ಎಲೆ ಚುಕ್ಕೆ ಪೀಡಿತ ಅಡಿಕೆ ಮರ

ಎಲೆ ಚುಕ್ಕೆ ರೋಗ-ಅಡಿಕೆ ಬೆಳೆಗಾರರ ಪಾಲಿಗೆ ಯಾವತ್ತೂ ಭಯ.

ಎಲೆ ಚುಕ್ಕೆ ರೋಗ ಎಂಬ ಅಡಿಕೆ ತೆಂಗು ಬೆಳೆಯ ಪ್ರಾಮುಖ್ಯ ರೋಗ ಈಗ ಎಲ್ಲಾ ಪ್ರದೇಶಗಳಲ್ಲಿ  ವ್ಯಾಪಿಸಲಾರಂಭಿದೆ. ಕೆಲವರು ಗುರುತಿಸಿರಬಹುದು. ಇನ್ನು ಕೆಲವರು ಗುರುತಿಸದೆಯೂ ಇರಬಹುದು. ಆದರೆ 90% ಕ್ಕೂ ಹೆಚ್ಚಿನ ಅಡಿಕೆ ತೋಟಗಳಲ್ಲಿ ಎಲೆ ಚುಕ್ಕಿ ರೋಗ ಇದೆ ಎಂದರೆ ಅಚ್ಚರಿಯಾಗಬಹುದು.  ಈಗ ಇದು ಚುಕ್ಕೆಯಾಗಿ ಕಂಡರೂ ಇದು ಮುಂದೆ ದೊಡ್ಡದಾದರೂ ಅಚ್ಚರಿ ಇಲ್ಲ.ಕ್ರಮೇಣ ಅಡಿಕೆ ಬೆಳೆಗಾರರ ಬದುಕಿನ ಮೇಲೆಯೇ ಇದು ಸವಾರಿ ಮಾಡಿದರೂ ಅಚ್ಚರಿ ಇಲ್ಲ.  ಬಹಳಷ್ಟು ಜನ ಅಡಿಕೆ ಬೆಳೆಗಾರರು ಶಿವಮೊಗ್ಗ ಜಿಲ್ಲೆಯಲ್ಲಿ…

Read more
banana plants

ಮಳೆಗಾಲದಲ್ಲಿ ಬಾಳೆ ಸಸ್ಯ ಮಗುಚಿ ಬೀಳುವುದಕ್ಕೆ ಕಾರಣ- ಪರಿಹಾರ.

ಮಳೆಗಾಲದಲ್ಲಿ ಬಾಳೆ ದಂಟು ಮುರಿದು ಬೀಳುವ ಸಮಸ್ಯೆ ಎಲ್ಲಾ ಕಡೆಯಲ್ಲೂ ಕಂಡು ಬರುತ್ತದೆ. ಅಂತಹ ಬಾಳೆಯ ಕಾಂಡವನ್ನು ಸ್ವಲ್ಪ ಕಡಿದು ನೋಡಿದರೆ ಕಾಂಡ ಹಾಳಾಗಿರುತ್ತದೆ. ಬಾಳೆಯ ಸಸ್ಯಗಳು ಇನ್ನೇನೋ ಗೊನೆ ಹಾಕಬೇಕು ಎಂಬ ಹಂತದಲ್ಲಿ, ಅಥವಾ ಗೊನೆ ಹಾಕಿ ಬೆಳೆಯುತ್ತಿರುವ ಹಂತದಲ್ಲಿ ಇದಕ್ಕೆ ಇಂದು ಕೀಟ ತೊಂದರೆ  (Pseudostem borer,and Rhizome weevil)ಮಾಡುತ್ತದೆ. ಈ ಕೀಟದ ಚಟುವಟಿಕೆ ಮಳೆಗಾಲ ಪ್ರಾರಂಭದಲ್ಲಿ ಮತ್ತು ಕೊನೆಗೆ ಹೆಚ್ಚು. ಇದರಿಂದ ಇಡೀ  ಗೊನೆ ಹಾಳಾಗುತ್ತದೆ. ಉಳಿದ ಬಾಳೆಗೂ ಪ್ರಸಾರವಾಗುತ್ತದೆ. ಬಾಳೆ ಗೊನೆ…

Read more
ಸರ್ಕಾರೀ ಗೊಬ್ಬರಗಳು

ಸರ್ಕಾರೀ ಗೊಬ್ಬರಗಳನ್ನು ಬಳಸಿ- 75% ದಷ್ಟು ಗೊಬ್ಬರದ ಖರ್ಚು ಉಳಿಸಿ.

