ಸೂಕ್ಷ್ಮ ನೀರಾವರಿಯ ಹೃದಯ – ಫಿಲ್ಟರ್ ಗಳು.

ಫಿಲ್ಟರ್ ಎಂದರೆ ಯಾವ ನೀರಿನಲ್ಲಿ  ಯಾವ ರೀತಿಯ ಕಶ್ಮಲ ಇದೆ ಎಂಬುದನ್ನು  ಗಮನಿಸಿ ಅದನ್ನು ಸಮರ್ಪಕವಾಗಿ ಸೋಸಿ ಕೊಡುವ  ವ್ಯವಸ್ಥೆ.  ಬರಿ ಕಣ್ಣಿನಲ್ಲಿ ನೀರನ್ನು ಕಾಣುವಾಗ ಬಹಳ ಸ್ವಚ್ಚವಾಗಿ ಕಂಡರೂ ಅದರಲ್ಲಿ ಏನಾದರೂ ಕಶ್ಮಲ ಇದ್ದೇ ಇರುತ್ತದೆ. ಅದನ್ನು ಸೋಸದೇ ಹನಿ ನೀರಾವರಿಯ ಮೂಲಕ ಹರಿಸಿದರೆ  ವ್ಯವಸ್ಥೆ  ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ. ಬೇರೆ ಬೇರೆ ಕಶ್ಮಲಗಳನ್ನು ನೀರಿನಿಂದ ಪ್ರತ್ಯೇಕಿಸಿ ಸೋಸಿ ಕೊಡುವ ಬೇರೆ ಸೋಸು ವ್ಯವಸ್ಥೆಗಳು ಇವು. ಮೆಷ್  ಫಿಲ್ಟರ್: (ಸ್ಕ್ರೀನ್ ) ಇದು 80-100-120 ಮೈಕ್ರಾನ್…

Read more
ಬೋರ್ ವೆಲ್ ನೀರಿನಲ್ಲಿರುವ ಕಶ್ಮಲಗಳು

ಬೋರ್ ವೆಲ್ ನೀರಿನಲ್ಲಿರುವ ಕಶ್ಮಲಗಳ ನಿವಾರಣೆ

ಹನಿ ನೀರಾವರಿ ಎಂದರೆ ನಾವು ಬಳಸುವ ನೀರಿನ ಮೂಲದಲ್ಲಿ  ಯಾವ ಕಶ್ಮಲ  ಇದೆ ಎಂದು ಕೂಲಂಕುಶವಾಗಿ ಗಮನಿಸಿ , ಅದನ್ನು ಸೋಸಲು  ಮತ್ತು ಸ್ವಚ್ಚಮಾಡಲು ಬೇಕಾದ ವ್ಯವಸ್ಥೆ ಮಾಡಿಕೊಂಡರೆ ಹನಿ ನೀರಾವರಿ 100% ಯಶಸ್ವಿ. ಹೆಚ್ಚಿನವರು ಕಡಿಮೆ ಖರ್ಚಿನಲ್ಲಿ ವ್ಯವಸ್ಥೆಗಳನ್ನು  ಮಾಡಿಕೊಳ್ಳುವ ಉದ್ದೇಶದಿಂದ ಅಗತ್ಯವಾದ ಸೋಸು ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದಿಲ್ಲ. ಅದರ ಫಲವಾಗಿ ಸೂಕ್ಷ್ಮ ನೀರಾವರಿ ವ್ಯವಸ್ಥೆ  ಕೆಡುತ್ತದೆ. ಯಾವ ನೀರಿನ ಮೂಲ: ನಾವು ನೀರಾವರಿಗಾಗಿ ಬಳಕೆ ಮಾಡುವ ನೀರಿನ ಮೂಲಗಳೆಂದರೆ ಬಾವಿ- ಕೆರೆ ನೀರು, ಕೊಳವೆ ಬಾವಿ…

Read more

ಅಂತರ್ಜಲ ಮಟ್ಟ ಏರಿಸಲು ಕಷ್ಟ ಇಲ್ಲ.

