ಚಾಲಿ ಮಾರುಕಟ್ಟೆ ದರ ಸ್ವಲ್ಪ ಏರಿಕೆ ಆಗುವ ಮುನ್ಸೂಚನೆ ಕಾಣಿಸುತ್ತದೆ. ಕೆಂಪು ಸ್ವಲ್ಪ ಸಮಯದ ತನಕ ಅಸ್ಥಿರವಾಗಿ ಮುಂದುವರಿಯಬಹುದು. ಹಾಗೆಯೇ ಕರಿಮೆಣಸು ಮತ್ತೆ ಚೇತರಿಕೆ ಆಗುವ ಮುನ್ಸೂಚನೆ ಇದೆ. ಖಾಸಗಿಯವರು ಸಾಂಸ್ಥಿಕ ಖರೀದಿದಾರರಿಗಿಂತ ಸ್ವಲ್ಪ ಮುಂದೆ ಇದ್ದಾರೆ. ಹಾಗೆಯೇ ಗುಜರಾತ್ ಚುನಾವಣೆ ಇನ್ನೇನು ಎರಡು ದಿನಗಳಲ್ಲಿ ಮುಗಿಯಲಿದೆ. ಆ ನಂತರ ಬೇಡಿಕೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ವ್ಯಾಪಾರಿಗಳು ಚಾಲಿ ದಾಸ್ತಾನಿಗೆ ಮುಂದಾಗಿದ್ದಾರೆ. ಕೆಂಪಡಿಕೆ ಇನ್ನು 1-2 ತಿಂಗಳು ಸ್ವಲ್ಪ ಇಳಿಕೆಯಾಗಬಹುದು. ಕರಿಮೆಣಸು ಈ ತಿಂಗಳಲ್ಲಿ ಮತ್ತೆ 52500 ತನಕ ಏರುವ ಸಾಧ್ಯತೆ ಕಾಣಿಸುತ್ತದೆ.
ಗುಜರಾತ್ ಚಾಲಿ ಅಡಿಕೆಗೆ ಅತೀ ದೊಡ್ಡ ಮಾರುಕಟ್ಟೆಯಾಗಿದ್ದು, ಒಂದು ತಿಂಗಳಿಂದ ಇಲ್ಲಿ ಖರೀದಿ ಸ್ಥಬ್ಧವಾದಂತಾಗಿದೆ. ಚುನಾವಣೆ ಎಂದಾಕ್ಷಣ ನೀತಿಸಂಹಿತೆ ಜ್ಯಾರಿಯಲ್ಲಿರುತ್ತದೆ. ಲೆಕ್ಕವಿಲ್ಲದ ಹಣದ ಚಲಾವಣೆಗೆ ಕಷ್ಟವಾಗುತ್ತದೆ. ಹಾಗಾಗಿ ವ್ಯಾಪಾರ ವ್ಯವಹಾರವನ್ನು ಮಿತಿಯೊಳಗೆ ಮಾಡಿಕೊಳ್ಳುತ್ತಾರೆ. ಅದೇ ಕಾರಣಕ್ಕೆ ಚಾಲಿಯ ದರ ಒಂದು ತಿಂಗಳಿನಿಂದ ಸ್ಥಬ್ಧವಾಗಿತ್ತು. ಕ್ಯಾಂಪ್ಕೋ ಸಂಸ್ಥೆ ತನ್ನ ದರ ಇಳಿಕೆ ಮಾಡದ ಕಾರಣ ತುಸು ಇಳಿಕೆ ಆಗಿತ್ತು. ಸ್ಥಳೀಯ ಖಾಸಗಿ ವ್ಯಾಪಾರಿಗಳು ವ್ಯವಹಾರ ಮಾಡುತ್ತಾ ಇರಬೇಕು ಎಂದು ಖರೀದಿ ಮಾಡಿದ್ದನ್ನು ಕ್ಯಾಂಪ್ಕೋಗೇ ಮಾರಾಟಮಾಡಿದ ಉದಾಹರಣೆಗಳೂ ಇವೆ.
