ಸಾಂಬಾರ ಬೆಳೆಗಳ ಸಂಶೊಧನಾ ಸಂಸ್ಥೆ ಅಪ್ಪಂಗಳ ಮಡಿಕೇರಿ

ನೀವು ಸಾಂಬಾರ ಬೆಳೆಗಾರರೇ? ಇಲ್ಲಿಗೆ ಒಮ್ಮೆ ಭೇಟಿ ಕೊಡಬಹುದು.

ಸಾಂಬಾರ ಬೆಳೆಗಳಾದ ಏಲಕ್ಕಿ, ಕರಿಮೆಣಸು ಅರಶಿನ, ಶುಂಠಿ ಮುಂತಾದ ಬೆಳೆ ಬೆಳೆಯುವ ರೈತರು ವೈಜ್ಞಾನಿಕ ಬೆಳೆ ಮಾಹಿತಿ, ತಳಿ ಮಾಹಿತಿ ಬಯಸುವುದೇ ಆದರೆ ಕರ್ನಾಟಕದ ಮಡಿಕೇರಿಯಲ್ಲಿರುವ ಪ್ರಾದೇಶಿಕ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಗೆ ಒಮ್ಮೆ ಭೇಟಿ ಕೊಡಿ. ಇಲ್ಲಿ ನಿಮಗೆ  ಬೇಕಾದ ಮಾಹಿತಿಗಳು ಲಭ್ಯವಿದೆ. ಮಡಿಕೇರಿಯ ಅಪ್ಪಂಗಳದ ಏಲಕ್ಕಿ ಸಂಶೋಧನಾ ಕೇಂದ್ರವನ್ನು 1961 ರಲ್ಲಿ ಮೈಸೂರು ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾಯಿತು. ಕೇಂದ್ರದ ಆಡಳಿತಾತ್ಮಕ ನಿಯಂತ್ರಣವನ್ನು 1976 ರಲ್ಲಿ ಕಾಸರಗೋಡ್‍ನ ಕೇಂದ್ರ ತೋಟ ಬೆಳೆಗಳ ಸಂಶೋಧನಾ ಸಂಸ್ಥೆಗೆ ಹಸ್ತಾಂತರಿಸಲಾಯಿತು….

Read more
ಅಡಿಕೆ ತೋಟದಲ್ಲಿ ಏಲಕ್ಕಿ

ಅಡಿಕೆ ತೋಟದಲ್ಲಿ ಏಲಕ್ಕಿ ಬೆಳೆದರೆ ಲಾಭವಿದೆ.

ಸಾಂಬಾರ ಪದಾರ್ಥಗಳಲ್ಲಿ ರಾಣಿಯ ಸ್ಥಾನವನ್ನು ಅಲಂಕರಿಸಿದ ಬೆಳೆ ಅಂದರೆ ಏಲಕ್ಕಿ. ಅಂತರ ರಾಷ್ಟ್ರೀಯ  ಮಾರುಕಟ್ಟೆ ಜೊತೆಗೆ ದೇಶೀಯ ಮಾರುಕಟ್ಟೆ ಎರಡರಲ್ಲೂ ಯಾವಾಗಲೂ ಬೇಡಿಕೆ ಪಡೆದ ಬೆಳೆ. ಇದು ಮಲೆನಾಡು, ಅರೆಮಲೆನಾಡಿನ ಅಡಿಕೆ ತೋಟಗಳಲ್ಲಿ ಚೆನ್ನಾಗಿ ಬೆಳೆಯಬಲ್ಲುದು. ಅಡಿಯಷ್ಟೇ ಆದಾಯವನ್ನೂ ಕೊಡಬಲ್ಲುದು. ವಿಶಿಷ್ಟ ವಾತಾವರಣ ಬೆಳೆ: ಪಶ್ಛಿಮ ಘಟ್ಟದ ದಕ್ಷಿಣ ಭಾಗದ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಪರಿಮಳದ ಕಾಳನ್ನು ಬಿಡುತ್ತಿದ್ದ  ಸಸ್ಯವಾಗಿದ್ದ ಈ ಏಲಕ್ಕಿ, ಈಗ ರೈತರ ಹೊಲದಲ್ಲಿ  ಬೆಳೆಸಲ್ಪಡುತ್ತಿದೆ. ವನಿಲ್ಲಾ ಎಂಬ ಸಾಂಬಾರ ಪದಾರ್ಥದ ನಂತರ ಇದಕ್ಕೇ…

Read more
Ginger yield

ಶುಂಠಿ – ಗಡ್ಡೆ ತೂಕ ಬರಲು ಸೂಕ್ತ ಬೇಸಾಯ ವಿಧಾನ.