ಎಲ್ಲೆಡೆ ಆಂತರ್ಜಲ ಮಟ್ಟ ಕುಸಿದಿದೆ, ನಾಳೆಯ ನೀರಿಗಾಗಿ ಇಂದು ಚಿಂತನೆ ನಡೆಯುತ್ತಿದೆ.ನೀರಿನ ತೃಷೆ ತಣಿಸಲು ಆಂತರ್ಜಲ ಬಳಕೆ ಪ್ರಾರಂಭ ಆದ ನಂತರ ಅಂತರ್ಜಲ ಮಟ್ಟ ಕುಸಿಯಲಾರಂಭಿಸಿತು. ಜನ ಮಳೆ ಕಡಿಮೆಯಾಗಿದೆ, ಹವಾಮಾನ ವೈಪರೀತ್ಯ ಎಂದೆಲ್ಲಾ ಹೇಳುತ್ತಾ ಜಲ ಜಾಗೃತಿ ಮೂಡಿಸುತ್ತಿದ್ದಾರೆ. ವಾಸ್ತವಾಗಿ ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣ ಹಲವು ಇದೆ. ಇದರಲ್ಲಿ ಅತಿಯಾದ ನೀರಿನ ಬಳಕೆ ಒಂದು. ಅಂತರ್ಜಲ ಕೆಳಗಿಳಿಯಲು ಕಾರಣ: ಸರಳವಾಗಿ ಹೇಳಬೇಕೆಂದರೆ ಲೆಕ್ಕಕ್ಕಿಂತ ಮಿತಿ ಮೀರಿ ನೀರಿನ ಬಳಕೆ ಆದುದೇ ಅಂತರ್ಜಲ ಕುಸಿತಕ್ಕೆ ಕಾರಣ….

Read more

ಬೇಸಿಗೆ ಕಾಲದಲ್ಲಿ ನೀರೊತ್ತಾಯ ತಡೆಯಲು ಹೀಗೆ ಮಾಡಿಕೊಳ್ಳಿ.

ಬೇಸಿಗೆಯಲ್ಲಿ ಕೃಷಿಕರಿಗೆ ಹೊಲಕ್ಕೆ ನೀರುಣಿಸುವುದೇ ಕೆಲಸ. ಇಂದು ನೀರುಣಿಸಿದರೆ ನಾಳೆ ನೋಡುವಾಗ ಒಣಗಿರುತ್ತದೆ. ಅಷ್ಟೂ ನೀರನ್ನೂ ಬೆಳೆ ಸಸ್ಯಗಳು ಹೀರಿಕೊಳ್ಳುವುದಲ್ಲ. ಅದರಲ್ಲಿ ಮುಕ್ಕಾಲು ಪಾಲು ಆವಿಯಾಗಿ ವ್ಯಯವಾದರೆ ಕಾಲು ಪಾಲು ಮಾತ್ರ ಸಸ್ಯ ಬಳಕೆ ಮಾಡಿಕೊಳ್ಳುತ್ತದೆ. ಆವೀಕರಣ ತಡೆದರೆ ನೀರು ತುಂಬಾ ಕಡಿಮೆ ಸಾಕು. ಬೇಸಿಗೆ ಕಾಲ ಎಂದರೆ ಸೂರ್ಯನ ಪ್ರಖರ ಬಿಸಿಲಿಗೆ ಏನಿದ್ದರೂ ಒಣಗಿ ಹೋಗುವ ಕಾಲ. ಈ ಸಮಯದಲ್ಲಿ ಸಿಮೆಂಟ್ ನೆಲಕ್ಕೆ  1 ಲೀ. ನೀರು ಚೆಲ್ಲಿದರೆ ಅದು ಆವಿಯಾಗಲು ಆಗಲು  1 ಗಂಟೆ…

Read more

ಕೃಷಿ ಉತ್ಪನ್ನಗಳ ನಿರ್ಜಲೀಕರಣದಿಂದ ಲಾಭ ಹೆಚ್ಚು.