ಇನ್ನು ಡಬ್ಬಲ್ ಚೋಲ್ ಮತ್ತು ಸಿಂಗಲ್ ಚೋಲ್ ಗಳ ದರ ವ್ಯತ್ಯಾಸದ ಅಂತರ ಕಡಿಮೆ ಆಗಬೇಕು. ಸಾಮಾನ್ಯವಾಗಿ ಇದು 15-20 ರೂ. ಅಂತರದಲ್ಲಿ ಉಳಿಯುತ್ತದೆ. ಅದೇ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ಸಿಂಗಲ್ ಚೋಲ್ ದರ ರೂ.5 ಏರಿಕೆಯಾಗಿದೆ. ಡಬ್ಬಲ್ ಚೋಲ್ ಸ್ವಲ್ಪ ಇಳಿಕೆಯಾಗಿದೆ. ಹಾಗಾಗಿ ಸಿಂಗಲ್ ಚೋಲ್ ಏರಿಕೆ ಆಗಬಹುದು. ಇವೆರಡೂ ಏರಿಕೆ ಆಗುವಾಗ ಸುಮಾರು 100 ರೂ ಅಂತರದಲ್ಲಿ ಹೊಸ ಅಡಿಕೆ ಧಾರಣೆ ನಿಲ್ಲಬಹುದು ಎಂಬ ತಾರ್ಕಿಕ ಸುದ್ದಿ ಇದೆ.
ಕೆಂಪಡಿಕೆ ಧಾರಣೆ ಮಾತ್ರ ಏರಿಕೆ ಆಗುವ ಸಾಧ್ಯತೆ ಸಧ್ಯಕ್ಕಿಲ್ಲ. ಈಗಾಗಲೇ ಇಳಿಕೆ ಪ್ರಾರಂಭವಾಗಿ 1 ತಿಂಗಳು ಕಳೆದಿದೆ. ಇನ್ನೂ 1-1 ½ ತಿಂಗಳ ತನಕ ಇಳಿಮುಖವಾಗಿಯೇ ಮುಂದುವರಿಯಬಹುದು. ಆ ನಂತರ ಈಗಿನ ಸ್ಟಾಕು ಕ್ಲೀಯರೆನ್ಸ್ ಗಾಗಿ ದರ ಏರಿಕೆ ಆಗಲೇಬೇಕು.
ಕರಿಮೆಣಸು ಮಾರುಕಟ್ಟೆ ದರ ಏರಬಹುದು:
ಕರಿಮೆಣಸಿಗೆ ಪ್ರಭಲ ಸ್ಪರ್ಧಿಯಾದ ವಿಯೆಟ್ನಾಂ ದೇಶದಲ್ಲಿ ಬಹುಷಃ ಇನ್ನು ಒಂದೆರಡು ವರ್ಷಗಳಲ್ಲಿ ಮೆಣಸಿನ ಬೆಳೆ ಗಣನೀಯವಾಗಿ ಕಡಿಮೆಯಾಗಲಿದೆ ಎಂಬುದಾಗಿ ವಿಯೆಟ್ನಾಂ ಪ್ರವಾಸ ಕೈಗೊಂಡ ಮಿತ್ರರಾದ ಶ್ರೀ. ಅಶೋಕ್ ಕುಮಾರ್ ಕರಿಕಳ ಅವರು ಅಭಿಪ್ರಾಯಪಡುತ್ತಾರೆ. ಇವರು ವಿಯೆಟ್ನಾಂನಲ್ಲಿ ಒಂದು ವಾರ ಪ್ರವಾಸ ಕೈಗೊಂಡಿದ್ದಾರೆ. ಮೆಣಸಿಗೆ ಬೆಳೆಗಾರರಿಗೆ ಕಿಲೋ ಗೆ 2 ಡಾಲರ್ ನಷ್ಟು ಮಾತ್ರ ಬೆಲೆ ಸಿಗುತ್ತಿದ್ದು, ಈ ಬೆಲೆಗೆ ಅದು ಪೂರೈಸುವುದಿಲ್ಲ ಎಂಬ ಕಾರಣಕ್ಕೆ ರೈತರು ಬೇರೆ ಬೆಳೆಗಳತ್ತ ಗಮನಹರಿಸುತ್ತಿದ್ದಾರೆ. ಬಹಳಷ್ಟು ಬೆಳೆಗಾರರು ರಕ್ಷಿತ ವ್ಯವಸಾಯದೆಡೆಗೆ (Green house cultivation) ಬದಲಾಗುತ್ತಿದ್ದಾರೆ. ಗ್ರೀನ್ ಹೌಸ್ ನಲ್ಲಿ ಬೆಳೆದ ಒಂದು ಕರಬೂಜಕ್ಕೆ 2 ಡಾಲರ್ ನಷ್ಟು ಬೆಲೆ ಸಿಗುತ್ತದೆ. ಹಾಗೆಯೇ ಕಲ್ಲಂಗಡಿ. ಡ್ರಾಗನ್ ಪ್ರೂಟ್ ಇವೆಲ್ಲಾ ಅಲ್ಪಾವಧಿ ಬೆಳೆಗಳಾಗಿದ್ದು, ಕರಿಮೆಣಸಿನಂತಹ ಬೆಳೆಗಳಿಗಿಂತ ಅವರಿಗೆ ಲಾಭದಾಯಕ. ಇಲ್ಲಿ ನಮ್ಮ ದೇಶಕ್ಕಿಂತ ಕೆಲಸದವರ ಮಜೂರಿ ಹೆಚ್ಚು ಆದ ಕಾರಣ ಮೆಣಸು ಲಾಭದಾಯಕವಲ್ಲವಂತೆ. ಈ ದೇಶಕ್ಕೆ ಥೈಲಾಂಡ್, ಚಿನಾ ದೇಶಗಳು ಹತ್ತಿರವಾಗಿದ್ದು, ರಪ್ತು ಸರಳವಾಗಿರುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ವಿಯೆಟ್ನಾಂ ಮೆಣಸು ಬೆಳೆಗೆ ಸ್ಪರ್ಧಿ ಆಗಿ ಉಳಿಯುವ ಸಾಧ್ಯತೆ ಕಡಿಮೆ.
ಅಡಿಕೆ-ಎಲ್ಲೆಲ್ಲಿ ಯಾವ ದರ ಇತ್ತು:
- ಬಂಟ್ವಾಳ ಕೋಕಾ, 12500, 25000, 22500
- ಹೊಸ ಅಡಿಕೆ:, 27500, 38000, 37500
- ಹಳೆ ಅಡಿಕೆ: 48000, 54500, 51500
- ಬೆಳ್ತಂಗಡಿ ಹೊಸತು: 30000, 37000, 33000
- ಹಳತು: 44000, 46000, 45000
- ಕಾರ್ಕಳ ಹೊಸತು: 25000, 37500, 35000
- ಹಳತು: 40000, 54500, 45000
- ಕುಮಟಾ:ಹಳೆ ಚಾಲಿ: 36999, 40099, 39869
- ಹೊಸ ಚಾಲಿ: 29999, 33239, 32589
- ಕುಂದಾಪುರ ಹಳೆ ಚಾಲಿ, 53000, 55000, 54000
- ಹೊಸ ಚಾಲಿ: 40000, 47500, 47000
- ಸಾಗರ-ಚಾಲಿ: 31699, 37109, 36699
- ಪುತ್ತೂರು ಕೋಕಾ: 11000, 26000, 18500
- ಹೊಸ ಚಾಲಿ: 32000, 38000, 35000
- ಸಿದ್ದಾಪುರ-ಚಾಲಿ: 35609, 39799, 38899
- ಶಿರಸಿ-ಚಾಲಿ: 33123, 41018, 39669
- ಯಲ್ಲಾಪುರ-ಚಾಲಿ: 36300, 41069, 39899
ಕೆಂಪಡಿಕೆ ಧಾರಣೆ:
- ಭದ್ರಾವತಿ ರಾಶಿ: 40199, 45639, 43321
- ಚೆನ್ನಗಿರಿ ರಾಶಿ: 42099, 46200, 44351
- ಚಿತ್ರದುರ್ಗ ಅಪಿ: 43339, 43779, 43559
- ಬೆಟ್ಟೆ: 32819, 33289, 33049
- ಕೆಂಪುಗೋಟು: 28509, 28910, 28700
- ರಾಶಿ: 42829, 43269, 43000
- ದಾವಣಗೆರೆ ರಾಶಿ: 34599, 44699, 41513
- ಹೊಳಲ್ಕೆರೆ ರಾಶಿ: 306, 44599, 46411, 45548
- ಹೊನ್ನಾಳಿ ರಾಶಿ: 45611, 45611, 45611
- ಹೊಸನಗರ ಕೆಂಪುಗೋಟು: 30899, 33399, 32699
- ರಾಶಿ: 43899, 46170, 45670
- ಕೊಪ್ಪ ಬೆಟ್ಟೆ: 46690, 52699, 49445
- ಇಡಿ: 41366, 46699, 45548
