ಅಡಿಕೆ ಮರಕ್ಕೆ ನೀರು ಎಷ್ಟು ಬೇಕು? ಹೆಚ್ಚು ಕೊಟ್ಟರೆ ಏನಾಗುತ್ತದೆ?
ಅಡಿಕೆ ಮರಕ್ಕೆ ನೀರು ಹೆಚ್ಚು ಬೇಕು ಎನ್ನುತ್ತಾರೆ ಅದು ತಪ್ಪು. ಹೆಚ್ಚು ನೀರು ಕೊಟ್ಟರೆ ಬೆಳೆ ಕಡಿಮೆ. ಯಾವುದೇ ಸಸ್ಯವಿರಲಿ ಅದಕ್ಕೆ ನೀರು ಬೇಡ. ಮಣ್ಣು ಹಸಿಯಾಗಿದ್ದರೆ ಸಾಕು. ಆಗ ಮರದ ಆರೋಗ್ಯ ಹಾಕಿದ ಗೊಬ್ಬರ ಎಲ್ಲವೂ ಸಮರ್ಪಕವಾಗಿ ಲಭ್ಯವಾಗುತ್ತದೆ. ಅಡಿಕೆ ಬೆಳೆಗಾರರು ಹೆಚ್ಚಾಗಿ ತೋಟಕ್ಕೆ ಸ್ಪ್ರಿಂಕ್ಲರ್ ನೀರಾವರಿ ಮಾಡುತ್ತಾರೆ. ಮಳೆಗಾಲದ ತರಹವೇ ಅಥವಾ ಅದಕ್ಕಿಂತ ಹೆಚ್ಚಾಗಿ ನೆಲವನ್ನು ತೇವವಾಗಿ ಇಡುತ್ತಾರೆ. ಇದರಿಂದಾಗಿ ರೋಗ ರುಜಿನಗಳು ಹೆಚ್ಚಾಗುತ್ತದೆ. ಸುಳಿ ಕೊಳೆ, ಕಾಯಿ ಕೊಳೆ, ಮಿಡಿ ಉದುರುವುದೂ ಆಗುತ್ತದೆ….