ಶುಂಠಿಯ ಸಸ್ಯ ಬೆಳೆವಣಿಗೆಯ ಮೇಲೆ ಗಡ್ಡೆ ಬೆಳೆವಣಿಗೆ ಇರುತ್ತದೆ. ಎಳವೆಯಲ್ಲಿ ಸಸ್ಯ ಚೆನ್ನಾಗಿ ಬೆಳೆದರೆ ಗಡ್ಡೆ ದೊಡ್ಡದಾಗುತ್ತದೆ. ಇದು ಸಸ್ಯದ ಮೊಳಕೆಗಳ ಮೇಲೆ ಅವಲಂಭಿತವಾಗಿದೆ. ಹೆಚ್ಚು ಮೊಳಕೆಗಳು ಆರೋಗ್ಯಕರ ಸಸ್ಯಗಳಿದ್ದಾಗ ಗಡ್ಡೆ ದೊಡ್ಡದಾಗಲೇ ಬೇಕು. ಬರೇ ಸಸ್ಯ ಬೆಳೆವಣಿಗೆ ಮಾತ್ರವಲ್ಲ ಸಮತೋಲನದ ಬೆಳೆವಣಿಗೆ ಎಂಬುದು ಎಲ್ಲಕ್ಕಿಂತ ಮುಖ್ಯ. ಕೆಲವು ಮನುಷ್ಯ ಸುಮಾರು 40-45 ವರ್ಷದ ತನಕ ಕಡಿಮೆ ತೂಕದವರಾಗಿರುತ್ತಾರೆ. ನಂತರದ ವರ್ಷಗಳಲ್ಲಿ ಶರೀರದಲ್ಲಿ ಮಾಂಸ ಹೆಚ್ಚಾಗದಿದ್ದರೂ ತೂಕ ಹೆಚ್ಚಾಗುತ್ತಾರೆ. ಕಾರಣ ಅವರ ಎಲುಬುಗಳ ತೂಕ ಹೆಚ್ಚಾಗಿರುತ್ತದೆ. ಹಾಗೆಯೇ…

Read more
ರೋಗ ಸೋಂಕು ರಹಿತ ಬಳ್ಳಿ

ಕರಿಮೆಣಸು – ಯಾವ ಬಳ್ಳಿ ಸಾಯುತ್ತದೆ- ಯಾವುದನ್ನು ಉಳಿಸಬಹುದು?

ಮಳೆಗಾಲ ಮೆಣಸಿನ ಬಳ್ಳಿಗೆ ತೀವ್ರವಾದ ತೊಂದರೆಯನ್ನು ಉಂಟು ಮಾಡುತ್ತದೆ. ಮಳೆಗಾಲ ಪ್ರಾರಂಭವಾದಾಗಿನಿಂದ ಮುಗಿಯುವ ತನಕ ಯಾವಾಗಲೂ ಬರಬಹುದಾದ ಬಳ್ಳಿ ಕೊಳೆ ರೋಗವನ್ನು (Phytophthora foot rot) ಪ್ರಾರಂಭಿಕ ಹಂತದಲ್ಲಿ ಗುರುತಿಸಿದರೆ ಬಳ್ಳಿಯನ್ನು ಬದುಕಿಸಬಹುದು. ರೋಗ  ಪ್ರಾರಂಭವಾಗುವಾಗ ಬಳ್ಳಿ ಯಾವ ಲಕ್ಷಣಗಳನ್ನು ತೋರಿಸುತ್ತದೆ ಎಂಬುದನ್ನು ನಮಗೆ ಗುರುತಿಸಲು ಸಾಧ್ಯವಿದ್ದರೆ ಮಾತ್ರ ನಿವಾರಣೆ ಮಾಡಲು ಸಾಧ್ಯ. ಬುಡ ಭಾಗದಲ್ಲಿ ಎಲೆ ಉದುರಿದೆಯೇ: ಆದಾರ ಮರಕ್ಕೆ ಹಬ್ಬಿದ ಬಳ್ಳಿಯ ಎಲೆಗಳಲ್ಲಿ ಮೊದಲ ಲಕ್ಷಣ ಕಂಡು ಬರುತ್ತದೆ. ರೋಗವು ಮೊದಲಾಗಿ ಬಳ್ಳಿಯ ಬೇರಿಗೆ…

