ಏರುಗತಿಯತ್ತ ಅಡಿಕೆ ಧಾರಣೆ- ದಿನಾಂಕ:12-11-2021 ಶುಕ್ರವಾರ.

ಚಾಲೀ ಆಡಿಕೆ ಲಾಟ್

ಇಂದು ದಿನಾಂಕ 12-11-2021 ಶುಕ್ರವಾರ ರಾಜ್ಯದಾದ್ಯಂತ ಅಡಿಕೆ ಧಾರಣೆಯನ್ನು ಗಮನಿಸಿದಾಗ ಚಾಲಿಯೂ ಸೇರಿದಂತೆ , ಕೆಂಪಡಿಕೆಗೂ ತುಸು ದರ ಏರಿಕೆ ಸೂಚನೆಗಳು ಕಂಡು ಬರುತ್ತಿದೆ. ಶಿರಸಿಯಲ್ಲಿ ಇಂದು ಚಾಲಿ ಮತ್ತು ಕೆಂಪು ರಾಶಿ ನಿನ್ನೆಗಿಂತ ಸ್ವಲ್ಪ ಹೆಚ್ಚಿನ ದರಕ್ಕೆ ಖರೀದಿ ಆಗಿದೆ.  ಹೊಸನಗರ ಮಾರುಕಟ್ಟೆಯಲ್ಲಿಯೂ ತುಸು ಹೆಚ್ಚು ದರಕ್ಕೆ ಖರೀದಿ ಆಗಿದೆ. ನಾಳೆ ಎರಡನೇ ಶನಿವಾರ ಇದ್ದಾಗ್ಯೂ ದರ ಸ್ವಲ್ಪ ಏರಿಕೆ ಆಗಿದೆ ಎಂದರೆ  ಸೋಮವಾರವೂ ಕ್ವಿಂಟಾಲಿಗೆ 200-500 ಏರಿಕೆ ಆಗಬಹುದು. ಸರಾಸರಿ ದರ ಕನಿಶ್ಟ ದರಗಳ ಮಧ್ಯಂತರ ಕಡಿಮೆ ಇದ್ದರೆ ಬೇಡಿಕೆ ಇದೆ ಎಂದರ್ಥ. ಹಾಗಾಗಿ  ದರ ಇಳಿಯುವ ಸಾಧ್ಯತೆ ಕಡಿಮೆ. ದೊಡ್ದ ಏರಿಕೆ  ಸಾಧ್ಯತೆ ಇಲ್ಲ.

ಚಾಲಿ ದರ ಇಂದು ಕರಾವಳಿಯಲ್ಲಿ ಮತ್ತೆ ಎದ್ದು ನಿಂತಂತಿದೆ. ಖಾಸಗಿಯವರು ಕೆಲವು ಕಡೆ ಕ್ವಿಂಟಾಲಿಗೆ 50,500 ಕ್ಕೆ ಖರೀದಿ ಮಾಡಿದ್ದುಂಟು. ಕ್ಯಾಂಪ್ಕೋ ಸಹ ಇಂದು ಕೆಲವು ಕಡೆ 50,000 ದರ ಕ್ಕೆ ಖರೀದಿ ಮಾಡಿದೆ. ಖಾಸಗಿಯವರು ಅಡಿಕೆ ಖರೀದಿಯಲ್ಲಿ ಆಸಕ್ತರಾಗಿರುವ ಕಾರಣ ಸ್ವಲ್ಪ ದರ ಏರಬಹುದು. ಭಾರೀ ಹೆಚ್ಚಳ ಸಾಧ್ಯತೆ ಇಲ್ಲ.

ಅಡಿಕೆ ಧಾರಣೆ: ಕ್ವಿಂಟಾಲು.

