
ಅಕ್ಟೋಬರ್ ತಿಂಗಳು ಅಡಿಕೆ ಧಾರಣೆ ನೀರಸ- ಮುಂದಿನ ಸ್ಥಿತಿ ಏನು?
ಅಕ್ಟೋಬರ್ ತಿಂಗಳಲ್ಲಿ ನವರಾತ್ರೆ. ದೀಪಾವಳಿ ಹಬ್ಬಗಳ ಕಾರಣ ಅಡಿಕೆ ಧಾರಣೆ ಏರಿಕೆ ಕಾಣಬಹುದು ಎಂಬ ಆಶಯ ಇತ್ತು. ಆದರೆ ಅದು ನೀರಸವಾಗಿ ಮುಂದುವರಿದಿದೆ. ಮುಂದೆ ಏರಿಕೆ ಆಗಬಹುದೇ ಅಥವಾ ಇಳಿಕೆಯೇ ಎಂಬ ಅನುಮಾನ ಬೆಳೆಗಾರರನ್ನು ಸಹಜವಾಗಿ ಕಾಡುತ್ತಿದೆ. ಕೆಲವು ಬೆಳವಣಿಗೆಗಳ ಪ್ರಕಾರ ಕೆಂಪಡಿಕೆ ಧಾರಣೆ ಇನ್ನು ಒಂದೆರಡು ತಿಂಗಳ ಕಾಲ ಏರಿಕೆ ಆಗದೆ ಮುಂದುವರಿಯುವ ಸಾಧ್ಯತೆ ಇದೆ. ಚಾಲಿ ಸ್ವಲ್ಪ ಏರಿಕೆ ಆಗುವ ಲಕ್ಷಣ ಕಾಣಿಸುತ್ತಿದೆ. ಚಾಲಿಗೆ 500 ಆಗುತ್ತದೆ ಎಂದು ಕಾದು ಕಾದು ಕಡೆಗೆ 480-485…