krushiabhivruddi

ಬಾಳೆ ಹೀಗೆ ಬೆಳೆದರೆ ಖರ್ಚು ಕಡಿಮೆ

ನೀರು, ಗೊಬ್ಬರ  ಉಳಿತಾಯದ ಬಾಳೆ ಬೇಸಾಯ ವಿಧಾನ

ಸಾಂಪ್ರದಾಯಿಕ ವಿಧಾನದ ಬಾಳೆ ಬೇಸಾಯದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಬೆಳೆ ಬೆಳೆದರೆ ನೀರು, ಗೊಬ್ಬರ  ಉಳಿಸಿ ಖರ್ಚು ಕಡಿಮೆ ಮಾಡಿ ಉತ್ತಮ ಇಳುವರಿಯನ್ನು ಪಡೆಯಬಹುದು. ಅಷ್ಟೇ ಸ್ಥಳಾವಕಾಶದಲ್ಲಿ ಒಳಸುರಿಗಳ ಬಳಕೆಯಲ್ಲಿ, ಮಿತವ್ಯಯ ಮಾಡಿ ಅಧಿಕ ಉತ್ಪಾದನೆ ಪಡೆಯುವುದು ಈ ವಿಧಾನದಲ್ಲಿ ಸಾಧ್ಯ.  ಬಾಳೆಯ ಸಾಂಪ್ರದಾಯಿಕ ನಾಟಿ ವಿಧಾನದಲ್ಲಿ ಪರಸ್ಪರ 6  ಅಡಿ ಅಂತರದಲ್ಲಿ ನಾಟಿ ಮಾಡಲಾಗುತ್ತದೆ. ಈ ವಿಧಾನದಲ್ಲಿ ಎಕ್ರೆಗೆ ಸುಮಾರು  750 ರಷ್ಟು ಬಾಳೆ ಸಸಿ ಹಿಡಿಸಬಹುದು. ಅಧಿಕ ಸಾಂದ್ರದಲ್ಲಿ ನಾಟಿ ಮಾಡುವುದಿದ್ದರೆ ಎಕ್ರೆಗೆ 2500-3000…

Read more
ಅಡಿಕೆಗೆ ಯಾವಾಗ ದರ ಏರಿಕೆ ಆಗಬಹುದು? ಏನೆಲ್ಲಾ ಸಾಧ್ಯತೆಗಳಿವೆ?

ಅಡಿಕೆಗೆ ಯಾವಾಗ ದರ ಏರಿಕೆ ಆಗಬಹುದು? ಏನೆಲ್ಲಾ ಸಾಧ್ಯತೆಗಳಿವೆ?

ಎಲ್ಲರ ನಿರೀಕ್ಷೆ ಅಡಿಕೆಗೆ ದರ ಏರಿಕೆ ಆಗಬಹುದೇ? ಯಾವಾಗ,ಎಷ್ಟು? ಅಥವಾ ಇಳಿಕೆಯಾಗಬಹುದೇ ಎಂಬುದು.ಯಾರೂ ನಿರೀಕ್ಷಿಸದೆ ಇರುವಂತಹ ದರ ಇಳಿಕೆ ಚಾಲಿ ಮಾರುಕಟ್ಟೆಯಲ್ಲಿ ಆಗಿದೆ. ದಿನದಿಂದ ದಿನಕ್ಕೆ ಇಳಿಕೆಯಾಗುತ್ತಾ ಬಂದು ರೂ.49,000 ದಿಂದ  44,000 ಸುಮಾರಿಗೆ  ಕುಸಿದಿದೆ. ಇನ್ನೂ ಇಳಿಕೆಯಾಗಬಹುದು, ಚುನಾವಣೆ ಬೇರೆ ಇದೆ ಎಂದೆಲ್ಲಾ ಮಾತುಗಳು ಕೇಳಿ ಬರುತ್ತಿವೆ. ಆದರೆ ನಮ್ಮ ಊಹೆ ಮತ್ತು ಮಾರುಕಟ್ಟೆ ನಡೆ ಬೇರೆಯೇ ಆಗಿರುತ್ತದೆ. ಅಡಿಕೆ ಉತ್ಪಾದನೆ ಹೆಚ್ಚಾಗಿದೆ. ಆದ ಕಾರಣ ಮಾರುಕಟ್ಟೆಗೆ ಧಾರಾಳ ಅಡಿಕೆ ಬರುತ್ತಾ ಇದೆ. ಅದಕ್ಕನುಗುಣವಾಗಿ ಬೇಡಿಕೆ…

