ಎರೆಹುಳು ಬಗ್ಗೆ ನಾವು ತಿಳಿಯಬೇಕಾದ ವಾಸ್ತವ

ಎರೆಹುಳು ಬಗ್ಗೆ ನಾವು ತಿಳಿಯಬೇಕಾದ ವಾಸ್ತವ ಸಂಗತಿ.

ಎರೆಗೊಬ್ಬರ ಎಂದರೆ ಅದು ಸಂಪಧ್ಭರಿತ ಗೊಬ್ಬರ ಅಲ್ಲ. ಅದು ಒಂದು ಸಾವಯವ ವಸ್ತುಗಳನ್ನು ಹುಡಿ ಮಾಡಿದ ಮಿಶ್ರಣ ಅಷ್ಟೇ. ಇದು ಬೆಳೆಗೆ ದೊರೆಯಬೇಕಾದರೆ ಮಣ್ಣಿನಲ್ಲಿರುವ ಸ್ಥಳೀಯ ಎರೆಹುಳುಗಳು ಕೆಲಸ  ಮಾಡಲೇ ಬೇಕು. ಎರೆಹುಳ ಏನು? ಎರೆಹುಳು ಎಂಬ ದುಂಡು ಹುಳ (ಅನೆಲಿಡಾ) ಜಾತಿಗೆ ಸೇರಿದ ಜೀವಿಯು  ಸಾವಯವ ತ್ಯಾಜ್ಯಗಳನ್ನು  ರೂಪಾಂತರಿಸಿ ಕೊಡುತ್ತದೆ. ಇದನ್ನು  ಬೆಳೆಗಳಿಗೆ ಗೊಬ್ಬರವಾಗಿ ಬಳಕೆ ಮಾಡಿದಾಗ ಅಧ್ಬುತ ಇಳುವರಿ ಬರುತ್ತದೆ, ಮಣ್ಣು  ಶ್ರೀಮಂತವಾಗುತ್ತದೆ. ಸಾವಯವ ಕೃಷಿ ಎಂಬ ಅಹಿಂಸಾತ್ಮಕ  ಕೃಷಿ ವಿಧಾನಕ್ಕೆ ಇದು ಒಂದು ಸರಳ…

Read more
ಸಗಣಿ ಮಾರುವುದು ಅಶುಭ

ಸಗಣಿ ಮಾರುವ ಕನಸು ಬೇಡ- ಇದು ಅಶುಭ.

ರಾಜಸ್ಥಾನದ ಜೈಪುರ ದಿಂದ ಅರಬ್ ರಾಷ್ಟ್ರಕ್ಕೆ (ಕುವೆಟ್) ಸಗಣಿ ರಪ್ತು ಆದದ್ದನ್ನು ನಾವು ಹಾಡಿ ಹೊಗಳುತ್ತೇವೆ.ನಮ್ಮ ದನಗಳ ಸಗಣಿಗೆ ಇಷ್ಟು ಮಹತ್ವ ಇದೆ ಎಂದು ಬೀಗುತ್ತೇವೆ. ಕೆಲವರು ಸಗಣಿ ಮಾರಾಟದ ಕನಸಿನಲ್ಲೂ ಇರಬಹುದು. ಸಗಣಿ ಮಾರಾಟ ಮಾಡುವುದಿದ್ದರೆ ಅದಕ್ಕೆ ಅರಬ್ ರಾಷ್ಟ್ರಗಳೇ ಆಗಬೇಕಾಗಿಲ್ಲ. ಭಾರತದ ಒಳಗೆಯೂ  ಸಾಕಷ್ಟು ಬೇಡಿಕೆ ಇದೆ. ಬೆಲೆಯೂ ಇದೆ.  ಕೃಷಿ ಪ್ರಧಾನವಾದ ನಮ್ಮ ದೇಶಕ್ಕೆ ಕೃಷಿಯ ಅವಿಭಾಜ್ಯ ಅಂಗವಾದ ಸಗಣಿಯನ್ನು ಬೇರೆಯವರಿಗೆ ಮಾರಾಟ ಮಾಡುವುದು ಒಳ್ಳೆಯದಲ್ಲ. ಕೃಷಿ ಮಾಡುವ ಭೂಮಿಯನ್ನು ಹೇಗೆ ಮಾರಾಟ…

Read more
ಸುಣ್ಣ ಮತ್ತು ಮೈಲುತುತ್ತೆ ಸೇರಿಸಿ ತಯಾರಿಸಿದ ಬೋರ್ಡೋ ದ್ರಾವಣ

ಬೋರ್ಡೋ ದ್ರಾವಣದ ಸುಣ್ಣ – ರೈತರ ಸಂದೇಹಗಳಿಗೆ ಉತ್ತರ.

