ರಾಸಾಯನಿಕ ಕೀಟ-ರೋಗ ನಾಶಕಗಳ ಬದಲಿಗೆ ಜೈವಿಕ ಪರ್ಯಾಯ

ರಾಸಾಯನಿಕ ಕೀಟ-ರೋಗ ನಾಶಕಗಳ ಬದಲಿಗೆ ಜೈವಿಕ ಪರ್ಯಾಯ.

ಬೆಳೆಗಳಿಗೆ ಹಾನಿ ಮಾಡುವ ಕೀಟ – ರೋಗ ನಿಯಂತ್ರಣಕ್ಕೆ ವಿಷ ರಾಸಾಯನಿಕಗಳೇ ಅಂತಿಮ ಅಲ್ಲ. ಇವುಗಳಿಗೆ ಪರ್ಯಾಯ ಇದೆ. ಅದರ ಬದಲಿಗೆ ಜೈವಿಕ ಕೀಟ –ರೋಗ ನಿಯಂತ್ರಕಗಳು ಇವೆ. ಇವು ಉತ್ತಮವಾಗಿ ಕೆಲಸ ಮಾಡುತ್ತವೆ. ರಾಸಾಯನಿಕ ಕೀಟ ರೋಗ ನಿಯಂತ್ರಗಳೇ ಅಂತಿಮ ಅಲ್ಲ. ಗುಡ್ಡಕ್ಕೆ ಗುಡ್ಡ ಅಡ್ದ ಇದ್ದೇ ಇದೆ. ಸ್ವಲ್ಪ ಯೋಚನೆ  ಮಾಡಿದರೆ ಕೆಲವು ಸರಳ , ಸುರಕ್ಷಿತ ಉಪಾಯಗಳು ಗೊತ್ತಾಗುತ್ತವೆ. ಇದೇ ಸಿದ್ದಾಂತದಲ್ಲಿ, ಕೃಷಿ ಬೆಳೆಗಳ ಕೆಲವು ರೋಗ ಮತ್ತು ಕೀಟಗಳನ್ನು ನೈಸರ್ಗಿಕ ಉಪಾಯಗಳಿಂದಲೇ…

Read more
ಬೇರು ಹುಳ ಪೀಡಿತ ಅಡಿಕೆ ತೋಟ

ಬೇರು ಹುಳ ನಿಯಂತ್ರಣಕ್ಕೆ ಜೈವಿಕ ನಿಯಂತ್ರಕ –EPN.

ಜೈವಿಕವಾಗಿ ಕೆಲವು ಕೀಟಗಳನ್ನು ನಿಯಂತ್ರಿಸಲು ಸಾಧ್ಯ. ಅದರಲ್ಲಿ ಒಂದು EPN.  ಇದು ಬೇರು ಹುಳಗಳನ್ನೇ ಆಶ್ರಯಿಸಿ ಬದುಕಿ, ಅದನ್ನು ಕೊಲ್ಲುತ್ತದೆ. ಇದರ ಬಳಕೆ ಸುಲಭ. ಇದನ್ನು ರೈತರೇ ಉತ್ಪಾದಿಸುವ ತಂತ್ರಜ್ಝಾನವನ್ನು  CPCRI ಹೇಳಿಕೊಡುತ್ತದೆ. ಅಡಿಕೆ ತೆಂಗು, ಕಬ್ಬು ಬೆಳೆಗಾರರು ಬೇರು ಹುಳದ ಸಮಸ್ಯೆಗೆ ಯಾವುದು ಉತ್ತಮ ಪರಿಹಾರ ಎಂಬ ಹುಡುಕಾಟದಲ್ಲಿದ್ದಾರೆ. ಇತ್ತೀಚೆಗೆ ಈ ಹುಳ  ನಿಯಂತ್ರಣಕ್ಕೆ ಜೈವಿಕ ಪರಿಹಾರ ಉತ್ತಮವಾಗಿ ಕೆಲಸ ಮಾಡುತ್ತದೆ ಎಂದು ತಿಳಿಯಲಾಗಿದೆ. ಇದರಲ್ಲಿ ಒಮ್ದು ಎಂಟಮೋ ಪಥೋಜೆನಿಕ್ ನಮಟೋಡ್ (EPN) Entomopathogenic Nematodes ಇದನ್ನು ಬಳಸಿ…

Read more
Trichoderma Packet

ಟ್ರೈಕೋಡರ್ಮಾ ಬಳಸುವವರಿಗೆ ಉಪಯುಕ್ತ ಮಾಹಿತಿ.

