ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿಟಿ ಬದನೆಯ ಬೇಸಾಯ ಸದ್ದಿಲದ್ದೆ ಕರ್ನಾಟಕದಲ್ಲಿ ರೈತರು ಎಚ್ಚರದಿಂದಿರಿ ಎಂಬ ವಿರೋಧಿ ಹೋರಾಟದ ಸಂದೇಶಗಳು ರವಾನೆಯಾಗುತ್ತಿವೆ. ಯಾಕೆ ಬಿಟಿ ಬದನೆ ಬೇಡ ಎಂದು ತಿಳಿಯುತ್ತಿಲ್ಲ. ವೈಜ್ಞಾನಿಕ ಮೂಲಗಳು ಬಿಟಿಯಿಂದ ತೊಂದರೆ ಇಲ್ಲ ಎಂಬುದನ್ನು ಆದಾರ ಸಹಿತ ಹೇಳಿದರೆ ಬಿಟಿ ಬೇಡ ಎನ್ನುವವರು ತಮ್ಮದೇ ಆದ ವಾದಗಳಿಂದ ಜನರನ್ನು ಅಂಜಿಸುತ್ತಿದ್ದಾರೆ.
ವಿಜ್ಞಾನ ಹೇಳುತ್ತದೆ ಹೀಗೆ:
- ಬಿಟಿ ಎಂದರೆ ವಂಶವಾಹಿ ಮಾರ್ಪಾಡು ಮಾಡಲಾದ ತಳಿ. ಮಾರ್ಪಾಡು ಎಂದರೆ ಕೆಲವು ಅವಗುಣಗಳನ್ನು ತೆಗೆದು ಅಗತ್ಯ ಗುಣಗಳನ್ನು ಅದರ ವಂಶವಾಹಿಯಲ್ಲಿ ಸೇರ್ಪಡೆಗೊಳಿಸಿರುವುದೇ ಹೊರತು ಬೇರೆ ಏನೂ ಅಲ್ಲ.
- ಜನ ತಿಳಿದುಕೊಂಡಂತೆ ಅಥವಾ ಕೆಲವು ವರ್ಗ ಪ್ರಚಾರ ಮಾಡುವಂತೆ ಇದು ಮನುಕುಲಕ್ಕೆ ಯಾವ ಹಾನಿಯೂ ಮಾಡಲಾರದು.
- ಇಲ್ಲಿ ಬಳಸಲಾದ ಯಾವ ತಾಂತ್ರಿಕತೆಯನ್ನೂ ಇದೇ ಪರಿಸರದಿಂದ ಹೊರತಾಗಿ ಯಾವುದೋ ಮರ್ಥ್ಯ ಲೋಕದಿಂದ ತರಲಾಗಿಲ್ಲ.
- ಕೆಲವು ವಿಶಿಷ್ಟ ಗುಣಗಳನ್ನು ಸಸ್ಯಗಳ ವಂಶವಾಹಿಯಲ್ಲಿ ಸೇರಿಸಿದರೆ ಮತ್ತು ಅದರಲ್ಲಿರುವ ಅವಗಣವನ್ನು ತೆಗೆದರೆ ಅದು ಮನುಕುಲಕ್ಕೆ ಒಂದಷ್ಟು ಅನುಕೂಲವನ್ನು ಮಾಡಿಕೊಡಬಲ್ಲುದು.
- ಅಂತಹ ಸಂಶೋಧನೆಗಳಲ್ಲಿ ವಂಶವಾಹೀ ತಾಂತ್ರಿಕತೆ ಒಂದು. ಇದನ್ನೇ ಜೆನೆಟಿಕಲಿ ಮೋಡಿಫೈಡ್ ( Genetically Modified) ಅಥವಾ ವಂಶ ವಾಹಿ ಬದಲಿಸಲ್ಪಟ್ಟ ತಂತ್ರಜ್ಞಾನ( Genetically Engineered Technology)ಎನ್ನುತ್ತಾರೆ.
- ಇದನ್ನು ನಮ್ಮ ತಂತ್ರಜ್ಞರು ಕಲಿತದ್ದು, ಪರಿಸರದಿಂದಲೇ.
- ಇಲ್ಲಿ ಸೇರ್ಪಡೆ ಮಾಡಿದ ವಂಶವಾಹೀ ಸಹ ನಮ್ಮ ಪರಿಸರದಲ್ಲಿ ಇದ್ದುದೇ ಆಗಿರುತ್ತದೆ.