ಕೆಲವು ದಿನಗಳಿಂದ ಅಡಿಕೆ , ಕಾಫಿ, ಕರಿಮೆಣಸು ಮುಂತಾದ ಬೆಳೆಗಾರರು ಬೋರ್ಡೋ ದ್ರಾವಣ ಸಿಂಪರಣೆಗಾಗಿ ಬಳಕೆ ಮಾಡುವ ಹುಡಿ ಸುಣ್ಣದ ಬಗ್ಗೆ ಕೆಲವು ಸಂದೇಹಗಳು ಉಧ್ಬವವಾಗಿದೆ. ಕೆಲವು ಬ್ರಾಂಡ್ ನ ಸುಣ್ಣ ಬಳಕೆ ಮಾಡದಂತೆ ಕೃಷಿ ಇಲಾಖೆ ಆದೇಶ ಹೊರಡಿಸಿದ ಪ್ರತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದೆಲ್ಲದರ ನಡುವಿನಲ್ಲಿ ಎಲ್ಲಾ ಸುಣ್ಣದ ಮೇಲೂ ರೈತರು ಸಂದೇಹ ಪಡುವಂತಾಗಿದೆ. ಈ ಕುರಿತಂತೆ ರೈತರ ಸಂದೇಹಗಳಿಗೆ ಉತ್ತರ ಇಲ್ಲಿದೆ. ಸುಣ್ಣವನ್ನು ಸಿಂಪರಣೆಗೆ ಕ್ಯಾಲ್ಸಿಯಂ ಮೂಲಕ್ಕಾಗಿ ಬಳಕೆ ಮಾಡಲಾಗುತ್ತದೆ. ಕ್ಯಾಲ್ಸಿಯಂ ಮೂಲವಸ್ತುಗಳನ್ನು…

Read more
ಮ್ಯುರೇಟ್ ಆಫ್ ಪೊಟ್ಯಾಶ್ - ಉತ್ತಮ ಗೊಬ್ಬರ

ಬೆಳೆಗಳಿಗೆ ಶಕ್ತಿ ಕೊಡುವ ಗೊಬ್ಬರ – ಪೊಟ್ಯಾಶಿಯಂ

ನಿಮ್ಮ ಬೆಳೆಗಳು ಹಚ್ಚ ಹಸುರಾಗಿ ಬೆಳೆದಿರುತ್ತವೆ. ಆದರೆ ಇಳುವರಿ ಮಾತ್ರ ತೀರಾ ಕಡಿಮೆ ಇರುತ್ತದೆ.ಬರುವ ಇಳುವರಿಯ ಗುಣಮಟ್ಟವೂ ಚೆನ್ನಾಗಿರುವುದಿಲ್ಲ. ಇದಕ್ಕೆಲ್ಲಾ ಕಾರಣ ಪೊಟ್ಯಾಶಿಯಂ ಎಂಬ ಪೋಷಕದ ಕೊರತೆ. ಪೊಟ್ಯಾಶಿಯಂ ಲಭ್ಯವಾದರೆ ಮಾತ್ರ  ಕೈಗೆ ಬಂದ ತುತ್ತು ಬಾಯಿಗೆ ಬರಲು ಸಾಧ್ಯ. ಇದು ಬೆಳೆಗಳಿಗೆ ಶಕ್ತಿ ಕೊಡುವ ಗೊಬ್ಬರ.  ನಮ್ಮ ದೇಶದ ಬಹಳ ಜನಕ್ಕೆ ಸಮತೊಲನದ ಗೊಬ್ಬರ ಎಂದರೆ ಏನು ಎಂಬುದು ಇನ್ನೂ ತಿಳಿದಿಲ್ಲ. ಅದಕ್ಕೆ ಸರಿಯಾಗಿ ನಮ್ಮಲ್ಲಿ ಪೊಷಕಾಂಶಗಳನ್ನು ಒದಗಿಸುವವರೂ ಮಾರಾಟ ಚಾಕಚಕ್ಯತೆಯನ್ನು ತೋರುತ್ತಿವೆ. ಬರೇ ಗೊಬ್ಬರದ…

Read more
MOP red

ಮ್ಯುರೇಟ್ ಆಫ್ ಪೊಟ್ಯಾಶ್ – ಮೂಲ ಯಾವುದು ಗೊತ್ತೇ?