 ಭಾರತ ಸರಕಾರ ರೈತರಿಗೆ ಸಹಾಯಧನದ ಮೂಲಕ ಒದಗಿಸುವ ಸರ್ಕಾರೀ ಗೊಬ್ಬರವನ್ನೇ ಬಳಸಿದರೆ ರೈತರ ಗೊಬ್ಬರದ ಖರ್ಚು 75% ಕ್ಕೂ ಹೆಚ್ಚು ಉಳಿತಾಯವಾಗುತ್ತದೆ.  ಇತ್ತೀಚೆಗೆ ಅಡಿಕೆ ತೋಟಕ್ಕೂ ಸಾಲ್ಯುಬಲ್ ಗೊಬ್ಬರಗಳನ್ನು ಕೊಟ್ಟು ಬೆಳೆಸುವ ಕ್ರೇಜಿ ಪ್ರಾರಂಭವಾಗಿದೆ.  ಇದಕ್ಕಾಗಿ ಸಾಕಷ್ಟು ಖರ್ಚುಗಳನ್ನೂ ಮಾಡಿ ದುಬಾರಿ ಬೆಲೆಯ ಸಾಲ್ಯುಬಲ್ ಗೊಬ್ಬರಗಳನ್ನು ಖರೀದಿಸಿ ತಂದು ಬಳಸಲಾರಂಭಿಸಿದ್ದಾರೆ. ಅಡಿಕೆಗೆ ಬೆಲೆ ಬಂದಿದೆ ಎಂದೋ ಕೈಯಲ್ಲಿ ದುಡ್ಡು ತುಳುಕುವ ಕಾರಣದಿಂದಲೋ ಜನ ಹೊಸ ಹೊಸತಕ್ಕೆ ಬೇಗ ಮರುಳಾಗುತ್ತಿದ್ದಾರೆ.ಧೀರ್ಘಾವಧಿ ಬೆಳೆಗಳಿಗೆ ದಿನಕ್ಕೊಮ್ಮೆ, ವಾರಕ್ಕೊಮ್ಮೆ ಗೊಬ್ಬರ ಕೊಡಬೇಕಾದ ಅಗತ್ಯ…

Read more
miracle weed Sphagneticola trilobata

Nature protect its resources! How this  miracle weed Sphagneticola trilobata protected our soil

Nature will protect  its resources  by its own way!. Imagine the heavy rainfall and afforestation in recent years. What happens if there is an absence of this weed Sphagneticola trilobata? Can weeds help farmers? Or does it suppresses the yield?   If you think weed is an enemy you will lose soil fertility. If you consider…

Read more
cashew

ಗೇರು – ಈಗ ಮರಗಳ ಮೇಲೆ ಒಮ್ಮೆ ದೃಷ್ಟಿ ಹರಿಸುತ್ತಿರಿ

ಈ ಸಮಯದಲ್ಲಿ ಗೇರು ಮರಗಳಲ್ಲಿ ಗೇರು ಬೀಜದ ಕೊಯಿಲು ನಡೆಯುತ್ತಿರುತ್ತದೆ. ಗೇರು ಬೀಜ ಕೊಯಿಲಿಗೆ ಹೋಗುವ ಸಮಯದಲ್ಲಿ ಬುಡ ಭಾಗವನ್ನು ತಪ್ಪದೇ ಗಮನಿಸಿರಿ. ಈ ಸಮಯದಲ್ಲಿ ಬುಡದ ಕಾಂಡಕ್ಕೆ ಕಾಂಡ ಕೊರಕ ಹುಳು ಬಾಧಿಸುತ್ತದೆ. ಈ ಹುಳು ಬಾಧಿಸಿದ ಸಮಯದಲ್ಲಿ ಉಪಚಾರ ಮಾಡಿದರೆ  ಮಾತ್ರ ಅದನ್ನು ಬದುಕಿಸಲು ಸಾಧ್ಯ.  ಪತ್ತೆ ಕ್ರಮ: ಗೇರು ಮರಕ್ಕೆ ಮಾರಣಾಂತಿಕವಾಗಿ ಹಾನಿ ಮಾಡುವ ಕೀಟ ಕಾಂಡ ಕೊರಕ (Stem borer of cashew). ಈ ಸಮಯದಲ್ಲಿ ಕಾಂಡ ಕೊರಕ ಕೀಟ ಕಾಡದ…

