ಈಗ ಮಾರುಕಟ್ಟೆಯಲ್ಲಿ ದೊರೆಯುವ ಬಾಳೆ ಹಣ್ಣುಗಳನ್ನು ಸರಿಯಾಗಿ ಗಮನಿಸಿದ್ದೀರಾ? ಅವುಗಳ ಮೇಲೆ ಒಂದೇ ಒಂದು ಕಲೆ ಕೂಡಾ ಇರುವುದಿಲ್ಲ. ಹಣ್ಣು ತಿನ್ನುವ ಮುಂಚೆ ಅದನ್ನು ತೊಳೆದು ತಿನ್ನಬೇಕು ಎನ್ನುತ್ತಾರೆ. ಆದರೆ ಇದನ್ನು ಕೈತೊಳೆದು ಮುಟ್ಟುಬೇಕು ಎಂಬಷ್ಟು ಸ್ವಚ್ಚವಾಗಿರುತ್ತದೆ. ಹಣ್ಣು ನೋಡಿದರೆ ಎಂತವನಿಗೂ ಕೊಳ್ಳುವ ಮನಸ್ಸಾಗಬೇಕು. ಇದು ಗಾಳೆ ಗೊನೆಗೆ ಕವರ್ ಹಾಕಿ ಬೆಳೆದ ಕಾಯಿಯಾಗಿದ್ದು, ಮಾರುಕಟ್ಟೆಯಲ್ಲಿ ಇದಕ್ಕೆ ಉತ್ತಮ ಬೇಡಿಕೆ. ಮುಂದಿನ ದಿನಗಳಲ್ಲಿ ಇದು ಮಾಮೂಲಿಯಾಗಲಿದೆ.
- ಬಹಳ ಹಿಂದಿನಿಂದಲೂ ವಿದೇಶಗಳಿಗೆ ರಪ್ತು ಮಾಡುವ ಉದ್ದೇಶದ ಬಾಳೆ ಕಾಯಿಗಳಿಗೆ ಗೊನೆಗೆ ಕವರ್ ಹಾಕುವ ಪದ್ದತಿ ಇತ್ತು.
- ಮಹಾರಾಷ್ಟ್ರದ ಕೆಲವು ರೈತರು ಇದನ್ನು ಮಾಡುತ್ತಿದ್ದರು.
- ಕವರ್ ಹಾಕಿ ಬೆಳೆದ ಬಾಳೆಕಾಯಿಗಳನ್ನು ಹೆಣಿಗೆ ತೆಗೆದು, ಬಾಕ್ಸ್ ಗಳಲ್ಲಿ ತುಂಬಿ ರಪ್ತು ಮಾಡಲಾಗುತ್ತಿತ್ತು.
- ಈಗ ಸ್ಥಳೀಯ ಮಾರುಕಟ್ಟೆಯಲ್ಲೂ ಇದು ಮಾಮೂಲಿಯಾಗಲಾರಂಭಿಸಿದೆ.
- ಈ ಬಾಳೆ ಗೊನೆ ಹಣ್ಣಾದಾಗ ಅದರ ನೋಟವೇ ಭಿನ್ನವಾಗಿರುತ್ತದೆ.
ಯಾವಾಗ ಕವರ್ ಹಾಕುವುದು:
- ಬಾಳೆ ಗೊನೆ ಹಾಕಿ ಎಲ್ಲಾ ಹೆಣಿಗೆಗಳೂ ಹೊರ ಬಂದು ನಾಲ್ಕು ಐದು ದಿನಗಳ ತರುವಾಯ ಇದನ್ನು ಹಾಕಬೇಕು.
- ಹಾಕುವಾಗ ಕುಂಡಿಗೆ ಭಾಗವನ್ನು ಕಡಿದು ಹಾಕಬೇಕು.