ಪೊಟ್ಯಾಶಿಯಂ ಎಂಬ ಪೋಷಕವು ಎಲ್ಲಾ ಬೆಳೆಗಳಿಗೂ ಅವಶ್ಯಕವಾಗಿ ಬೇಕಾಗುವಂತದ್ದು. ಇದು ರಾಸಾಯನಿಕ ಇರಲಿ, ಸಾವಯವ ಇರಲಿ, ಸಸ್ಯಗಳಿಗೆ ಇದು ಬೇಕೇ ಬೇಕು. ಸಾವಯವ ಎಂಬ ಮಡಿವಂತಿಕೆಯಲ್ಲಿ ಇದನ್ನು ಹಾಕುವುದಕ್ಕೆ ಹಿಂಜರಿಯಬೇಡಿ. ಇದು ರಾಕ್ ಫೋಸ್ಫೇಟ್ ಎಂಬ ಖನಿಜ ಗೊಬ್ಬರದಂತೆ ಒಂದು. ಇದರಿಂದ ಹಾನಿ ಇಲ್ಲ.  ಪೊಟ್ಯಾಶ್ ಎಂಬ ಪೋಷಕವು ಸಸ್ಯ ಬೆಳೆವಣಿಗೆಯ ಶಕ್ತಿ (Energy) ಎಂಬುದಾಗಿ ಈ ಹಿಂದೆಯೇ ಹೇಳಲಾಗಿದೆ. ಇದನ್ನು ಬಳಸದೆ ಇದ್ದರೆ ಬೆಳೆ ಅಪೂರ್ಣ.ಬಳಸುವಾಗ ಯಾವುದು, ಹೇಗೆ ಎಂಬುದನ್ನು ಪ್ರತೀಯೊಬ್ಬ ರೈತನೂ ಅರಿತಿರಬೇಕು. ಪೊಟಾಶಿಯಂ…

Read more
ಬೋರ್ಡೋ ದ್ರಾವಣ ಸಿಂಪರಣೆ

ಬೋರ್ಡೋ ದ್ರಾವಣ ಸಿಂಪರಣೆ ಮತ್ತು ಕೆಲವು ಸೂಕ್ಷ್ಮಗಳು.

ಅಡಿಕೆಯ ಕೊಳೆ ರೋಗ ನಿಯಂತ್ರಿಸುವ ಉಪಚಾರವಾಗಿ ಬೋರ್ಡೋ ದ್ರಾವಣದ ಸಿಂಪರಣೆಯನ್ನು ಮಾಡಲಾಗುತ್ತದೆ. ವಿವಿಧ ನಮೂನೆಯ ತುತ್ತೆ, ಸುಣ್ಣ, ಗಮ್ ಗಳು ಇರುವಾಗ ರೈತರಿಗೆ ದ್ವಂದ್ವ ಉಂಟಾಗುವುದು ಸಹಜ. ಈ ನಿಟ್ಟಿನಲ್ಲಿ ಕೆಲವು ಸೂಕ್ಷ್ಮ ವಿಚಾರಗಳೊಳಗೊಂಡ ಮಾಹಿತಿ ಇಲ್ಲಿದೆ. ಬೊರ್ಡೋ ದ್ರಾವಣವನ್ನು ಪ್ರಪ್ರಥಮವಾಗಿ,  ಪ್ರಾನ್ಸ್ ದೇಶದ ಬೋರ್ಡೋ ಎಂಬ ಪ್ರಾಂತದಲ್ಲಿ ದ್ರಾಕ್ಷಿ ಬೆಳೆಗೆ ಶಿಲೀಂದ್ರಗಳಿಂದ ಉಂಟಾಗುವ ರೋಗ ನಿಯಂತ್ರಣಕ್ಕೆ ಬಳಸುತ್ತಿದ್ದರಂತೆ. ಅದನ್ನು ಬ್ರಿಟೀಷರ ಕಾಲದಲ್ಲಿ ಆಗಿನ ಮೈಸೂರು ಸರಕಾರದ ಕೃಷಿ ಅಧಿಕಾರಿಯಾಗಿದ್ದ ಲೆಸ್ಲಿ ಸಿ ಕೋಲ್ಮನ್ ಇವರು  ನಮ್ಮ…

Read more
ಮರ ಹಾವಸೆ

ಈ ಸಸ್ಯಗಳಲ್ಲಿದೆ ಉತ್ತಮ ಪೋಷಕಾಂಶ.