Read more
ಗೇರು ಮರಕ್ಕೆ ಪುನಃಶ್ಚೇತನ

ಗೇರು – ಮಾವು- ಹಲಸು ಹಳೆ ಮರಗಳಿಗೆ ಪುನಃಶ್ಚೇತನ.

ನಮ್ಮಲ್ಲಿ ಇರುವಂತಹ ಹಳೆಯ ಮಾವು- ಗೇರು-ಹಲಸು ಇನ್ಯಾವುದೇ ಹಣ್ಣಿನ  ತೊಟಗಳಲ್ಲಿ ಹೆಚ್ಚಿನವುಗಳು ಅನಾಮಧೇಯ ತಳಿಯ ಬೀಜಗಳಿಂದ ಆದವುಗಳು. ಇವು ಈಗಲೇ  ಹಳೆಯದಾಗಿ ಅನುತ್ಪಾದಕವೂ ಆಗಿರಬಹುದು. ಇಂತಹ ಮರಗಳು ಹೆಚ್ಚಾಗಿ ನಿರ್ವಹಣೆ ಇಲ್ಲದೇ ನಿರ್ಲಕ್ಷ್ಯದಿಂದ ಬೆಳೆದಿರುತ್ತವೆ. ಇವುಗಳನ್ನು ಇಳುವರಿ ಅಭಿವೃದ್ಧಿಯ ದೃಷ್ಟಿಯಿಂದ ಪುನಶ್ಚೇತನ ಮಾಡುವುದು ಉತ್ತಮ.  ಹಳೆಯ ಅಥವಾ ಕಡಿಮೆ ಇಳುವರಿ ಕೊಡುವಂತಹ ಮರಗಳನ್ನು ಸವರುವಿಕೆಯಿಂದ ಹಾಗು ಕಸಿ ವಿಧಾನದ ಮೂಲಕ ಪುನಶ್ಚೇತನಗೊಳಿಸಿದರೆ  ಹೊಸ ಮರವನ್ನಾಗಿ ಪರಿವರ್ತಿಸಬಹುದು. ಪುನಶ್ಚೇತನದ ಉದ್ದೇಶಗಳು : ಹಳೆಯ ಹಾಗೂ ಕಡಿಮೆ ಇಳುವರಿಯ ಗಿಡಗಳ…

Read more
ಕೊಳೆರೋಗ ಹೆಚ್ಚಳಕ್ಕೂ ಸಸ್ಯ ಆರೋಗ್ಯ

ಕೊಳೆ ರೋಗ ಹೆಚ್ಚಳಕ್ಕೂ ಸಸ್ಯ ಆರೋಗ್ಯಕ್ಕೂ  ಸಂಬಂಧಗಳಿರಬಹುದೇ ಯೋಚಿಸಿ.