ರೈತರು ತಮ್ಮ ಬೆಳೆಗಳಿಗೆ ಬರುವ ಶಿಲೀಂದ್ರ ರೋಗಗಳನ್ನು ಧೀರ್ಘಾವಧಿ ತನಕ  ನಿಯಂತ್ರಣಕ್ಕೆ ತರಲು ಟ್ರೈಕೋಡರ್ಮಾ ಬಳಸಬಹುದು.  ಇದು  ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸಂಶೋಧನಾ ಕೇಂದ್ರ, ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳಲ್ಲಿ ಲಭ್ಯ ಇರುತ್ತದೆ. ಇತ್ತಿಚೀನ ದಿನಗಳಲ್ಲಿ ಸಾವಯವ ಕೃಷಿಯಲ್ಲಿ ಜೈವಿಕ ಗೊಬ್ಬರ ಮತ್ತು ಶಿಲೀಂದ್ರ , ಕೀಟ ನಾಶಕಗಳ  ಬಳಕೆ ಹೆಚ್ಚುತ್ತಿದೆ. ಸಸ್ಯಗಳಲ್ಲಿ ಕಂಡು ಬರುವರೋಗದ ಹತೋಟಿಯನ್ನು ರಾಸಾಯನಿಕ ಶಿಲೀಂಧ್ರನಾಶಕಗಳಿಂದ ಮಾಡುವುದು ಒಂದು. ಆದರೆ ಅದರಲ್ಲಿ  ರಾಸಾಯನಿಕ ಶೇಷ ವಸ್ತುಗಳು ಮಣ್ಣಿನಲ್ಲಿ ಹಾಗೂ ಸಸ್ಯ ಭಾಗಗಳಲ್ಲಿ…

Read more
Healthy pepper vine

“ಟ್ರೈಕೋಡರ್ಮಾ’ ರೋಗ ನಿರೋಧಕ ಶಕ್ತಿಗೆ ಸಂಜೀವಿನಿ

ಟ್ರೈಕೋಡರ್ಮಾ ಅಥವಾ ಇನ್ಯಾವುದೇ ಜೀವಾಣುಗಳನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಜೈವಿಕ ಗುಣಧರ್ಮ ಬದಲಾಗುತ್ತದೆ. ಎಲ್ಲಾ ಜೀವಾಣುಗಳೂ ಮಣ್ಣು ಮೂಲದವುಗಳೇ ಆಗಿದ್ದು, ಅವುಗಳನ್ನು ಸಂಸ್ಲೇಶಿಸಿ ಕೃತಕವಾಗಿ ಬೆಳೆಸಿ ಸೂಕ್ತ ಮಾದ್ಯಮದಲ್ಲಿ ಸೇರಿಸಿ ರೈತರಿಗೆ ಬೇರೆ ಬೇರೆ ಬೆಳೆಗೆ ಬಳಕೆ ಮಾಡಲು ಕೊಡಲಾಗುತ್ತದೆ. ಇದು ಸಸ್ಯಗಳಿಗೆ  ರೋಗ ನಿರೋಧಕ ಶಕ್ತಿಯನ್ನು ಕೊಡಬಲ್ಲ ಮತ್ತು ರೋಗಕಾರಕ ಸೂಕ್ಷ್ಮಾಣು ಜೀವಿಗಳ ಜೊತೆಗೆ ಬದುಕಿ ಅದನ್ನು ನಿಶ್ಕ್ರಿಯಗೊಳಿಸುವ ಶಕ್ತಿಯನ್ನು ಹೊಂದಿದೆ. ಟ್ರೈಕೋಡರ್ಮಾ  ಎಂಬ ಶಿಲೀಂದ್ರವನ್ನು ಬಹಳ ಹಿಂದೆಯೇ ಸೂಕ್ಷ್ಮಾಣು ಜೀವಿ ಶಾಸ್ತ್ರಜ್ಞರು (1974)ಮಣ್ಣಿನಲ್ಲಿರುವುದನ್ನು ಗುರುತಿಸಿದ್ದಾರೆ….

Read more

ಬಯೋ NPK ಒಂದೇ ಸಾಕು? ಇದೆಷ್ಟು ನಿಜ.

ಬಹುತೇಕ  ರೈತರ ಬಳಿಗೆ ಕೆಲವು ನೆಟ್ ವರ್ಕ್ ಸಂಘಟನೆಗಳು, ಹಾಗೆಯೇ ಕೆಲವು ಸಾವಯವ ಗೊಬ್ಬರ ಪ್ರಚಾರಕರು ಒಂದೆರಡೂ ಬಾಟಲಿಗಳನ್ನು ಅಥವಾ ಪ್ಯಾಕೆಟುಗಳನ್ನು  ಪರಿಚಯಿಸಿ ಈ ಪ್ಯಾಕೇಟ್/ಬಾಟಲಿಯ ದ್ರಾವಣ ಹಾಕಿದರೆ ಬೇರೆ ಗೊಬ್ಬರ ಬೇಕಾಗಿಲ್ಲ. ಭಾರೀ ಫಸಲು ಎಂದು  ಹೇಳುತ್ತಾರೆ. ಇದು ಬಯೋ( ಜೈವಿಕ) ಗೊಬ್ಬರ ಎಂಬುದಾಗಿಯೂ ಹೇಳುತ್ತಾರೆ. ಅಧಿಕ ಇಳುವರಿಯ ಆಶೆಯಲ್ಲಿ ಜನ ಖರೀದಿಸಿ ಬಳಸುತ್ತಾರೆ. ಇಂತಹ ಜೈವಿಕ ಗೊಬ್ಬರಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ಬಯೋ NPK ಗೊಬ್ಬರ ಎಂದರೆ ಜೈವಿಕವಾಗಿ ಸಾರಜನಕ , ರಂಜಕ…

