ಬೆದರು ಬೊಂಬೆಯ ಮೂಲಕ ಬೆಳೆ ರಕ್ಷಣೆ

ಬೆದರು ಬೊಂಬೆ – ದೃಷ್ಟಿ ಬೊಂಬೆಗಳಿಂದ ಕೃಷಿಗೆ ಲಾಭ ಏನು?

ವಿಜ್ಜಾನ ಕೆಲವೊಂದು ಆಚರಣೆಗಳಿಗೆ ಬೆಲೆ ಕೊಡುವುದಿಲ್ಲ. ವೈದ್ಯಕೀಯದಲ್ಲಿ ಅಗೋಚರ ಶಕ್ತಿಗೆ ಬೆಲೆ ಇಲ್ಲ. ಆದರೆ, ಶಸ್ತ್ರ  ಚಿಕಿತ್ಸೆ ಮಾಡುವ ವೈದ್ಯರು ಕೊನೆಗೆ ಎಲ್ಲಾ ಭಾರವನ್ನೂ ದೇವರ ಮೇಲೆಯೇ  ಹಾಕಿಕೊಳ್ಳಿ ಎಂದು ನಮ್ಮನ್ನು ಸಂತೈಸುತ್ತಾರೆ. ಹೀಗಿರುವಾಗ  ನಂಬುವಂತದ್ದಲ್ಲ ಎಂದು ಯವುದನ್ನೂ ಬದಿಗಿಡುವಂತಿಲ್ಲ.  ಫಲ ಕೊಡಲಿ, ಕೊಡದಿರಲಿ  ನಂಬಿಕೆ ಇಟ್ಟರೆ ನಷ್ಟ ಏನೂ ಇಲ್ಲ. ಸಾಂಪ್ರದಾಯಿಕ ಬೆಳೆ ರಕ್ಷಣೆ: ರೈತರು ತಾವು ಬೆಳೆಯುವ ಬೆಳೆಯನ್ನು ರಕ್ಷಿಸಿಕೊಳ್ಳಲು ಕೆಲವು ಸಾಂಪ್ರದಾಯಿಕ ವಿಧಾನಗಳನ್ನು ಬಹಳ  ಹಿಂದಿನಿಂದಲೂ  ಅನುಸರಿಸುತ್ತಾ ಬಂದಿದ್ದಾರೆ. ಇದನ್ನು ಜನಪದ  ಆಚರಣೆ ಎಂದು…

Read more
ಮರಕೆಸುವಿನ ಸೇವನೆಯಿಂದ ಪ್ರಯೋಜನಗಳು.

ಮರಕೆಸುವಿನ ಸೇವನೆಯಿಂದ ಪ್ರಯೋಜನಗಳು.

Remusatia vivipara ಎಂಬ ಸಸ್ಯ ಶಾಸ್ತ್ರೀಯ ಹೆಸರಿನ ಮರಕೆಸು ಕೆಸು ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದು, ಇದು ಮಳೆ ಬಂದ ನಂತರ ಹುಟ್ಟಿಕೊಂಡು ಬೆಳೆದು ಮಳೆ ಮುಗಿಯುವಾಗ ಮರೆಯಾಗುತ್ತದೆ. ಈ ಅವಧಿಯಲ್ಲಿ ಎಲೆಗಳು ದೊಡ್ಡದಾಗಿ ಬೆಳೆಯುವ ಆಷಾಢ ಮಾಸದಲ್ಲಿ ಇದರ ಖಾದ್ಯ ಮಾಡಿ ಸೇವಿಸಿದರೆ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಮರ ಕೆಸು, ಕಾಡುಗಡ್ಡೆ ( ತುಳುವಿನಲ್ಲಿ ಮರಚೇವು, ಕೊಂಕಣಿಯಲ್ಲಿ ರುಕಾಲುಮ್,ಮಲಯಾಳಂ ಮರಚೆಂಬು, ಮರಾಠಿ ಲಾಲ್ಖಂಡ್, ಸಂಸ್ಕೃತದಲ್ಲಿ ಲಕ್ಷ್ಮಣ ) ನೆಲ ಕೆಸುವಿನ ಜಾತಿಯದ್ದೇ. ಇದು ಮರಗಳನ್ನು  ಆಶ್ರಯಿಸಿ…

Read more
ಆಷಾಢದಲ್ಲಿ (ಆಟಿ) ಬಾಳೆದಂಡು ಯಾವ ಉದ್ದೇಶಕ್ಕೆ ತಪ್ಪದೆ ತಿನ್ನಬೇಕು

ಆಷಾಢದಲ್ಲಿ (ಆಟಿ) ಇದನ್ನು ಯಾವ ಉದ್ದೇಶಕ್ಕೆ ತಪ್ಪದೆ ತಿನ್ನಬೇಕು?

