
ತೆಂಗಿನ ಮರಗಳ ಶಿರ ಭಾಗ ಸ್ವಚ್ಚತೆ ಮತ್ತು ಇಳುವರಿ
ಯಾರ ತೆಂಗಿನ ಮರದಲ್ಲಿ ಪ್ರತೀ ವರ್ಷವೂ ಅಧಿಕ ಇಳುವರಿ ಬರುತ್ತದೆಯೋ ಅಂತವರ ತೆಂಗಿನ ಮರದ ಶಿರಭಾಗವನ್ನು ಒಮ್ಮೆ ನೋಡಿ. ಬಹಳ ಸ್ವಚ್ಚವಾಗಿ ಇರುತ್ತದೆ. ತೆಂಗಿನ ಮರಗಳಿಗೆ ಗೊಬ್ಬರ, ನೀರು ಕೊಡುವುದಲ್ಲದೆ ಅಗತ್ಯವಾಗಿ ಮಾಡಬೇಕಾದ ಕೆಲಸ ಶಿರ ಭಾಗದ ಸ್ವಚ್ಚತೆ. ಹೀಗೆ ಮಾಡುವುದರಿಂದ ಮರ ಆರೋಗ್ಯವಾಗಿರುತ್ತದೆ. ಉತ್ತಮ ಇಳುವರಿಯೂ ಬರುತ್ತದೆ. ತೆಂಗಿನ ಮರದ ಶಿರ ಬಾಗವನ್ನು ಸ್ವಚ್ಚ ಮಾಡುವ ಕ್ರಮ ಅನಾದಿ ಕಾಲದಿಂದಲೂ ನಡೆದು ಬಂದಿರುವ ನಿರ್ವಹಣೆಗಳಲ್ಲಿ ಒಂದು. ನಮ್ಮ ಹಿರಿಯರು ವರ್ಷಕ್ಕೊಮ್ಮೆ ಶಿರಭಾಗವನ್ನು ಪೂರ್ಣ ಸ್ವಚ್ಚ ಮಾಡುತ್ತಿದ್ದರು….