- ಕುಂಡಿಗೆ ಭಾಗವನ್ನು ಕಡಿದ ದಿನವೇ ಬ್ಯಾಗು ಹಾಕುವ ಬದಲು ಮರುದಿನ ಹಾಕಿದರೆ ಅದರ ರಸ ಪೂರ್ತಿಯಾಗಿ ಇಳಿದು ಹೋಗಿರುತ್ತದೆ.
- ಕವರ್ ಹಾಕುವಾಗ ಗೊನೆಯ ಬುಡ ಭಾಗವನ್ನು ಕಟ್ಟಬೇಕು. ತುದಿ ಭಾಗವನ್ನು ಸಡಿಲವಾಗಿ ಕಟ್ಟಬಹುದು ಅಥವಾ ಕಟ್ಟದೆಯೂ ಇರಬಹುದು.
- ಗೊನೆಯನ್ನು ಬ್ಯಾಗಿಂಗ್ ಮಾಡಲು ಬಳಸುವ ಚೀಲಗಳು ರೆಡಿ ಮೇಡ್ ಅಗಿ ಲಭ್ಯವಿದ್ದು, ಅದು ಬಿಳಿ, ನೀಲಿ ,ಕಪ್ಪು, ಕಾಖಿ ಬಣ್ಣಗಳಲ್ಲಿ ಲಭ್ಯವಿರುತ್ತವೆ.
- ಬಟ್ಟೆಯನ್ನೂ ಕವರ್ ಆಗಿ ಹಾಕಬಹುದು. ಸಾಮಾನ್ಯ ಪ್ಲಾಸ್ಟಿಕ್ ಸಹ ಆಗುತ್ತದೆ ಎನ್ನುತ್ತಾರೆ, ಕೇರಳ ತ್ರಿಶೂರಿನ ಬಾಳೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು.
- ಇಲ್ಲಿ ನೇಂದ್ರ ಬಾಳೆಗೆ ಇದನ್ನು ಹಾಕುವ ಮೂಲಕ ಆಕರ್ಷಕ ಹಣ್ಣು ಪಡೆಯಯುತ್ತಾರೆಂತೆ.
ಕವರ್ ಹಾಕುವುದರ ಅನುಕೂಲ:
- ಯಾವುದೇ ಒಂದು ಉತ್ಪನ್ನದ ಗುಣಮಟ್ಟ , ನೋಟ, ಮಾರುಕಟ್ಟೆಗೆ ಅತೀ ಪ್ರಾಮುಖ್ಯ ಅಂಶ.
- ಇದನ್ನು ಸುರಕ್ಷಿತ ವಿಧಾನದಲ್ಲಿ ಪಡೆಯಲು ಬ್ಯಾಗಿಂಗ್ ಸಹಕಾರಿ.
- ಬಾಳೆ ಗೊನೆಗೆ ಕವರ್ ಹಾಕುವುದರಿಂದ, ಬಾಳೆ ಕಾಯಿಗಳ ಮೇಲೆ ಯಾವ ಗಾಯಗಳೂ ಉಂಟಾಗುವುದಿಲ್ಲ.
- ಹಣ್ಣು ಹಂಪಲು , ತರಕಾರಿಗಳಿಗೆ ಕೆಲವು ಸೂಕ್ಷ್ಮ ವಾತಾವರಣಗಳು ಬೆಳೆವಣಿಗೆಗೆ ಸಹಾಯಕವಾಗುತ್ತದೆ.
- ಸೊಪ್ಪು ತರಕಾರಿಗಳನ್ನು ಗ್ರೀನ್ ಹೌಸ್ ಒಳಗೆ ಬೆಳೆದಾಗ ಬೆಳವಣಿಗೆ ಚೆನ್ನಾಗಿ ಆಗುವಂತೆ, ಕವರ್ ಹಾಕಿ ಬೆಳೆದ ಬಾಳೆ ಗೊನೆಗೂ ಈ ಸೂಕ್ಷ್ಮ ವಾತಾವರಣ ಅನುಕೂಲವಾಗುತ್ತದೆ.
