ರೂ. 615 ದಾಟಿದ ಕರಿಮೆಣಸು ಧಾರಣೆ- ಶಿರಸಿಯ ದಾಖಲೆ.
ಕರಿಮೆಣಸು ಧಾರಣೆ ಕಳೆದ ಕೆಲವು ವರ್ಷಗಳಿಂದ ನೆಲಕಚ್ಚಿತ್ತು. ಅಡಿಕೆಯ ಮಿಶ್ರ ಬೆಳೆಯಾಗಿದ್ದರೂ ಸಹ ಅಡಿಕೆಗಿಂತ ಕಡಿಮೆ ದರದಲ್ಲಿ ಇತ್ತು. ಈ ವರ್ಷ ಅಕ್ಟೋಬರ್ ತಿಂಗಳು ಇದಕ್ಕೆ ಅಂಟಿದ ಗ್ರಹಣ ಬಿಡುಗಡೆಯಾದಂತಾಗಿದೆ. ಮೆಣಸಿನ ಬೆಲೆ ಬಹುಷಃ ಮುಂದಿನ ವರ್ಷಕ್ಕೆ 800 ಆದರೂ ಅಚ್ಚರಿ ಇಲ್ಲ ಎಂಬ ವರದಿಗಳಿವೆ. ದಿನಾಂಕ 24-11-2021 ರ ಬುಧವಾರ ಶಿರಸಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕರಿಮೆಣಸಿನ ಬೆಲೆ 615.99 ಗರಿಷ್ಟ ದರ ದಾಖಲಾಗಿದೆ.ಉಳಿದೆಡೆ ಏರಿಕೆ ಆಗಿಲ್ಲ. ಪ್ರಪಂಚದ ಎಲ್ಲಾ ಮೆಣಸು ಬೆಳೆಯುವ ದೇಶಗಳಲ್ಲೂ ಉತ್ಪಾದನೆ…