Read more
ಮಾತ್ರೆ ಬಳಸದೆ ಅಡಿಕೆ ದಾಸ್ತಾನು ಇಡುವ ವಿಧಾನ

ಮಾತ್ರೆ ಬಳಸದೆ ಅಡಿಕೆ ದಾಸ್ತಾನು ಇಡುವ ವಿಧಾನ

ಅಡಿಕೆ ದಾಸ್ತಾನು ಇಡುವವರು ಉಗ್ರಾಣ ಕೀಟದ ತೊಂದರೆ ಉಂಟಾಗದಂತೆ ತಡೆಯಲು ಅಲ್ಯೂಮೀನಿಯಂ ಫೋಸ್ಫೇಡ್ ಮಾತ್ರೆಗಳನ್ನು ಬಳಸುತ್ತಿದ್ದು, ಅದು ದಾಸ್ತಾನು ಇಟ್ಟ ಅಡಿಕೆಯನ್ನು ನಿಜವಾಗಿಯೂ ರಕ್ಷಿಸುತ್ತದೆಯೇ ಅಥವಾ ಅದು ಒಂದು ಭ್ರಮೆಯೇ? ಮಾತ್ರೆಗಳನ್ನು ಬಳಸದೆ ದಾಸ್ತಾನು ಇಟ್ಟುರೆ ಅಡಿಕೆ ಹಾಳಾಗದಂತೆ ತಡೆಯುವ ವಿಧಾನ ಯಾವುದು?  ಅಡಿಕೆಯನ್ನು ಸುಲಿದು ಇಟ್ಟರೆ ಯಾವಾಗ ಬೆಲೆ ಬರುತ್ತದೆಯೋ ಆಗ ಮಾರಾಟ ಮಾಡಲು ಅನುಕೂಲವಾಗುತ್ತದೆ. ಅದಕ್ಕಾಗಿ ಹೆಚ್ಚಿನ ಬೆಳೆಗಾರರು ಸುಲಿಯುವವರು ಸಿಕ್ಕಾಗ ಪೂರ್ತಿ ಅಡಿಕೆಯನ್ನು ಸುಲಿದು ಗಾಳಿಯಾಡದಂತೆ  ಗೋಣಿ ಚೀಲಕ್ಕೆ ಪ್ಲಾಸ್ಟಿಕ್ ಹಾಕಿ ದಾಸ್ತಾನು…

Read more
ಮಳೆ ಬಂದಿದೆ, ಕೆರೆ ತುಂಬಿದೆ ಅಂತರ್ಜಲ ಬರಿದಾಗುತ್ತಿದೆ. ಎಚ್ಚರ!.

ಮಳೆ ಬಂದಿದೆ, ಕೆರೆ ತುಂಬಿದೆ  ಅಂತರ್ಜಲ ಬರಿದಾಗುತ್ತಿದೆ. ಎಚ್ಚರ!.

ಮಳೆ ಬಂದಿದೆ ಕೆರೆ ತುಂಬಿದೆ ನೀರಿಗೇನೂ ಬರವಿಲ್ಲ ಎಂದು ನಂಬಿದ್ದ ನಮ್ಮ ನಂಬಿಕೆ ಈಗ ಹುಸಿಯಾಗಲಾರಂಭಿಸಿದೆ. ಎಲ್ಲೆಲ್ಲೂ ಕೊಳವೆ ಬಾವಿಗಳು ಇಳುವರಿ ಕಡಿಮೆಯಾಗುತ್ತಿದೆ. ವಿಫಲವಾಗುತ್ತಿದೆ. ಕಿಂಡಿ ಅಣೆಕಟ್ಟುಗಳು, ಕಿರು ಜಲವಿದ್ಯುತ್  ಉತ್ಪಾದಿಸುವ ಅಣೆಕಟ್ಟುಗಳಲ್ಲೂ ನೀರಿಲ್ಲದಾಗಿದೆ. ರೈತರು ಹೊಸ ಬಾವಿ ತೋಡಲು ರಿಗ್ ನ ಹಿಂದೆ ತಿರುಗುವಂತಾಗಿದೆ. ಅಂತರ್ಜಲ ಕಳೆದ ಕೆಲವು ವರ್ಷಗಳಿಂದ ರೈತರೂ ಸೇರಿದಂತೆ ಎಲ್ಲರೂ ಕೊಳವೆ ಬಾವಿ ನೀರಿಗೇ ಅವಲಂಬಿತರಾದ ಕಾರಣ ಅಂತರ್ಜಲದ ಮೇಲೆ ಒತ್ತಡ ಹೆಚ್ಚಿದೆ. ಎಲ್ಲಿ ನೋಡಿದರಲ್ಲಿ ಕೊಳವೆ ಬಾವಿ ತೋಡುವ ಸದ್ದು…

