ಉತ್ತಮ ರಾಶಿ ಅಡಿಕೆ

ಅಡಿಕೆ- ಕರಿಮೆಣಸು- ಕಾಫಿ-ಶುಂಠಿ ಧಾರಣೆ: 19-11-2021 ಶುಕ್ರವಾರ.

ರಾಜ್ಯದಾದ್ಯಂತ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಖಾಸಗಿ ವರ್ತಕರಲ್ಲಿ  ಇಂದು 19-11-2021 ಶುಕ್ರವಾರ ಅಡಿಕೆ, ಕರಿಮೆಣಸು, ರಬ್ಬರ್, ಕಾಫಿ , ಶುಂಠಿ ಧಾರಣೆ ಹೀಗಿತ್ತು. ‘ ಕರಾವಳಿಯಲ್ಲಿ ಖಾಸಗಿ ವರ್ತಕರ ಸ್ಪರ್ಧೆ ಅಡಿಕೆ ಮಾರುಕಟ್ಟೆಯನ್ನು ತುಸು ಮೇಲೆಕ್ಕೆತ್ತಿದೆ. ಹೊಸ ಚಾಲಿಗೆ ನಿನ್ನೆಯಿಂದ ಖಾಸಗಿ ವರ್ತಕರಲ್ಲಿ ಕಿಲೋಗೆ ರೂ.5 ಹೆಚ್ಚಳವಾಗಿದೆ. ಹಳೆ ಚಾಲಿಗೆ ಕ್ಯಾಂಪ್ಕೋ ಸಹ ರೂ. 5 ಹೆಚ್ಚಿಸಿದೆ. ಆದರೆ ಗುಣಮಟ್ಟದ ಹೊಸ ಅಡಿಕೆ ಬರುವುದು ತುಂಬಾ ಕಡಿಮೆಯಾದ ಕಾರಣ ಇದು ದೊಡ್ದ ವಿಷಯವಲ್ಲ….

Read more
ಫಸ್ಟ್ ಕ್ವಾಲಿಟಿ ಚಾಲಿ

ರಾಶಿ ಅಡಿಕೆ, ಚಾಲಿ, ಕರಿಮೆಣಸು ದರ ಏರಿಕೆ- ದಿನಾಂಕ: 16-11-2021 ಮಂಗಳವಾರ.

ಇಂದು ದಿನಾಂಕ 16-11-2021 ರ ಮಂಗಳವಾರ  ಉತ್ತರ ಕನ್ನಡದ ಪ್ರಮುಖ ಮಾರುಕಟ್ಟೆ ಶಿರಸಿ, ಯಲ್ಲಾಪುರ, ಸಿದ್ದಾಪುರಗಳಲ್ಲಿ  ರಾಶಿ ಅಡಿಕೆ ಧಾರಣೆ ಸ್ವಲ್ಪ ಏರಿಕೆಯಾಗಿದೆ. ಹೆಚ್ಚಾಗಿ ಚಾಲಿಯೇ ಮಾಡಲಾಗುವ ಕರಾವಳಿಯ ಭಾಗಗಳಲ್ಲಿ ಹೊಸ ಚಾಲಿಗೂ ಕ್ವಿಂಟಾಲಿಗೆ ರೂ. 500 ಹೆಚ್ಚಾಗಿದೆ. ಹಳೆ ಚಾಲಿಗೆ ಕೆಲವು ಕಡೆ 500  ಇನ್ನು ಕೆಲವು ಕಡೆ 700 ರೂ. ಹೆಚ್ಚಳವಾಗಿದೆ. ಕೆಂಪು ಚಾಲಿ ಎರಡೂ ಅನಿಶ್ಚಿತವಾಗಿದೆ. ಕರಿಮೆಣಸಿಗೆ ಸಕಲೇಶಪುರದಲ್ಲಿ ಗರಿಷ್ಟ 54,000 ಆಗಿದೆ. ಏರಿಕೆ ಇರುವಾಗ ತೃಪ್ತಿಯಲ್ಲಿ ಮಾರಾಟ ಮಾಡುವುದೇ ಜಾಣತನ ಎಂದೇ…

Read more
ಬೇಯಿಸಿದ ಬೆಟ್ಟೆ ಅಡಿಕೆ

ಅಡಿಕೆ ಧಾರಣೆ ದಿನಾಂಕ: 15-11-2021 ಸೋಮವಾರ. ಚಾಲಿ ಏರಿಕೆ- ಕೆಂಪು ಸ್ಥಿರ.