ಮಾರುಕಟ್ಟೆಯಲ್ಲಿ ವ್ಯಾಪಾರಿ ನನಗೆ ನಿಮ್ಮ  ಉತ್ಪನ್ನ ಬೇಕು ಎಂದು ಕೇಳುವ ಸ್ಥಿತಿ ಯಾವಾಗ ಬರುತ್ತದೆಯೋ ಆಗ ರೈತರು ತಮ್ಮ ಉತ್ಪನ್ನಕ್ಕೆ MRP ಇಡಬಹುದು. ಅದಕ್ಕೆ ಸ್ವಲ್ಪವೇ ತಯಾರಿ ನಡೆಯಬೇಕಿದೆ. ನೀವು 100  ಟನ್  ಬೀನ್ಸ್  ಬೆಳೆದರೆ ಕೊಳ್ಳುವ ವ್ಯಾಪಾರಿ ಬುದ್ದಿವಂತಿಕೆ  ಮೆರೆಯುತ್ತಾನೆ. ನಿಮ್ಮ ಕೊಯಿಲಿನ ಸಮಯದ ತನಕ ಉತ್ತಮ ಬೆಲೆ ಇದ್ದರೆ  ನೀವು ಕೊಯ್ಯುವಾಗ ಬೆಲೆ ನೆಲಕಚ್ಚುತ್ತದೆ. ಆ ಸಮಯದಲ್ಲಿ  ನೀವು “ನಾನು ಬೆಳೆದ ಬೆಳೆಯನ್ನು ಪೂರ್ತಿ ಸಂಸ್ಕರಣೆ ಮಾಡುತ್ತೇನೆ. ತಾಜಾ ಮಾರುಕಟ್ಟೆಗೆ ಕೊಡುವುದಿಲ್ಲ” ಎಂದರೆ ತಕ್ಷಣ …

Read more

ಈ ಸಸ್ಯಗಳಲ್ಲಿ ವಿಶೇಷ ಗುಣಗಳು ಇವೆ.

ಕಳೆ ಸಸ್ಯಗಳೆಂದು ನಾವು ನಿರ್ಲಕ್ಷ್ಯ ಮಾಡುವ ಕೆಲವು ಸಸ್ಯಗಳು ಮಣ್ಣೀನ ಫಲವತ್ತತೆ  ಹೆಚ್ಚಿಸಲು ಸಹಕಾರಿ. ಅವುಗಳಲ್ಲಿ ಒಂದು ಕ್ರೊಟಲೇರಿಯಾ ಜಾತಿಯ ಸಸ್ಯ. ಸಸ್ಯಗಳು ಮತ್ತು ಮಣ್ಣು:  ಅಲ್ಪಾವಧಿಯ ಸಸ್ಯಗಳಾದ ಇವುಗಳನ್ನು ಹೊಲದಲ್ಲಿ ಬೆಳೆಯುವುದರಿಂದ ಮಣ್ಣಿನ ಭೌತಿಕ ಮತ್ತು ಜೈವಿಕ ರಚನೆ ಅಭಿವೃದ್ದಿಯಾಗುತ್ತದೆ. ಇಂತವುಗಳು  ನಮ್ಮ ಸುತ್ತಮುತ್ತ ಹಲವಾರು ಇವೆ. ಯಾವುದು ದ್ವಿದಳ ಕಾಳುಗಳನ್ನು ಕೊಡುವ ಸಸ್ಯಗಳಿವೆಯೋ ಅವೆಲ್ಲಾ ಪೋಷಕಾಂಶ ಕೊಡುವ ಸಸ್ಯಗಳು.  ಮಣ್ಣು  ಈ ತನಕ ಜೀವಂತವಾಗಿ ಉಳಿದುಕೊಂಡು ಬಂದುದು ಅದರಲ್ಲಿ ಆಶ್ರಯಿಸಿರುವ ಸೂಕ್ಷ್ಮ ಜೀವಿಗಳು, ಸಸ್ಯಗಳು…

Read more
ಗೊಬ್ಬರ ಮಾಡಿಕೊಡುವ ನೈಜ ಎರೆಹುಳು

ಗೊಬ್ಬರ ಮಾಡಿಕೊಡುವ ನೈಜ ಎರೆಹುಳು ಯಾವುದು ಗೊತ್ತೇ?