ನಮ್ಮ ಸುತ್ತಮುತ್ತ ಅದೆಷ್ಟೋ  ವೈವಿಧ್ಯಮಯ ಸಸ್ಯಗಳು ಇವೆ. ಇವುಗಳ ಬಗ್ಗೆ ನಮಗೆ ಹೆಚ್ಚಿನ ತಿಳುವಳಿಕೆ ಇರುವುದಿಲ್ಲ. ಕೆಲವು ತಿಳಿದವರು ಇದನ್ನು ಬಳಸುತ್ತಾರೆ. ಇಂತದ್ದರಲ್ಲಿ ಒಂದು ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡು ಬರುವ ಒಂದು ಸಸ್ಯ ವರ್ಗ ಮೋಸ್ (moss) ಅಥವಾ ಮರ ಹಾವಸೆ. ಇದು Bryophytes ಪ್ರಬೇಧಕ್ಕೆ ಸೇರಿದ ಸಸ್ಯ ವರ್ಗ.  ಇದು ಮರ ಹಾವಸೆ: ಮರ ಹಾವಸೆಯಲ್ಲಿ ನೂರಾರು (129) ವಿಧಗಳಿವೆ. ಇವುಗಳಲ್ಲಿ ಕೆಲವು ಮಳೆ ಕಾಡುಗಳಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಪಶ್ಚಿಮ ಘಟ್ಟ…

Read more
ಕೀಟನಾಶಕ ಸಿಂಪಡಿಸುತ್ತೀರಾ? ಹಾಗಾದರೆ ಸುರಕ್ಷತೆ ಬಗ್ಗೆ ತಿಳಿದುಕೊಂಡಿರಿ

ಕೀಟನಾಶಕ ಸಿಂಪಡಿಸುತ್ತೀರಾ? ಹಾಗಾದರೆ ಸುರಕ್ಷತೆ ಬಗ್ಗೆ ತಿಳಿದುಕೊಂಡಿರಿ.

ಪ್ರತೀಯೊಬ್ಬ ಕೃಷಿಕರೂ ಒಂದಲ್ಲ ಒಂದು ಬೆಳೆಗೆ ಕೀಟನಾಶಕ ಸಿಂಪಡಿಸುತ್ತಾರೆ. ಸಿಂಪಡಿಸುವವರು ಕೀಟನಾಶಕದಿಂದ ಆಗುವ ಯಾವುದೇ ಅನಾಹುತಗಳಿಗೆ ಮೊದಲ ಬಲಿಪಶುಗಳು. ಆದುದರಿಂದ ರೈತರೇ ಮೊದಲು ಜಾಗರೂಕತೆ ವಹಿಸಬೇಕು. ಕೀಟನಾಶದ ಬಳಕೆ ಪ್ರಮಾಣ, ಅದರ ಜೊತೆಗೆ ಕೊಟ್ಟಿರುವ ಹಸ್ತ ಪ್ರತಿ ಇತ್ಯಾದಿಗಳನ್ನು ಸರಿಯಾಗಿ ತಿಳಿದುಕೊಂಡು ಸುರಕ್ಷತೆಯಿಂದ  ಬಳಸಬೇಕು. ರಾಸಾಯನಿಕ ಕೀಟ – ರೋಗ ನಾಶಕ ಗೊಬ್ಬರಗಳ ಬಗ್ಗೆ  ಸಮಾಜ ಅಪಸ್ವರ ಎತ್ತಲು ಕೃಷಿಕರಾದ ನಾವೂ ಕಾರಣರು. ನಮ್ಮ ಕೃಷಿ ಜ್ಞಾನದಲ್ಲಿ ಬೆಳೆ ಪೊಷಕ,ಸಂರಕ್ಷಕಗಳನ್ನು ವೈಜ್ಞಾನಿಕವಾಗಿ ಹೇಗೆ ಬಳಕೆ ಮಾಡಬೇಕೆಂಬುದು ತಿಳಿದಿಲ್ಲ….