Read more
ರಾಸಾಯನಿಕ ಮುಕ್ತ ಕೀಟ ನಿಯಂತ್ರಣ

ರಾಸಾಯನಿಕ ಮುಕ್ತ ಕೀಟ-ರೋಗ ನಿಯಂತ್ರಿಸುವ ವಿಧಾನಗಳು.

ಗುಡ್ಡಕ್ಕೆ ಗುಡ್ಡ ಅಡ್ದ ಇದ್ದೇ ಇದೆ. ಸ್ವಲ್ಪ ಯೋಚನೆ  ಮಾಡಿದರೆ ಕೆಲವು ಸರಳ, ಸುರಕ್ಷಿತ ಬೆಳೆ ಸಂರಕ್ಷಣಾ ವಿಧಾನಗಳು  ಗೊತ್ತಾಗುತ್ತವೆ. ಇದೇ ಸಿದ್ದಾಂತದಲ್ಲಿ, ಕೃಷಿ ಬೆಳೆಗಳ ಕೆಲವು ರೋಗ ಮತ್ತು ಕೀಟಗಳನ್ನು ನೈಸರ್ಗಿಕವಾಗಿ  ರಾಸಾಯನಿಕ  ಬಳಕೆ ಇಲ್ಲದೆ ನಿಯಂತ್ರಿಸಬಹುದು ಎಂದು ಕಂಡುಕೊಳ್ಳಲಾಗಿದೆ. ಇದನ್ನು ಜೈವಿಕ ಕೀಟ- ರೋಗ ನಿಯಂತ್ರಣ ಎನ್ನುತ್ತಾರೆ. ಇದು  ಯಾರಿಗೂ ಯಾವ ರೀತಿಯಲ್ಲೂ ಅಪಾಯ ಇಲ್ಲದ ಜೀವಾಣುಗಳಾಗಿದ್ದು, ಎಲ್ಲದರ ಮೂಲ ಮಣ್ಣೇ ಆಗಿರುತ್ತದೆ. ಒಂದು ತೋಟದಲ್ಲಿ ಎಲ್ಲದಕ್ಕೂ ರೋಗ ಅಥವಾ ಕೀಟ ಸಮಸ್ಯೆ ಉಂಟಾಗಿ,ಕೆಲವು…

Read more
ಜೈವಿಕ ಗೊಬ್ಬರ ಸಿಂಪರಣೆ

ಜೈವಿಕ ಗೊಬ್ಬರಗಳ ಮಾರಾಟ ಮತ್ತು ನಂಬಿಕಾರ್ಹತೆ.

ಇತ್ತೀಚಿನ ಕೆಲವು ವರ್ಷಗಳಿಂದ ಜೈವಿಕ ಉತ್ಪನ್ನಗಳ  ತಯಾರಿಕೆ ಮತ್ತು ಮಾರಾಟ ಹೆಚ್ಚಾಗುತ್ತಿದೆ. ಈ ಜೈವಿಕ ಉತ್ಪನ್ನಗಳು ಒಳ್ಳೆಯ  ಉತ್ಪನ್ನಗಳಾದರೂ ನಾಯಿಕೊಡೆಗಳಂತೆ ತಯಾರಕರು ಹುಟ್ಟಿಕೊಳ್ಳುತ್ತಿದ್ದಾರೆ.ಜೊತೆಗೆ ದರ ಸ್ಪರ್ಧೆ ಇರುವಾಗ ಗ್ರಾಹಕರಿಗೆ ಇದು ಒಂದು ಗೊಂದಲದ ಗೂಡಾಗಿದೆ. ಯಾವುದು ಉತ್ತಮ, ಯಾವುದು ಕಳಪೆ ಎಂದು ಅರಿಯುವುದಕ್ಕೆ ಅಸಾಧ್ಯವಾದ ಈ ಉತ್ಪನ್ನಗಳಲ್ಲಿ ಹೇಗಾದರೂ ನಂಬಿಕೆ ಇಡುವುದು ತಿಳಿಯದಾಗಿದೆ.   ಜೈವಿಕ ಗೊಬ್ಬರ ಅಥವಾ ಜೀವಾಣುಗಳು ಎಂದರೆ ಅದು ಕಣ್ಣಿಗೆ ಕಾಣದ ಜೀವಿಗಳು.ಇದರಲ್ಲಿ ಕೆಲವು ಪೋಷಕ ಒದಗಿಸುವಂತವುಗಳು ಮತ್ತೆ ಕೆಲವು ಕೀಟ  ರೋಗ…

Read more
error: Content is protected !!