ವಿದೇಶೀ ಪ್ರವರ್ಗದ ಎರೆಹುಳುಗಳಿಂದ  ತಯಾರಿಸಿದ ಮಾರಾಟಕ್ಕೆ ಲಭ್ಯವಿರುವ ಎರೆ ಗೊಬ್ಬರ ಬಳಸಿದರೆ  ಅದ್ಭುತ ಇಳುವರಿ ಎಂದೆಲ್ಲಾ ಪ್ರಚಾರದ ಹಿಂದೆ ಸಾಕಷ್ಟು ಉತ್ಪೇಕ್ಷೆಗಳು ಇವೆ. ವಿದೇಶೀ ಎರೆಹುಳುಗಳು ಸಾವಯವ ವಸ್ತುಗಳನ್ನು ಪುಡಿ ಮಾಡಿಕೊಡುವ ಒಂದು ಜೀವಿಗಳು ಎಂಬುದಾಗಿ ಹೇಳಲ್ಪಟ್ಟಿದೆ. ನಮ್ಮೆಲ್ಲರ ಹೊಲದಲ್ಲಿ  ಇರುವ ಎರೆಹುಳುಗಳ ಕೆಲಸಕ್ಕೆ ಅವು ಸಹಕರಿಸುವ ಜೀವಿಗಳು ಅಷ್ಟೇ. ಮಣ್ಣಿನಲ್ಲಿ ಕೆಲಸ ಮಾಡಿ ಸಸ್ಯ ಬೆಳವಣಿಗೆ ಮತ್ತು ಮಣ್ಣಿನ ಸುಧಾರಣೆ ಮಾಡುವವುಗಳು  ಮಣ್ಣು ಜನ್ಯ ಎರೆ ಹುಳುಗಳು ಮಾತ್ರ. ಎರೆಹುಳು ಗೊಬ್ಬರ ಬಳಸಿದರೆ ಹಾಗಾಗುತ್ತದೆ , ಹೀಗಾಗುತ್ತದೆ ಎಂದೆಲ್ಲಾ ಹೇಳಿ ಚೀಲದಲ್ಲಿ ತುಂಬಿ…

Read more
ಸತ್ವ ಉಳ್ಳ ಲಂಟಾನ ಸಸ್ಯ

ಈ ಸಸ್ಯಗಳಲ್ಲಿ ವಿಶೇಷ ಗುಣಗಳು ಇವೆ.

ನಮ್ಮ ಸುತ್ತಮುತ್ತ ಇರುವ ಕೆಲವು ಗಿಡಗಳು ಬೇರೆ ಬೇರೆ ಸತ್ವಗಳನ್ನು ಒಳಗೊಂಡಿವೆ. ಕೆಲವು ಪೋಷಕವಾಗಿಯೂ  ಮತ್ತೆ ಕೆಲವು ಕೀಟ – ರೋಗ ನಿಯಂತ್ರಕವಾಗಿಯೂ ಕೆಲಸ ಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಇವುಗಳನ್ನು ಕಳೆ ನಾಶಕಗಳು ಬಲಿ ತೆಗೆದುಕೊಳ್ಳುತ್ತಿವೆ. ರೈತರೇ ಇವುಗಳನ್ನು ಅನವಶ್ಯಕ  ಕೊಲ್ಲಬೇಡಿ. ಅದರ ಸದುಪಯೋಗ ಮಾಡಿಕೊಳ್ಳಿ. ಏನಿದೆ ಸತ್ವ: ಸಾಮಾನ್ಯವಾಗಿ ಸಾವಯವ ವಿಧಾನದಲ್ಲಿ ಬೇಸಾಯ ಮಾಡುವಾಗ ಸಾರಜನಕ ಮೂಲವನ್ನು ಬೇಕಾದಷ್ಟು ಪ್ರಮಾಣದಲ್ಲಿ  ಹೊಂದಿಸಿಕೊಳ್ಳಲಿಕ್ಕಾಗುತ್ತದೆ. ಆದರೆ ರಂಜಕ ಮತ್ತು  ಪೊಟ್ಯಾಶಿಯಂ ಸತ್ವಗಳನ್ನು ಬೇಕಾದಷ್ಟು ಪ್ರಮಾಣದಲ್ಲಿ  ಹೊಂದಿಸಿಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದ…