ರಾಸಿ ಕೆಂಪು

ಊರು- ದಿನಾಂಕ – ವಿಧ – ಒಟ್ಟು ಅವಕ –ಕನಿಷ್ಟ ದರ-ಗರಿಷ್ಟ ದರ-ಸರಾಸರಿ ದರ

 • ಅರಕಲಗೂಡು: 10/11/2021, Other, 14, 19500, 55500, 52700
 • ಅರಕಲ ಗೂಡು: 10/11/2021, Raw, 235, 2000, 2000, 2000
 • ಬಂಟ್ವಾಳ: 12/11/2021, Coca, 11, 12500, 25000, 22500
 • BANTWALA, 12/11/2021, New Variety, 22, 27500, 42500, 40000
 • BANTWALA, 11/11/2021, Old Variety, 2, 46000, 51500, 49500
 • ಬೆಳ್ತಂಗಡಿ: 10/11/2021, New Variety, 20, 26000, 50000, 47000
 • BELTHANGADI, 09/11/2021, Old Variety, 198, 48000, 51500, 49000
 • ಬೆಂಗಳೂರು: 11/11/2021, Other, 25, 50000, 55000, 52500
 • ಬಧ್ರಾವತಿ: 09/11/2021, Rashi, 612, 45299, 47001, 46539
 • ಚೆನ್ನಗಿರಿ: 11/11/2021, Rashi, 2727, 43129, 47099, 46105
 • ಚಿತ್ರದುರ್ಗ: 08/11/2021, Api, 3, 45600, 46000, 45800
 • CHITRADURGA, 08/11/2021, Bette, 120, 39139, 39569, 39389
 • CHITRADURGA, 08/11/2021, Kempugotu, 175, 30429, 30899, 30679
 • CHITRADURGA, 08/11/2021, Rashi, 60, 45119, 45559, 45349
 • ದಾವಣಗೆರೆ: 12/11/2021, Rashi, 473, 35869, 46139, 45706
 • ಗೋಣಿಕೊಪ್ಪ: 12/11/2021, ARECANUT-HUSK, 76, 4000, 4167, 4000
 • ಹೊನ್ನಾಲಿ: 10/11/2021, Rashi, 11, 45199, 45899, 45699
 • ಹೊಸನಗರ:  12/11/2021, Chali, 7, 41509, 44599, 44399
 • HOSANAGAR, 12/11/2021, Kempugotu, 25, 30399, 37899, 36599
 • ಹೊಸನಗರ: 12/11/2021, Rashi, 593, 42569, 47010, 46799
 • ಹುಲಿಯಾರು: 11/11/2021, Red, 47, 41283, 41283, 41283
 • ಕೆ ಆರ್ ಪೇಟೆ: 10/11/2021, Sippegotu, 105, 5800, 5800, 5800
 • ಕಾರ್ಕಳ: 12/11/2021, New Variety, 1, 35000, 42500, 38000
 • KARKALA, 12/11/2021, Old Variety, 20, 46000, 51000, 48000
 • ಕುಮಟಾ: 12/11/2021, Chippu, 30, 25509, 39969, 39469
 • KUMTA, 12/11/2021, Coca, 20, 18089, 35019, 34789
 • KUMTA, 12/11/2021, Factory, 85, 14019, 19299, 18979
 • KUMTA, 12/11/2021, Hale Chali, 150, 44089, 46699, 46219
 • KUMTA, 12/11/2021, Hosa Chali, 50, 36199, 40069, 39809
 • ಕುಂದಾಪುರ: 12/11/2021, Hale Chali, 5, 46000, 49500, 49400
 • KUNDAPUR, 11/11/2021, Hosa Chali, 2, 30000, 37000, 30000
 • ಮಾಲೂರು: 11/11/2021, Other, 200, 20000, 40000, 21000
 • ಮಂಗಳೂರು: 11/11/2021, Coca, 288, 24400, 48400, 47900
 • ಪುತ್ತೂರು: 12/11/2021, New Variety, 9, 27500, 42500, 35500
