ಚಾಲಿ ದರ ಹಿಂದೆ- ಕೆಂಪು ಸ್ಥಿರ: ದಿನಾಂಕ:21-12-2021 ರ ಧಾರಣೆ.
ಹೊಸ ಚಾಲಿ ಮಾರುಕಟ್ಟೆಗೆ ಬರಲಾರಂಭಿಸಿದೆ. ಚಾಲಿಯ ಗುಣ ಮಟ್ಟದ ಮೇಲೆ ಬೆಳೆಗಾರರಿಗೆ ಹೆಚ್ಚು ಖಾತ್ರಿ ಇಲ್ಲದ ಕಾರಣ ಬಿದ್ದ ಒದ್ದೆಯಾದ ಅಡಿಕೆಯನ್ನು ಹೇಗೂ ದರ ಒಳ್ಳೆಯದಿದೆಯಲ್ಲಾ ಎಂದು ಮಾರಾಟ ಮಾಡುತ್ತಿದ್ದಾರೆ. ಮೊದಲೇ ಹೇಳಿದಂತೆ ಚಾಲಿಗೆ ಖಾಸಗಿ ವ್ಯಾಪಾರಸ್ಥರಲ್ಲಿ ದರ ಕಡಿಮೆ, ಸಹಕಾರಿಗಳಲ್ಲಿ ಸ್ಥಿರವಾಗಿಯೂ ಇದೆ. ನಾಳೆ ನಾಡಿದ್ದಿನಲ್ಲಿ ಸಾಂಸ್ಥಿಕ ಖರೀದಿದಾರರೂ ಸ್ವಲ್ಪ ದರ ಇಳಿಸುವ ಮುನ್ಸೂಚನೆ ಇದೆ. ಕೆಂಪು ಅಡಿಕೆ ಬೆಳೆಗಾರರಲ್ಲಿ ದೊಡ್ಡ ಬೆಳೆಗಾರರು ಮತ್ತು ಚೇಣಿಯವರು ಮಾರಾಟಕ್ಕೆ ದರ ಯಾವಾಗ ಏರುತ್ತದೆ ಎಂದು ಕಾಯುತ್ತಿದ್ದಾರೆ. ಈ…