ತಜ್ಞರ ಮೌನ – ಭವಿಷ್ಯದಲ್ಲಿ ಅಪಾಯ ತರಬಹುದೇ?

ನಮ್ಮ ಪರಿಸರದಲ್ಲಿ ಇರುವ ಕಿಟಗಳಲ್ಲಿ 20% ಮಾತ್ರ ಹಾನಿಕರಕ ಕೀಟಗಳು. ಉಳಿದ 80% ಉಪಕಾರೀ ಕೀಟಗಳು ಎಂಬುದನ್ನು ಕೀಟಶಾಸ್ತ್ರ ಒಪ್ಪಿಕೊಳ್ಳುತ್ತದೆ. ಆದರೆ ಕೆಲವೊಂದು ವಿಚಾರದಲ್ಲಿ ಮಾತ್ರ ಮೌನವಾಗಿದೆ. ಕೀಟ ಶಾಸ್ತ್ರಜ್ಞರಿಗೆ ಮತ್ತು ಪರಿಸರ ಕಳಕಳಿ ಉಳ್ಳವರಿಗೆ ಕನಿಷ್ಟ ತಮ್ಮ ಅಭಿಪ್ರಾಯವನ್ನಾದರೂ ಬಹಿರಂಗವಾಗಿ ತಿಳಿಸುವ ಜವಾಬ್ಧಾರಿ ಇದೆ. ಅವರು ಮಾತಾಡಬೇಕು. ಆಗಲೇ ಈ ಸಮಸ್ಯೆ ಪರಿಹಾರ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೀಟಗಳ ಹಾವಳಿ ಬಹಳ ಜಾಸ್ತಿಯಾಗತೊಡಗಿದೆ. ಕೀಟನಾಶಕ ಬಳಸದೆ ಕೃಷಿ ಮಾಡುತ್ತೇನೆ ಎಂಬುದರ ಹಿಂದಿನ ಸತ್ಯಾಸತ್ಯತೆ ದೇವರಿಗೆ ಮಾತ್ರ…

Read more

ಇಪಿಎನ್ (EPN) ಸಿಂಪಡಿಸಿ- ಬೇರು ಹುಳ ನಿಯಂತ್ರಿಸಿ.

ಬೇರು ಹುಳ ಎಂಬುದು ಪ್ರಕೃತಿಯಲ್ಲಿಯೇ ಇರ್ವ ಒಂದು ಜೀವಿ. ನಿಸರ್ಗದಲ್ಲಿರುವ ಬೇರೆ ಬೇರೆ ಸಸ್ಯಗಳಿಗೆ  ಬೇರೆ ಬೇರೆ ನಮೂನೆಯ ಬೇರು ಹುಳಗಳು ತೊಂದರೆ ಮಾಡುತ್ತವೆ. ಹಾಗೆಯೇ ಪ್ರಕೃತಿಯಲ್ಲಿ ಅದನ್ನು ನಾಶಮಾಡುವ ಜೀವಿಯೂ ಇದೆ. ಅಂತಹ ಒಂದು ಜೀವಿ EPN. ಇದನ್ನು ಹೊಲದಲ್ಲಿ ಬಿಡುವುದರಿಂದ ಅವು ನೈಸರ್ಗಿಕವಾಗಿ ಬೇರು ಹುಳವನ್ನು ನಾಶ ಮಾಡುತ್ತವೆ.   ಇದು ಸಕಾಲ: ಮೇ ತಿಂಗಳಲ್ಲಿ ಬೇರು ಹುಳದ ದುಂಬಿ ಭೂಮಿಯಿಂದ ಹೊರಬಂದು ಗಂಡು ಹೆಣ್ಣು ಜೋಡಿಯಾಗಿ ಮತ್ತೆ ಮಣ್ಣಿಗೆ ಸೇರಿ ಅಲ್ಲಿ ಮೊಟ್ಟೆ…

Read more
paddy leaf damage by caterpillar

ಭತ್ತದ ಗರಿ ತಿನ್ನುವ ಹುಳ- ನಿಯಂತ್ರಣ.