ದಿನಾಂಕ 15-11-2021 ಸೋಮವಾರ ಅಡಿಕೆ, ಕೊಬ್ಬರಿ, ಹಸಿ ಶುಂಠಿ ರಬ್ಬರ್, ಕಾಫೀ. ಏಲಕ್ಕಿ ಧಾರಣೆಗಳು ಹೆಚ್ಚೂ ಆಗದೆ ಕಡಿಮೆಯೂ ಆಗದೆ ಹಿಂದಿನ ಶುಕ್ರವಾರದ ಧಾರಣೆಯಂತೆ ಮುಂದುವರಿದಿದೆ. ಚಾಲಿ ಖಾಸಗಿಯವರಲ್ಲಿ  ದರ 50,500 ತನಕ ಏರಿಕೆಯಾಗಿದೆ. ಕ್ಯಾಂಪ್ಕೋ ಮಾತ್ರ 500  ಗರಿಷ್ಟ ದರವನ್ನು ಸೂಚಿಸಿದೆ.ಡಬ್ಬಲ್ ಚೋಳ್ 51,500 ತನಕ ಖರೀದಿ ದರ ಇದೆ. ಆದರೆ ಅಡಿಕೆ ಇಲ್ಲ. ಕರಿಮೆಣಸು ಮಾತ್ರ ಮೇಲೆಕ್ಕೆ ಏರಿದೆ. ಒಮ್ಮೆ ಇಳಿಕೆಯಾದರೂ ಸಹ ಶುಕ್ರವಾರ ಏರಿಕೆ ಪ್ರಾರಂಭವಾಗಿ ಇಂದು ಮತ್ತೆ ಪುನಃ ಏರಿದೆ. ಸಲಕೇಶಪುರದಲ್ಲಿ…

Read more
ಚಾಲೀ ಆಡಿಕೆ ಲಾಟ್

ಏರುಗತಿಯತ್ತ ಅಡಿಕೆ ಧಾರಣೆ- ದಿನಾಂಕ:12-11-2021 ಶುಕ್ರವಾರ.

ಇಂದು ದಿನಾಂಕ 12-11-2021 ಶುಕ್ರವಾರ ರಾಜ್ಯದಾದ್ಯಂತ ಅಡಿಕೆ ಧಾರಣೆಯನ್ನು ಗಮನಿಸಿದಾಗ ಚಾಲಿಯೂ ಸೇರಿದಂತೆ , ಕೆಂಪಡಿಕೆಗೂ ತುಸು ದರ ಏರಿಕೆ ಸೂಚನೆಗಳು ಕಂಡು ಬರುತ್ತಿದೆ. ಶಿರಸಿಯಲ್ಲಿ ಇಂದು ಚಾಲಿ ಮತ್ತು ಕೆಂಪು ರಾಶಿ ನಿನ್ನೆಗಿಂತ ಸ್ವಲ್ಪ ಹೆಚ್ಚಿನ ದರಕ್ಕೆ ಖರೀದಿ ಆಗಿದೆ.  ಹೊಸನಗರ ಮಾರುಕಟ್ಟೆಯಲ್ಲಿಯೂ ತುಸು ಹೆಚ್ಚು ದರಕ್ಕೆ ಖರೀದಿ ಆಗಿದೆ. ನಾಳೆ ಎರಡನೇ ಶನಿವಾರ ಇದ್ದಾಗ್ಯೂ ದರ ಸ್ವಲ್ಪ ಏರಿಕೆ ಆಗಿದೆ ಎಂದರೆ  ಸೋಮವಾರವೂ ಕ್ವಿಂಟಾಲಿಗೆ 200-500 ಏರಿಕೆ ಆಗಬಹುದು. ಸರಾಸರಿ ದರ ಕನಿಶ್ಟ ದರಗಳ…

Read more
ಕೆಂಪಡಿಕೆ

ಅಡಿಕೆ ಧಾರಣೆ ದಿನಾಂಕ- 09-11-2021 ಮಂಗಳವಾರ ಸ್ಥಿರ ಧಾರಣೆ.