ಬದನೆಗೆ ಯಾಕೆ ವಂಶವಾಹಿ ಅಗತ್ಯ:
- ಬದನೆ ಎಂಬುದು ಪ್ರಪಂಚದಾದ್ಯಂತ ಬಳಕೆಯಲ್ಲಿರುವ ಒಂದು ಪ್ರಮುಖ ತರಕಾರಿ.
- ಈ ತರಕಾರಿಯಲ್ಲಿ ಅತೀ ದೊಡ್ದ ಸಮಸ್ಯೆ ಎಂದರೆ ಕಾಯಿ ಕೊರಕ ಹುಳ ಬರುವುದು.
- ಹುಳದ ಉಪಟಳದಿಂದ ಗರಿಷ್ಟ ಪ್ರಮಾಣದಲ್ಲಿ ಬೆಳೆ ನಷ್ಟವಾಗುತ್ತದೆ.
- ಈ ನಷ್ಟವನ್ನು ಕಡಿಮೆ ಮಾಡಲು ಆರೋಗ್ಯ ಕ್ಕೆ ಮತ್ತು ಪರಿಸರಕ್ಕೆ ಹಾನಿಕರವಾದ ಕೀಟನಾಶವನ್ನು ಬಳಕೆ ಮಾಡಬೇಕಾಗುತ್ತದೆ.
- ಕೀಟನಾಶಕವನ್ನು ಬಳಕೆ ಮಾಡಿದ ತರಕಾರಿಗಳಲ್ಲಿ ಅದರ ಉಳಿಕೆ ಅಂಶ ಮಾನವನ ಶರೀರವನ್ನು ಸೇರುತ್ತದೆ.
- ಇದರಿಂದಾಗಿ ನಿಧಾನವಾಗಿ ಮನುಷ್ಯನ ಶರೀರದಲ್ಲಿ ಕೆಲವು ಅಸ್ವಾಸ್ಥ್ಯಗಳು ಕಾಣಿಸಿಕೊಳ್ಳುತ್ತವೆ.
- ಕೀಟನಾಶಕವನ್ನು ಬಳಸದೆ ಹುಳ ಬೀಳದಂತೆ ಸಸ್ಯ ಗುಣವನ್ನೇ ಬದಲಿಸಿದ ತಂತ್ರಜ್ಞಾನ ವಂಶವಾಹೀ ತಂತ್ರಜ್ಞಾನ.
- ಬೆಸಿಲಸ್ ತುರುಂಜೆನ್ಸಿಸ್ Bacillus thuringiensis (Bt) (soil bacterium Bacillus thuringiensis into the genome of various brinjal cultivars).ಎಂಬ ಮಣ್ಣು ಮೂಲದ ಬ್ಯಾಕ್ಟೀರಿಯಾವು ಈ ಕಾಯಿಕೊರಕ ಮೊಗ್ಗು ಕೊರಕ ಹುಳುವಿನ ವೈರಿಯಾಗಿದ್ದು, ಅದರ ಮೂಲ ನಮ್ಮ ಪರಿಸರವೇ ಆಗಿದೆ.
- ಈ ಬ್ಯಾಕ್ಟೀರಿಯಾವನ್ನು ಬದನೆ ಸಸ್ಯದ ವಂಶವಾಹಿಗೆ ಸೇರ್ಪಡೆಗೊಳಿಸಿದ್ದೇ ಬಿಟಿ.
- ಬದನೆಗೆ ಹುಳ ಬಂದು ಕಾಯಿ ಹಾಳಾಗದಂತೆ ಮಾಡಿದರೆ ಕೀಟನಾಶಕದ ಖರ್ಚು ಉಳಿತಾಯವಾಗುತ್ತದೆ.
- ಶ್ರಮ ಉಳಿಯುತ್ತದೆ. ಗ್ರಾಹಕರಿಗೆ ವಿಷ ಮುಕ್ತ ಆಹಾರ ದೊರೆಯುತ್ತದೆ.
- ಬದನೆ ವ್ಯಾಪಕ ಬಳಕೆಯ ತರಕಾರಿ ಆದ ಕಾರಣ ಅದಕ್ಕೆ ಈ ತಂತ್ರಜ್ಞಾನವನ್ನು ಬೆಸೆಯಲಾಗಿದೆ.
- ಹಾಗೆಂದು ಬೇರೆ ತರಕಾರಿಗಳಿಗೂ ಇದನ್ನು ಮಾಡಿದ್ದುಂಟು. ಅದು ಕೃಷಿ ಕ್ಷೇತ್ರಕ್ಕೆ ಕಾಲಿಡುವಾಗ ತನ್ನ ಸುದ್ದಿ ಮಾಡಬಹುದು.