 • PUTTUR, 10/11/2021, Coca, 142, 10500, 26000, 18250
 • ಸಾಗರ: 11/11/2021, Bilegotu, 46, 21786, 38289, 37199
 • SAGAR, 11/11/2021, Chali, 148, 32009, 45099, 44799
 • SAGAR, 11/11/2021, Coca, 21, 30299, 38199, 37499
 • SAGAR, 11/11/2021, Kempugotu, 1, 21219, 36909, 35899
 • SAGAR, 11/11/2021, Rashi, 14, 38199, 47019, 46599
 • SAGAR, 11/11/2021, Sippegotu, 7, 14789, 25359, 24839
 • ಶಿವಮೊಗ್ಗ: 12/11/2021, Bette, 5, 49069, 51869, 51250
 • SHIVAMOGGA, 12/11/2021, Gorabalu, 729, 17259, 39289, 37639
 • SHIVAMOGGA, 12/11/2021, Rashi, 1312, 41069, 46899, 46190
 • SHIVAMOGGA, 12/11/2021, Saraku, 2, 49199, 73251, 66100
 • ಸಿದ್ದಾಪುರ: 12/11/2021, Bilegotu, 47, 31509, 40508, 36899
 • SIDDAPURA, 12/11/2021, Chali, 200, 43099, 47599, 47299
 • SIDDAPURA, 12/11/2021, Coca, 17, 24999, 38199, 36232
 • SIDDAPURA, 12/11/2021, Hosa Chali, 4, 28099, 36299, 32099
 • SIDDAPURA, 12/11/2021, Kempugotu, 3, 20699, 28699, 24012
 • SIDDAPURA, 12/11/2021, Rashi, 34, 42989, 46899, 45899
 • SIDDAPURA, 12/11/2021, Tattibettee, 2, 32899, 43699, 39039
 • ಸಿರಾ: 08/11/2021, Other, 296, 9000, 49500, 44095
 • ಸಿರ್ಸಿ: 12/11/2021, Bette, 7, 38523, 42899, 41527
 • SIRSI, 12/11/2021, Bilegotu, 18, 28139, 42999, 38554
 • SIRSI, 12/11/2021, Chali, 138, 45119, 47699, 46983
 • SIRSI, 12/11/2021, Rashi, 23, 45700, 48999, 47423
 • ತೀರ್ಥಹಳ್ಳಿ: 07/11/2021, Bette, 16, 44166, 50119, 47599
 • TIRTHAHALLI, 07/11/2021, EDI, 34, 42019, 46799, 46099
 • TIRTHAHALLI, 07/11/2021, Gorabalu, 8, 34099, 36669, 36099
 • TIRTHAHALLI, 07/11/2021, Rashi, 31, 39899, 46899, 45899
 • TIRTHAHALLI, 07/11/2021, Saraku, 21, 42166, 72500, 66800
 • ತುಮಕೂರು: 10/11/2021, Rashi, 105, 45400, 46800, 46100
 • ಯಲ್ಲಾಪುರ: 12/11/2021, Bilegotu, 26, 32181, 41309, 39531
 • YELLAPURA, 12/11/2021, Chali, 283, 43389, 47789, 46438
 • YELLAPURA, 12/11/2021, Coca, 36, 22899, 31899, 29899
 • YELLAPURA, 12/11/2021, Kempugotu, 2, 28471, 36690, 32719
 • YELLAPURA, 12/11/2021, Rashi, 181, 45806, 52399, 51399
 • YELLAPURA, 12/11/2021, Tattibettee, 19, 36899, 44369, 42289
 • YELLAPURA, 11/11/2021, Api, 1, 54499, 56335, 56335