- ಗೊರಬಲು, 32669, 36599, 35694
- ಸರಕು:, 55199, 75509, 61541
- ರಾಶಿ: 40000, 46500, 43250
- ಕುಮ್ಟಾ ಚಿಪ್ಪು: 27019, 33019, 32729
- ಸಾಗರ ಬಿಳೇಗೋಟು: 16110, 30612, 29400
- ಕೋಕಾ: 8269, 33989, 26989
- ಕೆಂಪುಗೋಟು: 28989, 34899, 31699
- ರಾಶಿ: 41209, 45809, 44699
- ಸಿಪ್ಪೆಗೋಟು: 10699, 19410, 18900
- ಶಿಕಾರಿಪುರ ರಾಶಿ: 43500, 46500, 44500
- ಶಿವಮೊಗ್ಗ ಬೆಟ್ಟೆ: 49100, 52100, 49800
- ಗೊರಬಲು: 17051, 34098, 33629
- ಹೊಸ ರಾಶಿ: 43099, 45599, 44299
- ರಾಶಿ ಹಳತು, 43669, 46599, 44568
- ಸರಕು: 55000, 76840, 70120
- ಸಿದ್ದಾಪುರ ಬಿಳೇಗೋಟು: 28199, 33099, 32899
- ಕೋಕಾ:, 26109, 31800, 30899
- ಕೆಂಪುಗೋಟು: 25099, 28699, 28699
- ರಾಶಿ: 43099, 45099, 44499
- ತಟ್ಟೆ ಬೆಟ್ಟೆ: 38209, 44099, 42009
- ಸಿರಾ: ಇತರ: 9000, 50000, 42286
- ಸಿರ್ಸಿ ಹಸಿ ಅಡಿಕೆ: 4720, 5825, 5399
- ಬೆಟ್ಟೆ: 43218, 43808, 43513
- ಬಿಳೇಗೋಟು: 18069, 35199, 32252
- ಕೆಂಪುಗೋಟು: 22699, 34699, 28599
- ರಾಶಿ: 44299, 46399, 45353
- ತರೀಕೆರೆ ಇತರ:, 33333, 33333, 33333
- ತೀರ್ಥಹಳ್ಳಿ ಬೆಟ್ಟೆ, 45168, 51009, 49559
- ಇಡಿ: 37168, 47009, 45899
- ಗೊರಬಲು: 26111, 36799, 35009
- ರಾಶಿ: 36366, 46899, 45899
- ಸರಕು: 50169, 78140, 70655
- ತುಮಕೂರು ರಾಶಿ: 45100, 46050, 45400
- ಯಲ್ಲಾಪುರ ಅಪಿ: 58695, 58695, 58695
- ಬಿಳೇಗೋಟು: 25012, 35469, 32869
- ಕೋಕಾ: 16892, 29212, 26899
- ಕೆಂಪುಗೋಟು: 26899, 32499, 31499
- ರಾಶಿ: 44099, 49019, 47869
- ತಟ್ಟೆ ಬೆಟ್ಟೆ: 36799, 43200, 41000
ಕರಿಮೆಣಸು ದರ :
- ಕೊಚ್ಚಿ ಹೊಸತು 484.00