ಆಷಾಢ ಮಾಸದಲ್ಲಿ ಕೆಲವು ಆಹಾರ ವಸ್ತುಗಳನ್ನು ತಪ್ಪದೆ ತಿನ್ನಬೇಕು, ಇದರಲ್ಲಿ ಸಾಕಷ್ಟು  ಆರೋಗ್ಯ ಗುಣಗಳಿವೆ ಎಂಬುದೇ ನಮ್ಮ ಹಿರಿಯರು ಹೇಳಿರುವ ಉದ್ದೇಶ. ಇದರಲ್ಲಿ ಬಾಳೆ ದಂಡು ಒಂದು. ಬಾಳೆ ದಂಡನ್ನು ಬೇರೆ ಬೇರೆ ಅಡುಗೆಗಳ ಮೂಲಕ ಬಳಸಬಹುದಾಗಿದ್ದು , ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಈ ದಂಡಿನಲ್ಲಿ ಹಲವಾರು ಪೋಷಕಾಂಶಗಳಿರುವ ಕಾರಣ  ದೇಹಕ್ಕೆ ಶಕ್ತಿ ಕೊಡುತ್ತದೆ. ಆಷಾಢ ಮಾಸದಲ್ಲಿ  ಮಳೆ ಹೆಚ್ಚು. ಹಿಂದೆಲ್ಲಾ ಈ ತಿಂಗಳಲ್ಲಿ  ವಾರಗಟ್ಟಲೆ ನಿರಂತರ ಮಳೆ ಬರುವುದು, ಮನೆಯಿಂದ ಹೊರಗೆ ತಲೆ ಹಾಕುವುದಕ್ಕೂ…

Read more
ರೋಗ ನಿರೋಧಕ ಅಡಿಕೆ ಮರ

ರೋಗ-ಕೀಟ ನಿರೋಧಕ ತಳಿಗಳು ನಿಮ್ಮ ಬಳಿಯಲ್ಲೇ ಇರಬಹುದು. ಹೇಗೆ ಹುಡುಕುವುದು?

ರೋಗ ನಿರೋಧಕ ಶಕ್ತಿ ಎಂಬುದು ಕೆಲವು ತಳಿಗಳ ವಂಶ ಗುಣ.  ಇದನ್ನು ಕೃಷಿ ವಿಜ್ಞಾನ ಅಧ್ಯಯನ ಮಾಡಿದವರೇ ಹುಡುಕಿ ಅಭಿವೃದ್ದಿಪಡಿಸಬೇಕಾಗಿಲ್ಲ. ಸಾಮಾನ್ಯ ರೈತರೂ ಅದನ್ನು ಅಭ್ಯಸಿಸಿ ತಮ್ಮ ಬಳಕೆಗಾದರೂ  ಉಪಯೋಗಿಸಿಕೊಳ್ಳಬಹುದು. ಈ ಬಗ್ಗೆ ಬೆಳಕು ಚೆಲ್ಲುವ ಒಂದು ಅಪರೂಪದ ಲೇಖನ ಇಲ್ಲಿದೆ. ಕೆಲವು ರೈತರ ಅಡಿಕೆ ತೋಟದಲ್ಲಿ ಪ್ರತೀ ವರ್ಷ ಕೊಳೆ ಬರುತ್ತದೆ. ಹಾಗೆಂದು ಎಲ್ಲಾ ಮರಗಳಿಗೂ ಕೊಳೆ ಬರುವುದಿಲ್ಲ.  ಹಾಗೆಯೇ ಕರಿಮೆಣಸು, ತೆಂಗು,  ಏಲಕ್ಕಿ, ನೆಲಕಡ್ಲೆ, ಹತ್ತಿ, ದಾಳಿಂಬೆ,  ಎಲ್ಲಾ ಕೃಷಿ, ತೋಟಗಾರಿಕೆ, ತರಕಾರಿ ,…

Read more
ಆಷಾಢದ ನಂತರ ಬೇಸಿಗೆ- ಮಾಗಿ ನಂತರ ಮಳೆಗಾಲ

ಆಷಾಢ ನಂತರ ಬೇಸಿಗೆ- ಮಾಗಿ ನಂತರ ಮಳೆಗಾಲ- ಕುಂಭ ಮಾಸಕ್ಕೆ ಸ್ವಾಗತ.

ಆಷಾಢದ ನಂತರ ಬೇಸಿಗೆ- ಮಾಗಿ ನಂತರ ಮಳೆಗಾಲ  ಎನ್ನುತ್ತಾರೆ ಹಿರಿಯರು. ಇದರ ಅರ್ಥ ಕೃಷಿಕರಿಗೆ ಮಾತ್ರ ಅರ್ಥವಾಗಬಲ್ಲದು.ಮಕರ ಸಂಕ್ರಮಣ ಕಳೆದ ತರುವಾಯ ಎಲ್ಲವೂ ಹಚ್ಚ ಹಸುರು.ರೈತನ ಶ್ರಮಕ್ಕೆ ಹವಾಮಾನದ ಬೆಂಬಲ ದೊರೆತಾಗ ಮಾತ್ರ ಅದು ಫಲಪ್ರದವಾಗುತ್ತದೆ. ಕೃಷಿ ಎಂಬ ವೃತ್ತಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ನಮ್ಮ ಹಿರಿಯರು ತಿಳಿದಿದ್ದ ಕೆಲವು ಅನುಭವ ಸೂಕ್ಷ್ಮಗಳನ್ನು ಇಂದಿನ ವಿಜ್ಞಾನ ಅರ್ಥ ಬಿಡಿಸಿ ಜನತೆಗೆ ತಿಳಿಸಿದೆ. ಹಿರಿಯರ ಅನುಭವ ಇಂದಿನ ವಿಜ್ಞಾನಿಗಳ ತಿಳುವಳಿಕೆಗಿಂತ ಇಂದಿಗೂ ಮುಂದೆಯೇ ಇದೆ. ಆಟಿ (ಆಷಾಢ ಮಾಸ) ಕಳೆದರೆ …

Read more
error: Content is protected !!