
ಅಡಿಕೆ ಮಾರುಕಟ್ಟೆ- ಚಾಲಿ, ಕೆಂಪು ಯಾವುದು ಏರಬಹುದು? ಕರಿಮೆಣಸು ಏರಲಿದೆಯೇ?
ಚಾಲಿ ಮಾರುಕಟ್ಟೆ ದರ ಸ್ವಲ್ಪ ಏರಿಕೆ ಆಗುವ ಮುನ್ಸೂಚನೆ ಕಾಣಿಸುತ್ತದೆ. ಕೆಂಪು ಸ್ವಲ್ಪ ಸಮಯದ ತನಕ ಅಸ್ಥಿರವಾಗಿ ಮುಂದುವರಿಯಬಹುದು. ಹಾಗೆಯೇ ಕರಿಮೆಣಸು ಮತ್ತೆ ಚೇತರಿಕೆ ಆಗುವ ಮುನ್ಸೂಚನೆ ಇದೆ. ಖಾಸಗಿಯವರು ಸಾಂಸ್ಥಿಕ ಖರೀದಿದಾರರಿಗಿಂತ ಸ್ವಲ್ಪ ಮುಂದೆ ಇದ್ದಾರೆ. ಹಾಗೆಯೇ ಗುಜರಾತ್ ಚುನಾವಣೆ ಇನ್ನೇನು ಎರಡು ದಿನಗಳಲ್ಲಿ ಮುಗಿಯಲಿದೆ. ಆ ನಂತರ ಬೇಡಿಕೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ವ್ಯಾಪಾರಿಗಳು ಚಾಲಿ ದಾಸ್ತಾನಿಗೆ ಮುಂದಾಗಿದ್ದಾರೆ. ಕೆಂಪಡಿಕೆ ಇನ್ನು 1-2 ತಿಂಗಳು ಸ್ವಲ್ಪ ಇಳಿಕೆಯಾಗಬಹುದು. ಕರಿಮೆಣಸು ಈ ತಿಂಗಳಲ್ಲಿ ಮತ್ತೆ 52500…