ಕುರಿ – ಕೋಳಿ ಗೊಬ್ಬರ ಸದ್ಯಕ್ಕೆ ಬಳಸಬೇಡಿ

ಕುರಿ – ಕೋಳಿ ಗೊಬ್ಬರ ಸದ್ಯಕ್ಕೆ ಬಳಸಬೇಡಿ. ಎಲೆ ಚುಕ್ಕೆಗೆ ಇದೂ ಕಾರಣವಾಗಬಹುದು

ಕರಾವಳಿ ಮಲೆನಾಡಿನಲ್ಲಿ ಈಗ ಕೊಟ್ಟಿಗೆ ಗೊಬ್ಬರದ ಬದಲಿಗೆ ಕುರಿ ಗೊಬ್ಬರ, ಕೋಳಿ ಗೊಬ್ಬರ ಬಳಕೆ ಮಾಡುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಈ ಗೊಬ್ಬರವನ್ನು ಬಳಕೆ ಮಾಡದೆ ಇರುವುದು ಒಳ್ಳೆಯದು. ಎಲೆ ಚುಕ್ಕೆ ರೋಗ ಬರೇ ಅಡಿಕೆಗೆ ಮಾತ್ರವಲ್ಲ, ಬೇರೆ ಬೇರೆ ಬೆಳೆಗೂ ಬರುತ್ತದೆ. ಅದು ಸಸ್ಯ ಶೇಷಗಳ ಮೂಲಕ ಪ್ರದೇಶದಿಂದ ಪ್ರದೇಶಕ್ಕೆ ಹರಡುವ ಸಾಧ್ಯತೆ ಇದೆ. ರೋಗಗಳು , ಕೀಟಗಳು ಪ್ರದೇಶದಿಂದ ಪ್ರದೇಶಕ್ಕೆ ಹರಡುದಕ್ಕೆ ಹಲವಾರು ಕಾರಣಗಳಿವೆ. ಸಸ್ಯ ಸಾಮಾಗ್ರಿಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವಾಗ ಅದರ…

Read more
ಎಲೆ ಚುಕ್ಕೆ ರೋಗ ಸಿಂಪರಣೆಯಿಂದ ವಾಸಿಯಾಗುವುದಿಲ್ಲ

ಎಲೆ ಚುಕ್ಕೆ ರೋಗ ಸಿಂಪರಣೆಯಿಂದ ವಾಸಿಯಾಗುವುದಿಲ್ಲ – ಮಾಡಬೇಕಾದದ್ದು ಬೇರೆ ಇದೆ.

ಎಲೆಚುಕ್ಕೆ ರೋಗ ಇಲ್ಲದ ಸ್ಥಳವೇ ಇಲ್ಲ. ಇದಕ್ಕೆ ಬೆಳೆಗಾರರು ಏನು ಸಿಂಪಡಿಸಬೇಕು ಎಂದು ಕೇಳುತ್ತಾರೆ. ಆದರೆ ಮೊದಲು ಮಾಡಬೇಕಾದಾದ ಈ ಕೆಲಸ ಮಾಡದೆ ಸಿಂಪರಣೆ  ಮಾಡಿದರೆ ವಾಸಿಯಾಗುವುದಿಲ್ಲ. ಕೆಲವು ಕಡೆ ಕಡಿಮೆ ಇರಬಹುದು. ಕೆಲವು ಕಡೆ ಉಲ್ಪಣ ಸ್ಥಿತಿಗೆ ತಲುಪಿರಲೂ ಬಹುದು. ನೂರು ಮರಗಳಲ್ಲಿ ಕೆಲವು ಮರಗಳು ಸೋಂಕು  ತಗಲಿಸಿಕೊಳ್ಳದೆಯೂ ಇರಬಹುದು. ಇದೆಲ್ಲಾ ಸಸ್ಯದ ಅಂತರ್ಗತ ಶಕ್ತಿಯ ಮೇಲೆ ಅವಲಂಭಿಸಿದೆ. ಕೆಲವು ಸಾಂಕ್ರಾಮಿಕ ರೋಗಗಳು ತೀವ್ರವಾಗಿ ಹರಡಿದರೂ ಎಲ್ಲರನ್ನೂ ಬಾಧಿಸದೆ ಕೆಲವರನ್ನು ಬಿಟ್ಟಿರಬಹುದು. ಅದು ರೋಗಾಣು ಕೊಟ್ಟ…

Read more
ಇಂದಿನಿಂದ 4 ದಿನ ಬೆಂಗಳೂರು ಕೃಷಿಕರನ್ನು ಆಹ್ವಾನಿಸುತ್ತದೆ.