Read more
ಸೀಡ್ ಟ್ರೇ ನಲ್ಲಿ ಬೀಜ ಬಿತ್ತುವುದು

ತರಕಾರಿ ಬೆಳೆಗಾರರನ್ನು ರಕ್ಷಿಸಿದ ಸೀಡ್ ಟ್ರೇ ತಂತ್ರಜ್ಞಾನ

ಹಿಂದೆ ತರಕಾರಿ ಬೆಳೆಯುವವರು ಹೊಲದ ಸಿದ್ದತೆ ಮಾಡಿ, ಸಾಲುಗಳನ್ನು ಗುರುತು ಮಾಡಿ, ಬೀಜ ತಂದು ಬಿತ್ತನೆ ಮಾಡಿ ಜೋಪಾನವಾಗಿ ಆರೈಕೆ ಮಾಡಿ ತರಕಾರಿ ಬೆಳೆಸುತ್ತಿದ್ದರು. ಈಗ ಹಾಗಿಲ್ಲ. ನಾಳೆ ಟೊಮಾಟೋ ಅಥವಾ ಇನ್ಯಾವುದಾದರೂ ತರಕಾರಿ ಹಾಕಬೇಕೆಂದಾದರೆ ಇಂದು ಹೊಲದ ಸಿದ್ದತೆ ಮಾಡಿ, ನಾಳೆ ಸಸಿ ನೆಡಬಹುದು. ಮುಂಚಿತವಾಗಿಯೇ ಸಸಿ ಮಾಡಿಟ್ಟುಕೊಳ್ಳುವ ಸೀಡ್ ಟ್ರೇ ತಂತ್ರಜ್ಞಾನ ಇದೆ. ಇದರಲ್ಲಿ ಗಿಡ ಬೆಳೆಸಿ ಕೊಡುವವರೂ ಇದ್ದಾರೆ. ಇದು ತರಕಾರಿ ಬೆಳೆಗಾರರಿಗೆ ನಷ್ಟವನ್ನು ತುಂಬಾ ಕಡಿಮೆ ಮಾಡಿದೆ. ಸಮಯದ ಉಳಿತಾಯವನ್ನೂ ಮಾಡಿದೆ….

Read more
ತೆಂಗಿನ ಮರದ ಸುಳಿ ಕೊಳೆ

ತೆಂಗಿನ ಮರದ ಸುಳಿ ಕೊಳೆಯುವುದು ಯಾಕೆ? ಪರಿಹಾರ ಏನು?

ತೆಂಗಿನ ಮರದ ಶಿರ ಹೋಗುವುದಕ್ಕೆ ವಾತಾವರಣ ಕಾರಣ. ಇದು ಯಾವ ಪಕ್ಷಿ, ಪ್ರಾಣಿಯಿಂದಾಗಿ ಆಗುವುದಲ್ಲ. ಇದಕ್ಕೆ ಪ್ರಾರಂಭಿಕ ಹಂತದಲ್ಲಿ ಮಾತ್ರ ಚಿಕಿತ್ಸೆ   ಫಲಕಾರಿ. ಹಳ್ಳಿಯ ಜನ ಈಗಲೂ ಕುಪುಳು ಹಕ್ಕಿ Greater Coucal (ಬಾರದ್ವಾಜ ಪಕ್ಷಿ) ತೆಂಗಿನ ಗರಿಯಲ್ಲಿ ಕುಳಿತು ಮೂತ್ರ ಮಾಡಿದರೆ ತೆಂಗಿನ ಮರವೇ ಸತ್ತು ಹೋಗುತ್ತದೆ ಎಂದು ತಿಳಿದಿದ್ದಾರೆ. ಇದು ಈ ಹಕ್ಕಿಯಿಂದಾಗಿ ಆಗುವುದಲ್ಲ. ಹಕ್ಕಿಗಳು ಮೂತ್ರವನ್ನೇ ಮಾಡಲಾರವು. ಇದು ವಾತಾವರಣದ ಅನುಕೂಲ ಸ್ಥಿತಿ ಒದಗಿದಾಗ ಕೊಳೆತಿನಿ ಶಿಲೀಂದ್ರ ಬಾಧಿಸಿ ಉಂಟುಮಾಡುವ ರೋಗ.  ಸುಳಿ…

Read more
error: Content is protected !!