Read more
ರಾಸಾಯನಿಕ ಕೀಟ-ರೋಗ ನಾಶಕಗಳ ಬದಲಿಗೆ ಜೈವಿಕ ಪರ್ಯಾಯ

ರಾಸಾಯನಿಕ ಕೀಟ-ರೋಗ ನಾಶಕಗಳ ಬದಲಿಗೆ ಜೈವಿಕ ಪರ್ಯಾಯ.

ಬೆಳೆಗಳಿಗೆ ಹಾನಿ ಮಾಡುವ ಕೀಟ – ರೋಗ ನಿಯಂತ್ರಣಕ್ಕೆ ವಿಷ ರಾಸಾಯನಿಕಗಳೇ ಅಂತಿಮ ಅಲ್ಲ. ಇವುಗಳಿಗೆ ಪರ್ಯಾಯ ಇದೆ. ಅದರ ಬದಲಿಗೆ ಜೈವಿಕ ಕೀಟ –ರೋಗ ನಿಯಂತ್ರಕಗಳು ಇವೆ. ಇವು ಉತ್ತಮವಾಗಿ ಕೆಲಸ ಮಾಡುತ್ತವೆ. ರಾಸಾಯನಿಕ ಕೀಟ ರೋಗ ನಿಯಂತ್ರಗಳೇ ಅಂತಿಮ ಅಲ್ಲ. ಗುಡ್ಡಕ್ಕೆ ಗುಡ್ಡ ಅಡ್ದ ಇದ್ದೇ ಇದೆ. ಸ್ವಲ್ಪ ಯೋಚನೆ  ಮಾಡಿದರೆ ಕೆಲವು ಸರಳ , ಸುರಕ್ಷಿತ ಉಪಾಯಗಳು ಗೊತ್ತಾಗುತ್ತವೆ. ಇದೇ ಸಿದ್ದಾಂತದಲ್ಲಿ, ಕೃಷಿ ಬೆಳೆಗಳ ಕೆಲವು ರೋಗ ಮತ್ತು ಕೀಟಗಳನ್ನು ನೈಸರ್ಗಿಕ ಉಪಾಯಗಳಿಂದಲೇ…

Read more
ಹಳೆಯ ಬೋರ್ ವೆಲ್ ರಿ-ಡ್ರಿಲ್ಲಿಂಗ್

ಹಳೆಯ ಬೋರ್ ರಿ-ಡ್ರಿಲ್ಲಿಂಗ್-  ಇದು ಲಾಭದಾಯಕವೇ?

ಹಿಂದೆ ಡ್ರಿಲ್ ಮಾಡಲಾದ  ಹಳೆಯ ಬೋರ್ ವೆಲ್ ಅನ್ನು ಮತ್ತೆ ಆಳ ಮಾಡಿದರೆ ಹೆಚ್ಚು ನೀರು ಪಡೆಯಬಹುದು. ಇದು ಒಂದಷ್ಟು ಜನ ರೈತರ ಇಚ್ಚೇ. ಹಳೆಯ ಬೋರ್ ವೆಲ್ ಆಳ ಮಾಡಿದರೆ ಇರುವ ನೀರಿಗೆ ತೊಂದರೆ ಇಲ್ಲ. ಆಳದಲ್ಲಿ ಹೆಚ್ಚಿನ ನೀರು ಸಿಕ್ಕರೆ ಅದು ಲಾಭ. ಹೇಗೂ 250-300 ಅಡಿ ಕೊರೆದು ಆಗಿದೆ. ಇನ್ನು ಸ್ವಲ್ಪ ತೋಡಿದರೆ ಖರ್ಚು ಕಡಿಮೆ, ರಿಸ್ಕ್ ಸಹ ಕಡಿಮೆ ಎಂಬುದು ರೈತರ ತರ್ಕ. ಈ ಬಗ್ಗೆ ಬೋರ್ ವೆಲ್ ಡ್ರಿಲ್ಲಿಂಗ್ ಮತ್ತು…

Read more
ಕೃಷಿ ಮತ್ತು ಮನುಕುಲಕ್ಕೆ ಆತಂಕ ಉಂಟುಮಾಡುತ್ತಿದೆ ಪ್ರಕೃತಿಯ ಮುನಿಸು

ಕೃಷಿ ಮತ್ತು ಮನುಕುಲಕ್ಕೆ ಆತಂಕ ಉಂಟುಮಾಡುತ್ತಿದೆ ಪ್ರಕೃತಿಯ ಮುನಿಸು.