ಇಂದಿನಿಂದ 4 ದಿನ  ಬೆಂಗಳೂರು ಕೃಷಿಕರನ್ನು ಆಹ್ವಾನಿಸುತ್ತದೆ. 

ಬೆಂಗಳೂರಿಗೆ ಕೃಷಿಕರು ಹೋಗಬೇಕಿದ್ದರೆ ಅಲ್ಲಿ ಅವರ ಆಕರ್ಷಣೆಯ ವಿಷಯ ವಸ್ತು ಇರಬೇಕು. ಇಲ್ಲಿನ ಕೃಷಿ ವಿಶ್ವ ವಿಧ್ಯಾನಿಲಯವು ಕೃಷಿ ಮೇಳದ ಮೂಲಕ ರಾಜ್ಯ ಹೊರ ರಾಜ್ಯದ ಕೃಷಿಕರನ್ನು ಆಹ್ವಾನಿಸುತ್ತಿದೆ. ಇಂದಿನಿಂದ 4 ದಿನ ನವೆಂಬರ್  2022  ರ ದಿನಾಂಕ 3 -4-5-6 ರ ಗುರುವಾರ, ಶುಕ್ರವಾರ, ಶನಿವಾರ  ಮತ್ತು ಭಾನುವಾರಗಳಂದು ಬೆಂಗಳೂರು ಕೃಷಿ ವಿಶ್ವ ವಿಧ್ಯಾನಿಲಯದಲ್ಲಿ  (ಜಿಕೆವಿಕೆ GKVK)  ನಡೆಸಲಾದ ಎಲ್ಲಾ ಕೃಷಿ, ತೋಟಗಾರಿಕೆ ಮುಂತಾದ  ತಂತ್ರಜ್ಞಾನಗಳನ್ನು ರೈತರಿಗೆ ತಿಳಿಸಿಕೊಡುವ ಉತ್ಸವ ಇದಾಗಿರುತ್ತದೆ. ರೈತ ಇಲ್ಲಿಗೆ ಭೇಟಿ…

Read more
ಅಡಿಕೆ ಧಾರಣೆ ನೀರಸ- ಮುಂದಿನ ಸ್ಥಿತಿ ಏನು

ಅಕ್ಟೋಬರ್ ತಿಂಗಳು ಅಡಿಕೆ ಧಾರಣೆ ನೀರಸ- ಮುಂದಿನ ಸ್ಥಿತಿ ಏನು?

ಅಕ್ಟೋಬರ್ ತಿಂಗಳಲ್ಲಿ ನವರಾತ್ರೆ. ದೀಪಾವಳಿ ಹಬ್ಬಗಳ ಕಾರಣ ಅಡಿಕೆ ಧಾರಣೆ ಏರಿಕೆ ಕಾಣಬಹುದು ಎಂಬ ಆಶಯ ಇತ್ತು. ಆದರೆ ಅದು ನೀರಸವಾಗಿ ಮುಂದುವರಿದಿದೆ. ಮುಂದೆ ಏರಿಕೆ ಆಗಬಹುದೇ ಅಥವಾ ಇಳಿಕೆಯೇ ಎಂಬ ಅನುಮಾನ  ಬೆಳೆಗಾರರನ್ನು ಸಹಜವಾಗಿ ಕಾಡುತ್ತಿದೆ. ಕೆಲವು ಬೆಳವಣಿಗೆಗಳ ಪ್ರಕಾರ ಕೆಂಪಡಿಕೆ ಧಾರಣೆ ಇನ್ನು ಒಂದೆರಡು ತಿಂಗಳ ಕಾಲ ಏರಿಕೆ ಆಗದೆ ಮುಂದುವರಿಯುವ ಸಾಧ್ಯತೆ ಇದೆ. ಚಾಲಿ ಸ್ವಲ್ಪ ಏರಿಕೆ ಆಗುವ ಲಕ್ಷಣ ಕಾಣಿಸುತ್ತಿದೆ. ಚಾಲಿಗೆ 500 ಆಗುತ್ತದೆ ಎಂದು ಕಾದು ಕಾದು ಕಡೆಗೆ 480-485…

Read more
Earthworms how do they increase soil fertility

Earthworms- how do they increase soil fertility?