ಈ ವರ್ಷ ಬಹಳಷ್ಟು ಅಡಿಕೆ ಬೆಳೆಗಾರರು ಅಡಿಕೆ ಕಾಯಿಗಳಿಗೆ ಕೊಳೆ ರೋಗ ಬಂದಿದೆ ಎಂದು ಹೇಳುತ್ತಿದ್ದಾರೆ.  ಹೆಚ್ಚಿನ ಕಡೆ ಕೊಳೆ ರೋಗ ಬಂದಿದೆ. ಇದಕ್ಕೆ ಸಸ್ಯ ಆರೋಗ್ಯ  ಕಾರಣ ಇರಬಹುದೇ? ಕೆಲವು ದೃಷ್ಟಿಕೋನದಲ್ಲಿ ಇದು ನಿಜ ಎನ್ನಿಸುತ್ತದೆ. ಅಡಿಕೆಯ ಕೊಳೆ ರೋಗ ಬಂದಂತೆ ಅಡಿಕೆ ಸಸಿ/ ಮರಗಳಿಗೆ , ತೆಂಗಿನ ಮರಗಳಿಗೆ ಸುಳಿ ಕೊಳೆ ರೋಗವೂ  ಇತ್ತೀಚೆಗೆ ಬಹಳಷ್ಟು ಹೆಚ್ಚಾಗುತ್ತಿದೆ. ಪೋಷಕಾಂಶಗಳು ಅಸಮತೋಲನವಾಗಿ ಸಸ್ಯಕ್ಕೆ ಲಭ್ಯವಾಗದಿರುವುದೇ ಇದಕ್ಕೆ ಒಂದು ಕಾರಣ ಇರಬಹುದೇ ಎಂಬ ಬಗ್ಗೆ ಸಂಶಯವಿದೆ.  ನಾವೆಲ್ಲಾ…

Read more
ರಸಗೊಬ್ಬರವನ್ನು ಮೀರಿಸುವ ಶಕ್ತಿ ಉಳ್ಳ ಸಾವಯವ ಗೊಬ್ಬರ – ಸಮುದ್ರ ಪಾಚಿ.

ರಸಗೊಬ್ಬರವನ್ನು ಮೀರಿಸುವ ಶಕ್ತಿ ಉಳ್ಳ ಸಾವಯವ ಗೊಬ್ಬರ – ಸಾಗರಪಾಚಿ.

ಭಾರತದ ಕೃಷಿ ವ್ಯವಸ್ಥೆಯನ್ನು  ಗೊಬ್ಬರದಲ್ಲಿ ಸ್ವಾವಲಂಭಿಯಾಗಿ ಮುನ್ನಡೆಸಲು ಸಧ್ಯೋಭವಿಷ್ಯದಲ್ಲಿ ಸಮುದ್ರ ಪಾಚಿ ಎಂಬ ಸಾಗರದ ನೀರಿನಲ್ಲಿ ಬೆಳೆಯುವ ಸಸ್ಯದ ಸಾವಯವ ಗೊಬ್ಬರ ಪ್ರವೇಶಿಸಲಿದೆ.  ರಸಗೊಬ್ಬರವನ್ನು ಮೀರಿಸುವ ಶಕ್ತಿ ಉಳ್ಳ ಈ ಗೊಬ್ಬರದಲ್ಲಿ ಬಹುಬಗೆಯ ಪೋಷಕಾಂಶಗಳಿವೆ. ಕಳಕೊಳ್ಳುತ್ತಿರುವ ಮಣ್ಣಿನ ಜೈವಿಕ ಗುಣಧರ್ಮವನ್ನು ಇದು ಮರಳಿ ನೀಡಲು ಶಕ್ತ ಎನ್ನುತ್ತದೆ ವಿಜ್ಞಾನ. ಇದನ್ನು ಮಾನವ ಬಳಕೆಯ ಔಷದೋಪಚಾರಕ್ಕೆ ಬಳಸಲಾಗುತ್ತದೆ. ಹಾಗೆಯೇ ಸಸ್ಯ ಪೋಷಕವಾಗಿಯೂ ಬಳಕೆ ಮಾಡಲಾಗುತ್ತದೆ. ಭವಿಷ್ಯದಲ್ಲಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಇದು ನಮ್ಮ ಬೆಳೆಗಳನ್ನು ಮೇಲೆತ್ತಲಿದೆ. ಸಮುದ್ರ ಪಾಚಿ, ಅಥವಾ…

Read more
ಅಡಿಕೆ ಬೆಳೆಗಾರರನ್ನು ಬೆನ್ನತ್ತಿದೆ ಕೊಳೆರೋಗ

ಅಡಿಕೆ ಬೆಳೆಗಾರರನ್ನು ಬೆನ್ನತ್ತಿದೆ ಕೊಳೆರೋಗ – ಕಾರಣ ಏನು ಗೊತ್ತೇ?