- ಕವರ್ ನ ಒಳಗೆ 1-2 ಡಿಗ್ರಿ ಹೆಚ್ಚು ತಾಪಮಾನ ಇರುವುದರಿಂದ ಬೆಳವಣಿಗೆ ಅನುಕೂಲವಾಗುತ್ತದೆ.
- ಯಾವುದೇ ಹಣ್ಣು ಹಂಪಲುಗಳಿಗೆ ಸೂರ್ಯನ ಬೆಳಕಿನಿಂದ (Sun burn) ಉಂಟಾಗುವ ಘಾಸಿ ತುಂಬಾ ನಷ್ಟವನ್ನು ಉಂಟು ಮಾಡುತ್ತದೆ.
- ಈ ವಿಧಾನಲ್ಲಿ ಅಂತಹ ತೊಂದರೆ ಇಲ್ಲ.
- ಇಂಥಹ ಬಾಳೆ ಕಾಯಿಗಳು ಸ್ವಲ್ಪ ಬೇಗವೇ ಬೆಳೆಯುತ್ತವೆ. ಹಣ್ಣಾದ ತರುವಾಯ ಒಂದೆರಡು ದಿನ ಹೆಚ್ಚು ಬಾಳ್ವಿಕೆ ಬರುವುದು.
- ಹಣ್ಣು ಕೊಳೆಯುವಿಕೆ, ಮತ್ತು ಕಾಯಿಗೆ ಉಂಟಾಗುವ ಕೆಲವು ಸಣ್ಣ ಪುಟ್ಟ ರೋಗಗಳು ಇಲ್ಲದಾಗುತ್ತದೆ.
- ಬಾಳೆ ಕಾಯಿಗಳು ಮಾಮೂಲಿಗಿಂತ ಸ್ವಲ್ಪ ಉದ್ದವಾಗಿ ಬೆಳೆಯುತ್ತವೆ. ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚಿನ ಬೆಲೆಯೂ ಲಭ್ಯ.
- ಹಕ್ಕಿಗಳು ಮತ್ತು ಕೆಲವು ಕೀಟಗಳಿಂದ ಉಂಟಾಗುವ ಯಾವ ಹಾನಿಯ ಭಯವೂ ಇರುವುದಿಲ್ಲ.
ಕವರ್ ಮಾಡಲು ನೀಲಿ ಬಣ್ಣದ ಕವರ್ ಹೆಚ್ಚು ಅನುಕೂಲಕರವಾಗಿರುತ್ತದೆ. ಉಳಿದವುಗಳಿಂದಲೂ ಅಂತಹ ತೊಂದರೆ ಇಲ್ಲ.
ಗೊನೆಗಳಿಗೆ ಈ ರೀತಿ ಕವರ್ ಹಾಕಲು ಭಾರೀ ವೆಚ್ಚ ಆಗುವುದಿಲ್ಲ. ಈಗ ಪ್ಲಾಸ್ಟಿಕ್ ಬದಲಿಗೆ ಬಳಕೆಯಾಗುವ ಸಾಮಾಗ್ರಿಯಿಂದ ಇದನ್ನು ತಯಾರಿಸುತ್ತಾರೆ. ಕ್ರಾಪ್ ಕವರ್ ಅನ್ನೇ ಸುತ್ತಿತೂ ಅಂಗಿ ತೊಡಿಸಬಹುದು. ಸದ್ಯದಲ್ಲೇ ಎಲ್ಲಾ ಬಾಳೆ ಬೆಳೆಯುವವರೂ ತಮ್ಮ ಉತ್ಪನ್ನಕ್ಕೆ ಈ ರೀತಿ ಹೊದಿಕೆ ಹಾಕಲೇ ಬೇಕಾಗಬಹುದು.
end of the article:——————————————————-
search words: banana cultivation# banana fruit # Attraction of banana fingers# banana bunch bagging # banana fingers# Sun burn protection of banana bunch# latest technology in banana cultivation#
ಎಲ್ಲಿ ಸಿಗುತ್ತವೆ ಇವು….
Can you plz suggest me where I will get blue covers For my Bananna