Earthworms help nature in her overall soil-building and plant growth process through particle breakdown. It may occur in the E worm gizzard which uses ingested mineral particles in small pieces. This grinding process, coupled with the weak acids and enzymes in the gizzards probably the small grinding stones down into even smaller pieces. Now E…

Read more
ಈ ಬೀಜಕ್ಕೆ ಬಾರೀ ಬೆಲೆಯಂತೆ- ನಮ್ಮಲ್ಲೂ ಬೆಳೆಯುತ್ತದೆ.

ಈ ಬೀಜಕ್ಕೆ ಬಾರೀ ಬೆಲೆಯಂತೆ- ನಮ್ಮಲ್ಲೂ ಬೆಳೆಯುತ್ತದೆ.

ಇದು ಆಸ್ತ್ರೇಲಿಯಾ ಮೂಲದ ಬೀಜ. ಇದಕ್ಕೆ ಬಾರೀ ಬೆಲೆಯಂತೆ. ಮೆಕಡೇಮಿಯಾ ಇದರ ಹೆಸರು. ಪ್ರಪಂಚದ ಅತೀ ದುಬಾರಿಯ ಒಣ ಹಣ್ಣು ಎಂದರೆ ಇದು. ಮರವಾಗಿ ಬೆಳೆಯುವ  ಇದರಲ್ಲಿ ತುಂಬಾ ಬೀಜಗಳಾಗುತ್ತವೆ. ಬೀಜದ ತೊಗಟೆ ಒಡೆದರೆ ಒಳಗಡೆ ಗೊಡಂಬಿ ತರಹದ ತಿನ್ನುವ ಒಣ ಬೀಜ ಇರುತ್ತದೆ. ಇದಕ್ಕೆ ವಿದೇಶಗಳಲ್ಲಿ ಭಾರೀ ಬೇಡಿಕೆ. ಮೆಕಡಾಮಿಯಾ Macadamia  ವನ್ನು ಆಸ್ಟ್ರೇಲಿಯನ್ ನಟ್, ಕ್ವಿನ್ ಲ್ಯಾಂಡ್ ನಟ್  ಎಂದೂ ಇದನ್ನು ಕರೆಯುತ್ತಾರೆ. ಪ್ರಪಂಚದ ಬೇರೆ ಬೇರೆ ದೇಶಗಳಾದ  ದಕ್ಷಿಣ ಆಫ್ರಿಕಾ, ಕ್ಯಾಲಿಫೋರ್ನಿಯಾ, ಬ್ರೆಝಿಲ್,…

Read more
ಕೀಟ-ರೋಗನಾಶಕ ಸಿಂಪರಣೆ

ಕೀಟ- ರೋಗನಾಶಕ – ಪೋಷಕಾಂಶಗಳನ್ನು ಹೇಗೆ ಸಿಂಪರಣೆ ಮಾಡಬೇಕು.

ಬಹಳಷ್ಟು ಜನ ರೈತರು  ಕೀಟ- ರೋಗ ನಿಯಂತ್ರಣಕ್ಕೆ ಹಾಗೆಯೇ ಪೋಷಕಾಂಶಗಳನ್ನು  ಬೆಳೆಗಳಿಗೆ  ಸಿಂಪರಣೆ ಮಾಡುವಾಗ ಸರಿಯಾದ ವಿಧಾನದಲ್ಲಿ ಮಾಡದೆ ಅದರ ಸರಿಯಾದ ಫಲಿತಾಂಶ ಪಡೆಯುತ್ತಿಲ್ಲ. ಬೆಳೆಗಳಿಗೆ ಕೀಟ, ರೋಗನಾಶಕಗಳನ್ನು , ಪೋಷಕಗಳನ್ನು  ಹಾಗೆಯೇ ಇನ್ನಿತರ ಕೆಲವು ಉದ್ದೇಶಗಳಿಗೆ ಸಿಂಪರಣೆ ಮಾಡಲಾಗುತ್ತದೆ. ಹೆಚ್ಚಿನ ಸಿಂಪರಣೆಗಳು ಎಲೆಗೆ ಸಿಂಪಡಿಸುವುದಾಗಿದ್ದು, ಇದನ್ನು ಪತ್ರ ಸಿಂಚನ (Folie spray ) ಎಂದು ಕರೆಯಲಾಗುತ್ತದೆ. ಯಾವುದೇ ಸಿಂಪರಣೆ ಇರಲಿ, ಅದರಲ್ಲಿ ನಮಗೆ ನಿರೀಕ್ಷಿತ ಫಲಿತಾಂಶ ಬೇಕೆಂದಾದಲ್ಲಿ ಸರಿಯಾದ ವಿಧಾನದಲ್ಲಿ ಸಿಂಪರಣೆ ಮಾಡಿದರೆ ಮಾತ್ರ ಪಡೆಯಲು…