ಇದು ಪ್ರಾಕೃತಿಕವಾದದ್ದೇ:
- ತಂತ್ರಜ್ಞರು ಕೃತಕವಾಗಿ ಮಾಡಿದ ಈ ಕೆಲಸವನ್ನು ಪ್ರಕೃತಿಯು ಕೋಟ್ಯಾಂತರ ವರ್ಷಗಳಿಂದ ನಮಗೆ ಗೊತ್ತಿಲ್ಲದೆ ಮಾಡುತ್ತಾ ಬಂದಿದೆ.
- ಎಲ್ಲದಕ್ಕೂ ಹುಳ ಬಂದು ಕೆಲವು ಗಿಡಗಳು ಹುಳದಿಂದ ಮುಕ್ತವಾಗಿದ್ದರೆ ಅದರಲ್ಲಿ ಹುಳ ನಿರೋಧಕ ಶಕ್ತಿಯ ಗುಣ ಜೀನ್ ನಲ್ಲೇ ಸೇರಲ್ಪಟ್ಟಿದೆ ಎಂದರ್ಥ.
- ಅದರಲ್ಲಿ ಯಾವ ವಂಶವಾಹಿಯನ್ನು ನಿಸರ್ಗ ಸೇರಿಸಿದೆ ಎಂಬುದನ್ನು ನೊಡಿ ಅಧ್ಯಯನ ಮಾಡಿದವರಿಲ್ಲ.
- ದೇವರ ಸೃಷ್ಟಿ, ಅಥವಾ ಪ್ರಕೃತಿಯ ಸೃಷ್ಟಿ ಎಂದು ನಾವು ಅದನ್ನು ವಿವಾದ ಇಲ್ಲದೆ ಸ್ವೀಕರಿಸಿದ್ದೇವೆ.
ವಂಶವಾಹಿ ವರ್ಗಾವಣೆ ನೈಸರ್ಗಿಕ ಪ್ರಕ್ರಿಯೆ:
- ವಂಶವಾಹೀ ತಾಂತ್ರಿಕತೆ ಅಥವಾ ಜೆನೆಟಿಕ್ ಇಂಜಿನಿಯರಿಂಗ್ ಎಂದರೆ ನಾವು ಬಯಸಿದ ವಿಶಿಷ್ಟ ಗುಣವನ್ನು ಹೊಂದಿರುವ ಗುಣಾಣುವನ್ನು ( ಜೀನ್) ಅದರ ಮೂಲದಿಂದ ಪ್ರತ್ಯೇಕಿಸಿ, ನಾವು ಇಚ್ಚಿಸಿದ ಸಸ್ಯಾಂತರಂಗದ ಗುಣಾಣು ಮಂಡಲ ಅಥವಾ ವಂಶವಾಹೀ ಮಂಡಲಕ್ಕೆ (Genome) ಜೊತೆಗೆ ಸೇರಿಸುವುದು ಬಿಟ್ಟರೆ ಬೇರೆ ಎನೂ ಕೃತ್ರಿಮ ಮಾಡಲಿಕ್ಕಿಲ್ಲ.
- ಹೀಗೆ ಸೇರ್ಪಡೆ ಮಾಡಲಾದ ವಂಶವಾಹಿ ಆ ಸಸ್ಯದ ಅಂಗದಲ್ಲಿ ಸಕ್ರಿಯವಾಗಿ ಉಳಿದು, ಹೊಸ ಗುಣವನ್ನು ಪಡೆದುಕೊಳ್ಳುತ್ತದೆ.
- ಇದನ್ನು ವಂಶವಾಹಿ ಪರಿವರ್ತಿತ ಸಸ್ಯ Genetically modified or Genetically Engineered Plant) ಎಂದು ಕರೆಯಲಾಗುತ್ತದೆ.
- ಅನುವಂಶಿಕವಾಗಿ ಅದು ಅದರ ಮುಂದಿನ ಪೀಳಿಗೆಗೂ ವರ್ಗಾವಣೆ ಆಗುತ್ತದೆ. ಇದು ತತ್ವ.
ಪ್ರಕೃತಿಯ ಮುಂದೆ ಮಾನವ ಕುಬ್ಜ. ಒಂದು ಎರಡು ತಲೆಮಾರು ತನಕ ಈ ಜೀನ್ ಅಲ್ಲಿ ಕ್ರಿಯಾತ್ಮಕವಾಗಿದ್ದು, ಪ್ರಕೃತಿಯ ಸಹಯೊಗದಿಂದ ಮತ್ತೆ ಅದು ನಿಶ್ಚ್ರಿಯವಾಗುವುದು ಹತ್ತಿಯಂತಹ ವಂಶವಾಹಿ ಬೆಳೆಯಲ್ಲಿ ನಮಗೆಲ್ಲಾ ಗೊತ್ತಾಗಿದೆ. ಮೊದಲು ಬಂದ ಬಿಟಿ 1 ತನ್ನ ಗುಣ ಕಳೆದುಕೊಂಡು ಬಿಟಿ 2 ಬಂತು. ಮತ್ತೆ ಬಿಟಿ 3 ಸಹ ಬಂದಿದೆ.