- ಹಳತು ಆಯದೆ ಇದ್ದದ್ದು: 494.00
- ಆಯ್ದದ್ದು, 514.00
- ಸಕಲೇಶಪುರ ಆಯದೆ ಇದ್ದದ್ದು: 495.00 -500.00-505.55 (Premraj and Sons)- 510.00 (The Cardamom Marketing Company)
- ಬಾಳುಪೇಟೆ: 470.00 -500.00
- ಮೂಡಿಗೆರೆ: 492.00 Bhavarlal Jain, 507.00 –500.00
- ಚಿಕ್ಕಮಗಳೂರು:500.00 502.00 503.00
- ಮಡಿಕೇರಿ:500.00- 505.00
- ಕಳಸ: 505.00
- ಕ್ಯಾಂಪ್ಕೋ: 500.00
- ಕಾರ್ಕಳ: 500.00
- ಮಂಗಳೂರು: 500.00
- ಶಿರ್ಸಿ: 500.00
ತೆಂಗಿನ ಕಾಯಿ ದರ ಏರಿಕೆ ಸಾಧ್ಯತೆ:
ಈ ತಿಂಗಳು ಮದುವೆ- ಗ್ರಹಪ್ರವೇಶ, ದೇವಸ್ಥಾನ ದೈವಸ್ಥಾನಗಳ ಜಾತ್ರೆ, ಬ್ರಹ್ಮಕಲಶ ಇತ್ಯಾದಿಗಳು ಹೆಚ್ಚಾಗಿರುವ ಕಾರಣ ಹಸಿ ಕಾಯಿಯ ದರ ಏರುವ ಸಾಧ್ಯತೆ ಇದೆ. ಕಳೆದ ಒಂದು ವಾರದಿಂದ ಹಸಿ ಕಾಯಿಯ ದರ ಕಿಲೋಗೆ ರೂ.3-4 ತನಕ ಏರಿಕೆಯಾಗಿದೆ. ಕೊಬ್ಬರಿ ದರ ಇಳಿಕೆಯಾಗುತ್ತಿದೆ. ಕಾಯಿ ಬಳಕೆ ಹೆಚ್ಚಾದಾರೆ ಮುಂದಿನ 2 ತಿಂಗಳ ಅವಧಿಯಲ್ಲಿ ಕೊಬ್ಬರಿ ದರ ಏರಿಕೆ ಆಗಬಹುದು.
ಬೆಳೆಗಾರರು ಏನು ಮಾಡಬೇಕು:
ಬೆಳೆಗಾರರಿಗೆ ದರ ಎರಿಕೆಯ ತುದಿ ಎಲ್ಲಿ ಎಂಬುದು ಯಾವಾಗಲೂ ಗೊತ್ತಾಗಲು ಸಾಧ್ಯವೇ ಇಲ್ಲ. ಕೆಲವೊಮ್ಮೆ ಇನ್ನೂ ಏರಿಕೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಮಾರಾಟ ಮುಂದೂಡಿದರೆ ದರ ಇಳಿಕೆಯಾಗಿ ಬಹಳ ಸಮಯದ ತನಕ ಹಾಗೆ ಉಳಿಯುತ್ತದೆ. ಇಂಹಹ ಸಂದರ್ಭಗಳೇ ಹೆಚ್ಚು. ಅದಕ್ಕಾಗಿ ಬೆಲೆ ಏರಿಕೆ ಪ್ರಾರಂಭವಾಗುವಾಗ ದಿನಾ ಸ್ವಲ್ಪ ಸ್ವಲ್ಪ ಮಾರಾಟ ಮಾಡುತ್ತಾ ಇರಬೇಕು. ಯಾವಾಗಲೂ ಬೆಲೆ ಏರಿಕೆ ಆದರ ಅದು ಏರುತ್ತಲೇ ಇರುವುದಿಲ್ಲ. ಇಳಿಕೆ ಆಗುತ್ತದೆ. ಇಳಿಕೆ ಸಮಯದಲ್ಲಿ ಮಾರಾಟ ಮಾಡಬಾರದು. ಇದು ಸರಾಸರಿ ಉತ್ತಮ ದರ ಪಡೆಯಲು ಸಹಕಾರಿ. ಕೆಂಪಡಿಕೆಗೂ ಈ ವರ್ಷ ಮತ್ತೆ 50,000 ಕ್ಕಿಂತ ಹೆಚ್ಚಿನ ದರ ಆಗುವ ಸಾಧ್ಯತೆ ಇದೆ.ಏರಿಕೆ ಪ್ರಾರಂಭವಾದ ಸಮಯದಲ್ಲಿ ಸ್ವಲ್ಪ ಸ್ವಲ್ಪ ಮಾರಾಟ ಮಾಡುತ್ತಾ ಇರಬೇಕು.