ವಿಜ್ಜಾನ ಕೆಲವೊಂದು ಆಚರಣೆಗಳಿಗೆ ಬೆಲೆ ಕೊಡುವುದಿಲ್ಲ. ವೈದ್ಯಕೀಯದಲ್ಲಿ ಅಗೋಚರ ಶಕ್ತಿಗೆ ಬೆಲೆ ಇಲ್ಲ. ಆದರೆ, ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯರು ಕೊನೆಗೆ ಎಲ್ಲಾ ಭಾರವನ್ನೂ ದೇವರ ಮೇಲೆಯೇ ಹಾಕಿಕೊಳ್ಳಿ ಎಂದು ನಮ್ಮನ್ನು ಸಂತೈಸುತ್ತಾರೆ. ಹೀಗಿರುವಾಗ ನಂಬುವಂತದ್ದಲ್ಲ ಎಂದು ಯವುದನ್ನೂ ಬದಿಗಿಡುವಂತಿಲ್ಲ. ಫಲ ಕೊಡಲಿ, ಕೊಡದಿರಲಿ ನಂಬಿಕೆ ಇಟ್ಟರೆ ನಷ್ಟ ಏನೂ ಇಲ್ಲ.
ಸಾಂಪ್ರದಾಯಿಕ ಬೆಳೆ ರಕ್ಷಣೆ:
- ರೈತರು ತಾವು ಬೆಳೆಯುವ ಬೆಳೆಯನ್ನು ರಕ್ಷಿಸಿಕೊಳ್ಳಲು ಕೆಲವು ಸಾಂಪ್ರದಾಯಿಕ ವಿಧಾನಗಳನ್ನು ಬಹಳ ಹಿಂದಿನಿಂದಲೂ ಅನುಸರಿಸುತ್ತಾ ಬಂದಿದ್ದಾರೆ.
- ಇದನ್ನು ಜನಪದ ಆಚರಣೆ ಎಂದು ಹೆಸರಿಸಲಾಗಿದೆ. ಇಂತದ್ದರಲ್ಲಿ ಹಲವು ಇವೆ.
- ಭತ್ತದ ಗದ್ದೆಯ ಮೂಲೆಯಲ್ಲಿ ದೈವವನ್ನು ನಂಬುವುದು. ಪವಿತ್ರ ಗದ್ದೆ ಎಂದು ಘೋಷಿಸುವುದು.
- ಭತ್ತದ ಹೊಲದ ಮಧ್ಯೆ ವಿಶಿಷ್ಟ ರೀತಿಯಲ್ಲಿ ಹೂ ಕರೆ ಹಾಕುವುದು.
- ಹಳೆಯ ವಸ್ತುಗಳಾದ ಚಪ್ಪಲಿ, ಬಟ್ಟೆ ಬರೆ ಪಾತ್ರೆ ಪಗಡೆಗಳನ್ನು ನೇತು ಹಾಕುವುದು.
- ಸತ್ತ ಪ್ರಾಣಿ ಪಕ್ಷಿಗಳ ಚರ್ಮ ಎಲುಬುಗಳನ್ನು ಇಡುವುದು
- ಕನ್ನಡಿ ಇಡುವುದು, ಹಾಳಾದ ದೇವರ ಫೊಟೋ ಇಡುವುದು.
- ವಿಚಿತ್ರ ಆಕಾರದಲ್ಲಿ ಯಾವುದಾದರೂ ರಚನೆಯನ್ನು ಮಾಡಿ ಸ್ಥಾಪಿಸುವುದು.
- ಕಣ್ಣಿಗೆ ಹೊಡೆಯುವ ಬಣ್ಣದ ಬಟ್ಟೆ ಬರೆ ( ಸೀರೆ)ಯನ್ನು ಪತಾಕೆಯಂತೆ ಕಟ್ಟುವುದು.
- ಇವನ್ನೆಲ್ಲಾ ಮಾಡುತ್ತಿದ್ದುದು ದೃಷ್ಟಿ ದೋಷ ನಿವಾರಣೆಗೆ ಎನ್ನುತ್ತಾರೆ.
ಆಧುನಿಕ ವಿಜ್ಞಾನ ಈ ದೃಷಿ ದೋಷವನ್ನು ಒಪ್ಪುವುದಿಲ್ಲ. ಆದರೆ ವಾಸ್ತವಿಕತೆ ಬೇರೆಯೇ ಇದೆ. ಇಂದಿಗೂ ನಮ್ಮಲ್ಲಿ ಕೆಲವು ದೃಷ್ಟಿ ಹಾಕುವವರು ಇದ್ದೇ ಇದ್ದಾರೆ.
- ಕೃಷಿಕರಾದ ನಮಗೆಲ್ಲಾ ಇದರ ಅನುಭವ ಆಗಿದ್ದಿರಬಹುದು.
- ಕ್ಷಣ ಹಿಂದೆ ಕಂಡಾಗ ಸಸಿ ಇದ್ದ ಸಸಿ, ಯಾರೋ ಒಬ್ಬ ದಿಟ್ಟಿಸಿ ನೋಡಿದ ತಕ್ಷಣ ಅದು ಬಾಡಿ ಒಣಗುತ್ತದೆ ಎಂದಾದರೆ ಯಾವುದೋ ಒಂದು ಶಕ್ತಿ ಇದೆ ಎಂದೇ ಅರ್ಥ.