Read more
ಸೂಕ್ತವಾದ ನಾಟಿ ವಿಧಾನ

ಕರಿಮೆಣಸು ಬಳ್ಳಿ/ಸಸಿ ಹೇಗೆ ನೆಡಬೇಕು?

ಕರಿಮೆಣಸು ಬೆಳೆಸಲು ಕೆಲವರು ಬಳ್ಳಿ ತುಂಡುಗಳನ್ನು ನಾಟಿ ಮಾಡುತ್ತಾರೆ. ಮತ್ತೆ ಕೆಲವರು ಪ್ಯಾಕೆಟ್  ಸಸಿ ನಾಟಿ ಮಾಡುತ್ತಾರೆ. ಎರಡೂ ಉತ್ತಮ. ಬಳ್ಳಿ ನಾಟಿ ಮಾಡುವವರಿಗೆ ಮುಂಗಾರು ಮಳೆ ಪ್ರಾರಂಭವಾಗುವ ಈ ಸಮಯ ಉತ್ತಮ. ಸಸಿ ನಾಟಿಯನ್ನು  ಯಾವಾಗಲೂ ಮಾಡಬಹುದು. ಬಳ್ಳಿ ತುಂಡುಗಳನ್ನು ನಾಟಿ ಮಾಡಿದರೆ ಅದು  ಮಣ್ಣಿನಲ್ಲಿ ಬೇರು ಬಿಡುವ ತನಕ ಒಣಗದೆ ಇರಬೇಕು. ಹಾಗಾಗಬೇಕಾದರೆ ಬಿಸಿಲು ಇರಬಾರದು. ಹೆಚ್ಚು ಮಳೆಯೂ ಇರಬಾರದು.  ಅದಕ್ಕೇ ಈ ಸಮಯ ಸೂಕ್ತ. ಈಗ ನೆಟ್ಟರೆ ಅನುಕೂಲ ಏನು? ಹಿತಮಿತವಾದ ಮಳೆ…

Read more
Pepper

ಕರಿಮೆಣಸು ಬಳ್ಳಿಗೆ ರೋಗ ಬಾರದಂತೆ ರಕ್ಷಣೆ ಹೀಗೆ.

ಮಳೆಗಾಲ ಬಂದರೆ ಸಾಕು ಕರಿಮೆಣಸಿನ ಬೆಳೆಗೆ ಯಾವಾಗ ರೋಗ ಬರುತ್ತದೆ ಎಂಬುದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ.ಇದು ಕರಿಮೆಣಸು ಮಾತ್ರವಲ್ಲ ತೀರಾ ಸಪುರ ( ತೆಲೆಕೂದಲು ತರಹದ ) ಬೇರುಗಳಿರುವ ಎಲ್ಲಾ ಬೆಳೆಗಳೂ ಮಳೆಗಾಲ ಅಥವಾ ನೀರು ಹೆಚ್ಚಾಗಿ ಬೇರಿಗೆ ಉಸಿರು ಕಟ್ಟಿದ ತರಹದ  ಸನ್ನಿವೇಶ ಬಂದಾಗ ರೋಗಕ್ಕೆ  ತುತ್ತಾಗುತ್ತದೆ. ಕೆಲವು ಕಡೆ ರೋಗ ಹೆಚ್ಚು, ಇನ್ನು ಕೆಲವು ಕಡೆ ಕಡಿಮೆ. ಇದಕ್ಕೆ ಕಾರಣ ಅವರ ನಿರ್ವಹಣೆ. ಕರಿಮೆಣಸಿನ ಬಳ್ಳಿಯ ಬುಡ ಭಾಗದಲ್ಲಿ ಸುಮಾರು 20 ನಿಮಿಷಗಳ ಕಾಲ…

Read more

ಕರಿಮೆಣಸಿನ ಫಸಲಿಗೆ ವಾತಾವರಣದ ಅನುಕೂಲ ಅಗತ್ಯ.