09-11-2021 ಮಂಗಳವಾರ  ಅಡಿಕೆ ಧಾರಣೆ ಸ್ಥಿರವಾಗಿಯೂ  ಕರಿಮೆಣಸು ಸ್ವಲ್ಪ ಇಳಿಕೆಯೂ ಕೊಬ್ಬರಿ, ಕಾಫಿ ಹಾಗೂ ರಬ್ಬರ್ ಧಾರಣೆ ಸ್ಥಿರವಾಗಿ ಮುಂದುವರಿದಿದೆ. ಅಡಿಕೆಯ ಧಾರಣೆಗೆ ಯಾವ ಅಂತಂಕವೂ ಇಲ್ಲ. ಯಾವ ಸುದ್ದಿಗೂ ಬೆಳೆಗಾರರು ಗಮನ ಕೊಡಬೇಕಾಗಿಲ್ಲ. ಅಡಿಕೆ ಬೆಳೆಗಾರರ ಸುದ್ದಿಗೆ ಯಾವ ಸರಕಾರವೂ ಬರುವುದಿಲ್ಲ.ಅಡಿಕೆ ಬ್ಯಾನ್ ಮುಂತಾದ ಪ್ರಸ್ತಾಪ ಕೇವಲ ತಾತ್ಕಾಲಿಕ ಮಾತ್ರ. ಇಂದು ಅಡಿಕೆ ಧಾರಣೆ: BANTWALA, 09/11/2021, Coca, 26, 12500, 25000, 22500 BANTWALA, 09/11/2021, New Variety, 3, 27500, 42500, 40000…

Read more
ಅಡಿಕೆ ಧಾರಣೆ 08-11-2021

ದಿನಾಂಕ 08-11-2021 ಸೊಮವಾರ ರಾಜ್ಯದಾದ್ಯಂತ ಅಡಿಕೆ ಧಾರಣೆ.

ದೀಪಾವಳಿ ಕಳೆದ ಮೊದಲ ದಿನದ ಅಡಿಕೆ ಧಾರಣೆ ಬೆಳೆಗಾರರಿಗೆ ನಿರಾಶಾದಾಯವಾಗಿಲ್ಲ. ಇಂದು ದಿನಾಂಕ 08-11-2021 ಸೊಮವಾರ ರಾಜ್ಯದ ವಿವಿಧ ಅಡಿಕೆ ಬೆಳೆಯಲಾಗುತ್ತಿರುವ ಪ್ರದೇಶಗಳಲ್ಲಿ ಅಡಿಕೆ ಧಾರಣೆ  ಸ್ಥಿರವಾಗಿತ್ತು. ಹಾಗೆಯೇ ಕರಿಮೆಣಸು ಸ್ವಲ್ಪ ಹಿಂದೆ ಆದರೂ ಸಹ ನಿರಾಸೆ ಇಲ್ಲ. ಸಧ್ಯವೇ ಇದು ಚೇತರಿಸಿಕೊಳ್ಳಲಿದೆ.  ರಬ್ಬರ್ ಧಾರಣೆ ಸ್ವಲ್ಪ ಮುಂದೆ ಇದೆ. ಕಾಫೀ ಧಾರಣೆ ಸ್ಥಿರವಾಗಿದೆ. ಪರಿಸ್ಥಿತಿ ( ಕೊರೋನಾ) ಹೀಗೆ ಮುಂದುವರಿದರೆ  ಜನವರಿ ಸುಮಾರಿಗೆ ಕೊಬ್ಬರಿ ಧಾರಣೆ 18,000  ತಲುಪಬಹುದು ಎಂಬುದಾಗಿ ಹೇಳುತ್ತಿದ್ದಾರೆ. ಅಡಿಕೆ ಧಾರಣೆಗೆ ಅಂತಹ…

Read more
ಹೊಸ ರಾಸಿ ಅಡಿಕೆ

ದೀಪಾವಳಿ- ಅಡಿಕೆ ಆಶಾಧಾಯಕ- ಕರಿಮೆಣಸು ನಿರಾಸೆ. 02-11-2021 ರ ಧಾರಣೆಗಳು.