ಪ್ರಕೃತಿ ಅನುಕೂಲಕರವಾಗಿದ್ದರೆ ಮಾತ್ರ ಮನುಕುಲ ಕ್ಷೇಮದಿಂದ ಇರಲು ಸಾಧ್ಯ. ಈಗ ಪ್ರಕೃತಿ ಮುನಿಸಿಕೊಂಡಂತಿದೆ. ಹವಾಮಾನ ಬದಲಾಗುತ್ತಿದೆ. ನಾವು ಹೊಟ್ಟೆ ಹೊರೆಯಲು ಬೆಳೆಸುವ ಬೆಳೆಗಳ ಮೇಲೆ ಹಾಗೂ ನಮ್ಮೆಲ್ಲರ ಆರೋಗ್ಯದ ಮೇಲೆ ಇದರ ದುಶ್ಪರಿಣಾಮ ಉಂಟಾಗಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಕೃಷಿ ಉತ್ಪಾದನೆ ಕುಂಠಿತವಾಗಲಿದೆ ಎಂಬುದಾಗಿ ತಜ್ಞರು ಸರಕಾರಕ್ಕೆ ವರದಿ ನೀಡಿದ್ದಾರೆ. ಜನ ಆನಾರೋಗ್ಯ ಸಮಸ್ಯೆಯಿಂದ  ಬಳಲು ಸ್ಥಿತಿ ಉಂಟಾಗಿದೆ. ಹವಾಮಾನ ಬದಲಾವಣೆಯ ಬಿಸಿ ಈ ವರ್ಷ ಕೃಷಿ ಕ್ಷೇತ್ರಕ್ಕೆ ವಿಪರೀತವಾಗಿ ಬಾಧಿಸುವ ಸಾಧ್ಯತೆ ಇದೆ. ಶಿವರಾತ್ರೆ ಕಳೆದ ಮೇಲೆ…

Read more
ಅಡಿಕೆಯ ಕಥೆ ಏನಾಗಿದೆ? ಯಾಕೆ ದಿನದಿಂದ ದಿನಕ್ಕೆ ದರ ಇಳಿಯುತ್ತಿದೆ?

ಅಡಿಕೆಯ ಕಥೆ ಏನಾಗಿದೆ? ಯಾಕೆ ದಿನದಿಂದ ದಿನಕ್ಕೆ ದರ ಇಳಿಯುತ್ತಿದೆ?

ಅಡಿಕೆಯ ಕಥೆ ಹೇಳತೀರದಾಗಿದೆ. ದಿನದಿಂದ ದಿನಕ್ಕೆ ದರ ಕುಸಿಯುತ್ತಿದೆ.  ಅಡಿಕೆ ಕೊಳ್ಳುವ ವರ್ತಕರಿಗೆ ಅಡಿಕೆ ತರುವವರನ್ನು ನೋಡಿದರೆ ಸಿಟ್ಟು ಬರುವಂತ ಸ್ಥಿತಿ. ಎಲ್ಲರಲ್ಲೂ ಅಷ್ಟೋ ಇಷ್ಟೋ ದಾಸ್ತಾನು ಇದೆ.  ಮಾರಾಟ  ಆಗದೆ ಖರೀದಿಗೆ ದುಡ್ಡಿಲ್ಲದ ಸ್ಥಿತಿ ಈ ಮಧ್ಯೆ  ಬೆಳೆಗಾರರು ದುಂಬಾಲು ಬಿದ್ದು ಮಾರಾಟಕ್ಕೆ ಮುಂದಾಗಿದ್ದಾರೆ. ಮಾರುಕಟ್ಟೆಗೆ ತಾಳಿಕೊಳ್ಳಲಾಗದ ಸ್ಥಿತಿಯಲ್ಲಿ ಅಡಿಕೆ ಮಾರಾಟಕ್ಕೆ ಬಂದರೆ ದರ ಮತ್ತಷ್ಟು ಕುಸಿಯುತ್ತದೆ.ಇದು ಸತ್ಯ. ಈಗ ಇದೇ ಆಗಿರುವುದು. ಸತ್ಯವೋ ಸುಳ್ಳೋ ಒಟ್ಟಾರೆಯಾಗಿ ಹಳೆ ಚಾಲಿಯನ್ನು ಉತ್ತರ ಭಾತರದ ವ್ಯಾಪಾರಿಗಳು ಬೇಡ…

