ಬೆಳೆಗಾರರಲ್ಲಿ ಅಡಿಕೆ ತುಂಬಾ ಕಡಿಮೆಯಾಗಿ ಹೊಸ ಚಾಲಿ ದರ ರೂ.50,000 ಕೆಂಪು 45,000 ದಿಂದ 47,000  ತನಕವೂ ಏರಬಹುದು.
  • ಮೊದಲೇ ಹೇಳಿದಂತೆ ಒಳ್ಳೆಯ ಗುಣಮಟ್ಟದ ಅಡಿಕೆಯನ್ನು ದಾಸ್ತಾನು ಇಟ್ಟು ಸಂಶಯ ಇರುವ ಅಡಿಕೆಯನ್ನು ಮೊದಲ ಏರಿಕೆ ಅಲೆಯಲ್ಲಿ ಕೊಟ್ಟುಬಿಡಿ.

ಅಡಿಕೆ ವ್ಯಾಪಾರಿಗಳು ಈ ಕೆಲವು ಸುಳಿವು ನೀಡುತ್ತಾರೆಯಾದರೂ ಎಲ್ಲವೂ ಸರಿಯಾಗುತ್ತದೆ ಎಂಬಂತಿಲ್ಲ. ಯಾವ ವ್ಯಾಪಾರಿಯೂ ಈ ಬಗ್ಗೆ ಬಹಿರಂಗ ಹೇಳಿಕೆ ನೀಡಲು ಮುಂದಾಗುತ್ತಿಲ್ಲ.  ಪರಿಸ್ಥಿತಿಯ ಕಾರಣ ಮತ್ತು ಒಟ್ಟಾರೆ ಕೊರತೆ ಕಾರಣ ಒಮ್ಮೆ ದರ ಏರಿಕೆ ಆಗಿಯೇ ತೀರುತ್ತದೆ. ದರ ಏರಿಕೆಯ ಸದುಪಯೋಗವನ್ನು ಬೆಳೆಗಾರರರು ನಗದೀಕರಣ ಮಾಡಿಕೊಳ್ಳಲೇ ಬೇಕು.

2 Comments

  1. Sudarshan

    Super

    Reply
    • hollavenur

      It is our prediction. From reliable source only. Thank you for your comment.

      Reply

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!