ಅಡಿಕೆ ಯಾಕೆ ಸುರಿ ಬೀಳುತ್ತದೆ? – ಪರಿಹಾರ.
ದಾಸ್ತಾನು ಇಟ್ಟ ಧವಸ ಧಾನ್ಯ ಏನೇ ಇದ್ದರೂ ಸಮರ್ಪಕವಾಗಿ ಇಲ್ಲದಿದರೆ ಅದಕ್ಕೆ ದಾಸ್ತಾನು ಕೀಟ (Storage pest) ಬಂದು ಸುರಿ ಬೀಳುವುದು ಸಾಮಾನ್ಯ. ಈ ಕೀಟಗಳಲ್ಲಿ ಹಲವು ವಿಧಗಳು ಇದ್ದು, ಅಕ್ಕಿಗೆ ಬರುವ ಗುಗ್ಗುರು,ಅಡಿಕೆಗೆ ಬರುವ ಡಂಕಿ ಬೇರೆ ಹೀಗೆ ಬೇರೆ ಬೇರೆ ಇದೆ. ಸಾಮಾನ್ಯವಾಗಿ ಸುಲಿದು ದಾಸ್ತಾನು ಇಡುವ ಅಡಿಕೆಗೆ ಈ ಸಮಸ್ಯೆ ಹೆಚ್ಚು. ಹಾಗೆಂದು ಸುಲಿಯದೇ ಇಡುವಲ್ಲಿಯೂ ಇಲ್ಲದಿಲ್ಲ. ಇದು ಮಹಾ ಮಾರಿ ಶತೃ ಎಂತಲೇ ಹೇಳಬಹುದು. ಒಮ್ಮೆ ಈ ಕೀಟ ಬಂದರೆ ಅದನ್ನು ಓಡಿಸುವುದೂ…