ಮುಂಗಾರು ಮಳೆ ಪ್ರಾರಂಭದಲ್ಲಿ ಕರಿ ಮೆಣಸು ಹೂವು ಕರೆ ಬಿಡುವ ಸಮಯ. ಮೊದಲ ಮಳೆ ಸಿಂಚನವಾದ ಕೂಡಲೇ ಬಳ್ಳಿ ಚಿಗುರಲು ಪ್ರಾರಂಭವಾಗುತ್ತದೆ. ಕೆಲವು ಸ್ವಲ್ಪತಡವಾಗುತ್ತದೆ. ಮತ್ತೆ ಕೆಲವು ಮೇ ತಿಂಗಳ ಕೊನೆಗೇ ಹೂವು ಕರೆ  ಬಿಡಲು ಪ್ರಾರಂಭವಾಗುತ್ತದೆ. ಇದು ಬಳ್ಳಿಯ ಆರೋಗ್ಯ ಮತ್ತು  ತಳಿಯ ಮೇಲೆ  ಅವಲಂಭಿತವಾಗಿದೆ. ತಂಪು ವಾತಾವರಣ ಬೇಕು: ಕರಿಮೆಣಸಿನಲ್ಲಿ ಹೂವು ಕರೆ ಬಿಡುವಾಗ ತಂಪು ವಾತಾವರಣ  ಇರಬೇಕು. ಹಾಗಿದ್ದಾಗ ಅದು ಫಲಿತಗೊಂಡು  ಕಾಳುಗಳಾಗುತ್ತದೆ. ಒಂದು ವೇಳೆ ಬಿಸಿ ವಾತಾವರಣ ಇದ್ದರೆ ಕರೆಗಳು ಅರ್ಧಂಬರ್ಧ…

Read more
ಶುಂಠಿ ಕೊಳೆ ರೋಗಕ್ಕೆ ಪರಿಹಾರ

ಶುಂಠಿ ಕೊಳೆ ರೋಗಕ್ಕೆ ಒಂದೇ ಪರಿಹಾರ.

ಶುಂಠಿಯ ಗಿಡ ಹಳದಿಯಾಗಿ ಕೊಳೆಯುವ Rhizome rot / Soft rot ರೋಗಕ್ಕೆ Pythium aphanidermatum ಶಿಲೀಂದ್ರ,  ಕಾರಣ. ಶುಂಠಿ ಬೆಳೆಯಲ್ಲಿ ಇದರಿಂದಾಗಿ 80-90 % ತನಕ ಬೆಳೆ ನಷ್ಟವಾಗುತ್ತದೆ.  ಇದನ್ನು ಬೇರೆ ಬೇರೆ ವಿಧಾನದಲ್ಲಿ ಟ್ರಯಲ್ ಎಂಡ್ ಎರರ್ ಮಾದರಿಯಲ್ಲಿ ನಿಯಂತ್ರಿಸುವ ಪ್ರಯತ್ನ ಮಾಡಿ ಸಮಾಧಾನ ಮಾಡಿಕೊಳ್ಳುತ್ತಾರೆ. ಇದು ಬಂದ ನಂತರ ನಿಯಂತ್ರಣ ಅಷ್ಟಕ್ಕಷ್ಟೇ. ಮೊದಲೇ ನಿಯಂತ್ರಣ ಮಾಡಿದರೆ ಪರಿಣಾಮಕಾರಿ. ಶುಂಠಿ ರೋಗ ಹೇಗೆ ಬರುತ್ತದೆ:   ಬಿತ್ತನೆ ಗಡ್ಡೆಗಳ ಮೂಲಕ ಈ ರೋಗಕಾರಕ ಶಿಲೀಂದ್ರದ ಪ್ರವೇಶವಾಗುತ್ತದೆ. ಗಡ್ಡೆಗಳಲ್ಲಿ…

Read more
Nut meg mace

ಅಡಿಕೆ ತೋಟಕ್ಕೆ ಅತ್ಯುತ್ತಮ ಮಿಶ್ರ ಬೆಳೆ ಜಾಯೀಕಾಯಿ.