ಭತ್ತದ ಗದ್ದೆಗಳಲ್ಲಿ ಪೈರು ಬೆಳೆಯುತ್ತಿದೆ. ಈ ಸಮಯದಲ್ಲಿ ಗರಿಗಳು ಬಿಳಿಯಾಗಿ ಕಾಣುವ ಸಮಸ್ಯೆ   ಹಾಗೆಯೇ ಹರಿದು ಹೋದ ಗರಿಗಳು,ಎಲ್ಲಾ ಕಡೆ ಇರುತ್ತದೆ. ದೂರದಿಂದ ನೋಡುವಾಗ ಗರಿಯಲ್ಲಿ ಹರಿತ್ತು ಇಲ್ಲದೆ ಬಿಳಿಯಾಗಿ ಕಾಣಿಸುತ್ತದೆ. ಸಮೀಪ ಹೋಗಿ ನೊಡಿದಾಗ  ಗರಿಯ ಹಸುರು ಭಾಗವನ್ನು ತಿಂದು ಬರೇ ಪತ್ರ ನಾಳಗಳು ಮಾತ್ರ ಉಳಿದುಕೊಂಡಿರುತ್ತವೆ. ಇದಕ್ಕೆ  ಸ್ಕಿಪ್ಪರ್ ಮತ್ತು ಗ್ರೀನ್ ಹಾರ್ನ್ ಕ್ಯಾಟರ್ ಪಿಲ್ಲರ್  ಎಂಬ ಹುಳು ಕಾರಣವಾಗಿರುತ್ತದೆ.Skipper & Green horned catterpiller) ಇದರ ಹೆಸರು philopidus mathyyas & melanitis…

Read more
cotton

ಹತ್ತಿ ಬೆಳೆಯ ಗುಲಾಬಿ ಕಾಯಿ ಕೊರಕ ನಿಯಂತ್ರಣ.

ಹತ್ತಿ ಬೆಳೆಗಾರರಿಗೆ ಗಣನೀಯ ಬೆಳೆ ನಷ್ಟ ಮಾಡುವ ಕೀಟ ಎಂದರೆ  ಗುಲಾಬಿ ಕಾಯಿ ಕೊರಕ. ಹತ್ತಿಯ ಕಾಯಿಗಳು ಬೆಳೆಯುತ್ತಿದ್ದಂತೆ ಇದು ಪ್ರವೇಶವಾಗಿ  ಒಳಗಿನ ಹತ್ತಿಯ ಅರಳನ್ನು ಹಾನಿ ಮಾಡುತ್ತದೆ. ಮಾರುಕಟ್ಟೆಯಲ್ಲಿ ಈ ಹತ್ತಿಗೆ ಬೆಲೆಯೇ ಇರುವುದಿಲ್ಲ.  ಈ ಕೀಟದ ನಿಯಂತ್ರಣಕ್ಕಾಗಿ ಅತ್ಯಧಿಕ ಕೀಟನಾಶಕ ಬಳಕೆ ಮಾಡಲಾಗುತ್ತದೆ. ಇದರಿಂದಾಗಿಯೇ ಕಳೆದ ವರ್ಷ ಕೆಲವು ರೈತರು ಜೀವ ಕಳೆದುಕೊಂಡದ್ದೂ ಇದೆ.  ಸರಳ ಮತ್ತು ಮಿತವ್ಯಯದ ಬೇಸಾಯ ಕ್ರಮದಲ್ಲಿ ಇದನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಣ ಮಾಡಬಹುದು. ಜೀವನ ಚಕ್ರ ಹೀಗಿರುತ್ತದೆ: ಗುಲಾಬಿ…

Read more
Mulching to whole ground

ಅಡಿಕೆ – ಕಬ್ಬು ಬೆಳೆಯ ಬೇರು ದುಂಬಿ ನಿಯಂತ್ರಣ.

ಅಡಿಕೆಗೆ ಮಾತ್ರ ಬೇರು ಹುಳದ ಕಾಟ ಅಲ್ಲ. ಕಬ್ಬು, ಹಿಪ್ಪು ನೇರಳೆ ಹೀಗೆ ಬಹಳಷ್ಟು ಬೆಳೆಗಳಿಗೆ ಈ ಹುಳದ ಕಾಟ ಇದೆ. ಇದರ ದುಂಬಿಗಳು ಈಗ ಹೊರಗೆ ಹಾರಾಡುವ ಸಮಯ. ಈಗ ಅದನ್ನು ನಿಯಂತ್ರಿಸುವ ಉಪಾಯ ಇದು.ಮರದ ಆರೋಗ್ಯಕ್ಕೆ  ಮತ್ತು ಬೆಳೆವಣಿಗೆಗೆ  ಆಧಾರವೇ ಅದರ ಬೇರು. ಆ ಬೇರನ್ನು ತಿನ್ನುವ ಒಂದು ಹುಳ ಅದನ್ನು ಏಳಿಗೆಯಾಗಲು ಬಿಡುವುದಿಲ್ಲ. ಕೆಲವು ಮಣ್ಣಿನಲ್ಲಿ ಈ ಬೇರು ಹುಳದ ಸ್ತೊಂದರೆ ಹೆಚ್ಚು. ಮತ್ತೆ ಕೆಲವು ಕಡೆ ಕಡಿಮೆ. ಬೇರು ಹುಳಗಳನ್ನು  ಒಡಿಸದಿದ್ದರೆ…