ಕೊಳೆರೋಗ ಅಡಿಕೆ ಬೆಳೆಗೆ, ಕರಿಮೆಣಸು, ಕೊಕ್ಕೋ, ಹಾಗೆಯೇ ಇನ್ನಿತರ ಬೆಳೆಗಳಿಗೆ ಮಳೆಗಾಲದಲ್ಲಿ ಕಾಡುವ ಅತೀ ದೊಡ್ಡ ಸಮಸ್ಯೆಯಾಗಿದ್ದು, ಈ ರೋಗವು ಬರೇ ಬೆಳೆ ಮಾತ್ರವಲ್ಲದೆ ಮರವನ್ನೂ ನಿತ್ರಾಣಗೊಳಿಸುತ್ತದೆ. ರೋಗ ಹೆಚ್ಚಳಕ್ಕೆ ವಾತಾವರಣದ ಜೊತೆಗೆ ನಾವು ತೆಗೆದುಕೊಳ್ಳುವ ಮುನ್ನೆಚ್ಚರಿಕಾ ವಿಧಾನವೂ ಒಂದು ಕಾರಣವಾಗಿದೆ. ಈ ವರ್ಷ ಜುಲೈ ತಿಂಗಳಲ್ಲಿ ಬಂದ ಮಳೆಯ ಕಾರಣ ಹೆಚ್ಚಿನವರ ತೋಟದಲ್ಲಿ ಕೊಳೆ ರೋಗ ಪ್ರಾರಂಭವಾಗಿದೆ. ಅಡಿಕೆಗೆ ಕಾಯಿಗೆ ಕೊಳೆ ಬಂದು ಉದುರುವುದು, ಅದು  ಉಲ್ಬಣವಾದರೆ ಗೊನೆ ಬುಡದ ಮೃದು ಭಾಗದ ಮೂಲಕ  ಸುಳಿಗೆ…

Read more
ಹೊಲದಲ್ಲಿ ಎರೆಹುಳ

ಹೊಲದಲ್ಲಿ ಎರೆಹುಳಗಳು ಕಡಿಮೆಯೇ ? ಕಾರಣ ಏನು?

ಮಣ್ಣು  ಅಥವಾ ಹೊಲ ಅನೇಕ ತರಹದ ಕಶೇರುಕ ಮತ್ತು ಅಕಶೇರುಕ ಜೀವಿಗಳಿಗೆ ಆಶ್ರಯತಾಣ. ಇಲಿ ಹೆಗ್ಗಣ ,ಅಳಿಲುಗಳಿಂದ ಹಿಡಿದು, ಇರುವೆ ಗೆದ್ದಲು, ಜೇಡ, ನುಶಿ, ಮೈಟ್, ಬಸವನ ಹುಳು ಎರೆಹುಳು, ಕಪ್ಪೆ ಚಿಪ್ಪಿನ ಹುಳು, ಶತಪದಿಗಳು, ಸಹಸ್ರಪದಿಗಳು,  ಎರೆಹುಳುಗಳು ಹಾಗೆಯೇ ಹಲವಾರು ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳು ಎಲ್ಲವೂ ಮಣ್ಣಿನಲ್ಲಿಯೇ ಬದುಕುವ ಜೀವಿಗಳು. ಮಣ್ಣು ಇಲ್ಲದಿದ್ದರೆ ಅವು ಇಲ್ಲ. ಅವು ಇಲ್ಲದಿದ್ದರೆ ಮಣ್ಣಿಗೆ ಜೀವಂತಿಕೆ ಇಲ್ಲ. ಹೊಲ ಎರೆಹುಳಗಳಿಗೆ ಆಹಾರ ಕೊಡದ ಸ್ಥಿತಿಯಲ್ಲಿ ಇದ್ದರೆ ಅಲ್ಲಿ ಅವುಗಳ…

Read more
error: Content is protected !!