ಬೀದರ್ ನಲ್ಲೂ ಸೇಬು ಬೆಳೆಯುತ್ತದೆ- ಬೆಳೆದು ನೋಡಿದ್ದಾರೆ ಅಪ್ಪಾರಾವ್ ಭೋಸಲೆ
ಬೀದರ್ ಜಿಲ್ಲೆಯ ಕೆಂಪು ಮಣ್ಣಿನಲ್ಲಿ ಸೇಬು ಬೆಳೆ ಬೆಳೆಯಬಹುದು. ಇದು ಕಾಶ್ಮೀರದಲ್ಲಿ ಮಾತ್ರ ಬೆಳೆಯುವ ಬೆಳೆಯಲ್ಲ. ಇದನ್ನು ಅಪ್ಪಾರಾವ್ ಭೋಸಲೆ ಎಂಬ ಪ್ರಗತಿಪರ ರೈತರು ಬೆಳೆದು ತೋರಿಸಿದ್ದಾರೆ. ಕೆಲವೊಂದು ಬೆಳೆಗಳು ಸಾಂಪ್ರದಾಯಿಕವಾಗಿ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಬೆಳೆಯುವಂತದ್ದು ಎಂದು ಇತರರು ಅದರ ಗೋಜಿಗೆ ಹೋಗುವುದಿಲ್ಲ. ಕೆಲವೇ ಕೆಲವು ಆಸಕ್ತರು, ಬಂದರೆ ಬರುತ್ತದೆ, ಹೋದರೆ ಹೋಗುತ್ತದೆ ಎಂದು ಬೆಳೆಸಿ ನೋಡುವ ಮನಸ್ಸು ಮಾಡುತ್ತಾರೆ. ಕೆಲವೊಮ್ಮೆ ಅದು ಯಶಸ್ವಿಯೂ ಆಗುತ್ತದೆ. ಇಂತಹ ಉದಾಹರಣೆ ಸಾಕಷ್ಟು ಇದೆ. ಸಾಂಪ್ರದಾಯಿಕ ಪ್ರದೇಶ, ವಾತಾವರಣ,…