ಕರಿಮೆಣಸು ಧಾರಣೆ:ಕ್ವಿಂಟಾಲು.

ಅಯ್ದ ಕರಿಮೆಣಸು

ಹಿಂದಿನ ವಾರ ಮೆಣಸಿನ ದರ ಇಳಿಸಿ  ರೈತರಿಂದ ಮೆಣಸನ್ನು ಹೊರ ತರುವ ಪ್ರಯತ್ನ ಮಾಡಲಾಯಿತಾದರೂ ಅದಕ್ಕೆ ಬೆಳೆಗಾರರು ಸ್ಪಂದಿಸಲಿಲ್ಲ. ಮೆಣಸಿಗೆ ಬೇಡಿಕೆ ಇದ್ದು, ಹೊರ ದೇಶದ ಮೆಣಸು ಬರುತ್ತಿಲ್ಲ. ಆದ ಕಾರಣ ಇಂದು ಒಂದೇ ದಿನಕ್ಕೆ ಕ್ವಿಂಟಾಲಿಗೆ 1000 ರೂ. ಕ್ಯಾಂಪ್ಕೋ ಹೆಚ್ಚಿಸಿದೆ. ಖಾಸಗಿಯವರು 1500 ರೂ. ಹೆಚ್ಚಿಸಿದ್ದಾರೆ. ಈ ತಿಂಗಳ ಕೊನೆ ಒಳಗೆ ,55,000 ದಾಟಬಹುದು. ಮುಂದೆ ಕೊಯಿಲಿನ ಸಮಯದಲ್ಲೂ ಭಾರೀ ಇಳಿಕೆ ಆಗದು ಎನ್ನುತ್ತಾರೆ.

 • ಕಾರ್ಕಳ: 10/11/2021, 44000, 49,500, 47000
 • ಮಂಗಳೂರು: 12/11/2021, 30000, 36000, 33000
 • ಸಿದ್ದಾಪುರ: 12/11/2021, 47309, 49699, 48869
 • ಸಿರ್ಸಿ: 12/11/2021, 47889, 50809, 49575
 • ಯಲ್ಲಾಪುರ: 12/11/2021,  44060, 49651, 48601
 • ಮೂಡಿಗೆರೆ: 12/11/2021 49,500-51,000
 • ಸಕಲೇಶಪುರ: 12/11/2021 49000-50,000
 • ಚಿಕ್ಕಮಗಳೂರು: 12/11/202148,500-49,50050,000
 • ಕಳಸ: 12/11/2021 , 48,500-49,000-50,000
 • ಗೋಣಿಕೊಪ್ಪ: 12/11/2021  48,000-49500
 • ತೀರ್ಥಹಳ್ಳಿ ;12/11/2021 ,49,000-51,000

ಏಲಕ್ಕಿ ದರ: ಕಿಲೋ .

 • ಕೂಳೆ: 600-650
 • ನಡುಗೋಲು: 700-750
 • ರಾಶಿ ಉತ್ತಮ: 1000-1050
 • ಆಯ್ದದ್ದು: 1200-1300
 • ಹಸಿರು  ಉತ್ತಮ:1300-1400

ಜಾಯೀ ಸಾಂಬಾರ:ಕಿಲೋ.

 • ಜಾಯೀ ಕಾಯಿ: 200-225
 • ಜಾಯೀ ಪತ್ರೆ: 900-1050

ಹಸಿ ಶುಂಠಿ ದರ ಕ್ವಿಂಟಾಲು:

 • ಊರು- ದಿನಾಂಕ – ವಿಧ – ಅವಕ –ಕನಿಷ್ಟ -ಗರಿಷ್ಟ -ಸರಾಸರಿ
 • ಅರಸೀಕೆರೆ: 10/11/2021, ಹಸಿ, 7, 1500, 1500, 1500
 • ಬೇಲೂರು: 11/11/2021, ಹಸಿ, 25, 1000, 1000, 1000
 • ಬೆಂಗಳೂರು: 12/11/2021, ಹಸಿ, 497, 1800, 2000, 1900
 • ಬಿನ್ನಿ ಮಿಲ್: 12/11/2021, ಹಸಿ, 104, 2600, 3000, 2800
 • ಹಾಸನ: 10/11/2021, ಹಸಿ, 111, 450, 450, 450
 • ಕೋಲಾರ: 12/11/2021, ಹಸಿ, 12, 2000, 3000, 2500
 • ಮೈಸೂರು: 12/11/2021, ಹಸಿ, 74, 3800, 4000, 3950
 • ರಾಮನಗರ: 12/11/2021, ಹಸಿ, 10, 1800, 3600, 2500
 • ತಿ. ನರಸಿಪುರ: 11/11/2021, ಹಸಿ, 1, 1000, 2000, 1000

ಕೊಬ್ಬರಿ ಧಾರಣೆ: ಕ್ವಿಂಟಾಲು.