- ವಂಶವಾಹಿ ಅಥವಾ ಜೆನೆಟಿಕಲೀ ಮೋಡಿಫಿಡ್ ತಂತ್ರಜ್ಞಾನವನ್ನು ಸಾಮಾನ್ಯರಿಗೆ ಪರಿಚಯಿಸಿದ ಭಾಷೆ ಮಾತ್ರ ಭಯಾನಕ.
- ಕುಲಾಂತರಿ ಎಂಬ ಈ ನಾಮ ಕೇಳಿದಾಗ ಜನ ಈ ತಂತ್ರಜ್ಞಾನವನ್ನು ಜನ ಸ್ವೀಕರಿಸಲು ಹೆದರುವಂತೆ ಮಾಡಿದೆ.
ಬಹುರಾಷ್ಟ್ರೀಯ ಕಂಪೆನಿ ಬೇಕಾಗಿಲ್ಲ:
- ಪ್ರಕೃತಿಯಲ್ಲಿ ಅದರಷ್ಟಕ್ಕೇ ತಳಿ ಉನ್ನತೀಕರಣ ಅಥವಾ ಬದಲಾವಣೆ ಆಗುತ್ತಿರುತ್ತದೆ.
- ಒಂದು ಸೂಜಿ ಮೆಣಸು ಕ್ರಮೇಣ ( ನೂರಾರು ವರ್ಷಗಳ ಪರಿವರ್ತನೆಯಲ್ಲಿ) ನಾವು ನಿತ್ಯ ಬಳಸುವ ಮೆಣಸಿನ ಗಾತ್ರಕ್ಕೆ ಬೆಳೆದಿದೆಯೋ ಅದೇ ರೀತಿಯಲ್ಲಿ ಪ್ರಕೃತಿಯಲ್ಲಿ ವಂಶವಾಹಿ ತಳಿ ಬದಲಾವಣೆ ಆಗುತ್ತಲೇ ಇರುತ್ತದೆ.
- ಇದನ್ನು ಹುಡುಕುವ ತಾಳ್ಮೆ ಇದ್ದರೆ ಯಾವುದೇ ಬಹುರಾಷ್ಟ್ರೀಯ ಕಂಪೆನಿಯ ಬೀಜಕ್ಕೆ ಮೊರೆ ಹೋಗಬೇಕಾಗಿಲ್ಲ.
- ನಿಮ್ಮ ಸುತ್ತಮುತ್ತ ಎಲ್ಲಿಯಾದರೂ ಕೀಟ – ರೋಗ ನಿರೋಧಕ ಶಕ್ತಿ, ಕಳೆ ನಾಶಕ ನಿರೋಧಕ ಶಕ್ತಿ, ಶುಷ್ಕ , ಚಳಿ, ಮಣ್ಣಿನ ಕ್ಷಾರ, ಆಮ್ಲ ನಿರೋಧಕ ಶಕ್ತಿ ಪಡೆದು ಇಳುವರಿ ಕೊಡುತ್ತಿರುವ ತಳಿ ಇದ್ದರೆ, ಅದೂ ಸಹ ವಂಶವಾಹೀ ತಳಿಯೇ ಆಗಿರುತ್ತದೆ.
ಇದು ಪ್ರಕೃತಿ ವಿರೋಧಿ ಅಲ್ಲ:
- ಹಿಂದೆ ಹೇಳಿದಂತೆ ಪ್ರಕೃತಿಯಲ್ಲಿ ಕೋಟ್ಯಾಂತರ ವರ್ಷಗಳಿಂದ ನಮ್ಮ ಅರಿವಿಗೆ ಬಾರದಂತೆ ಸಹಜವಾಗಿ ವಂಶವಾಹಿ ವರ್ಗಾವಣೆ ನಡೆಯುತ್ತಾ ಬಂದಿದೆ.
- ಇದೇ ಈ ತಂತ್ರಜ್ಞಾನದ ತಳಹದಿ. ಸಸ್ಯಗಳಿರಲಿ, ಪ್ರಾಣಿಗಳಿರಲಿ ಎಲ್ಲವೂ DNA ಎಂಬ ಜೀವ ರಾಸಾಯನಿಕದಿಂದ ರಚಿತವಾಗಿದೆ.
