
ಮಾವಿನ ಮರ –ಸಸಿ ಇದ್ದವರು ತಕ್ಷಣ ಈ ಕೆಲಸ ಮಾಡಬೇಕು.
ಮಾವಿನ ಮರ- ಸಸಿ ಬಹುತೇಕ ಎಲ್ಲಾ ಕೃಷಿಕರಲ್ಲೂ ಇರುತ್ತದೆ.ಹಣ್ಣು ತಿನ್ನುವ ಆಸೆಗಾಗಿ ಬೆಳೆಸಿದ ಈ ಮರಗಳಿಂದ ಉತ್ತಮ ಫಲ ಪಡೆಯಲು ಈ ಕೆಲಸವನ್ನು ಈಗ ಮಾಡಲೇಬೇಕು. ಮಳೆಗಾಲದ ಸಮಯದಲ್ಲಿ ಮಾವಿನ ಮರಗಳಿಗೆ ಬರುವ ಒಂದು ಶಿಲೀಂದ್ರ ರೋಗದ ಸೋಂಕು ಆ ಮರದ ಫಸಲಿನ ಮೇಲೆ ನೇರ ಪರಿಣಾಮ ಉಂಟು ಮಾಡುತ್ತದೆ.ಬಹಳಷ್ಟು ಜನ ಮಾವಿನ ಸಸಿ ಬೆಳೆದವರು ಅದರಲ್ಲಿ ಫಲ ಬಂದರೂ ಉಪಯೋಗಕ್ಕಿಲ್ಲ ಎನ್ನುತ್ತಾರೆ. ಇದಕ್ಕೆ ಕಾರಣ ಮಳೆಗಾಲದಲ್ಲಿ ಬರುವ ಶಿಲೀಂದ್ರ ರೋಗದ ರೋಗಾಣು ಮರದಲ್ಲಿ ಜೀವಂತವಾಗಿ ಉಳಿಯುವುದು….