Read more
ಗುಲಗುಂಜಿ ಹುಳ ಕೀಟ ಭಕ್ಷಕ

ಈ ಕೀಟಗಳಿದ್ದರೆ ಕೀಟನಾಶಕ ಬೇಕಾಗಿಲ್ಲ.

ನಮಗೆಲ್ಲಾ ಗೊತ್ತಿರುವಂತೆ ಗುಡ್ದಕೆ ಗುಡ್ಡ ಅಡ್ದ ಇದ್ದೇ ಇದೆ. ಪ್ರತೀಯೊಂದು ಜೀವಿಗೂ ಮತ್ತೊಂದು ವೈರಿ ಜೀವಿ ಇರುತ್ತದೆ. ಇದನ್ನು ಪ್ರಕೃತಿ ಸೃಷ್ಟಿ ಮಾಡಿರುತ್ತದೆ. ಯಾವುದು ಪ್ರಭಲವಾಗುತ್ತದೆಯೋ ಆಗ  ಅದರ ವೈರಿ ಜೀವಿ ಕಾಣಿಸಿಕೊಳ್ಳುತ್ತದೆ. ಇದನ್ನು ನಮ್ಮ ಹಿರಿಯರು ತನ್ನಷ್ಟಕೇ ಕಡಿಮೆಯಾಗುವ  ವಿಧಾನ ಎಂದಿರುವುದು. ನಿಜವಾಗಿ ಇದು ಮಿತಿ ಮೀರುವುದನ್ನು ಪ್ರಕೃತಿ ಹದ್ದುಬಸ್ತಿನಲ್ಲಿಡುವ ವ್ಯವಸ್ಥೆ. ನಮ್ಮಲ್ಲಿ ಹಲವು ಕೀಟಗಳು ಕಣ್ಮರೆಯಾಗಿ ಈಗ ಕೀಟನಾಶಕ ಅನಿವಾರ್ಯವಾಗಿದೆ. ಇಂದಿನ ನಮ್ಮ ಬೇಸಾಯ ಪದ್ದತಿ ಮತ್ತು ವಾತಾವರಣದ ಸ್ಥಿತಿಗತಿಯ ಏರು ಪೇರಿನಿಂದ ಇದೆಲ್ಲವೂ…

Read more

ಅಡಿಕೆ ಮರದಲ್ಲಿ ಅಂಟು ಸ್ರವಿಸುವುದಕ್ಕೆ ಕಾರಣ ಮತ್ತು ಪರಿಹಾರ.

ಇತ್ತೀಚಿಗೆ ಮಲೆನಾಡು ಮತ್ತು ಬಯಲುಸೀಮೆಯ ಕೆಲವು ತೋಟಗಳಲ್ಲಿ ಅಡಿಕೆ ಮರದಕಾಂಡ ಮತ್ತು ಸೋಗೆಯ ದಿಂಡಿನಿಂದ ಅಂಟು (ಮೇಣದಂತಹ ಪದಾರ್ಥ) ಸೋರುತ್ತಿರುವುದು ಕಂಡುಬಂದಿದೆ.ಇದನ್ನು ಎಂದೂ ಕಂಡಿಲ್ಲದ ಬೆಳೆಗಾರರು ಸಹಜವಾಗಿ ಗೊಂದಲಕ್ಕೀಡಾಗಿದ್ದಾರೆ. ಈ ವಿದ್ಯಮಾನದ ಬಗ್ಗೆ ಲಭ್ಯವಿರುವ ವೈಜ್ಞಾನಿಕ ಮಾಹಿತಿಯನ್ನು ಈ ಲೇಖನದ ಮೂಲಕ ಬೆಳೆಗಾರ ಅನುಕೂಲಕ್ಕಾಗಿ ನೀಡಲಾಗಿದೆ. ಅಂಟು ಸೋರಲು ಕಾರಣವೇನು? ಕೇವಲ ಅರ್ಧ ಸೆಂಟಿಮೀಟರ್‍ ಉದ್ದವಿರುವ ಯೂಪ್ಲಾಟಿಪಸ್ ಪ್ಯಾರಲ್ಲೆಲಸ್ ಎಂಬ ಕೀಟ. ಇದು  ಅಡಿಕೆ ಮರದಕಾಂಡ ಮತ್ತು ಸೋಗೆಯ ದಿಂಡನ್ನು ಕೊರೆದು ಒಳಗೆ ಪ್ರವೇಶಿಸಿಸುತ್ತದೆ. ಕೀಟವು ಪ್ರವೇಶಿಸಿದ…