- ಈ DNA ಯು ಆಯಾ ಜೀವಿಗಳಲ್ಲಿ ಅವುಗಳ ಎತ್ತರ, ಆಕಾರ, ಬಣ್ಣ, ಸ್ವಭಾವ, ನಿರೋಧಕತೆ ಮುಂತಾದ ಗುಣಗಳನ್ನು ನಿರ್ಧರಿಸುವ ವಂಶವಾಹಿಯನ್ನು ಹೊಡಿರುತ್ತದೆ.
- ಸಸ್ಯಗಳಿರಲಿ, ಪ್ರಾಣಿಗಳಿರಲಿ, ಸೂಕ್ಷ್ಮಾಣು ಜೀವಿಗಳಿರಲಿ, ಅವುಗಳಲ್ಲಿ ಅನೇಕ ವಂಶವಾಹಿಗಳು ಸಾಮಾನ್ಯವಾಗಿರುತ್ತವೆ. ಅವುಗಳ ವರ್ಗಾವಣೆ ಕೂಡಾ ಸಾಧ್ಯ.
- ಅಂದರೆ ಎಲ್ಲಾ ಜೀವಿಗಳ ಮೂಲವೂ ಒಂದೆ. ಪ್ರಕೃತಿ ಅದರಲ್ಲಿ ಭೇಧ ಮಾಡುವುದಿಲ್ಲ.
- ಬಿಟಿ ತಂತ್ರಜ್ಞಾನದಲ್ಲಿ ವಂಶವಾಹಿ ವರ್ಗಾವಣೆಯನ್ನು ಅತ್ಯಂತ ಕರಾರುವಕ್ಕಾಗಿಯೇ ಮಾಡಲಾಗುತ್ತದೆ.
- ಇದನ್ನು ಪರೀಕ್ಷೆ ಮಾಡದೆ, ಕೃಷಿಗೆ ಬಿಡುಗಡೆ ಮಾಡಲಾಗುವುದಿಲ್ಲ.
- ಅಮೂಲಾಗ್ರ ಅಧ್ಯಯನ ನಡೆಸಿಯೇ ಬಿಡುಗಡೆ ಮಾಡಲಾಗುತ್ತದೆ.
- ಅವು, ಮನುಷ್ಯರಿಗೆ, ಪರಿಸರಕ್ಕೆ ಹಾನಿ ಮಾಡುವುದಾಗಲೀ ಆಗಲು ಸಾಧ್ಯವಿಲ್ಲ.
ಇಷ್ಟಕ್ಕೂ ಜಿ ಎಂ ತಂತ್ರಜ್ಞಾನದಲ್ಲಿ ಆಗುವ ಅನಾಹುತಗಳನ್ನು ಸಾಕ್ಷಿ ಸಮೇತ ಬಹಿರಂಗಪಡಿಸುವ ಹಕ್ಕು ಪ್ರತೀಯೊಬ್ಬನಿಗೂ ಇರುವ ಕಾರಣ ಅದನ್ನು ಮಾಡುವುದು ಎಲ್ಲದಕ್ಕಿಂತ ಉತ್ತಮ.
ರೈತನಿಗೆ ಒಳ್ಳೆಯದು ಮಾಡಲು ಬಹುರಾಷ್ಟ್ರೀಯ ಕಂಪೆನಿಯೇ ಆಗಬೇಕಾಗಿಲ್ಲ. ನಮ್ಮ ದೇಶದ ವಿಜ್ಞಾನಿಗಳೂ ಮಾಡಬಹುದು. ನಮ್ಮಲ್ಲಿ ಇಷ್ಟೊಂದು ಸಂಶೊಧನಾ ಸಂಸ್ಥೆಗಳು ಇದ್ದಾಗ್ಯೂ ಈ ತಂತ್ರಜ್ಞಾನವನ್ನು ಬಹುರಾಷ್ಟ್ರೀಯ ಕಂಪೆನಿ ಕೊಡುತ್ತದೆ ಎಂದಾದರೆ ನಾವು ಅದಕ್ಕೆ ನಾಲಾಯಕ್ಕು ಆಗಿರಬಹುದು.!
End of the article:—————————————————
Search words: Brinjal# Bt Brinjla# Anti propaganda on Bt brinjal# Bt and environment# protest for Bt technology# Shoot borer# Fruit borer# GM technology # Genetically modified plant#
I every time spent my half an hour to read this weblog’s articles or reviews every day along with a mug of coffee.
Thank you sir. Please give suggestion to improve the content.