ಈ ವಿಚಾರವನ್ನು ಎಷ್ಟೇ ಆಧುನಿಕತೆ ಬಂದರೂ ಬಿಡಲಿಕ್ಕೆ ಆಗುವುದಿಲ್ಲ. ಎಷ್ಟೇ ದೊಡ್ದ ಇಂಜಿನಿಯರ್ ಆಗಿರಲಿ ತಾನು ಕಟ್ಟಡ ಕಟ್ಟುವಾಗ ಒಂದು ವಿಶಿಷ್ಟ ಆಕಾರದ ವಸ್ತುವನ್ನು ಎಲ್ಲರಿಗೂ ಕಾಣುವಲ್ಲಿ ಸ್ಥಾಪಿಸಿಯೇ ಮುಂದುವರಿದರೆ ಮಾತ್ರ ಅವನಿಗೆ ದೈರ್ಯ. ಇದನ್ನು ಬೆದರು ಬೊಂಬೆಗಳು ಎನ್ನುತ್ತಾರೆ.
ಏನಿದು ಬೆದರು ಬೊಂಬೆ:
- ಬೆದರು ಬೊಂಬೆಗಳೆಂದರೆ ಕೆಟ್ಟ ದೃಷ್ಟಿಯನ್ನು ತಾನು ತೆಗೆದುಕೊಂಡು ಬೇರೆಯದನ್ನು ರಕ್ಷಿಸುವಂತದ್ದು ಎಂದು ಹೇಳಬಹುದು.
- ಪ್ರಾಚೀನ ಕಾಲದಿಂದಲೂ ಬೆದರು ಬೊಂಬೆಗಳನ್ನು ನೆಡುವ ಪ್ರತೀತಿ ಇತ್ತು. ಈಗಲೂ ಇದೆ.
- ಮನುಷ್ಯಾಕೃತಿಯಲ್ಲಿ ವಿಚಿತ್ರವಾಗಿ ಕಾಣುವಂತೆ ಒಂದು ಆಕಾರವನ್ನು ಮಾಡುವುದು.
- ಅದು ಸಾಮಾನ್ಯವಾಅಗಿ ಮನುಷ್ಯನ ಆಕಾರವೇ ಆಗಿರುತ್ತದೆ.
- ಇದನ್ನು ತಮ್ಮ ಬೆಳೆಯ ಹೊಲದಲ್ಲಿ ಎಲ್ಲರಿಗೂ ಕಾಣುವಂತೆ ಎದುರಿನಲ್ಲಿ ಇರಿಸಲಾಗುತ್ತದೆ.
- ಕೆಟ್ಟ ದೃಷ್ಟಿ ಏನಾದರೂ ಇದ್ದರೆ ಅದು ನೇರವಾಗಿ ಇದರ ಮೇಲೆಯೇ ಬೀಳುತ್ತದೆ.
- ಇದು ಒಂದು ಮಾಂತ್ರಿಕ ಶಕ್ತಿಯಾಗಿಯೂ ಕೆಲಸ ಮಾಡುತ್ತದೆ ಎನ್ನುತ್ತಾರೆ.
- ಬರೇ ಕೆಟ್ಟ ದೃಷ್ಟಿ ಮಾತ್ರವಲ್ಲ. ಇದು ಅಸಹಜವಾಗಿ ಕಾಣುವುದರಿಂದ ಪಕ್ಷಿ ಪ್ರಾಣಿಗಳು ಇದನ್ನು ನೋಡಿ ಹೆದರುತ್ತವೆ.
ಬೆದರು ಬೊಂಬೆ ಹೇಗೆ:
- ಹೊಲದಲ್ಲಿ ಒಂದು ಕಂಬವನ್ನು ನೆಡುವುದು. ಆ ಕಂಬಕ್ಕೆ ಮಾನುಷ್ಯ ಆಕೃತಿಯನ್ನು ತರಲು ಬೇಕಾದಂತೆ ಅಡ್ಡಕ್ಕೆ ಅಗಲಕ್ಕೆ ಕೋಲನ್ನು ಕಟ್ಟುವು
- ದು. ಅದರ ಮೇಲೆ ಗಂಡಸೋ ಹೆಂಗಸೋ ಅವರವರ ಆಯ್ಕೆಯ ಆಕಾರವನ್ನು ಹೋಲುವಂತೆ ಬಟ್ಟೆಯನ್ನು ತೊಡಿಸುವುದು.
- ತಲೆ ಭಾಗವನ್ನು ಮಡಕೆ ಇಟ್ಟು ಅದರಲ್ಲಿ ಕಣ್ಣು ಕಿವಿ, ಮೂಗು ಬಾಯಿಯನ್ನು ಸುಣ್ಣ ಮಸಿಗಳಲ್ಲಿ ಮಾಡುವುದು.
- ಇದು ವಿಚಿತ್ರವಾಗಿದ್ದು, ನೋಡುವವರ ದೃಷ್ಟಿಯನ್ನು ತನ್ನತ್ತ ಸೆಳೆಯುವಂತಿರಬೇಕು.
ಇದನ್ನು ಹಿಂದೆ ತರಕಾರಿ- ಭತ್ತದ ಹೊಲದಲ್ಲಿ ಕಡ್ದಾಯವಾಗಿ ನಿಲ್ಲಿಸುತ್ತಿದ್ದರು. ಈಗಲೂ ಇದನ್ನು ನಿಲ್ಲಿಸುತ್ತಾರೆ. ಬರೇ ಭತ್ತದ ಹೊಲ ಮಾತ್ರವಲ್ಲ. ಎಲ್ಲಾ ಬೆಳೆಗಳ ಹೊಲದಲ್ಲೂ ಇದನ್ನು ನಿಲ್ಲಿಸಬಹುದು.
ಇದು ಮೂಢ ನಂಬಿಕೆ ಎಂದು ತರ್ಕ ಇದೆಯಾದರೂ ಇದನ್ನು ಮಾಡಿದರೆ ನಷ್ಟವಂತೂ ಇಲ್ಲ. ಇದು ಒಂದು ಬೆಳೆ ಸಂರಕ್ಷಣಾ ಆಚರಣೆ.