ಉಂಡೆ ಕೊಬ್ಬರಿ

ರಾಜ್ಯದ ಅರಸೀಕೆರೆ. ತಿಪಟೂರು ಮುಂತಾದ ಕಡೆ ಕೊಬ್ಬರಿ ಧಾರಣೆ ಸ್ಥಿರವಾಗಿತ್ತು. ಈ ವರ್ಷ ಉಂಡೆ ಕೊಬ್ಬರಿಗೆ ಬೇಡಿಕೆ ಚೆನ್ನಾಗಿದೆ. ಮುಂದಿನ ತಿಂಗಳಿಗೆ ಸಭೆ ಸಮಾರಂಭಗಳು ಹೆಚ್ಚಾಗಲಿದ್ದು, ಎಣ್ಣೆ ಕೊಬ್ಬರಿಯೂ ಸೇರಿದಂತೆ ಖಾದ್ಯ ಕೊಬ್ಬರಿಗೆ ಬೇಡಿಕೆ ಹೆಚ್ಚಾಗಲಿದೆ.

 • ಅರಸೀಕೆರೆ: 12/11/2021, Copra, 366, 14000, 17300, 15325
 • ಚೆನ್ನರಾಯಪಟ್ನ: 11/11/2021, Other, 15, 4000, 4000, 4000
 • ಹುಲಿಯಾರು: 11/11/2021, Ball, 6, 17208, 17208, 17208
 • ಕೆ ಆರ್ ಪೇಟೆ: 12/11/2021, Other, 6, 10209, 10209, 10209
 • ಮಂಗಳೂರು: 12/11/2021, Milling, 416, 8000, 11000, 9000
 • ತುರುವೇಕೆರೆ: 12/11/2021, Copra, 581, 17000, 17200,
 • ತೆಂಗಿನ ಕಾಯಿ; 30-32

ಕಾಫೀ ಧಾರಣೆ:50 Kg

ಕಾಫೀ ದರ ಸ್ಥಿರವಾಗಿದೆ. ಈ  ವರ್ಷ ಬೆಳೆ ಹಾಳಾದ ಲೆಕ್ಕದಲ್ಲಿ ಬೆಲೆ ಏರಬೇಕು. ‘

 • ಅರೆಬಿಕಾ ಪಾರ್ಚ್ ಮೆಂಟ್: 13400
 • ಅರೇಬಿಕಾ ಚೆರಿ: 5900
 • ರೋಬಸ್ಟಾ ಪಾರ್ಚ್ ಮೆಂಟ್: 6150
 • ರೋಬಸ್ಟಾ ಚೆರ್ರಿ:3550

ರಬ್ಬರ್ ಧಾರಣೆ: ಕಿಲೋ.

 • 1X  Grade: 183.50
 • RSS 5: 170-00
 • RSS 4:177-00
 • Lot:  165-00
 • Scarap: 117-00

ಬಹುಷಃ ಕೊರೋನಾ ನಮ್ಮ ತಂಟೆಗೆ ಬಾರದೆ, ಅಲ್ಲಿಗೇ ಸ್ಥಬ್ಧವಾದರೆ ಒಟ್ಟಾರೆ ಮಾರುಕಟ್ಟೆ ಹೊಸ ಹುರುಪಿನಲ್ಲಿ ಮುಂದುವರಿಯಲಿದೆ. ಅದ್ದೂರಿಯ ಸಭೆ ಸಮಾರಂಭಗಳು,  ಜಾತ್ರೆ, ಮದುವೆ, ಮುಂತಾದ ಸಮಾರಂಭಗಳು ಅಡೆ ತಡೆಗಳಿಲ್ಲದೆ ನಡೆಯಲಿ. ಕೃಷಿಕರಿಗೆ ಎಲ್ಲವೂ ಅನುಕೂಲವಾಗಲಿ ಎಂಬ ಆಶಯ.

Leave a Reply

Your email address will not be published. Required fields are marked *

error: Content is protected !!