Read more
ಅಡಿಕೆ ಗಿಡ ಮಾಡಲು ಮೊಳಕೆ ಬರಿಸುವ ಸೂಕ್ತ ವಿಧಾನ

ಅಡಿಕೆ ಗಿಡ ಮಾಡಲು ಮೊಳಕೆ ಬರಿಸುವ ಸೂಕ್ತ ವಿಧಾನ.

ಅಡಿಕೆ ಗಿಡ ಮಾಡುವಾಗ ಬೀಜದ ಗೋಟು ಅಥವಾ ಹಣ್ಣು ಅಡಿಕೆಯನ್ನು ಗರಿಷ್ಟ ಪ್ರಮಾಣದಲ್ಲಿ ಮೊಳಕೆ ಬರುವಂತೆ ಮಾಡಲು ಕೆಲವು ಸರಳ ಕ್ರಮಗಳನ್ನು ಅನುಸರಿಸಬೇಕು. ಸಾಮಾನ್ಯವಾಗಿ ನಾವು 100 ಬೀಜಗಳನ್ನು ಮೊಳಕೆ ಬರಿಸಲು ಇಟ್ಟರೆ ಅದರಲ್ಲಿ  60-80 ರಷ್ಟು ಮಾತ್ರ ಮೊಳಕೆ ಪಡೆಯುತ್ತೇವೆ. ಇದು ನಾವು ಮೊಳಕೆಗೆ ಇಡುವ ಕ್ರಮ ಸರಿಯಿಲ್ಲದೆ ಆಗುವ ಸಮಸ್ಯೆ. ಸರಿಯಾದ ಮೊಳಕೆಗೆ ಇಡುವ ವಿಧಾನ ಹೀಗಿದೆ. ಅಡಿಕೆ ತೋಟ ಇದ್ದವರು ಹಣ್ಣಾಗಿ ಬಿದ್ದು, ಹೆಕ್ಕಲು ಸಿಕ್ಕದೆ ಅವಿತುಕೊಂಡು ಬಾಕಿಯಾದ ಅಡಿಕೆ ಹೇಗೆ ತನ್ನಷ್ಟೆಕ್ಕೆ…

Read more
ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣಿಕೆ. ಮುಂದಿದೆ ಭಾರೀ ಅನಿಶ್ಚಿತತೆ

ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣಿಕೆ. ಮುಂದಿದೆ ಭಾರೀ ಅನಿಶ್ಚಿತತೆ.

ಅಡಿಕೆ ಮಾರುಕಟ್ಟೆಯಲ್ಲಿ ಭಾರೀ ತಲ್ಲಣಿಕೆ ಉಂಟಾಗಿದ್ದು, ವ್ಯಾಪಾರಿಗಳಿಗೇ ಅಂಜಿಕೆ ಹುಟ್ಟಿದೆ. ಎಲ್ಲಾ ಅಡಿಕೆ ವರ್ತಕರಿಗೂ ಮುಂದೇನಾಗುವುದೋ ಎಂಬ ಚಿಂತೆ ಉಂಟಾಗಿದೆ. ಇರುವ ದಾಸ್ತಾನನ್ನು ಹೇಗಾದರೂ ವಿಲೇವಾರಿ ಮಾಡುವ ಚಿಂತೆಯಲ್ಲಿದ್ದಾರೆ. ಖರೀದಿದಾರರು ಭಾರೀ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಧಾರಣೆ ಕುಸಿತವೂ ಆಗಬಹುದು. ಹೀಗೆಯೇ ಮುಂದುವರಿಯಲೂ ಬಹುದು.   ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಚೋಲ್ ಅಡಿಕೆ ಬೇಡ ಎಂಬ ಸ್ಥಿತಿ ಉಂಟಾಗಿ ಅಘೋಷಿತ ದರ ಕುಸಿತ ಉಂಟಾಗಿದೆ. ಖರೀದಿದಾರರಲ್ಲಿ ಭಾರೀ ಪ್ರಮಾಣದ ಸ್ಟಾಕು ಇದೆ ಎಂಬ ವರ್ತಮಾನ ಇದೆ….

Read more
error: Content is protected !!