ನವೆಂಬರ್ ತಿಂಗಳ ಮೊದಲ ದಿನ, ದಿನಾಂಕ:02-11-2021  ರ ಮಂಗಳವಾರ ಅಡಿಕೆ ಮಾರುಕಟ್ಟೆ ಆಶಾದಾಯಕವಾಗಿಯೇ ಮುಂದುವರಿದಿದೆ.ಕರಿಮೆಣಸು ಮಾತ್ರ ಯಾಕೋ ಸ್ವಲ್ಪ ಹಿಮ್ಮೆಟ್ಟಿದೆ. ಈ ವಾರದಲ್ಲಿ ಇನ್ನು ಎರಡು ದಿನ ಮಾರುಕಟ್ಟೆ ಇರುತ್ತದೆ. ಆದರೆ ಈ ದಿನಗಳಲ್ಲಿ ಅಡಿಕೆ ಅವಕ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ಬಿಡ್ಡಿಂಗ್ ಕೂಡಾ  ಅಷ್ಟು ಹುಮ್ಮಸ್ಸಿನಲ್ಲಿ ಇರುವುದಿಲ್ಲ.  ಆದಾಗ್ಯೂ ಮಾರುಕಟ್ಟೆ ಸ್ಥಿರವಾಗಿ ಉಳಿಯಲಿದೆ ಎಂಬ ಮಾಹಿತಿಗಳಿವೆ. ಕರಿಮೆಣಸು ಶುಕ್ರವಾರದ ಹುರುಪಿಗೆ ಹೋಲಿಸಿದರೆಮತ್ತೆ ಸ್ವಲ್ಪ ಹಿಂಜರಿಕೆಯಾಗಿದೆ. ಇನ್ನೂ ಸ್ವಲ್ಪ ಹಿಂದೆ ಬರಬಹುದು ಎಂಬ ಮಾಹಿತಿಗಳಿವೆ. ಅದು…

Read more
ಕೊಬ್ಬರಿ ಧಾರಣೆ

ದಿನಾಂಕ 29-10-2021 ಶುಕ್ರವಾರ- ಅಡಿಕೆ-ಕರಿಮೆಣಸು- ಶುಂಠಿ-ಕೊಬ್ಬರಿ- ರಬ್ಬರ್- ಧಾರಣೆ.

ರಾಜ್ಯದ ವಿವಿಧ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ  ಅಡಿಕೆ, ಕರಿಮೆಣಸು, ಹಸಿ ಶುಂಠಿ, ಕೊಪ್ಬ್ಬರಿ ರಬ್ಬರ್ ಕಾಫೀ, ಮುಂತಾದ ತೋಟಗಾರಿಕಾ ಬೆಳೆಗಳ  ಮಾರುಕಟ್ಟೆ ಧಾರಣೆ ಹೀಗಿತ್ತು. ಚಾಲಿ ದರ ಸ್ಥಿರವಾಗಿತ್ತು. ಕೆಂಪು ಯಲ್ಲಾಪುರ ಮತ್ತು ಶಿರಸಿಗಳಲ್ಲಿ ಸ್ವಲ್ಪ ತೇಜಿ. ಉಳಿದೆಡೆ ಯಥಾಪ್ರಕಾರ ಸ್ಥಿರ.  ದರ ಇಳಿಕೆ ಆಗುವ ಸಾಧ್ಯತೆ ಇಲ್ಲ. ಭಾರೀ ಏರುವ ಸಾಧ್ಯತೆಯೂ ಇಲ್ಲ. ಕರಿಮೆಣಸು ದರ ಇಂದೂ ಸ್ವಲ್ಪ ಏರಿಕೆ. 500 ರ ಗಡಿ ದಾಟಿ 51000 ಕ್ಕೆ ಕಾಲಿಟ್ಟಿದೆ. ಕೆಲವು ವರ್ತಕರು ದರ ಮೇಲೇರುವ…

Read more
ಅಡಿಕೆ ಮಂಡಿ ಟೆಂಡರ್

ರಾಜ್ಯದಲ್ಲಿ ಇಂದು ಅಡಿಕೆ- ಕರಿಮೆಣಸು ಧಾರಣೆ. 28-10-2021 –ಗುರುವಾರ.