Read more

ಅಡಿಕೆಯ ಮಿಡಿಗಳು ಯಾಕೆ ಉದುರುತ್ತವೆ?

ಬೇಸಿಗೆಯಲ್ಲಿ ಏನೇನೋ ಕಸರತ್ತು ಮಾಡಿ ಹೂಗೊಂಚಲಿನಲ್ಲಿ ಮಿಡಿಗಳನ್ನು ಉಳಿಸಿರುತ್ತೇವೆ. ಆದರೆ ಅದು ಒಂದೆರಡು ಮಳೆ ಬಂದ ತಕ್ಷಣ ಉದುರಲಾರಂಭಿಸುತ್ತದೆ. ಕೆಲವು ಮುಂಚೆಯೇ ಉದುರುತ್ತದೆ. ಇದಕ್ಕೆ ಹಲವು ಕಾರಣಗಳಿದ್ದು, ರೈತರು ತಮ್ಮಲ್ಲಿ ಯಾವ ಸ್ಥಿತಿ ಇದೆಯೋ ಅದಕ್ಕನುಗುಣವಾಗಿ ಉಪಚಾರ ಮಾಡಿ ಅದನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು. ಮಳೆ ಒಂದು ಬಂದರೆ ಸಾಕು, ಅಡಿಕೆ ಮರದಲ್ಲಿ ಮಿಡಿಗಳು ಉದುರುತ್ತವೆ. ಕೆಲವೊಮ್ಮೆ ಒಂದೆರಡು  ಸಂಖ್ಯೆಯಲ್ಲಿ ಉದುರಿದರೆ  ಕೆಲವೊಮ್ಮೆ ಬಹುತೇಕ ಉದುರುತ್ತದೆ. ಅಂತಹಹ ಮಿಡಿಗಳಲ್ಲಿ ಆ ದಿನ ಉದುರಿದ ಮಿಡಿಯನ್ನು ಒಮ್ಮೆ ಸರಿಯಾಗಿ…

Read more
coconut palm

ತೆಂಗಿನ ಸಸಿ ಬೆಳವಣಿಗೆಗೆ ಇದು ದೊಡ್ದ ತಡೆ.

 ಮುಸ್ಸಂಜೆ ಮತ್ತು ಕತ್ತಲೆಗೆ ದೀಪದ ಬೆಳಕಿಗೆ ಬಂದು ಬಿಳುವ ದುಂಬಿಗಳಲ್ಲಿ ಕುರುವಾಯಿ ಕೀಟ ಒಂದು.ಈ ದುಂಬಿ ತೆಂಗಿನ ಬೆಳೆಗಾರರ ಅತೀ ದೊಡ್ದ ಶತ್ರು.   ನಮ್ಮ ಹಿರಿಯರು ಹೇಳುವುದಿದೆ, ಒಂದು ಕುರುವಾಯಿ ಕೊಂದರೆ 1 ದೇವಾಸ್ಥಾನ ಕಟ್ಟಿದ ಪುಣ್ಯವಿದೆ ಎಂದು. ಯಾಕೆಂದರೆ ಕುರುವಾಯಿ ಅಷ್ಟು ಹಾನಿ ಮಾಡುತ್ತದೆ.. ಆದ ಕಾರಣ  ವೃಕ್ಷಕ್ಕೆ ತೊಂದರೆ ಕೊಡುವ ಕೀಟ ಎಂಬ ಭಾವನೆಯಿಂದಲಾದರೂ ಅದು ನಶಿಸಲಿ ಎಂದು ಹಾಗೆ ಹೇಳಿರಬೇಕು. ಬಾಧೆಯ ಲಕ್ಷಣ: ತೆಂಗಿನ ಸಸಿಯ/ಮರದ ಮೂಡುತ್ತಿರುವ ಇನ್ನೂ ಅರಳಿರದ ಸುಳಿಯ…

Read more
error: Content is protected !!