ಅಡಿಕೆ ತೋಟದಲ್ಲಿ ವಾರ್ಷಿಕ ಮಿಶ್ರ ಬೆಳೆಗಳಿಗಿಂತ  ಬಹುವಾರ್ಷಿಕ ಮಿಶ್ರ ಬೆಳೆಗಳಿದ್ದರೆ ತಲೆಬಿಸಿ ಇಲ್ಲ. ಮರ ಸಾಂಬಾರವಾದ ಜಾಯೀಫಲ ಎಂಬುದು  ಅಡಿಕೆ ಮರಗಳ ಜೊತೆಗೆ ಯಾವುದೇ ಸ್ಪರ್ಧೆ ನಡೆಸದೆ, ಒಂದೆಡೆ ಆದಾಯ ಮತ್ತೊಂದೆಡೆ ಗಾಳಿ ಮತ್ತು ಬಿಸಿಲು ತಡೆಗೆ ಸಹಕರಿಸುವ  ಧೀರ್ಘಾವಧಿಯ ಬೆಳೆ. ಅಡಿಕೆ ತೋಟಕ್ಕೆ ಹೊಂದುವ ಮಿಶ್ರ ಬೆಳೆಗಳಲ್ಲಿ ಕರಿಮೆಣಸು, ಕೊಕ್ಕೋ ಬಹುವಾರ್ಷಿಕ ಮಿಶ್ರ ಬೆಳೆಗಳು. ಆದರೆ ಅವುಗಳ ರಕ್ಷಣೆ, ನಿರ್ವಹಣೆಯ ತೆಲೆಬಿಸಿ ದೊಡ್ಡದು. ಮರ ಸಾಂಬಾರವಾದ  ಜಾಯೀ ಫಲಕ್ಕೆ ಇದೆಲ್ಲಾ ಯಾವುದೂ ಇಲ್ಲ. ನೆಟ್ಟರೆ ಬೆಳೆಯುತ್ತಿರುತ್ತದೆ….

Read more
ಶುಂಠಿ ಹೊಲ

ಶುಂಠಿ ಬೆಳೆಯ ಪ್ರಮುಖ ಕೀಟ ಮತ್ತು ನಿಯಂತ್ರಣ

ಶುಂಠಿ ಬೆಳೆಯನ್ನು ತುಂಬಾ ನಿಗಾ ವಹಿಸಿ ಬೆಳೆದರೆ ಮಾತ್ರ ಅದು ಕೈ ಹಿಡಿಯುತ್ತದೆ. ನಾಟಿಯಿಂದ ಬೆಳೆವಣಿಗೆ ತನಕ ಪ್ರತೀ ಹಂತದಲ್ಲೂ ತೀವ್ರ ನಿಗಾ ಬೇಕು. ಅಷ್ಟೇ ಗಮನವೂ ಬೇಕು. ಶುಂಠಿಯಲ್ಲಿ ಸಸಿ ಹಂತದಲ್ಲಿ ನಿತ್ಯ ಗಮನಿಸಬೇಕಾದುದು ಅದರ ಕೀಟ ಹಾವಳಿ.ಶುಂಠಿಗೆ ಕಾಂಡ  ಕೊರಕ ಹುಳಿವಿನ ತೊಂಡರೆ ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲೂ ಕಂಡು ಬರುವ ಸಮಸ್ಯೆ. ಕಾಂಡ ಕೊರಕ ಹುಳು ಹೆಚ್ಚಾದರೆ ಬೆಳೆ ಗಣನೀಯವಾಗಿ ನಷ್ಟವಾಗುತ್ತದೆ. ಇದನ್ನು ನಿತ್ಯ ಗಮನಿಸಿ  ನಿರ್ವಹಣೆ ಮಾಡಬೇಕು. ಯಾವಾಗ ಹೆಚ್ಚು: ಕಾಂಡ ಕೊರಕ…

Read more
error: Content is protected !!