Read more
ಕಳೆ ಸೇವಂತಿಗೆ ಸಸ್ಯ

ಕಳೆ ಸೇವಂತಿಗೆ ಸಸ್ಯದ  ಸ್ವಾಭಾವಿಕ ನಿಯಂತ್ರಣ ಸಾಧ್ಯ.

ಯಾವುದೇ ಒಂದು ಸಸ್ಯ  ಶಾಶ್ವತವಾಗಿ ಉಳಿಯುವುದೇ ಇಲ್ಲ. ಸಸ್ಯಗಳನ್ನು  ಭೂಮಿಯಿಂದ ನಿರ್ಮೂಲನೆ ಮಾಡಲು ಮನುಷ್ಯ ಮಾತ್ರರಿಂದ ಸಾಧ್ಯವಿಲ್ಲ. ಮನುಷ್ಯ ಏನಾದರೂ ಮಾಡಿದರೆ ಅದು ತಾತ್ಕಾಲಿಕ ಮಾತ್ರ. ಕಳೆ ನಾಶಕ ಹೊಡೆದರೆ 2 ತಿಂಗಳಲ್ಲಿ ಮತ್ತೆ ಬೆಳೆಯುತ್ತದೆ. ಕೈಯಿಂದ ಕಿತ್ತರೆ ಮತ್ತೆ ಒಂದು ವಾರದಲ್ಲಿ ಚಿಗುರುತ್ತದೆ. ಯಂತ್ರದಿಂದ ಕಿತ್ತರೆ ಸಹ ಹೀಗೆಯೇ. ಆದರೆ ಅನಾದಿ ಕಾಲದಿಂದಲೂ ಒಂದೊಂದು ಕಳೆಯಂತೆ ಬಾಧಿಸುವ ಸಸ್ಯ ಅಥವಾ ಹುಲ್ಲು ಸಸ್ಯ ಹುಟ್ಟಿ ಮೆರೆದು ತನ್ನಷ್ಟಕ್ಕೆ ಅಳಿದು ಮತ್ತೊಂದು ಬಂದು ಚಕ್ರ ಮುಂದುವರಿಯುತ್ತಲೇ ಇದೆ….

Read more
ಬೊರ್‍ವೆಲ್ ಕೆಲಸ

ಬೋರ್ವೆಲ್ ಗೆ ಪಂಪು ಇಳಿಸುವ ಬಗ್ಗೆ ಮಾಹಿತಿ.

ಇಂದು ಕೃಷಿ ನೀರಾವರಿಗೆ, ಮನೆಬಳಕೆಯ ನೀರಿಗೆ ಎಲ್ಲದಕ್ಕೂ ಬೋರ್ವೆಲ್ ಮೂಲವೇ ಆದಾರ. ಕೊಳವೆ ಬಾವಿಯನ್ನು ತೋಡುವಾಗ ನೀರು ಸಿಗುತ್ತದೆ.  ಆದರೆ ಬಾವಿಯೊಳಗೆ ನೀರು ಎಷ್ಟು ಇದೆ, ಎಷ್ಟು ತೆಗೆಯಲು ಸಾಧ್ಯ ಎಂಬುದನ್ನು ಮೇಲಿನಿಂದು ನೋಡಿ ಲೆಕ್ಕಾಚಾರ ಹಾಕಲಿಕ್ಕೆ ಆಗುವುದಿಲ್ಲ. ಪಂಪು ಇಳಿಸಿ ನೀರನ್ನು ಹೊರ ತರಬೇಕು. ಎಷ್ಟು ಆಳಕ್ಕೆ ಪಂಪು ಇಳಿಸಬೇಕು.  ಎಷ್ಟು ಅಶ್ವ ಶಕ್ತಿ ಇವೆಲ್ಲದರ ಮಾಹಿತಿ ಇಲ್ಲಿದೆ. ಹೆಚ್ಚಿನವರು ಕೊಳವೆ ಬಾವಿ ತೋಡುತ್ತಾರೆ. ಸುಮಾರು 500 ಅಡಿ ಹೋಗಿದೆ, ಪಂಪು ಎಷ್ಟು ಇಳಿಸಬೇಕು ಎಂಬ…

Read more
error: Content is protected !!