ಎಲ್ಲರ ಚಿತ್ತ ಅಡಿಕೆ ಧಾರಣೆಯ ಮೇಲೆ. ಈಗ ಕೆಲವು ದಿನಗಳಿಂದ ಕರಿಮೆಣಸು ಮೇಲೆಯೇ. ಅಡಿಕೆ ಧಾರಣೆ ಸಹ ಯಾವಾಗ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಹಾಗಾಗಿ ಕುತೂಹಲ. ಏರಿಕೆ ಆಗುತ್ತದೆ. ಹಾಗೆಯೇ ಇಳಿಕೆಯೂ ಆಗುತ್ತದೆ. ಅಕ್ಟೋಬರ್ ತಿಂಗಳ ಕೊನೆ ಎರಡು ವಾರಗಳಲ್ಲಿ ದರ ಸ್ಥಿರತೆ ಕಂಡುಬಂದಿದೆ. ಸಪ್ಟೆಂಬರ್ ನಲ್ಲಿ  ನಿರಾಸೆ ಮೂಡಿಸಿದ್ದ ಧಾರಣೆ ಅಕ್ಟೋಬರ್ ನಲ್ಲಿ ಸ್ವಲ್ಪ ಧೈರ್ಯ ಕೊಟ್ಟಿದೆ. ಸಧ್ಯಕ್ಕೆ ಅಡಿಕೆ ಧಾರಣೆ ಸ್ಥಿರತೆಯಲ್ಲಿ ಮುಂದುವರಿಯಲಿದೆ. ಏನಾದರೂ  ವ್ಯತ್ಯಾಸಗಳಾಗುತ್ತಿದ್ದರೆ, ನಿನ್ನೆ ಪಶ್ಚಿಮ ಬಂಗಾಲ ಸರಕಾರ  ಪಾನ್…

Read more
ಕೆಂಪು ಅಡಿಕೆ

ಅಡಿಕೆ ಧಾರಣೆ ದಿನಾಂಕ 25-10-2021 ಸೋಮವಾರ.

ರಾಜ್ಯದ ವಿವಿಧ ಅಡಿಕೆ ಮಾರಾಟ ಕೇಂದ್ರಗಳಲ್ಲಿ ಇಂದು ಅಕ್ಟೋಬರ್ ತಿಂಗಳ ಕೊನೆಯ ಸೋಮವಾರ  ಅಡಿಕೆ ಧಾರಣೆ ಕರಿಮೆಣಸು, ಕಾಫೀ, ಕೊಬ್ಬರಿ, ಹಾಗೂ ರಬ್ಬರ್ ಧಾರಣೆ ಹೀಗಿತ್ತು. ರಬ್ಬರ್ ಧಾರಣೆ ಇಳಿಮುಖ. ಕರಿಮೆಣಸು ಕಳೆದ ನಾಲ್ಕು ವರ್ಷಗಳಿಂದ ಏರದ್ದು ಇಂದು  500 ಕ್ಕೆ ಏರಿಕೆ, ಅಡಿಕೆ ಸಿಹಿ. ಅಡಿಕೆ ಬೆಳೆಗಾರರಿಗೆ  ಮಳೆಯ ಕಾಟ. ಮಳೆ ನಿಲ್ಲುತ್ತಲೇ ಇಲ್ಲ. ಎಲ್ಲಾ ಕಡೆ ಮಳೆ. ಅಡಿಕೆ ಕೊಯಿಲು ಮಾಡಿದರೆ ಒಣಗಿಸುವುದೇ ಕಷ್ಟ ಎಂಬ ಸ್ಥಿತಿ ಉಂಟಾಗಿದೆ.  ಹೀಗಿರುವಾಗ ಅಡಿಕೆಯ ಅವಕವೂ ಕಡಿಮೆಯಾಗಿದೆ….

Read more
error: Content is protected !!