Read more
ಕಾಂಪ್ಲೆಕ್ಸ್ ಗೊಬ್ಬರ - ನೇರ ಗೊಬ್ಬರ ಯಾವುದು ಒಳ್ಳೆಯದು

ಕಾಂಪ್ಲೆಕ್ಸ್ ಗೊಬ್ಬರ – ನೇರ ಗೊಬ್ಬರ  ಯಾವುದು ಒಳ್ಳೆಯದು.

ಮಾರುಕಟ್ಟೆಯಲ್ಲಿ ಲಭ್ಯವಾಗುವ ಕಾಂಪ್ಲೆಕ್ಸ್ ಗೊಬ್ಬರ ಮತ್ತು ನೇರ ಗೊಬ್ಬರ ಇವೆರಡರ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿದೆ. ಕೆಲವರಿಗೆ ಗೊತ್ತಿಲ್ಲ. ರೈತರಾದವರಿಗೆ ಇದು ಒಂದು ಎರಡನೇ ಕ್ಲಾಸಿನ ಪಾಠ. ಸಣ್ಣ ಕ್ಲಾಸಿನಲ್ಲಿ ಮಗ್ಗಿ ಹೇಗೆ ಬಾಯಿಪಾಠ ಬರಬೇಕೋ ಅದೇ ತರಹ ಕೃಷಿಕರಾದವರಿಗೆ ಬೆಳೆ ಪೋಷಕ ಗೊಬ್ಬರ ಮತ್ತು ಅದರ ಸತ್ವಗಳ ಬೆಗ್ಗೆ ಗೊತ್ತಿರಬೇಕು. ಈ ಮಟ್ಟಕೆ ರೈತ ಬೆಳೆದರೆ ತುಂಬಾ ಉಳಿತಾಯವನ್ನೂ ಮಾಡಬಹುದು. ಅಧಿಕ ಇಳುವರಿಯನ್ನೂ ಪಡೆಯಬಹುದು. ಹಿಂದೆ ನಾವು ಅಕ್ಕಿ ಉಪ್ಪಿಟ್ಟು ಮಾಡಬೇಕಿದ್ದರೆ ಅಕ್ಕಿಯನ್ನು ಕಡೆಯುವ ಕಲ್ಲಿನಲ್ಲಿ…

Read more
ಮಾವಿನ ಕಾಯಿಗೆ ಈಗ ರೂ. 125, ಕಾರಣ ಅಕಾಲಿಕ ಮಾವು

ಮಾವಿನ ಕಾಯಿಗೆ ಈಗ ರೂ. 125, ಕಾರಣ ಅಕಾಲಿಕ ಮಾವು.

ಮಾರುಕಟ್ಟೆಯಲ್ಲಿ ಈಗ ತೋತಾಪುರಿ,ಆಪೂಸು ಮಾವಿನ ಕಾಯಿಗಳು ಕಿಲೋ 125 ಕ್ಕೂ ಹೆಚ್ಚಿನ ಬೆಲೆಗೆ ಮಾರಲ್ಪಡುತ್ತದೆ. ಯಾವುದೇ ಹಣ್ಣು ಹಂಪಲು, ತರಕಾರಿ  ಅಕಾಲಿಕವಾಗಿ   ಬೆಳೆದರೆ  ಅಧಿಕ ಲಾಭ. ಮಾವು ಸಹ ಹಾಗೆಯೇ. ಕರಾವಳಿಯ ಭಟ್ಕಳದಿಂದ ಮತ್ತು  ಕೋಲಾರ ಕಡೆಯಿಂದ ಈಗ ಮಾವಿನ ಕಾಯಿ ಗರಿಷ್ಟ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಮಾವು ಒಂದು ಋತುಮಾನದ ಹಣ್ಣಿನ ಬೆಳೆ ಎಂಬುದು ನಮಗೆಲ್ಲಾ ಗೊತ್ತಿರುವ ವಿಚಾರ . ಬೇಸಿಗೆ ಕಾಲ ಮಾರ್ಚ್ ನಿಂದ ಜೂನ್ ತನಕ  ಮಾವಿನ ಪ್ರಮುಖ ಸೀಸನ್. ಈಗ…

Read more
error: Content is protected !!