
ಈ ದಾಳಿಂಬೆ ಹಣ್ಣು ಉಚಿತವಾಗಿ ಕೊಟ್ಟರೂ ಗಿರಾಕಿ ಇಲ್ಲ. ಯಾಕೆ?
ಇಲ್ಲಿ ತೋರಿಸಿದ ದಾಳಿಂಬೆ ಹಣ್ಣು ನೋಡಲು ಆಕರ್ಷಕವಾಗಿಲ್ಲ. ಹಾಗಾಗಿ ಉಚಿತವಾಗಿ ಕೊಟ್ಟರೂ ಕೊಳ್ಳುವುದಕ್ಕೆ ಗಿರಾಕಿ ಇಲ್ಲ. ಇದನ್ನು ಹಣ್ಣು ಮಾರುವ ಅಂಗಡಿ,ಸೂಪರ್ ಮಾರ್ಕೆಟ್ ನಲ್ಲಿ ಮಾರಲಿಕ್ಕಾಗುವುದಿಲ್ಲ. ಇದನ್ನು ರೈತರ ಹೊಲದಿಂದ ಕೊಳ್ಳುವವರೂ ಇಲ್ಲ. ಇದನ್ನು ಉಚಿತವಾಗಿ ಕೊಟ್ಟಂತೆ ರೈತರು ಮಾರಬೇಕು. ರಸ್ತೆ ಬದಿಯಲ್ಲಿ ಮಂದ ಬೆಳಕಿನಲ್ಲಿ ಅಗ್ಗ- ಭಾರೀ ಅಗ್ಗ ಎಂದು ಬೊಬ್ಬೆ ಹಾಕಿ ಮಾರಾಟ ಮಾಡಬೇಕು. ಇದು ನಮ್ಮ ಮನೋಸ್ಥಿತಿ. ಕೃಷಿಕರಿಗೆ ಗ್ರಾಹಕರು ಅತೀ ಮುಖ್ಯ. ಗ್ರಾಹಕ ಎಂದರೆ ಬಳಕೆದಾರ. ರೈತ ಬೆಳೆ ಬೆಳೆಯುವಾಗ ಬಳಕೆದಾರರ…